ಬಸ್ರೂರು; ಸಿಹಾನ್ ಶೇಖ್ ಬಸ್ರೂರ್, ಬಿ.ಎಸ್. ತ್ರಾಪ್ತಿ ಮತ್ತು ಸೌರವ್ ಶೇರೆಗಾರ್ ಅವರ ಮಾರ್ಗದರ್ಶನದಲ್ಲಿ ಕೆಡಿಎಫ್ ಕಂಡ್ಲೂರ್ ಡೋಜೋ ತಂಡದ ವಿದ್ಯಾರ್ಥಿಗಳು ಪ್ರವೀಣ್ ಕುಮಾರ್ ಸ್ಮಾರಕ ಅಖಿಲ ಭಾರತ ಓಪನ್ ಕರಾಟೆ ಚಾಂಪಿಯನ್ಶಿಪ್ 2025 – ಉಡುಪಿಯಲ್ಲಿ ತಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿದರು. ನಮ್ಮ ಅಸಾಧಾರಣ ಕ್ರೀಡಾಪಟುಗಳು ಕಟಾ ಮತ್ತು ಕುಮಿಟೆ ಎರಡೂ ಸ್ಪರ್ಧೆಗಳಲ್ಲಿ ಹಲವಾರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸುವ ಮೂಲಕ ನಮ್ಮ ತಂಡಕ್ಕೆ ಗೌರವ ತಂದರು. […]
ದಿನಾಂಕ 8- 9-2025 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ ಮತ್ಯಾಡಿ ಕುಂದಾಪುರ ಇವರ ಆಶ್ರಯದಲ್ಲಿಕುಂದಾಪುರ ವಲಯ ಮಟ್ಟದ 17ರ ವಯಾಮಾನದ ಬಾಲಕ ಬಾಲಕಿಯರಥ್ರೋ ಬಾಲ್ ಪಂದ್ಯಾಟ- 2025 ಇದರಲ್ಲಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮತ್ತು ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಣಯ್ ಕುಮಾರ್ ಶೆಟ್ಟಿ ಇವರಿಗೂ ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರು, ಶಿಕ್ಷಕ […]
ಕುಂದಾಪುರ; ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಮ್ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ ಶಿಪ್ 2025 ರಲ್ಲಿ ಸಬ್ ಜೂನಿಯರ್ 10 ವರ್ಷ 40/ ಕೆ.ಜಿ. ವಿಭಾಗದಲ್ಲಿ ಹೆಮ್ಮಾಡಿಯ ಅಮೈರ ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆಯಲ್ಲಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾಳೆ. ಇವಳು ಓಕ್ ವುಡ್ ಇಂಡಿಯನ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಇವಳಿಗೆ ಕುಂದಾಪುರ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ […]
ಬಾರ್ಕೂರು; ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ಹಾಗೂ ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ಇವರ ಜಂಟಿ ಆಶ್ರಯ ದಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ 14 /17ರ ವಯೋಮಾನದ ಬಾಲಕ -ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೇಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಬಿ. ಶಾಂತರಾಮ್ ಶೆಟ್ಟಿ ಅಧ್ಯಕ್ಷರು, ದಿ ಬಾರ್ಕೂರು ಎಜುಕೇಶನಲ್ ಸೊಸೈಟಿ (ರಿ )ಬಾರ್ಕೂರು ಮತ್ತು ಉದ್ಘಾಟನೆಯನ್ನು ಮಾಡಿದ ಶ್ರೀಮತಿ ಶಬಾನಾ ಅಂಜುಮ್. […]
ಶ್ರೀನಿವಾಸಪುರ : ತಾಲ್ಲೂಕಿನ ಯಲ್ದೂರು ಗ್ರಾಮದ ಶ್ರೀ ಶ್ರೀನಿವಾಸ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಎ. ಎಸ್ ವೇದಾಂತ್ 2025-26ನೇ ಸಾಲಿನ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ. ಈ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರನಾಥ್, ನಾರಾಯಣ ಆಡಳಿತಾಧಿಕಾರಿ ಆರ್ ಅಂಬರೀಶ್, ಕರಾಟೆ ಶಿಕ್ಷಕ ನರಸಿಂಹಯ್ಯ ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿದರು.
ಬೆಂಗಳೂರು: ಕುಂದಾಪುರದ KDF Karate & Fitness Academy ವಿದ್ಯಾರ್ಥಿಗಳು ಬೆಂಗಳೂರಿನ ವಿಸ್ಮಯ ಅಕಾಡೆಮಿಯಲ್ಲಿ ನಡೆದ CISCE ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ತಮ್ಮ ಶ್ರೇಷ್ಠ ಕೌಶಲ್ಯ ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿ ಪ್ರಶಂಸನೀಯ ಸಾಧನೆ ಮಾಡಿದ್ದಾರೆ.ಶುಭಾನ್ ಪುತ್ರನ್ – U-17 ಬಾಲಕರ -62 ಕೆಜಿ ವಿಭಾಗದಲ್ಲಿ ಸುವರ್ಣ ಪದಕ ಜಯಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ.ರಾಹುಲ್ ಉಲ್ಲೂರ್ – U-14 ಬಾಲಕರ +60 ಕೆಜಿ ವಿಭಾಗದಲ್ಲಿ ರಜತ ಪದಕ.ಆಥ್ಮಿಕಾ ಆರ್. ಉಲ್ಲೂರ್ – U-14 ಬಾಲಕಿಯರ -42 ಕೆಜಿ […]
KPC ಆಂಗ್ಲ ಮಾಧ್ಯಮ ಶಾಲೆ ಹೊಸಂಗಡಿಯಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ 2025 – 26 ರ U14 ಬಾಲಕಿಯರ ವಿಭಾಗದಲ್ಲಿ ನಮ್ಮ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಪ್ರಣೀತ ( 8th std ), ಸೃಷ್ಟಿ ಶೆಟ್ಟಿ ( 7th std), ಹಾಗೂ ಅನ್ವಿತ (6th std) ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ […]
ಐಪಿಎಲ್-2025 ಸರಣಿ ಆರಂಭವಾದ ವರ್ಷದಿಂದ ಈ ಸಲಕಪ್ನಮ್ಹೇಎಂದ ಕೂಗು ಕೇಳಿ ಬರುತ್ತಿರುವ ಆರ್ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗಾಗಿತ್ತು. ಜೊತೆಗೆ ಮೂರು ಸಲ ಐಪಿಎಲ್- ಟ್ರೋಫಿ ಮುತ್ತಿಕುವುದನ್ನು ಸ್ವಲ್ಪದರಲ್ಲೇ ತಪ್ಪಿಕೊಂಡ ವ್ಯಥೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಕಾಡುತಿತ್ತು. ಈ ಸಲವೂ ಏನಾಗುವುದೋ ಎಂದು ಚಿಂತೆ ಹಲವರನ್ನು ಕಾಡುತಿದ್ದುದು ಸಹಜ. ಆಟದಲ್ಲಿ ಒಂದು ಸಲ ಅರ್.ಸಿ.ಬಿ. ಇನ್ನೊಂದು ಪಂಜಾಬ್ ತಂಡ ಮೇಲು ಗೈ ಸಾಧಿಸುತ್ತಾ, ಈ ಸಲ ಕೊನೆಗೂ ಜಯದ ಅಭಿಲಾಸೆ ಕೈಗೂಡಿದೆ. ಕೊನೆಗೂ […]
ಕುಂದಾಪುರ, ಎ.30 ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ಆಶ್ರಯದಲ್ಲಿ ಎ.27 ರಂದು ನಡೆದ ಆಲ್ಫ್ರೆಡ್ ಡಿಸೋಜಾ ಸ್ಮಾರಕ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ 13 ವರ್ಷ ವಯೋಮಿತಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಯಶ್-ಆಯಾನ್ ಜೋಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಕುಂದಾಪುರ ಹಂಗಳೂರಿನ ಸೇಂಟ್ ಪಿಯೂಸ್ ಶಾಲೆಯ ಮೆಲ್ರಾನ್ ಕೋಥಾ ಹಾಗೂ ಶಯನ್ ಅವರು ರನ್ನರ್ಸ್ ಅಪ್ ಸ್ಥಾನ ಗಳಿಸಿದ್ದಾರೆ.ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಯಶ್ ಹಾಗೂ ಆಯಾನ್ ಜೋಡಿ 21-17, 21-19 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಉತ್ತಮ […]

