ಯೋಗಾಸನದಲ್ಲಿ ಲಾಸ್ಯ ಮಧ್ಯಸ್ಥಳು ‘ಯೋಗ ಕುಮಾರಿ’ ಪ್ರಶಸ್ತಿಯೊಂದಿಗೆ ರಾಜ್ಯ ಮಟ್ಟಕೆ ಆಯ್ಕೆ


ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ, ವಿಭಾಗ ಮಟ್ಟದ ಶಾಲಾ ಮಕ್ಕಳ ಆಡೋಟಗಳ ಸ್ಪರ್ಧೆ 2022-23, ವಿವಿಧ ಸಂಘಗಳ ಆಶ್ರಯದಲ್ಲಿ ಕಾರ್ಕಳ ಮಿಯಾರ್, ಮೊ.ದೇ.ವ..ಶಾಲೆಯ ಉಸ್ತುವಾರಿಯಲ್ಲಿ ನಡೆದಂತಹ 14/17 ರ ವಯೋಮಿತಿಯ ಯೋಗಾಸನದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ಸ್ಥಾನ ಪಡೆದು, ‘ಯೋಗ ಕುಮಾರಿ” ಪ್ರಶಸ್ತಿಯೊಂದಿಗೆ ರಾಜ್ಯ ಮಟ್ಟಕೆ ಆಯ್ಕೆ ಆಗಿದ್ದಾಳೆ. ಇವಳು ಕುಂದಾಪುರ ಅರುಣ್ ಮತ್ತು ಲತಾ ಮಧ್ಯಸ್ಥ ದಂಪತಿಯ ಪುತ್ರಿಯಾಗಿದ್ದಾಳೆ. ಇವಳ ಈ ಸಾಧನೆಗೆ ಶಾಲಾ ಸಂಚಾಲಕರಾದ ಅ.ವಂ.ಸ್ಟ್ಯಾನಿ ತಾವ್ರೊ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಅಧ್ಯಾಪಕ ವ್ರಂದ, ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚೆಸ್ ಸಾಧಕರಿಗೆ ಸನ್ಮಾನ

ಕುಂದಾಪುರ-ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ, ನಾರಾಯಣಗುರು ಸಭಾಭವನದಲ್ಲಿ ಎರಡನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾಟ ಜರುಗಿತು.

ಉದ್ಘಾಟನಾ ಸಮಾರಂಭದಲ್ಲಿ, ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸ್ಪರ್ಧಿಸಲು ಕರ್ನಾಟಕದಿಂದ ಆಯ್ಕೆಯಾದ ಅವನಿ ಆಚಾರ್ಯ ಉಡುಪಿ ಮತ್ತು ಪ್ರಗತಿ ನಾಯಕ್ ಬ್ರಹ್ಮಾವರ ಇವರನ್ನು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಿ.ವೈ‌.ಎಸ್.ಪಿ ಶ್ರೀಕಾಂತ್,ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್,ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್.ಪೂಜಾರಿ,ಡಿಜಿಫ್ಲಿಕ್ ಇನ್ಷುರೆನ್ಸ್ ಕಂಪೆನಿಯ ಸಿ.ಇ.ಎ,ರಂಜನ್ ನಾಗರಕಟ್ಟೆ ಸಕ್ಸಸ್ ಅಕಾಡೆಮಿಯ ಸಂಸ್ಥಾಪಕ ರಂಜನ್ ನಾಗರಕಟ್ಟೆ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ,ಉಡುಪಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಮಿತ್ ಕುಮಾರ್ ಶೆಟ್ಟಿ,ಚೀಫ್ ಆರ್ಬಿಟರ್ ವಸಂತ್. . ಬಿ.ಹೆಚ್. ಮತ್ತಿತರರು ಉಪಸ್ಥಿತರಿದ್ದರು.

ರಾಮಾಯಣ ಜಗತ್ತಿಗೆ ದಾರಿದೀಪವಾಗಿದೆ : ಮಾಯಾ ಬಾಲಚಂದ್ರ

ಶ್ರೀನಿವಾಸಪುರ: ರಾಮಾಯಣ ಜಗತ್ತಿಗೆ ದಾರಿದೀಪವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಕಾವ್ಯ ಒಂದು ಚಿಂತನೆ ಎಂಬ ಸಾಹಿತ್ಯ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣ ಹಲವು ಆಯಾಮ ಒಳಗೊಂಡ ಕಾವ್ಯ. ಅಲ್ಲಿ ಬರುವ ಮಹಾ ಪಾತ್ರಗಳು ಹಾಗೂ ಕತೆ, ಉಪ ಕತೆಗಳು ಎಲ್ಲ ವಯೋಮಾನದ ಜನರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ ಎಂದು ಹೇಳಿದರು.
ಉಪನ್ಯಾಸಕಿ ಕಮಲಾ ಹೆಗಡೆ ಮಾತನಾಡಿ, ವಾಲ್ಮೀಕಿ ಮಹರ್ಷಿಯ ಮನದಲ್ಲಿ ಅರಳಿದ ಹಾಗೂ ಭಾರತೀಯ ಕಾವ್ಯ ಪರಂಪರೆಯ ಮಿನುಗಿನಂತಿರುವ ರಾಮಾಯಣ, ಸರ್ವಕಾಲಿಕ ಆದರ್ಶ ಸಾರುತ್ತದೆ. ರಾಮನ ಆದರ್ಶ ವ್ಯಕ್ತಿತ್ವ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ.ಪೋಷಕರು ಮಕ್ಕಳಲ್ಲಿ ರಾಮಾಯಣ, ಮಹಾಭಾರತದಂಥ ಕಾವ್ಯಗಳ ಬಗ್ಗೆ ಆಸಕ್ತಿ ಉಂಟುಮಾಡಬೇಕು ಎಂದು ಹೇಳಿದರು.
ಶಿಕ್ಷಕ ಎಂ.ಅರುಣ್ ಕುಮಾರ್, ಶಿಕ್ಷಕಿಯರಾದ ಲಕ್ಷ್ಮೀಗೌಡ, ಆರತಿ, ಮಮತಾ ರಾಣಿ, ಜಯಲಕ್ಷ್ಮಿ, ಚಿಕ್ಕರೆಡ್ಡಮ್ಮ ಸಂವಾದದಲ್ಲಿ ಭಾಗವಹಿಸಿದ್ದರು.

ಸುರತ್ಕಲ್ ಟೋಲ್ ಗೇಟಿಗೆ ಮುತ್ತಿಗೆ ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಗಟ್ಟಿದ ಪ್ರತಿಭಟನಾಕಾರರು

ಹಲವಾರು ವರ್ಷಗಳಿಂದ  ಆಕ್ರಮ ಟೋಲ್ ಗೇಟನ್ನು ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಅದನ್ನು ಕಾನೂನು ಬಾಹಿರ ಅಂತಾ ಹೇಳಿದ್ರೂ ಆ ಟೋಲ್ ಗೇಟನ್ನು ಆಡಳಿತ ಯಂತ್ರ ತೆರವು ಗೊಳಿಸುವ ಪ್ರಯತ್ನ ಮಾಡದಿದ್ದರಿಂದ, ಕರಾವಳಿಯ ಜನರು ಜನಪ್ರತಿನಿಧಿಗಳ ವಿರುದ್ಧ ಇಂದು ಸಮಾನ ಮನಸ್ಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು..

   ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರಿಂದ ಜನರ ಆಕ್ರೋಶ, ಕಟ್ಟೆಯೊಡೆದು ಸರ್ಕಾರದ ವಿರುದ್ಧ ಘೋಷಣೆ, ಟೋಲ್ ಗೆ ಮುತ್ತಿಗೆ ಹಾಕಲಾಯಿತು. ಹೌದು. ಮಂಗಳೂರು ನಗರದ ಎನ್ ಐಟಿಕೆ ಬಳಿಯಿರುವ ಸುರತ್ಕಲ್ ಟೋಲ್ ಗೇಟ್ ತೆರವು ನಿರ್ಣಾಯಕ ಕಾರ್ಯಾಚರಣೆಯ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಾ ಇದ್ದ ವೇಳೆ ಪ್ರತಿಭಟನಾಕಾರರು ಏಕಾಏಕಿ ಟೋಲ್ ಗೇಟ್ನತ್ತ ಮುತ್ತಿಗೆ ಹಾಕಿದ್ರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಇಟ್ಟು ಆಕ್ರೋಶಿತ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಆದರೆ ಸಾವಿರಾರು ಪ್ರತಿಭಟನಾಕಾರರು ಏಕಾಏಕಿ ಬ್ಯಾರಿಕೇಡ್ಗಳನ್ನು ತಳ್ಳಿಕೊಂಡು ಟೋಲ್ ನತ್ತ ಓಡಿ ಹೋಗಿ ಮುತ್ತಿಗೆ ಹಾಕಿದ ಘಟನೆ ನಡೆಯ್ತು.

   ಸರಕಾರ ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಿದ್ದರೂ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಟೋಲ್ನತ್ತ ನುಗ್ಗಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

   ಸುರತ್ಕಲ್ ಟೋಲ್ ತೆರವನ್ನು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು‌. ಇಂದು ಟೋಲ್ ವಿರೋಧಿ ಸಮಿತಿ ನಿರ್ಣಾಯಕ ಹೋರಾಟವನ್ನು ಕೈಗೊಂಡಿತ್ತು. ಕೆಲ ಸಮಯದದ ತನಕ ಟೋಲ್ ಗೇಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ  ಪೊಲೀಸರು ಟೋಲ್ ಗೇಟ್‌ನಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.

ನಾಟಿ ವೈದ್ಯೆ ರಾಧಾ ಗಾಣಿಗ (86) ನಿಧನ


ಕೋಟ: ಚಾಂತಾರು ಪ್ರಗತಿಪರ ಕೃಷಿಕ ಗೋಪಾಲ ಗಾಣಿಗ ಇವರ ಧರ್ಮಪತ್ನಿ ರಾಧಾ ಗಾಣಿಗ(86)ಭಾನುವಾರದಂದು ನಿಧನರಾದರು. ಮೃತರು ನಾಟಿವೈದ್ಯರಾಗಿದ್ದು,ಚಾಂತಾರು ಪರಿಸರದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದರು. ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಉತ್ತರಾಧಿಕಾರ ಮತ್ತು ಆನುವಂಶಿಕತೆಯ ಕಾನೂನಿನ ಕುರಿತು ಮಾಹಿತಿ ಕಾರ್ಯಗಾರ

ಮಂಗಳೂರು,ಅ.17: ರಚನಾ, ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್, ಇವರಿಂದ ಉತ್ತರಾಧಿಕಾರ ಮತ್ತು ಆನುವಂಶಿಕತೆಯ ಕಾನೂನಿನ ಕುರಿತು ವಕೀಲ ಡೇವಿಡ್ ಪಾಯ್ಸ್ ಇವರಿಂದ ಅಕ್ಟೋಬರ್ 16 ರಂದು ಈಡನ್ ಕ್ಲಬ್ ನಲ್ಲಿ ಮಾಹಿತಿ ಕಾರ್ಯಗಾರ ನಡೆಯಿತು.

  ಈ ವಿಷಯದಲ್ಲಿ ಸಂಬಧಿಸಿದ ವಿವಿಧ ಕಾನೂನುಗಳ ಬಗ್ಗೆ ವಕೀಲ ಡೇವಿಡ್ ಪಾಯ್ಸ್ ವಿವರಿಸಿದರು. ಒಬ್ಬರ ಮರಣದ ನಂತರ ತೊಡಕುಗಳು ಆಗುವ ಸಂದರ್ಭಗಳಿರುತ್ತವೆ ಆದರಿಂದ ನಾವುಸಾಯುವುದಕಿಂತ ಮೊದಲೇ ವೀಲ್ ಮಾಡುವುದು ಒಳಿತು ಮತ್ತು ಉತ್ತಮ ದಾರಿಯೆಂದು  ಮಾಹಿತಿ ನೀಡಿದರು.

ನಾವು ಕ್ಯಾಥೊಲಿಕರು ಭಾರತೀಯ ಉತ್ತರಾಧಿಕಾರ ಕಾನೂನಿಗೆ ಹೇಗೆ ಬದ್ಧರಾಗಿದ್ದೇವೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ವಿವರಿಸಿದರು. ಅವರು, ನಮ್ಮ ಸಂಗಾತಿಗಳು, ಮಕ್ಕಳು ಮತ್ತು ತಕ್ಷಣದ ಕುಟುಂಬ ಸದಸ್ಯರಿಗೆ ಆನುವಂಶಿಕ ಅನುಪಾತವನ್ನು, ಆಸ್ತಿಯನ್ನು ಹೇಗೆ ವಿಂಗಡಿಸಬಹುದೆಂದು ವಿವರವಾಗಿ ವಿವರಿಸಿದರು.

ಇದೊಂದು ಬಹಳ ಉಪಯುಕ್ತ  ಮತ್ತು ಆಸಕ್ತಿದಾಯಕ ಅಧಿವೇಶನವಾಗಿತ್ತೆಂದು ಜನರು ಅಭಿಪ್ರಾಯ ಪಟ್ಟರು.. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ರಚನಾ ಅಧ್ಯಕ್ಷ ಶ್ರೀ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು. ಸಿ. ಎ. ರುಡಾಲ್ಫ್ ರೊಡ್ರಿಗಸ್,  ವಕೀಲ ಡೇವಿಡ್ ಪಾಯ್ಸರ ಪರಿಚಯ ನೀಡಿದರು. ಪರಿಚಯಿಸಿದರು.

ರಚನಾ ಕಾರ್ಯದರ್ಶಿ ಶ್ರೀಮತಿ ಲವೀಮಾ ಮೊಂತೇರೊ ಧನ್ಯವಾದಗಳನ್ನು ಅರ್ಪಿಸಿದರು. ಸದಸ್ಯ ರಾಯ್ಸ್ಟನ್ ಪಿಂಟೊ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಸುಮಾರು 70 ಸದಸ್ಯರು ಮತ್ತು ಕುಟುಂಬ ಸದಸ್ಯರು, ಆಹ್ವಾನಿತ ಅತಿಥಿಗಳು ಹಾಜರಿದ್ದರು. ಕಾರ್ಯಕ್ರಮ.ಭೋಜನದೊಂದಿಗೆ ಮುಕ್ತಾಯವಾಯಿತು.

ಉಡುಪಿ ಜಿಲ್ಲಾ ಪುರುಷರ ಸ್ವ-ಸಹಾಯ ಸಂಘಗಳ ಒಕ್ಕೂಟ ಉದ್ಘಾಟನೆ – ಪುರುಷರ ಸ್ವಸಹಾಯ ಸಂಘಗಳ ಒಕ್ಕೂಟ ಸ್ಥಾಪನೆ ಭಾರತದಲ್ಲಿಯೇ ಇದು ಪ್ರಪ್ರಥಮವಾಗಿದೆ : ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: 17 ಅಕ್ಟೋಬರ್ 2022: ಮೊಟ್ಟಮೊದಲ ಉಡುಪಿ ಜಿಲ್ಲಾ ಪುರುಷರ ಸ್ವ-ಸಹಾಯ ಸಂಘಗಳ ಒಕ್ಕೂಟವನ್ನು (ಸಮನ್ವಯ)  16 ಅಕ್ಟೋಬರ್ 2022 ರಂದು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಸಭಾಭವನದಲ್ಲಿ ಅತಿ| ವಂ|ಡಾ|ಜೆರಾಲ್ಡ್ ಐಸಾಕ್ ಲೋಬೋ ಅವರು ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ನಂತರ ಔಪಚಾರಿಕವಾಗಿ ದೀಪ ಬೆಳಗಿಸಿ ಜಿಲ್ಲಾ ಪುರುಷರ ಸ್ವ-ಸಹಾಯ ಸಂಘಗಳ ಒಕ್ಕೂಟವನ್ನು ಉದ್ಘಾಟಿಸಿ “ಉಡುಪಿ ಧರ್ಮಪ್ರಾಂತ್ಯವು 15 ಅಕ್ಟೋಬರ್ 2022 ರಂದು ತನ್ನ ಅಸ್ತಿತ್ವದ ಹತ್ತು ವರ್ಷಗಳನ್ನು ಪೂರೈಸಿದೆ. ಅದರ ಪ್ರಾರಂಭದಿಂದಲೂ ಉಡುಪಿ ಧರ್ಮಪ್ರಾಂತ್ಯವು ಬಹಳಷ್ಟು ಸಾಧನೆ ಮಾಡಿದೆ ಸಂಪದದ ನಿರ್ದೇಶಕರಾದ ರೆ.ಫಾ. ರೆಜಿನಾಲ್ಡ್ ಪಿಂಟೋ ಅವರ ನೇತೃತ್ವದ ಸಂಪದದ ಮಾರ್ಗದರ್ಶನ ಮತ್ತು ಸಹಾಯದ ಮೂಲಕ ವಿಶೇಷವಾಗಿ ಮಹಿಳೆಯರ ಸಬಲೀಕರಣದ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ  ಪ್ರಗತಿಯಾಗಿದೆ. ಮಹಿಳಾ ಸ್ವ-ಸಹಾಯ ಸಂಘವು ಉತ್ತಮ ಯಶಸ್ಸನ್ನು ಸಾಧಿಸಿದೆ ಮತ್ತು ಅವರು ತಮ್ಮ ಸ್ವ-ಸಹಾಯ ಗುಂಪುಗಳ ಉಡುಪಿ ಜಿಲ್ಲಾ ಒಕ್ಕೂಟವನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ತಮ್ಮದೇ ಆದ ಬ್ಯಾಂಕ್ ಅನ್ನು ಪ್ರಾರಂಭಿಸುವ ಅಂಚಿನಲ್ಲಿದ್ದಾರೆ. ಉಡುಪಿ ಜಿಲ್ಲೆಯ ಮಹಿಳಾ ಒಕ್ಕೂಟವು ಭಾರತದ ಎಲ್ಲಾ ಧರ್ಮಪ್ರಾಂತ್ಯಗಳಿಗೆ ಮಾದರಿಯಾಗಿದೆ. ಉಡುಪಿ ಧರ್ಮಪ್ರಾಂತ್ಯದ 508 ವಾರ್ಡ್‌ಗಳ ಪೈಕಿ 456 ವಾರ್ಡ್‌ಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳು ವ್ಯಾಪಿಸಿವೆ. ಇತ್ತೀಚೆಗೆ ನಡೆದ ಸಮ್ಮೇಳನದಲ್ಲಿ, ಉಡುಪಿ ಜಿಲ್ಲೆಯ ಸ್ತ್ರೀ ಸಂಘಟನೆಯು ಭಾರತದ 167 ಧರ್ಮಪ್ರಾಂತ್ಯಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ. ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯು ಮಹಿಳಾ ಸಬಲೀಕರಣದಲ್ಲಿ ಅನುಸರಿಸಲು ಇತರ ಧರ್ಮಪ್ರಾಂತ್ಯಗಳಿಗೆ ಮಾದರಿಯಾಗಿದೆ.

    ಉಡುಪಿ ಜಿಲ್ಲಾ ಪುರುಷರ ಸ್ವಸಹಾಯ ಸಂಘಗಳ ಒಕ್ಕೂಟ ಸ್ಥಾಪನೆಯೂ ಭಾರತದಲ್ಲಿಯೇ ಪ್ರಪ್ರಥಮವಾಗಿದೆ ಎಂದರು.

ವಿವಿಧ ಪ್ಯಾರಿಷ್‌ಗಳ ಪುರುಷರು ಒಗ್ಗೂಡಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಅದು ಪರಸ್ಪರ ಸಂಬಂಧ ಮತ್ತು ಬೆಂಬಲವನ್ನು ಬೆಳೆಸುತ್ತದೆ. ಆದಾಗ್ಯೂ, ಸದಸ್ಯರು ತಮ್ಮ ಒಕ್ಕೂಟವನ್ನು ನೋಂದಾಯಿಸುವಲ್ಲಿ ನಿಧಾನವಾಗಿ ಹೋಗಬೇಕೆಂದು ಅವರು ಎಚ್ಚರಿಸಿದರು. ಮಹಿಳೆಯರು ಏಳು ವರ್ಷಗಳ ಕಾಲ ಸದೃಢ ಸಂಘಟನೆಯಾಗಿ ಸಂಘಟಿತರಾಗಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ ಅವರ ಟರ್ನ್ ಓವರ್ ಸುಮಾರು ರೂ. 27 ಕೋಟಿ ಎಂದು ತಿಳಿಸಿದರು.

    ಉಡುಪಿ ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರಗಳ ಪುರುಷರು ತಮ್ಮದೇ ಆದ ಸ್ವಸಹಾಯ ಗುಂಪುಗಳನ್ನು ರಚಿಸಬಹುದು, ಪುರುಷರ ಸ್ವಸಹಾಯ ಗುಂಪುಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ನೀಡಬೇಕು  ಮತ್ತು ಕನಿಷ್ಠ 100 SHG ಗಳ ಸ್ವಸಹಾಯ ಗುಂಪುಗಳನ್ನು ರಚಿಸಬೇಕು, ಇದರಿಂದಾಗಿ ಫೆಡರೇಶನ್ ಅನ್ನು ನೋಂದಾಯಿಸಬಹುದು” ಎಂದು ಬಿಷಪ್ ಆಶಿಸಿದರು.

    ಸ್ವಸಹಾಯ ಗುಂಪುಗಳ  ಪುರುಷರನ್ನು ಅಭಿನಂದಿಸುತ್ತಾ ಫಾ| ರೆಜಿನಾಲ್ಡ್ ಪಿಂಟೋ ಮತ್ತು ಅವರ ಸಿಬ್ಬಂದಿ ಯಾವಾಗಲೂ ಪುರುಷರ ಸ್ವಸಹಾಯ ಗುಂಪುಗಳಿಗೆ ಮಾರ್ಗದರ್ಶನ ನೀಡಲು ಮತ್ತು ಸಹಾಯ ಮಾಡಲು ಸಿದ್ಧರಿರುತ್ತಾರೆ ಎಂದು ತಿಳಿಸಿದರು.

   ಉಡುಪಿ ಧರ್ಮಪ್ರಾಂತ್ಯದ  ಸಂಪದದ ನಿರ್ದೇಶಕ ರೆಜಿನಾಲ್ಡ್ ಪಿಂಟೋ (ಸ್ವಸಹಾಯ ಗುಂಪುಗಳ ನೆರವಿಗೆ, ಮಾರ್ಗದರ್ಶನ ನೀಡುವ ಸಂಸ್ಥೆಯ ನಿರ್ದೇಶಕರು) ಕಾರ್ಯಕ್ರಮದ ಮೊದಲು ಅವರು  ಉಡುಪಿಯ ಮದರ್ ಆಫ್ ಸಾರೋಸ್ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ತರುವಾಯ ಸಭಾಕಾರ್ಯಕ್ರಮದಲ್ಲಿ  ಮಾಹಿತಿ, ಧ್ಯೇಯ, ಗುರಿಗಳು ಮತ್ತು ಉದ್ದೇಶಗಳು ಮತ್ತು ಸ್ವಸಹಾಯ ಗುಂಪುಗಳ ಕಾರ್ಯನಿರ್ವಹಣೆಯ ಮಾರ್ಗಸೂಚಿಗಳನ್ನು ಅವರು ವಿವರಿಸಿದರು..

   ಖಜಾಂಚಿ ನೆಲ್ಸನ್ ಮಚಾದೊ (ಕಣಜಾರ್), ಒಕ್ಕೂಟದ ನಿರ್ದೇಕರಾದ ಜಾನ್ ಮೆಂಡೋನ್ಸಾ (ಬೆಳ್ಮಣ್), ವಿನ್ಸೆಂಟ್ ಡಿಸೋಜಾ (ಸಂತೆಕಟ್ಟೆ), ಸ್ಟಾನ್ಲಿ ಮಿನೇಜೆಸ್ (ಕಲ್ಮಾಡಿ), ಕಿರಣ್ ಲೂಯಿಸ್ (ಕಟಪಾಡಿ), ಪಾಸ್ಕಲ್ ನಜರೆತ್ (ಬೈಂದೂರು) ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಒಕ್ಕೂಟದ ಅಧ್ಯಕ್ಷರಾದ ಅಲ್ಟನ್ ರೆಬೇರೋ ಗಂಗೊಳ್ಳಿ, ಸರ್ವರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ನವೀನ್ ಫೆರ್ನಾಂಡಿಸ್ ಕಲ್ಮಾಡಿ, ಧನ್ಯವಾದ ಅರ್ಪಿಸಿದರು. ಕಾರ್ಯದರ್ಶಿ ಎಡ್ವಿನ್ ಮೆಂಡೋನ್ಸಾ ಕಣಜಾರ,  ಕಾರ್ಯಕ್ರಮ ನಿರೂಪಿಸಿದರು.

ಉದ್ಯಮಿ ಆಟಕೆರೆ ರಾಮಚಂದ್ರ ಅನಂತ ಪೈ ನಿಧನ

ಕೋಟೇಶ್ವರದ ಖ್ಯಾತ ವ್ಯವಹಾರೋದ್ಯಮಿ,ಮೆ.ಆಟಕೆರೆ ಅನಂತ ಶ್ರೀನಿವಾಸ ಪೈ ಎಂಡ್ ಸನ್ಸ್,ಮಹಾಮಾಯ ಸಂಸ್ಥೆಗಳ ಮುಖ್ಯಸ್ಥರಾದ ಆಟಕೆರೆ ರಾಮಚಂದ್ರ ಅನಂತ ಪೈ, (58) ದಿನಾಂಕ 16ರಂದು ರವಿವಾರ ನಿಧನರಾದರು.ಉಡುಪಿ ಜಿಲ್ಲೆಯ ರಖಂ ದಿನಸಿ ವ್ಯವಹಾರದಲ್ಲಿ ಪ್ರಸಿದ್ಧವಾಗಿದ್ದ ಕುಟುಂಬದ ವ್ಯವಹಾರವನ್ನು ಸಹೋದರರೊಂದಿಗೆ ಇನ್ನಷ್ಟು ಅಭಿವೃದ್ಧಿ ಪಡಿಸಿ,ಆಧುನೀಕರಣ ಗೊಳಿಸಿದ ಖ್ಯಾತಿ ಇವರದ್ದು. ಇವರು ಪತ್ನಿ,ಇಬ್ಬರು ಪುತ್ರರು ಹಾಗೂ ಅಪಾರಬಂಧುಗಳನ್ನು ಅಗಲಿದ್ದಾರೆ.

2ನೇ ಟೊರ್ಪೆಡೋಸ್ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಚೆಸ್ ಪಂದ್ಯಾವಳಿ – ಐಎಂ ಶ್ರೀನಾಥ್ ರಾವ್ ವಿಜೇತರು


ಕುಂದಾಪುರದ ಟಾರ್ಪಿಡೋಸ್ ಸ್ಪೋರ್ಟ್ಸ್ ಕ್ಲಬ್(ಆರ್), ಕುಂದಾಪುರ ವತಿಯಿಂದ ಕರ್ನಾಟಕದ ಕುಂದಾಪುರ ಶ್ರೀ ಗುರು ನಾರಾಯಣ ಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ 2ನೇ ಟಾರ್ಪಿಡೋಸ್ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ರೇಪಿಡ್ ಚೆಸ್ ಪಂದ್ಯಾವಳಿ ಇಂದು ಮುಕ್ತಾಯಗೊಂಡಿತು.
ಛತ್ತೀಸ್‌ಗಢದ ಅಜೇಯ ಐ.ಎಂ.ಶ್ರೀನಾಥ್ ರಾವ್ (2196) ಪ್ರಥಮ ಸ್ಥಾನ ಪಡೆದು 30000 ರೂಪಾಯಿ ಬಹುಮಾನ ಮತ್ತು ಮಿನುಗುವ ಟ್ರೋಫಿಯನ್ನು ಗೆದ್ದುಕೊಂಡರು. ಅವರು ಅಂತಿಮ ಸುತ್ತಿನಲ್ಲಿ ತೆಲಂಗಾಣದ ಐಎಂ ಚಕ್ರವರ್ತಿ ರೆಡ್ಡಿ (2202) ಅವರನ್ನು ಸೋಲಿಸಿದರು.
ರೈಲ್ವೆಯ ಐಎಂ ರತ್ನಾಕರನ್ (2242), ಕರ್ನಾಟಕದ ಎಫ್‌ಎಂ ಶರಣ ರಾವ್ (2250) ಮತ್ತು ಡಬ್ಲ್ಯುಎಫ್‌ಎಂ ಇಶಾ ಶರ್ಮಾ (2134), ಮಹಾರಾಷ್ಟ್ರದ ಅಖಿಲೇಶ್ ನಗರೆ (2019) ತಲಾ 8 ಅಂಕ ಗಳಿಸಿದ್ದಾರೆ. ಉತ್ತಮ ಟೈ ಬ್ರೇಕ್ ಸ್ಕೋರ್ ಅನ್ನು ಆಧರಿಸಿ, ಅವರು ಕ್ರಮವಾಗಿ 2 ರಿಂದ 5 ನೇ ಸ್ಥಾನದಲ್ಲಿದ್ದಾರೆ.
ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಿಜೆಪಿ ದ.ಕ.ಭಾಗದ ಸಹ ಪ್ರಭಾರಿ ಶ್ರೀ ರಾಜೇಶ್ ಕಾವೇರಿ ಮಾತನಾಡಿದರು. ಅವರು ಗೌರವಾನ್ವಿತ ಅತಿಥಿಗಳಾದ ಶ್ರೀ.ರಂಜನ್ನಗರಕಟ್ಟೆ, ಡಿಜಿಫ್ಲಿಕ್ ಇನ್ಶುರೆನ್ಸ್ ಮತ್ತು ರಂಜನ್ ನಾಗರಕಟ್ಟೆ ಸಕ್ಸಸ್ ಅಕಾಡೆಮಿಯ ಸಂಸ್ಥಾಪಕ ಮತ್ತು ಸಿಇಒ, ಶ್ರೀ ಅಶೋಕ್ ಬಿಜಾಡಿ, ಅಧ್ಯಕ್ಷ ನಾರಾಯಣ ಗುರು ಸಂಘ, ಕುಂದಾಪುರ, ಶ್ರೀ ಮೋಹನದಾಸ್ ಶೆಣೈ, ಮಾಜಿ ಅಧ್ಯಕ್ಷ ಟೌನ್ ಮುನ್ಸಿಪಲ್ ಕಾರ್ಪೊರೇಶನ್, ಕುನದಾಪುರ, ಶ್ರೀ ಗಣೇಶ ಕಾಮತ್, ಪೋಷಕ , ಟಾರ್ಪಿಡೋಸ್ ಸ್ಪೋರ್ಟ್ಸ್ ಕ್ಲಬ್, ಶ್ರೀ ವಿಜಯ್ ಹೆಗ್ಡೆ, ಗೌರವಾಧ್ಯಕ್ಷರು, ಟಾರ್ಪಿಡೋಸ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಕೆ ಸಿ ರಾಜೇಶ್, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಎರಡನೇ ಕಮಾಂಡರ್, ಶ್ರೀ ಕಿಶೋರ್, ಕಲಾಕ್ಷೇತ್ರ ಕುಂದಾಪುರ ಮತ್ತು ಶ್ರೀ ಗೌತಮ್ ಶೆಟ್ಟಿ, ಸ್ಥಾಪಕ ಮತ್ತು ಅಧ್ಯಕ್ಷರು, ಟಾರ್ಪಿಡೋಸ್ ಸ್ಪೋರ್ಟ್ಸ್ ಕ್ಲಬ್, ಕುಂದಾಪುರ,

Results of final round

Bo. NameIRtgClubPtsRes.Pts NameIRtgClub
1IMChakravarthi Reddy M2202TG7lost to9IMSrinath Rao S.V.2196CT
2FMSharan Rao2250KAR8bt7 Manigandan S S1985TN
3IMRatnakaran K.2242S Railway8bt7 Abhishek I Ganiger1431KAR
4 Aryan Shamrao Raikar1514GA7lost to8WIMSharma Isha2134KAR
5 Nagare Akhilesh2019MH8bt Sudarshan Bhat2008KAR
6 Shriram1427KLlost to7 Naveen S Hegde1857KAR
7 Subramanian R M1740TNdrew with Siddhanth Poonja1339KAR
8 Shrihari Venkatesh Deshpande1356KAR7bt6 Vijay C Humbi1681KAR
9 Krishna V Shinde1642KARdrew with Aradyo Bhattacharyya1322KAR
10AFMVivaan Sachdev1316KAR6lost to7 Dhanush Ram M1628KAR

2nd Torpedoes Rashmi Shetti Memorial All India FIDE Rated Rapid Chess Tournament IM Srinath Rao winner

2nd Torpedoes Rashmi Shetti Memorial All India FIDE Rated Rapid Chess Tournament organised by Torpedoes Sports Club(R), Kundapur at Sri Guru Narayana AC Hall, Kundapura, Karnataka concluded today.

Unbeaten IM Srinath Rao (2196) from Chhattisgarh clinched the first place and won a prize of Rs 30000 and a glittering trophy. He defeated IM Chakravarthi Reddy (2202) of Telangana in the final round.

IM Ratnakaran (2242) of Railways, FM Sharana Rao (2250) and WFM Isha Sharma (2134) both from Karnataka, Akhilesh Nagare (2019) from Maharastra score 8 points each. Based on better tie break score, they are place 2nd to 5th respectively.

Sri Rajesh Kaveri, Co- Incharge, BJP DK Distwas the Chief guest of the prize distribution ceremony. He was  accompanied by the guest of honorsSri.RanjanNagarakatte,Founder & CEO Dgflick Insurance & Ranjan Nagarkatte Success Academy, Sri Ashok Bijady, President Narayan Guru Sangha, Kundapura, Sri Mohandas Shenoy, Ex President Town Municipal Corporation, Kunadapura, Sri Ganesh Kamath, Patron, Torpedoes Sports Club, Sri Vijay Hegde, Hon President, Torpedoes Sports Club, Sri K  C Rajesh, Second Commander in Udupi District Home Guard, Sri Kishore, Kalakshetra Kundapur and  Sri Gowtham Shetty, Founder and Chairman, Torpedoes Sports Club, Kundapura.