

ಕುಂದಾಪುರ; ದಿನಾಂಕ 19/07/2025 ಶನಿವಾರದಂದು ಕುಂದಾಪುರದ ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ 2025-26ರ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಭೆಯು “ಉತ್ತಮ ಪೋಷಕತ್ವ” ಎನ್ನುವ ಧ್ಯೆಯ ವಾಕ್ಯದೊಂದಿಗೆ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷೆಯಾದ ಶ ಐರಿನ್ ಸಾಲಿನ್ಸ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆ ಶಿಕ್ಷಕ ಮತ್ತು ಪೋಷಕರಿಬ್ಬರ ಆದ್ಯ ಕರ್ತವ್ಯವಾಗಿರಬೇಕು,ಎಂದು ತಮ್ಮ ಅಧ್ಯಕ್ಷ ನುಡಿಯಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾದ ಸಿಎಸ್ಐ ಕೃಪಾ ಚರ್ಚ್ ಕುಂದಾಪುರದ ಧರ್ಮ ಗುರುಗಳಾದ ರೆವೆರೆಂಡ್ ಜಯಕರ್ ಮಕ್ಕಳಲ್ಲಿ ಪೋಷಕರು ಮೊಟ್ಟಮೊದಲಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ವೇದಿಕೆಯಲ್ಲಿ ಆಸೀನರಾಗಿದ್ದ ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಶಾಲೆಯ ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯವೈಖರಿಗಳ ಮುನ್ನುಡಿಯನ್ನು ವಿವರಿಸಿದರು. ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಆಧ್ಯಾತ್ಮಿಕತೆಯನ್ನು ಬೆಳೆಸುವಂತೆ ಯು ಬಿ ಎಂ ಸಿ ಅಂಗನವಾಡಿ ಶಿಕ್ಷಕಿ ವಿದ್ಯಾಲಕ್ಷ್ಮಿ ಸವಿವರವಾಗಿ ತಿಳಿಸಿಕೊಟ್ಟರು. ಮಕ್ಕಳ ಶಿಸ್ತಿನ ಹಿತ ದೃಷ್ಟಿಯಿಂದ ಶಾಲೆಯ ಕೆಲವು ನಿಯಮಗಳನ್ನು ಸಹ ಶಿಕ್ಷಕಿ ರೇಖಾ ವಾಚಿಸಿದರು. ಕಾರ್ಯಕ್ರಮ ಸಹ ಶಿಕ್ಷಕಿ ರಾಜೇಶ್ವರಿ ಇವರ ಸ್ವಾಗತಿಸಿದರು. ಸಹ ಶಿಕ್ಷಕಿ ಉಜ್ವಲಾ ರವರ ಧನ್ಯವಾದ ಅರ್ಪಿಸಿದರು. ಸಹ ಶಿಕ್ಷಕಿ ಪವಿತ್ರ ನಿರೂಪಿಸಿದರು
Teacher Guardian Meeting on “Good Parenting” at UBMC and CSI Krupa English Medium School, Kundapur

Kundapur; On Saturday, 19/07/2025, the Parent Teacher Meeting for the current academic year 2025-26 was held at UBMC and CSI Krupa English Medium School, Kundapur with the bold slogan “Good Parenting”. The chairperson of this program, Mrs. Irene Salins, said in her chairperson’s speech that the all-round development of children should be the primary duty of both teachers and parents. The chief guest, Reverend Jayakar, a religious teacher of CSI Krupa Church, Kundapur, said in his speech that parents should first instill human values in children. The school principal, Mrs. Anita Alice D’Souza, who was seated on the stage, explained the preface to the school’s activities for the current academic year. UBMC Anganwadi teacher Mrs. Vidyalakshmi explained in detail to the children that they should develop spirituality along with their studies. In the interest of discipline of the children, some rules of the school were read out by the co-teacher Mrs. Rekha. The program began with the welcome speech of the assistant-teacher Mrs. Rajeshwari and ended with the vote of thanks from the assistant teacher Mrs.Ujwala. The entire program was successfully conducted under the anchoring of assistant teacher Mrs. Pavithra.













