ರಾಷ್ಟ್ರೀಯ ಹೆದ್ದಾರಿ ಸರಿಪಡಿಸುವವರೆಗೂ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿ ಜನರ ಪ್ರಾಣ ರಕ್ಷಿಸಿ:ರೈತ ಸಂಘ ಆಗ್ರಹ

ನಂಗಲಿ, ಅ-21,ಮುಳಬಾಗಿಲು ಬೈಪಾಸ್‍ನಿಂದ ನಂಗಲಿ ಗಡಿಭಾಗದವರೆಗೂ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ಸರಿಪಡಿಸುವವರೆಗೂ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿ ಜನ ಸಾಮಾನ್ಯರ ಅಮೂಲ್ಯ ಪ್ರಾಣವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಟೋಲ್ ಮೇನೇಜರ್ ಅಜಿತ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ತಪ್ಪು ಮಾಡದ ಜನ ಸಾಮಾನ್ಯರ ಪ್ರಾಣ ತೆಗೆಯುವ ಯಮದೂತ ರಸ್ತೆಯಾಗಿ ಮಾರ್ಪಟ್ಟಿದೆ. ಸಾವಿರಾರು ಕೋಟಿ ಜನರ ತೆರಿಗೆ ಹಣದಲ್ಲಿ ಅಭಿವೃದ್ದಿ ಪಡಿಸಿದರುವ ರಸ್ತೆಯಲ್ಲಿ ತಾನು ದುಡಿದ ಹಣವನ್ನು ನೀಡಿ ಅಮೂಲ್ಯವಾದ ಪ್ರಾಣವನ್ನು ತನ್ನ ಕೈಯಾರೆ ಕಳೆದುಕೊಳ್ಳುವ ಮಟ್ಟಕ್ಕೆ ರಸ್ತೆ ಹದಗೆಟ್ಟಿದರೂ ಸರಿಪಡಿಸಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ರೈತ ಸಂಘದ ಯುವ ರೈತ ಮುಖಂಡ ನಂಗಲಿ ನಾಗೇಶ್ ಹಾಗೂ ಪದ್ಮಘಟ್ಟ ಧರ್ಮ ರಸ್ತೆ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯದ ಆರ್ಥಿಕತೆಯ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುವ ರಸ್ತೆ ಅಭಿವೃದ್ದಿಗೆ ಹಣವನ್ನು ಬಿಡುಗಡೆ ಮಾಡುತ್ತಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಿಂದ ಕಮೀಷನ್ ಹಾವಳಿ ಹೆಚ್ಚಾಗಿ ಅಭಿವೃದ್ದಿ ಪಡಿಸಬೇಕಾದ ರಸ್ತೆಗಳು ಯಮದೂತ ರಸ್ತೆಗಳಾಗಿ ಮಾರ್ಪಟ್ಟಿವೆ ಎಂದು ಆರೋಪ ಮಾಡಿದರು.
ಸಮರ್ಪಕವಾದ ರಾಜಕಾಲುವೆಗಳ ನಿರ್ವಹಣೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ಸುರಿದರೆ ಮಳೆ ನೀರು ಸರಾಗವಾಗಿ ಹರಿಯಲು ರಾಜ ಕಾಲುವೆಗಳು ಇಲ್ಲದೆ ರಸ್ತೆಗಳಿಗೆ ನುಗ್ಗಿ ಕೆರೆ ಕುಂಟೆಗಳಾಗಿ ಮಾರ್ಪಟ್ಟು ವಾಹನ ಸವಾರರಿಗೆ ರಸ್ತೆಯೋ, ಕೆರೆಯೋ ತಿಳಿಯದೇ ಅಪಘಾತಗಳಾಗಿ ಕೈಕಾಲು ಕಳೆದುಕೊಳ್ಳುವ ಜೊತೆಗೆ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡು ಅವರನ್ನೇ ನಂಬಿರುವ ಕುಟುಂಬವನ್ನು ಬೀದಿಪಾಲು ಮಾಡುವ ಮಟ್ಟಕ್ಕೆ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿ ಅಮಾಯಕರ ಪ್ರಾಣದ ಜೊತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಚಲ್ಲಾಟವಾಡುತ್ತಿದ್ದಾರೆಂದು ಕಿಡಿಕಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರತಿ ವರ್ಷ ನಡೆಯುವ ರಸ್ತೆ ಸುರಕ್ಷಾ ಸಾಪ್ತಾಹ ಜಿಲ್ಲಾಧಿಕಾರಿಗಳ ಕಛೇರಿಗೆ ಸೀಮಿತವಾಗಿದೆ. ಕಾನೂನಿನ ಪ್ರಕಾರ ಹೆದ್ದಾರಿಯಲ್ಲಿ ಯಾವುದೇ ಗುಂಡಿಗಳು ಇರಬಾರದು ಜೊತೆಗೆ ಪ್ರತಿ ರಾತ್ರಿ ವಿದ್ಯುತ್ ದೀಪಗಳು ನಿರಂತರವಾಗಿ ಉರಿಯಬೇಕು. ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಅನುಕೂಲವಾಗಲು ಪ್ರತಿ ಗೇಟ್‍ಬಳಿ ತಂಗುದಾಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆದರೆ ಎನ್.ಹೆಚ್.ಎ.ಐ ಅಧಿಕಾರಿಗಳ ಭ್ರಷ್ಟಾಚಾರ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಹೆದ್ದಾರಿಯಾಗಿ ಮಾರ್ಪಟ್ಟಿದ್ದರೂ ಸರಿಪಡಿಸಬೇಕಾದ ಅಧಿಕಾರಿಗಳ ನಾಪತ್ತೆಯಾಗಿದ್ದು, ಗುತ್ತಿಗೆದಾರರು ಮಾತ್ರ ವಾಹನ ಸವಾರರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.
ಹೆದ್ದಾರಿ ಅವ್ಯವಸ್ಥೆ ಯಾವ ಮಟ್ಟಕ್ಕೆ ಹದಗೆಟ್ಟಿದೆ ಎಂದರೆ ಹೆದ್ದಾರಿ ಪಕ್ಕದಲ್ಲಿ ಅಕ್ರಮ ಡಾಬಾಗಳು ವಾಣಿಜ್ಯ ಮಳಿಗೆಗಳು ಮದುವೆ ಮಂಟಪದ ಮಾಲೀಕರು ಪಾದಾಚಾರಿ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಅಕ್ರಮ ಒತ್ತುವರಿದಾರರಿಗೆ ನೊಟೀಸ್ ಸಹ ನೀಡದೆ ಬೇಜವಾಬ್ದಾರಿಯಿಂದ ಲ್ಯಾಂಕೋ ಅಧಿಕಾರಿಗಳು ವರ್ತನೆ ಮಾಡುವ ಜೊತೆಗೆ ಅಪಘಾತವಾದಾಗ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕತೆ ಇರುವ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರಿ ಯಮದೂತ ಹೆದ್ದಾರಿಯಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.
ಒಂದು ವಾರದೊಳಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಸರಿಪಡಿಸಿ ರಾತ್ರಿವೇಳೆ ವಿದ್ಯುತ್‍ದೀಪ ನಿರಂತರವಾಗಿ ಉರಿಯಬೇಕು. ಒತ್ತುವರಿ ತೆರವುಗೊಳಿಸಿ ಮಳೆ ನೀರು ರಸ್ತೆ ಮೇಲೆ ಬರದೆ ಸರಾಗವಾಗಿ ಕೆರೆಗಳಿಗೆ ಹರಿಯುವಂತೆ ಅಭಿವೃದ್ದಿ ಪಡಿಸಬೇಕು. ಇಲ್ಲವಾದರೆ ಜಾನುವಾರುಗಳ ಸಮೇತ ಟೋಲ್ ಸಂಗ್ರಹದ ಕೇಂದ್ರಗಳ ಮುಂದೆ ಆಹೋರಾತ್ರಿ ದರಣಿ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಟೋಲ್ ಮ್ಯಾನೇಜರ್ ಅಜಿತ್ ರವರು ರಸ್ತೆಯಲ್ಲಿ ಅವ್ಯವಸ್ಥೆ ಇರುವುದು ಸತ್ಯ ವ್ಯವಸ್ಥಾಪಕರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮುಳಬಾಗಿಲು ತಾಲ್ಲೂಕು ಯಲುವಳ್ಳಿ ಪ್ರಭಾಕರ್, ಕುರುಬರಹಳ್ಳಿ ರಾಮಕೃಷಣಪ್ಪ, ವೆಂಕಟೇಶಪ್ಪ, ರಾಜ್ಯ ಪ್ರ.ಕಾರ್ಯದರ್ಶಿ ಪಾರುಕ್‍ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಬಂಗಾರಿ ಮಂಜು, ಭಾಸ್ಕರ್, ಬಾಬು, ರಾಜೇಶ್, ಗುರುಸ್ವಾಮಿ, ಸುನಿಲ್‍ಕುಮಾರ್, ಆಜಿಲ್‍ಪಾಷ, ವಿಶ್ವ, ವಿಜಯ್‍ಪಾಲ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಶ್ರೀಕಾಂತ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಅಂಬ್ಲಿಕಲ್ ಮಂಜುನಾಥ, ಮುಂತಾದವರು ಇದ್ದರು.

Cluster level athletic competition

St Lawrence English Medium school primary Boys sports team emerged as Mangalore North Zonal champions. 

October 19, Boys team of St Lawrence English Medium school bagged 3 Golds, 2 Silver and 1 bronze in primary section. 

Mohammed Shami of 7th STD won 3 golds;  in 100mtrs Race,  200Mtrs Race also in long jump. Gagan of 6th standard won silver in High jump and bronze in hurdles. And also, the relay team won silver. Thus the primary Boys school team  emerged as Mangalore North Zonal champions. 

Among the High school students Manvith of 8th std won gold in High jump and Pratham won gold in 400 Mtrs Race, Sumuk of 10th std won Silver in discuss throw and bronze in shot put throw.  Josik of 10th std won bronze in triplet jump. 

 These students were trained under Mr Yogesh the physical trainer of the school. The management, parents and teachers and entire student body congratulates our proud winners.

ಬೆಂಗಳೂರು ಗ್ರಾ.ಜಿ.ಸ.ಒ.ನಿ. ಬೆಂಗಳೂರು ಆಡಳಿತ ಮಂಡಳಿ ಅಧ್ಯಯನ ಪ್ರವಾಸದಲ್ಲಿ – ಕುಂದಾಪುರ ರೋಜರಿ ಸೊಸೈಟಿಗೆ ಭೇಟಿ

ಕುಂದಾಪುರ, ಅ.22:  ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಬೆಂಗಳೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರುಗಳು ಮತ್ತು ನಿರ್ವಹಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರು ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದು ಇದರ ನಿಮಿತ್ತ ಕುಂದಾಪುರ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ. ಗೆ (ಅ.19 ರಂದು)  ಭೇಟಿ ನೀಡಿ ಸಂಘ ನಡೆದು ಬಂದ ದಾರಿ ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆ ಗಳು, ಸಾಲ ವಿತರಣೆ, ಠೇವಣಿಗಳ ಸಂಗ್ರಹಣೆ, ವಸುಲಾತಿ ಮತ್ತು ಸಂಘದ ಮೇಲ್ವಿಚಾರಣೆ ಕುರಿತು ಚರ್ಚಿಸಲಾಯಿತು, ಸಂಘದ ಗ್ರಾಹಕರಿಗೆ,  ಸದಸ್ಯರಿಗೆ ಸಾರ್ವಜನಿಕ ಉಪಕಾರ ನಿಧಿ, ಧರ್ಮದ ನಿಧಿ  ಜೋಡಣೆ ಮತ್ತು ಅನುಷ್ಠಾನದ ಕುರಿತು ಚರ್ಚಿಸಲಾಯಿತು.

    ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಉತ್ತಮ ಯೋಜನೆಗಳ ಬಗ್ಗೆ ತಿಳಿದುಕೊಂಡು, ಅವರ ಯೋಜನೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿ, ಸೊಸೈಟಿಯ ಏಳಿಗೆ ಬಗ್ಗೆ ಶ್ಲಾಘಿಸಿ ಸಂಘದ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಅಲ್ಮೆಡಾ ಇವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಪರವಾಗಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ನಿರ್ದೇಶಕರಾಗಿರುವಂತಹ ಗೌರವಾನ್ವಿತ ಶ್ರೀ ಎ ಸಿ.ನಾಗರಾಜುರವರು ಸನ್ಮಾನಿಸಿ ಶುಭವನ್ನ ಕೋರಿದರು.

    ಸನ್ಮಾನ ಸ್ವೀಕರಿಸಿದ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಅಲ್ಮೆಡಾ ನಮ್ಮ ಸೊಸೈಟಿ ಕೇವಲ ಹಣದ ವ್ಯವಹಾರ ಮಾಡದೆ, ಸಾಮಾಜಿಕ ಹಿತದ್ರಷ್ಟಿಯಿಂದ ಬಡವರಿಗೆ, ರೋಗಿಗಳಿಗೆ, ಸಂಘ ಸಂಸ್ಥೆಗಳಿಗೆ ಸಹಾಯಧನವನ್ನು ನೀಡುತ್ತದೆ, ಸದಸ್ಯರ ಮಕ್ಕಳಿಗೆ ವಿಧ್ಯಾಭಾಸಕ್ಕಾಗಿ ವಿಶೇಷವಾದ ಸಾಲದ ಯೋಜನೆಗಳನ್ನು ಹಮ್ಮಿಕೊಂಡ್ಡಿದ್ದೆವೆ. 1 ಮುಖ್ಯ ಕಚೇರಿ ಮತ್ತು 8 ಬ್ರಾಂಚಗಳನ್ನು  ಹೊಂದಿಕೊಂಡು, ಅದರಲ್ಲಿ ಹೆಚ್ಚಿನವು ನಾವು ನಮ್ಮ ಸ್ವಂತ ಕಟ್ಟಡಗಳಲ್ಲಿ ವ್ಯವಹಾರ ಮಾಡುತ್ತಿದೆವೆ” ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೇಬಲ್ ಡಿ ಅಲ್ಮೆಡಾ ರೋಜರಿ ಸೊಸೈಟಿಯ ಲೇವಾ ದೆವಿಯ ಬಗ್ಗೆ ವಿವರ ನೀಡಿದರು.     

    ಈ ಸಂದರ್ಭದಲ್ಲಿ ರೋಜರಿ ಸೊಸೈಟಿಯ ಉಪಾಧ್ಯಕ್ಷಾರಾದ ಶ್ರೀ ಕಿರಣ್ ಲೋಬೊ, ಒಝ್ಲಿನ್ ರೆಬೆಲ್ಲೊ, ಶಾಂತಿ ಆರ್. ಕರ್ವಾಲ್ಲೊ ಮತ್ತಿತರು  ನಿರ್ದೇಶಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ   ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ನಿರ್ದೇಶಕರಾಗಿರುವಂತಹ  ಗೌರವಾನ್ವಿತ ಶ್ರೀ ಎ ಸಿ.ನಾಗರಾಜುರವರು ಮತ್ತು  ಉಪಾಧ್ಯಕ್ಷರಾದ ಶ್ರೀ. ಬಿ ಟಿ ಶ್ರೀನಿವಾಸ್ ಮೂರ್ತಿ ಅವರು ಹಾಗೂ ನಿರ್ದೇಶಕರುಗಳಾದ ಶ್ರೀ ಎನ್. ಹೆಚ್. ಜಯದೇವಯ್ಯ, ಕೆ.ಮುನಿರಾಜು, ಎಸ್.ರಮೇಶ್, ಲಕ್ಷ್ಮೀಗೌಡ, ಮಂಡಿಬೆಲೆ ರಾಜಣ್ಣ, ಶ್ರೀಮತಿ ಆರ್. ರುಕ್ಮಿಣಿ ಭಾಯಿ, ಮಾಜಿ ನಿರ್ದೇಶಕರಾದ ಜಿ. ಸಂಪಂಗಿ ಗೌಡ ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಮಾಜಿ ಅಧ್ಯಕ್ಷರು ಶ್ರೀಮತಿ ಫಾತಿಮಾ ಲಾರೆನ್ಸ್ , ಶ್ರೀ ಪುರುಷೋತ್ತಮ್ ಎಸ್ ಪಿ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸುವರ್ಣ ಪಂಕಜಾಕ್ಷಿ, ಆರ್. ನಾಗರಾಜು, ದಿನೇಶ್, ಕೆ. ಮಂಜುನಾಥ್ ಸಿಬ್ಬಂದಿಗಳು ಹಾಜರಿದ್ದರು. ರೋಜರಿ ಸಒಸೈಟಿಯ ನಿರ್ದೇಶಕಿ ಡಯಾನಾ ಆಲ್ಮೇಡಾ ವಂದಿಸಿದರು.

ರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ 2022-23ನೇ ಸಾಲಿನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಶ್ರೀನಿವಾಸಪುರ: ಸದಸ್ಯರು ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆದುಕೊಂಡು ಯಾವುದೇ ಅಪೇಕ್ಷೆಯಿಲ್ಲದೆ ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರ ಪರಸ್ಪರ ಸಹಕಾರದಿಂದ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಬಡ ಜನತೆಗೆ ಉಪಯೋಗವಾಕತಕ್ಕಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು 2022-23ನೇ ಸಾಲಿನ ಅದ್ಯಕ್ಷರಾದ ಸಿ.ಆರ್. ಶಿವರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ 2022-23ನೇ ಸಾಲಿನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಶಿವರಾಜ್, ರೋಟರಿ ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆದುಕೊಂಡು ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರÀ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದು ಕಳೆದ 7 ವರ್ಷಗಳಿಂದ ಈ ತಾಲ್ಲೂಕಿನಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮುಖಾಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಮುಂದುವರೆಸಿ ಅದೇ ರೀತಿ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಬಡ ಜನತೆಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮುಳಬಾಗಿಲಿನ ಡಿ.ವೈ.ಎಸ್.ಪಿ. ಜಯಂಶಕರ್ ಮಾತನಾಡಿ, ನಾನು ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು ಅನೇಕ ರೋಟರಿ ಕಾರ್ಯಕ್ರಮಗಳಲ್ಲೂ ಸಹ ಭಾಗವಹಿಸಿದ್ದೇನೆ, ಕೋಲಾರ ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯ ಮುಖಾಂತರ ಅನೇಕ ಬಡಜನತೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನನಗೆ ಸಂತಸ ತಂದಿದ್ದು, 2022-23ನೆ ಸಾಲಿಗೆ ಅಧಿಕಾರ ಸ್ವೀಕರಿಸಿರುವ ಶಿವರಾಜ್ ಈ ತಾಲ್ಲೂಕಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಳ್ಳೆಯ ಹೆಸರನ್ನು ಪಡೆಯಬೇಕೆಂದು ಆಶಿಸಿ, ನಮ್ಮ ಇಲಾಖೆಯು ಸಹ ನಿಮ್ಮ ಸೇವಾ ಕಾರ್ಯಗಳಿಗೆ ಬೆನ್ನೆಲುಬಾಗಿ ಇರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿಂದಿನ ಸಾಲಿನ ಸದಸ್ಯರು ಮತ್ತು ನೂತನ ಸದಸ್ಯರಿಗೆ ರೋಟರ್ ಪಿನ್ ಮಾಡುವ ಮುಖಾಂತರ ಪದಗ್ರಹಣವನ್ನು ಬಿ.ಆರ್. ದೆಪ್ಯೂಟಿ ಡಿ.ಆರ್.ಎಫ್.ಸಿ. ಆರ್.ಐ. 3190 ರೋ. ಶ್ರೀಧರ್ ನೆರವೇರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಡಿ.ಆರ್.ಎಫ್.ಸಿ. ಆರ್.ಐ. 3190 ರೋ. ಶ್ರೀಧರ್, ಜೋನಲ್ ಗೌರ್ನರ್ ಆಮು. ಲಕ್ಷ್ಮೀನಾರಾಯಣ ಮಾತನಾಡಿ ಶುಭ ಕೋರಿದರು.
ಈ ಕಾರ್ಯಕ್ರಮವನ್ನು ಜೋನಲ್ ಕಾನ್‍ಫ್ರೆಂಸ್ ಎಸ್. ಶಿವಮೂರ್ತಿ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗೌರ್ನರ್ ಎಸ್.ಎನ್. ಮಂಜುನಾಥರೆಡ್ಡಿ, ಸರಿತಾ ಬಾಲಾಜಿ, ನಾಗಶೇಕರ್, ಕೋಲಾರ ರೋಟರಿ ಸಂಸ್ಥೆಯ ಎಸ್.ವಿ. ಸುಧಾಕರ್, ರವೀಂದ್ರನಾಥ್, ಮುಳಬಾಗಿಲಿನ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಅರುಣ್, ಮಾಜಿ ಅಧ್ಯಕ್ಷರಾದ ಎನ್.ಆರ್. ಸತ್ಯಣ್ಣ, ಹಾಗೂ ಸದಸ್ಯರು, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಚಾರ್ಟರ್ಡ್ ಅಧ್ಯಕ್ಷರಾದ ಎಲ್.ಗೋಪಾಲಕೃಷ್ಣ ಹಾಗೂ ಹಿಂದಿನ ಸಾಲಿನ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ 22-23ನೇ ಸಾಲಿನ ಕಾರ್ಯದರ್ಶಿ ಶ್ರೀನಿವಾಸರರೆಡ್ಡಿ ಹಾಗೂ ಅನೇಕ ಸದಸ್ಯರು ಹಾಜರಿದ್ದರು.

ಸಂತ ಜೋಸೆಫ್ ಪ್ರೌಢಶಾಲೆ : ಸುಧೀರ್ಘ ಸೇವೆಯ ಗುಮಾಸ್ತೆ ವಿನಯಾ ಡಿಕೋಸ್ತಾರವರಿಗೆ-ನಿವ್ರತ್ತಿಯ ಬೀಳ್ಕೊಡುಗೆ ಸಮಾರಂಭ


ಕುಂದಾಪುರ,ಅ.20: ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸತತ 39 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ನಿವ್ರತ್ತರಾದ ಶಿಕ್ಷಕೇತರ ಸಿಬಂದಿ ದ್ವೀತಿಯ ದರ್ಜೆ ಗುಮಾಸ್ತೆ ಶ್ರೀಮತಿ ವಿನಯಾ ಡಿಕೋಸ್ತಾರವರಿಗೆ ಶಾಲಾ ಆಡಳಿತ, ಶಾಲಾ ಶಿಕ್ಷಕ , ಶಿಕ್ಷಕೇತರ ಸಿಬಂದಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಅವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ‘ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಸೇವೆ ನೀಡಿದ ಶ್ರೀಮತಿ ಜೊಸ್ಪಿನ್ ವಿನಯಾ ಡಿಕೋಸಾರವರು, ತಾವು ಸೇವೆ ನೀಡುವಾಗ, ನಿಶ್ಠೆಯಿಂದ, ಪ್ರಮಾಣಿಕತೆಯಿಂದ, ಪ್ರೀತಿ ಮಮತೆಯಿಂದ ಸೇವೆ ನೀಡಿದ್ದಾರೆ. ಅವರು ಕೇವಲ ಸ್ವಲ್ಪ ವರ್ಷಗಳ ಸೇವೆಯಲ್ಲ, ಈ ಒಂದೇ ಸಂಸ್ಥೆಯಲ್ಲಿ ಸುಧೀರ್ಘವಾಗಿ 39 ವರ್ಷ ಉತ್ತಮ ಸೇವೆ ನೀಡಿದ್ದಾರೆ, ಅವರಿಗೆ ನಾವು ಇವತ್ತು ಥೆಂಕ್ಯೂ ಅಂತಾ ಹೇಳಬೇಕು, ಯಾಕೆಂದರೆ ಅವರ ಸೇವೆ ಅಮೂಲ್ಯವಾದುದೆಂದು ನಾನು ಕೇಳಿದ್ದೆನೆ, ನಮ್ಮ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಇವತ್ತು ಈ ಕಾರ್ಯಕ್ರಮದಲ್ಲಿ ಇರಬೇಕಿತ್ತು, ಆದರೆ ಅವರು ಕಾರಣಾಂತರದಿಂದ ಊರಲ್ಲಿ ಇಲ್ಲ, ಅವರು ಹೇಳಿದ ಪ್ರಕಾರ ವಿನಯನವರು, ಚರ್ಚಿನಲ್ಲಿ ಕೂಡ ನಾನಾ ರೀತಿಯಲ್ಲಿ ತಮ್ಮನ್ನು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ, ತಮ್ಮ ಸೇವೆಗೆ ಅವರು ಸದಾ ಸಿದ್ದರಿರುವರಾಗಿದ್ದು, ಸೇವೆಗೆ ಖ್ಯಾತರಾದವರು.” ಎಂದು ಹೇಳಿ ಅವರಿಗೆ ನಿವ್ರತ್ತ ಜೀವನ ಸುಖಮಯವಾಗಲಿ ಎಂದು ಹರಸಿದರು.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ ‘ವಿನಯಾಳ ಸುಧೀರ್ಘ ಸೇವೆಯಲ್ಲಿ ಯಾವುದೇ ಲೋಪವಾಗದೆ ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ನಿರ್ವಹಿಸಿದವರು. ಶಾಲೆಯಲ್ಲಿ ಸೇವೆ ನೀಡುತ್ತಾ ಇರುವಾಗ ಬಡ ಮಕ್ಕಳಿಗೆ ಸಹಾಯಧನ ನೀಡಿ ಅವರು ವಿದ್ಯಾರ್ಥಿಗಳಿಗೆ ಕರುಣಾಮಯಿಯಾಗಿದ್ದರು. ಮಾಜಿ ಮುಖ್ಯ ಶಿಕ್ಷಕಿ ಸಿಸ್ಟರ್ ಆಶಾ ಮಾತನಾಡಿ “ವಿನಯಾ ನನ್ನ ವಿದ್ಯಾಥಿನಿ ಎಂದು ನನಗೆ ಅಭಿಮಾನ, ಅವಳು ಚಿಕ್ಕಂದಿರುವಾಗಲೇ ತುಂಬಾ ಪ್ರತಿಭಾಶಾಲಿ, ಕೆಲಸದಲ್ಲಿ ಕೂಡ ಅತ್ಯಂತ ಚುರುಕು, ನಾನೇ ಅವಳಲ್ಲಿ ಸಲಹೆ ಕೇಳುತಿದ್ದೆ, ಹಿರಿಯ ಗುಮಾಸ್ತೆಯಾಗಿ, ಅವಳಿಂದ ಸಲಹೆ ಕೇಳುವರು ತುಂಬ ಜನ ಇದ್ದಾರೆ’ ಎಂದು ಹೆಮ್ಮೆಯ ನುಡಿಗಳನ್ನಾಡಿದರು.
ಸಹ ಶಿಕ್ಷಕಿ ಶ್ರೀಮತಿ ಸ್ವಾತಿ ಸನ್ಮಾನ ಪತ್ರವನ್ನು ವಾಚಿಸಿದರು. ಇದೇ ಶಾಲೆಯ ಹಳೆ ವಿಧ್ಯಾರ್ಥಿ ವಿನಯಾಳ ಮಗಳು ಮಾತನಾಡಿ “ನನ್ನ ತಾಯಿ ಜೀವನದಲ್ಲಿ ನಮಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ, ಅದೇ ರೀತಿ ಶಿಸ್ತಿನಿಂದ ಪೆÇೀಷಿಸಿದ್ದಾರೆ, ನಮ್ಮಂತ್ತೆ ನಮ್ಮ ಶಾಲೆಯ ಮಕ್ಕಳಿಗೂ ತಮ್ಮ ಮಕ್ಕಳು ಎಂಬತ್ತೆ ಪ್ರೀತಿ ಕೊಟ್ಟಿದ್ದಾರೆ, ಕಷ್ಟದಲ್ಲಿದ್ದವರಿಗೆ ಸಹಾಯ, ಎಡವಿದಾಗ ತಿದ್ದಿ ಬುದ್ದಿ ಹೇಳಿದ್ದಾರೆ, ಅವರು ನಮಗೆ ಜೀವನದಲ್ಲಿ ಆದರ್ಶ ವ್ಯಕ್ತ್ತಿಯಾಗಿದ್ದಾರೆ” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ವಿನಯಾಳ ಪತಿ ಸಾಹಿತಿ ಪತ್ರಕರ್ತ ಸಂತ ಜೋಸೆಫ್ ಶಾಲೆಗಳು ಮತ್ತು ಕಾನ್ವೆಂಟಿಗೆ ನಮಗೆ ಆನಾನುಬಂಧ ಸಂಬಂಧ’ ಎಂದು ತಿಳಿಸಿದರು. ರಕ್ಷಕ ಸಂಘದ ಅಧ್ಯಕ್ಷ ರವಿ ಪೂಜಾರಿ ಶುಭ ಕೋರಿದರು
ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಅವರೆ ಸಂಯೋಜಿಸಿದ ಅಭಿನಂದನ ಗೀತೆಯನ್ನು ವಿದ್ಯಾರ್ಥಿಗಳ ಜೊತೆ ಹಾಡಿದರು. ಸಂತ ಜೋಸೆಫ್ ಹಿರಿಯ ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರೇಮಿಕಾ,ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಶಾಲೆಯ ಶಿಕ್ಷಕಿಯರಾದ ಧರ್ಮಭಗಿನಿಯರು, ಶಾಲೆಯ ಸಹ ಶಿಕ್ಷಕಿಯರಾದ ಸರಸ್ವತಿ, ಶ್ರೀಲತಾ, ಸೆಲಿನ್ ಬಾರೆಟ್ಟೊ ಶಿಕ್ಷೇತರ ಸಿಬಂದಿ ಪ್ರತಿಮಾ, ರೂಪಾ ಸಂತ ಜೋಸೆಫ್ ಹಿರಿಯ ಪ್ರಾ. ಶಾಲೆಯ ಶಿಕ್ಷಕರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ವಿನಾಯಾ ಡಿಕೋಸ್ತಾರ ಮಕ್ಕಳು ಕುಟುಂಬದವರು, ವಿದ್ಯಾರ್ಥಿಗಳು ಬಿಸಿಯೂಟ ಸಿಬಂದಿಗಳು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ, ಸ್ವಾಗತಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿನಯಾ ಡಿಕೋಸ್ತಾ ಶಾಲೆಗೆ ಸುಮಾರು 50 ಸಾವಿರ ಬೆಲೆ ಬಾಳುವ ಯುನಿವರ್ಟರನ್ನು ಕೊಡುಗೆ ನೀಡಿ, ತಾವು 13 ಮುಖ್ಯೋಪಾಧ್ಯಾಯಿನರ ಜೊತೆ ಸೇವೆ ನೀಡಿದ ಮುಖ್ಯೋಪಾಧ್ಯಾನಿಯರನ್ನು ಸ್ಮರಿಸಿ, ತಮ್ಮ ಸೇವಾಧಿಯಲ್ಲಿ ತಮಗೆ ಸಹಕಾರ ನೀಡಿದವರೆಲ್ಲರಿಗೆ ಕ್ರತಜ್ಞತೆ ಸಲ್ಲಿಸಿ, ಸರ್ವರಿಗೂ ವಂದನೆ ಸಲ್ಲಿಸಿದರು.

ಭಾರಿ ಅಂತರದಿಂದ  ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಗದ್ದುಗೆ ಹಿಡಿದ ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸಿಗೆ ಮರಳಿ ಜೀವ ಕೊಡುವ ಕೆಲಸ ಆಗಬೇಕಿದೆ

 ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌‌ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದಿಂದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಗದ್ದುಗೆ ಹಿಡಿದಿದ್ದಾರೆ.ಈ ಮೂಲಕ ಸುಮಾರು 2 ದಶಕಗಳ ನಂತರ ಕಾಂಗ್ರೆಸ್‌ನ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದೂ ಕರ್ನಾಟಕದವರಾಗಿದ್ದು ವಿಶೇಷ.

    ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳನ್ನು ಪಡದಿದ್ದು, ಅವರ ಪ್ರತಿಸ್ಪರ್ಧಿ ಶಶಿ ತರೂರ್‌ 1072 ಮತಗಳನ್ನು ಪಡೆದಿದ್ದಾರೆ. 416 ಮತಗಳು ತಿರಸ್ಕೃತಗೊಂಡಿದ್ದು, ಒಟ್ಟು 9385 ಮತಗಳು ಚಲಾವಣೆಯಾಗಿದ್ದವು.

    ಸ್ಪರ್ಧಿಸಿ ಸೋತ ಶಶಿ ತರೂರ್‌ ಪಕ್ಷದ ಹೊಸ ಅಧ್ಯಕ್ಷ ಖರ್ಗೆಯವರನ್ನು ತರೂರ್‌ ಅಭಿನಂದಿಸಿದ್ದು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿರುವುದು ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಆ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ” ಎಂದು ಹೇಳಿದಲ್ಲದೆ “ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಮತ್ತು ಭಾರತದಾದ್ಯಂತ ಕಾಂಗ್ರೆಸ್‌ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡಿದ್ದು ಒಂದು ಸುಯೋಗವಾಗಿತ್ತು” ಎಂದು ಶಶಿ ತರೂರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

     20 ವರ್ಷಗಳ ನಂತರ ನಡೆದ ಪಕ್ಷದ ಮೊದಲ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ದೀಪಾವಳಿ ನಂತರ ಪಕ್ಷದ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

  ರಾಷ್ಟ್ರೀಯ ಕಾಂಗ್ರೆಸ್  ಅಧ್ಯಕ್ಷರ ಗದ್ದುಗೆ ಹಿಡಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಹಳ ಜವಾಬ್ದಾರಿ ಇದೆ. ಕಾಂಗ್ರೆಸ್ ಪಾಳಯದಲ್ಲಿ ಹೊಸ ನೀರಿಕ್ಷೆ, ಗುರಿ ತಲುಪಬೇಕಾಗಿದೆ.  ಮಲ್ಲಿಕಾರ್ಜುನ ಖರ್ಗೆ ಉತ್ತಮ ರಾಜಕೀಯ ನೇತಾರ ಅವರಿಗೆ ತುಂಬು ಅನುಭವ ಇದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಧ್ವನಿಯಾಗಿತ್ತು, ಆದರೆ ಇದೀಗ ಇದಕಿಂತ ಉತ್ತಮ ಅವಕಾಶ ಸಿಕ್ಕಿದೆ. ಕಾಂಗ್ರೆಸಿಗೆ ಮರಳಿ ಜೀವ ಕೊಡುವ ಕೆಲಸ ಮಲ್ಲಿಕಾರ್ಜುನ ಖರ್ಗೆಯವರಿಂದ ಆಗಬೇಕಿದೆ.

ಮತ ಮಾರಾಟ ಬೇಡ-ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಹಕ್ಕು ಚಲಾಯಿಸಿ – ಸಮಾಜದ ಪರಿವರ್ತನೆಗಾಗಿ ಸಂಕಲ್ಪ ಮಾಡಿ:ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಹಣಕ್ಕಾಗಿ ಮತ ಮಾರಾಟ ಬೇಡ, ಸ್ವಾಭಿಮಾನದಿಂದ ನಿಮ್ಮ ಹಕ್ಕು ಚಲಾಯಿಸಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಉಳಿಸಿಕೊಳ್ಳುವ ಮೂಲಕ ಸಮಾಜದ ಪರಿವರ್ತನೆಗೆ ಹೆಣ್ಣು ಮಕ್ಕಳು ಸಂಕಲ್ಪ ಮಾಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ತಾಲ್ಲೂಕಿನ 27 ಮಹಿಳಾ ಸ್ವಸಹಾಯ ಸಂಘಗಳಿಗೆ 1.90 ಕೋಟಿ ರೂ ಶೂನ್ಯಬಡ್ಡಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಮತ ಮಾರಿಕೊಂಡರೆ ಅಭಿವೃದ್ದಿ ಶೂನ್ಯವಾಗುತ್ತದೆ, ಹಣಕ್ಕಾಗಿ ಕೈಚಾಚುವ ಮೂಲಕ ನಮ್ಮ ಸ್ವಾಭಿಮಾನವನ್ನೇ ಬಲಿಕೊಡುವುದು ಬೇಡ, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಮ್ಮ ಮತ ಮಾರಾಟಕ್ಕಿಲ್ಲ ಎಂದು ಘೋಷಿಸಬೇಕು, ಅಭಿವೃದ್ದಿಗೆ ಸ್ಪಂದಿಸುವ, ಸೇವಾ ಮನೋಭಾವ ಇರುವ ವ್ಯಕ್ತಿಗೆ ಮತ ಹಾಕುವ ಮೂಲಕ ಈ ಸಮಾಜ ಉಳಿಸುವ ಮತ್ತು ಪರಿವರ್ತಿಸುವ ಹೊಣೆಗಾರಿಕೆ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಸಾಲದ ಹಣದಿಂದ ಹಬ್ಬ ಮಾಡದಿರಿ


ಸಾಲ ಪಡೆಯುವುದು ಬದುಕುಕಟ್ಟಿಕೊಳ್ಳಲು, ಈ ಹಣ ಸದ್ಬಳಕೆಯಾಗಿ ನೀವು ಸ್ವಾವಲಂಬನೆ ಸಾಧಿಸಿದರೆ ಮಾತ್ರ ಸಾರ್ಥಕತೆ ಎಂದ ಅವರು, ಹಬ್ಬದ ಸಂದರ್ಭದಲ್ಲಿ ಸಾಲ ನೀಡಿದ್ದಾರೆ ಎಂದು ಆಡಂಬರದಿಂದ ಹಬ್ಬ ಆಚರಿಸಿ ಸಾಲದ ಹಣ ದುರ್ಬಳಕೆ ಮಾಡಿಕೊಂಡರೆ ಅದು ನಿಮ್ಮ ಪ್ರಗತಿಗೆ ಮುಳ್ಳಾದೀತು ಎಂದು ಎಚ್ಚರಿಸಿದರು.
ಚಿನ್ನಾಪುರ ದಲಿತ ಕುಟುಂಬಗಳ ಮಹಿಳೆಯರ ಸ್ವಾಭಿಮಾನದ ಬದುಕು ಹಾಗೂ ಸಾಲ ಮರುಪಾವತಿಯಲ್ಲಿನ ಬದ್ದತೆ ಇಡೀ ಅವಿಭಜಿತ ಜಿಲ್ಲೆಗೆ ಆದರ್ಶವಾಗಿದೆ, ಇಂದು ಮಹಿಳೆಯರು 1.5 ಲಕ್ಷದವರೆಗೂ ಉಳಿತಾಯ ಮಾಡಿದ್ದಾರೆ, ಇಂತಹ ಮಹಿಳೆಯರೇ ಡಿಸಿಸಿ ಬ್ಯಾಂಕಿಗೆ ಶ್ರೀರಕ್ಷೆಯಾಗಿದ್ದಾರೆ, ಅವರ ಸಂಘಗಳಿಗೆ 10 ಲಕ್ಷ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 20 ಲಕ್ಷ ಸಾಲ ನೀಡುವುದಾಗಿ ಘೋಷಿಸಿದರು.
ಚಿನ್ನಾಪುರದ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಪ್ರತಿ ನಿತ್ಯ ಸಭೆ ನಡೆಸುವ ಮಹಿಳೆಯರು ಆರ್ಥಿಕ ಚಟುವಟಿಕೆ ನಡೆಸುವ ಮೂಲಕ ಉಳಿತಾಯದಲ್ಲೂ ಸಾಧನೆ ಮಾಡಿದ್ದಾರೆ, ಭದ್ರತೆರಹಿತ ಸಾಲ ನೀಡಲು ಮುಂದಾದಾಗ ಭಯವಿತ್ತು ಆದರೆ ಆ ಭಯವನ್ನು ಹೆಣ್ಣು ಮಕ್ಕಳು ಹೋಗಲಾಡಿಸಿದ್ದಾರೆ, ತಮ್ಮ ತವರು ಮನೆಯೆಂದು ಭಾವಿಸಿ ಬ್ಯಾಂಕನ್ನು ಉಳಿಸಿ ಬೆಳೆಸಿದ್ದಾರೆ ಎಂದರು.

ಸ್ವಾವಲಂಬನೆಗೆ ಹಣ ಬಳಸಿಕೊಳ್ಳಿ


ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಭದ್ರತೆ ರಹಿತ ಸಾಲ ನೀಡುತ್ತಿದ್ದು, ಇದು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನೀಡುತ್ತಿದ್ದೇವೆ, ಪಡೆದ ಸಾಲವನ್ನು ಕುರಿ,ಕೋಳಿ,ಹಸು ಸಾಕಾಣಿಕೆ, ಟೈಲರಿಂಗ್, ಬ್ಯೂಟಿ ಪಾರ್ಲರ್ ಮತ್ತಿತರ ಸ್ವಯಂ ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳಿ, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಉಳಿತಾಯ ಹೆಚ್ಚು ಮಾಡಿ, ಬ್ಯಾಂಕ್ ಸಾಲ ವಿಳಂಬವಾದರೆ ನಿಮ್ಮ ಸಂಘವೇ ಉಳಿತಾಯದ ಹಣದಿಂದ ಕಷ್ಟದಲ್ಲಿರುವ ಸದಸ್ಯರಿಗೆ ಸಾಲ ನೀಡಬಹುದಾಗಿದೆ, ಹಣ ದುರುಪಯೋಗಕ್ಕೆ ಅವಕಾಶ ನೀಡದೇ ಸಂಘ ಬಲಗೊಳಿಸಿ, ಸಾಲದ ಕಂತು ಪಾವತಿ ಪಾರದರ್ಶಕವಾಗಿರಬೇಕು, ಎಲ್ಲಾ ಸದಸ್ಯರು ಈ ಕುರಿತು ಗಮನಹರಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ಬ ಡವರಿಗೆ ಆಸರೆ


ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವಾಣಿಜ್ಯ ಬ್ಯಾಂಕುಗಳು ಬಡವರಿಗೆ ಸಾಲ ನೀಡೊಲ್ಲ, ಉಳ್ಳವರಿಗೆ ಮಾತ್ರವೇ ಅಲ್ಲಿ ಸಾಲ ಸಿಗೋದು, ಡಿಸಿಸಿ ಬ್ಯಾಂಕ್ ಮಾತ್ರ ಬಡವರ ಕೈಹಿಡಿಯುವ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರನ್ನು ಕೂರಿಸಿ ಸೀರೆ,ತಾಂಬೂಲದೊಂದಿಗೆ ಸಾಲ ಒದಗಿಸುವ ಹೃದಯವಂತಿಕೆ ಬ್ಯಾಲಹಳ್ಳಿ ಗೋವಿಂದಗೌಡರಿಗಿದೆ, ಇಡೀ ರಾಜ್ಯದಲ್ಲೇ ಧೈರ್ಯದಿಂದ ಬಡ ಮಹಿಳೆಯರಿಗೆ 800 ಕೋಟಿಗೂ ಹೆಚ್ಚು ಭದ್ರತೆ ರಹಿತ ಸಾಲ ನೀಡಿರುವುದೇ ಅದಕ್ಕೆ ಸಾಕ್ಷಿಯಾಗಿದೆ, ಸಮರ್ಪಕ ಮರುಪಾವತಿ ಮೂಲಕ ನಂಬಿಕೆ ಉಳಿಸಿಕೊಳ್ಳಿ ಬ್ಯಾಂಕಿಗೆ ಶಕ್ತಿ ತುಂಬಿ ಎಂದು ಕೋರಿದರು.
ಬ್ಯಾಂಕಿನ ಗೋಪಾಲಕೃಷ್ಣ ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕಸಬಾ ದಕ್ಷಿಣ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್.ಬಿ.ಆಯ್. ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ : ಡಿ.ಎಂ.ಅಂಬರೀಶ

ಶ್ರೀನಿವಾಸಪುರ: ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಅ.22 ರಂದು ಬೆಳಿಗ್ಗೆ 11.30ಕ್ಕೆ ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಅವರನ್ನು, ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಂಡಲಿ ಸದಸ್ಯ ಡಿ.ಎಂ.ಅಂಬರೀಶ ಹೇಳಿದರು.
ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಂ.ವೆಂಕಟಸ್ವಾಮಿ, ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದವರು. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಡಾ. ಎಂ.ವೆಂಕಟಸ್ವಾಮಿ ಅವರನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಹಾಗೂ ಪಕ್ಷಾತೀತವಾಗಿ ತಾಲ್ಲೂಕು ನಾಗರಿಕರ ಪರವಾಗಿ ಸನ್ಮಾನಿಸಲಾಗುವುದು. ಅಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಮುಳಬಾಗಲು ವೃತ್ತದಲ್ಲಿ ಸ್ವಾಗತಿಸಲಾಗುವುದು. ಅಭಿನಂದನಾ ಸಮಾರಂಭಕ್ಕೆ ಬೆಳ್ಳಿ ರಥದಲ್ಲಿ ಕರೆದೊಯ್ಯಲಾಗುವುದು ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎನ್.ತಿಮ್ಮಯ್ಯ, ರಾಮಾಂಜಮ್ಮ, ಪ್ರಸನ್ನ, ವೆಂಕಟೇಶ್, ಈರಪ್ಪ, ಪಾಪಣ್ಣ, ಅರವಿಂದ್ ಇದ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ

ಶ್ರೀನಿವಾಸಪುರ: ತಾಲ್ಲೂಕು ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಬಾರದು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೆ ಬೆಳೆ ವಿಮೆ ಕೊಡಿಸಬೇಕು. ಹಾಲಿಗೆ ಕನಿಷ್ಟ ರೂ.50 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕಷ ವೀರಭದ್ರಸ್ವಾಮಿ ಮಾತನಾಡಿ, ಭೂ ಮಾಪನ ಇಲಾಖೆಯಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಿಸ್ಸಾ ಪೋಡಿ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತಾಲ್ಲೂಕು ಕಚೇರಿಯಲ್ಲಿ ರೈತರ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‍ಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.