

ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಯುವರಾಜ ಕುಂದರ್ ಇವರು ವಾರಾಣಸಿಯ ಸಂತ ಅತುಲನಂದ್ ಕಾನ್ವೆಂಟ್ ಶಾಲೆಯಲ್ಲಿ ಸೆಪ್ಟೆಂಬರ್ 10ರಿಂದ 13ರವರೆಗೆ ನಡೆದ ಸಿಬಿಎಸ್ಇ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈಗಾಗಲೆ 200 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಯುವರಾಜ ಕುಂದರ್ ಅವರ ಅಪೂರ್ವ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ ಅಲ್ಮೇಡ ಅವರು ಯುವರಾಜ ಕುಂದರ್ ಹಾಗೂ ಅವರ ಪೋಷಕರಾದ ಶ್ರೀ. ಧೀರಜ್ ಕೋಟ್ಯಾನ್ ಮತ್ತು ಶ್ರೀಮತಿ. ವೀನಾ ಡಿ. ಕೋಟ್ಯಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
St Aloysius Gonzaga Student Wins Bronze at CBSE Nationals

Yuvaraj D. Kunder of Class VIII A, St Aloysius Gonzaga School, won the Bronze Medal in the 400m race at the CBSE National Athletics Championship 2025 held in Varanasi. The school management, Principal, and Staff congratulated him on this achievement and wished him success in future events.


