

ಕುಂದಾಪುರ; ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಮ್ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ ಶಿಪ್ 2025 ರಲ್ಲಿ ಸಬ್ ಜೂನಿಯರ್ 10 ವರ್ಷ 40/ ಕೆ.ಜಿ. ವಿಭಾಗದಲ್ಲಿ ಹೆಮ್ಮಾಡಿಯ ಅಮೈರ ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆಯಲ್ಲಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾಳೆ. ಇವಳು ಓಕ್ ವುಡ್ ಇಂಡಿಯನ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಇವಳಿಗೆ ಕುಂದಾಪುರ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ. ಸೇನ್ ಸಾಯಿ ಶಿಹಾನ್ ಶೇಖ್ ಬಸ್ರೂರು ಇವರಿಂದ ತರಬೇತಿ ಪಡೆದಿದ್ದಳು.




