

ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಶಿಶು ವಿಹಾರದ ವಿಭಾಗದಲ್ಲಿ ಬಣ್ಣದ ದಿನಾಚರಣೆಯನ್ನು ಬಹಳ ಸ೦ಭ್ರಮದಿ೦ದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿಅಲ್ಮೇಡ ಎಸ್.ಜೆ ರವರು ಮಾತನಾಡಿ, “ಬಣ್ಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಧನಾತ್ಮಕ ಚಿಂತನೆಗೆ ಸಹಾಯ ಮಾಡುತ್ತವೆ. ಬಣ್ಣಗಳು ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತವೆ” ಎಂಬ ಸಂದೇಶವನ್ನು ನೀಡಿದರು. ಉಪ ಪ್ರಾ೦ಶುಪಾಲೆಯಾದ ಶ್ರೀಮತಿ ಅಪರ್ಣ ಸುರೇಶ್ ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಣ್ಣದ ದಿನಾಚರಣೆಯ ಪ್ರಯುಕ್ತ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶಿಶುವಿಹಾರದ ವಿದ್ಯಾರ್ಥಿಗಳಾದ ಕೇಲನ್ ಆಂಟೊನಿಯಾ ಡಿಸೋಜ ಹಾಗೂ ಎಜೆಕ್ ಜೊ ಡಿಸೋಜ ಸ್ವಾಗತಿಸಿದರೆ, ಅಡೆಲಿಯಾ ಕಾರ್ಮೆಲ್ ಲೋಬೊ ಹಾಗೂ ಜೇಡೆನ್ ಟಿಯೋ ಪಿರೇರಾ ಧನ್ಯವಾದವನ್ನಿತ್ತರು. ಶ್ರೀಮತಿ ಮಿಶಲ್ ಕ್ರಾಸ್ತಾ ಹಾಗೂ ಶ್ರೀಮತಿ ಆವ್ರಿಲ್ ರೆಬೆಲ್ಲೊ ಕಾರ್ಯಕ್ರಮವನ್ನು ನಿರೂಪಿಸಿದರು.
St Aloysius Gonzaga School Radiates Joy with Colours Day Celebration

Mangluru ; The Kindergarteners of St Aloysius Gonzaga School celebrated a vibrant Colours Day on 18 July 2025 filling the campus with cheer, creativity and colours. Chief Guest Fr Rohan D’Almeida SJ, Principal of St Aloysius Gonzaga School, shared an inspiring message on the occasion of Colours Day. He said, “Colours add beauty and excitement to our lives. Each colour holds a special meaning; happiness, sadness, silence, enthusiasm and more. Life is like a canvas, and we paint it with the colours of our emotions, experiences and choices. A positive attitude is like a bright colour; it makes life more beautiful and leads us towards success.”
The event sparkled with enthusiasm as the little ones from Pre-KG to KG-II took to the stage in colourful costumes, performing a catchy theme song and joyful dances that captivated the audience. A display of their art and craft on primary and secondary colours further showcased their creativity. Ms Averyl Rebello compered the event, while Mishal Crasta conducted fun and interactive games for the parents. Vice-Principal and Kindergarten Coordinator Ms Aparna Suresh was present and Kindergarten parents were present.




