ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಂಗೀತ ಸಂಭ್ರಮ – 5 ನೇ ಮೈಕ್ ಸೈಮನ್ ನೈಟ್

ಮಂಗಳೂರು: ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಮತ್ತು ಲೈಟಿ ಅಪೋಸ್ಟೋಲೇಟ್ ಕಮಿಷನ್, ಏಂಜೆಲೋರ್ ಪ್ರಸ್ತುತಪಡಿಸಿ ಮೈಲುಗಲ್ಲಾದ ‘5ನೇ ಮೈಕ್ ಸೈಮನ್ ನೈಟ್’ ಕಾರ್ಯಕ್ರಮದಲ್ಲಿ ಕೊಂಕಣಿ ಸಂಗೀತದ ಹಿರಿಯ ಗಾಯಕ ಮೈಕ್ ಸೈಮನ್ ಅವರ ಜನಪ್ರಿಯ ಹಾಡುಗಳು ಪ್ರತಿಧ್ವನಿಸಿದಾಗ ನಗರದ ಡಾನ್ ಬಾಸ್ಕೊ ಸಭಾಂಗಣ ಕೊಂಕಣಿ ಸಂಗೀತ ಪ್ರೇಮಿಗಳು ಮತ್ತು ಅಭಿಮಾನಿಗಳಿಂದ ತುಂಬಿ ತುಳುಕುತೊಡಗಿತು.

    ಈ ಸಂಗೀತ ಕಛೇರಿಯನ್ನು HFF ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿವಂಗತ ಶರೋನ್ ಆಳ್ವಾ ಅವರಿಗೆ ಸಮರ್ಪಿಸಲಾಯಿತು. ಸ್ಥಳದಲ್ಲಿದ್ದ ಕಿಕ್ಕಿರಿದ ಪ್ರೇಕ್ಷಕರಿಗೆ ಮೈಕ್ ಸೈಮನ್ ಅವರೇ ರಚಿಸಿದ ಮತ್ತು ಬರೆದ ಜನಪ್ರಿಯ ಮಧುರ ಗೀತೆಗಳಿಗೆ ಹಾಡಲಾಯಿತು. ಸಂಗೀತದ ಸಂಭ್ರಮದ ಹೊರತಾಗಿ, ಅದ್ಭುತವಾದ ನೃತ್ಯಗಳು ಮತ್ತು ನಕ್ಕು ನಗಿಸುವ ಹಾಸ್ಯಮಯ ಸಂಜೆಯಾಗಿ ಮಾರ್ಪಟ್ಟಿತು. Fr ವಿಲಿಯಂ ಮೆನೇಜೆಸ್.

     ಔಪಚಾರಿಕ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಂಜಲೂರು ಚರ್ಚಿನ ಧರ್ಮಗುರುಗಳಾದ  ವಂ| ವಿಲಿಯಮ್ ಮಿನೆಜೆಸ್ ವಹಿಸಿದ್ದು, ಡೇವಿಡ್ ಡಿಸೋಜಾ ಪ್ರೊಪ್ರೈಟರ್, ಡಿಸಿಒಎನ್ಎಸ್ ಗ್ರೂಪ್, ಪ್ರವೀಣ್ ತೌರೊ, ಮಾರ್ಕೆಟಿಂಗ್ ಮ್ಯಾನೇಜರ್, ಡೈಜಿವರ್ಲ್ಡ್ ಮೀಡಿಯಾ, ಎಲಿಯಾಸ್ ಫೆರ್ನಾಂಡಿಸ್, ನಿರ್ದೇಶಕರು, ಫೋರ್ವಿಂಡ್ಸ್, ಮಂಗಳೂರು, ಸಂತೋಷ್ ಸಿಕ್ವೇರಾ, ಮಾಲೀಕ ಸಂತೋಷ್ ಅರೇಂಜರ್ಸ್, ರಿಚರ್ಡ್ ಮೊರಾಸ್, ಕೊಂಕಣಿ ಲೇಖಕರ ಸಂಘದ ಸಂಯೋಜಕ, ಸ್ಟಾನ್‌ಪ್ರಿ, ಸ್ಟಾನ್ಲಿ ಛಾಯಾಗ್ರಹಣ ಮತ್ತು ಅನ್ಸಿತಾ ವೀಡಿಯೋಗ್ರಫಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

     ಮೈಕ್ ಸೈಮನ್ ಜೊತೆಗೆ ಕೊಂಕಣಿಯ ಖ್ಯಾತ ಗಾಯಕರಾದ ಕ್ಲೌಡ್ ಡಿಸೋಜಾ, ಐವಾನ್ ಸಿಕ್ವೇರಾ,  ಝೀನಾ ಪೆರೀರಾ, ಜೋಸೆಫ್ ಪಿಂಟೋ, ಪ್ರೆಸಿಲ್ಲಾ ಸಿಕ್ವೇರಾ,  ಮೆಲಿಂಡಾ ಪೆರೀರಾ, ರಾಜೇಶ್ ಮಿಸ್ಕಿತ್, ಬಿಂದು ಕುಟಿನ್ಹಾ, ಒಲಿಂಡಾ ಲೋಬೋ , ದಿಶಾ ಮೊರಾಸ್, ರಿಯಾ ಇವರು ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಪುಳಕಗೊಳಿಸಿದರು.

    ಜನಪ್ರಿಯ ವಿಜೆಗಳಾದ ಜೂಡ್ ನೊರೊನ್ಹಾ ಮತ್ತು ಫ್ಲಾಯ್ಡ್ ಡಿ’ಮೆಲ್ಲೋ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿದರು. ಜೋಸೆಫ್ ಪಿಂಟೋ ನೇತೃತ್ವದ ಹಾಸ್ಯ ತಂಡವು ಹಾಡುಗಳ ನಡುವೆ ನಗೆಯ ಕ್ಷಣಗಳನ್ನು ಸೃಷ್ಟಿಸಿತು ಮತ್ತು ಪ್ರೇಕ್ಷಕರು ಅವುಗಳನ್ನು ಚೆನ್ನಾಗಿ ಆನಂದಿಸಿದರು. ಪಪ್ಪನ್ ಮತ್ತು ಜೋಸ್ವಿನ್ ಕಾರ್ಯಕ್ರಮಕ್ಕೆ ಸಂಗೀತ ನೀಡಿದರು. ರಾಜೇಶ್ ಮಿಸ್ಕ್ವಿತ್ ಗಣ್ಯರನ್ನು ಸ್ವಾಗತಿಸಿ, ನೋಯೆಲ್ ಪಿಂಟೋ ವಂದಿಸಿದರು.

ರೇಷ್ಮೆ ಇಲಾಖೆ ವಿಲೀನದ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಕೈಬಿಡಲು ಆಗ್ರಹ
ರೈತರ ಬದುಕಿನ ಜತೆ ಚೆಲ್ಲಾಟಬೇಡ,ಇಲಾಖೆ ಬಲಪಡಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಬಯಲುಸೀಮೆಯ ರೈತರ ಜೀವನಾಡಿಯಾಗಿರುವ ರೇಷ್ಮೆಕೃಷಿಯನ್ನು ಇತರೆ ಇಲಾಖೆಗಳೊಂದಿಗೆ ವಿಲೀನ ಮಾಡುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದ್ದು, ಅನ್ನದಾತನ ಬದುಕಿನೊಂದಿಗೆ ಚೆಲ್ಲಾಟವಾಡುವ ಪ್ರಯತ್ನ ಕೈಬಿಟ್ಟು ಇಲಾಖೆಯ ಬಲವರ್ಧನೆಗೆ ಕ್ರಮವಹಿಸುವಂತೆ ಸರ್ಕಾರವನ್ನು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರೇಷ್ಮೆ ಇಲಾಖೆಯಲ್ಲಿನ 2346 ಹುದ್ದೆಗಳ ರದ್ದತಿ ಜತೆಗೆ ಇಲಾಖೆಯನ್ನು ಮತ್ತೊಂದು ಇಲಾಖೆ ಜತೆ ವಿಲೀನ ಮಾಡುವ ನಿರ್ಧಾರ ಕೈಬಿಡಿ ಎಂದು ಆಗ್ರಹಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕರೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಸ್ವಾವಲಂಬನೆಯ ಬದುಕು ನೀಡಿರುವ ಉದ್ಯಮವನ್ನು ವಿನಾಶದೆಡೆಗೆ ತರುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದಿದ್ದಾರೆ.
ಅತಿವೃಷ್ಟಿ,ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದಾಗ ಕಾಪಾಡಿದ್ದೇ ರೇಷ್ಮೆ ಮತ್ತು ಹಾಲು ಎಂಬುದನ್ನು ಸರ್ಕಾರ ಮರೆತಂತಿದೆ, ಬಯಲುಸೀಮೆಯ ಅನ್ನದಾತರನ್ನು ಆತ್ಮಹತ್ಯೆಯತ್ತ ಆಲೋಚನೆಯೂ ಮಾಡದಂತೆ ಆತ್ಮಸ್ಥೈರ್ಯ ತುಂಬಿದ ರೇಷ್ಮೆ ಉದ್ಯಮವನ್ನು ಉಳಿಸಿ ಅಭಿವೃದ್ದಿಪಡಿಸಬೇಕಾದ ಸಂದರ್ಭದಲ್ಲಿ ಸರ್ಕಾರ ಕತ್ತುಹಿಚುಕುವ ಕೃತ್ಯಕ್ಕೆ ಕೈಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಅರಸರ ಕಾಲದಲ್ಲಿಯೇ ಆರಂಭವಾಗಿ 108 ವರ್ಷಗಳ ಇತಿಹಾಸ ಹೊಂದಿರುವ ಇಲಾಖೆ ಮುಚ್ಚುವ ಹುನ್ನಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಬಯಲು ಸೀಮೆಯ ರೈತರ ಬದುಕು ಕಷ್ಟಕ್ಕೆ ಸಿಲುಕಲಿದೆ, ಚೀನಾ ರೇಷ್ಮೆ ಪೈಪೊಟಿಗೆ ಅನುಗುಣವಾಗಿ ಇದೀಗ ರೈತರು ಬೈವೋಲ್ಟೈನ್ ರೇಷ್ಮೆ ಉತ್ಪಾದನೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡುವ ಬದಲಿಗೆ ಇಲಾಖೆ ಮುಚ್ಚುವ ಪ್ರಯತ್ನ ಸರಿಯೇ ಎಂದು ಪ್ರಶ್ನಿಸಿದ್ದಾರೆ.

ದೇಶದ ರೇಷ್ಮೆಯಲ್ಲಿ ಕೋಲಾರ ಸಿಂಹಪಾಲು


ದೇಶದಲ್ಲೇ ಅತಿಹೆಚ್ಚು ರೇಷ್ಮೆ ಉತ್ಪಾದಿಸುವ ಮೂಲಕ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದ್ದರೆ, ರಾಜ್ಯದಲ್ಲಿ ಕೋಲಾರ ಜಿಲ್ಲೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ರೇಷ್ಮೆಕೃಷಿಯನ್ನು ರಾಜ್ಯದ 1.35 ಲಕ್ಷ ಕುಟುಂಬಗಳು ಹಾಗೂ 7059 ನೂಲು ಬಿಚ್ಚಾಣಿಕೆದಾರರ ಕುಟುಂಬಗಳು ನಂಬಿಕೊಂಡಿವೆ ಎಂದು ತಿಳಿಸಿದ್ದಾರೆ.
2346 ಹುದ್ದೆಗಳ ರದ್ದತಿ ಹಾಗೂ ಇಲಾಖೆ ವಿಲೀನಕ್ಕೆ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿರುವುದು ಆಘಾತಕಾರಿ ವಿಷಯವಾಗಿದ್ದು, ಅಧಿಕಾರಿಗಳ ಮಾತು ಕೇಳಿ ಸರ್ಕಾರ ಈ ಕೆಲಸಕ್ಕೆ ಮುಂದಾದರೆ ರೈತರ ತೀವ್ರ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ರಾಜ್ಯದ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯ ಮಾಡಲಾಗುತ್ತಿದೆ, ವಾರ್ಷಿಕ 12 ಕೋಟಿ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ 12 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಗೂಡು ಹಾಗೂ 8 ಸಾವಿರ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದಿಸಲಾಗುತ್ತಿದ್ದು, ಇಷ್ಟೊಂದು ವಿಸ್ತಾರವಾಗಿ ಹರಡಿರುವ ರೇಷ್ಮೆ ಉದ್ಯಮವನ್ನು ಉಳಿಸಿ ಬೆಳೆಸುವ ಮೂಲಕ ರೈತರಿಗೆ ನೆರವಾಗುವಂತೆ ಒತ್ತಾಯಿಸಿದ್ದಾರೆ.
ರೇಷ್ಮೆ ಮೊಟ್ಟೆ,ಚಾಕಿ ಹುಳು ನೀಡಿಕೆಯಲ್ಲಿ ಖಾಸಗಿಯವರ ದರ್ಬಾರು ಕಡಿಮೆ ಮಾಡಿ ಸರ್ಕಾರವೇ ಇಲಾಖೆ ಮೂಲಕ ರೈತರಿಗೆ ಅಗತ್ಯವಾದ ಪ್ರಮಾಣದಲ್ಲಿ ಮೊಟ್ಟೆ, ಚಾಕಿಹುಳು ನೀಡುವ ಕೆಲಸ ಮಾಡಬೇಕು, ಕೃಷಿ,ತೋಟಗಾರಿಕಾ ಉತ್ಪನ್ನಗಳಿಗೆ ಬೆಲೆ ಸಿಗದೇ ಕೈಕೊಟ್ಟ ಸಂದರ್ಭದಲ್ಲೂ ಬಯಲುಸೀಮೆಯ ಜಿಲ್ಲೆಯ ರೈತರನ್ನು ಕಾಪಾಡಿದ್ದು ರೇಷ್ಮೆ ಮತ್ತು ಹಾಲು ಎಂಬ ಸತ್ಯದ ಅರಿವು ಈ ಭಾಗದಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳಿಗೆ ಇರಬೇಕು, ಅನ್ನದಾತರ ಕೈಹಿಡಿದಿರುವ ಈ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರು ಪಕ್ಷಬೇಧ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ರೇಷ್ಮೆ ಮಾರುಕಟ್ಟೆಗಳಲ್ಲಿ ವಾರ್ಷಿಕವಾಗಿ 2500 ರಿಂದ 3 ಸಾವಿರ ಕೋಟಿ ರೂಗಳ ಮೌಲ್ಯದ ರೇಷ್ಮೆ ಗೂಡು ವಹಿವಾಟು ನಡೆಸುತ್ತಿದ್ದು ಸರ್ಕಾರಕ್ಕೆ ಆದಾಯವೂ ಇದೆ, ವಿದೇಶಿ ವಿನಿಮಯಕ್ಕೂ ನೆರವಾಗಿದೆ, ವಿಶ್ವಬ್ಯಾಂಕಿನಿಂದ ನೂರಾರು ಕೋಟಿ ಸಾಲ ತಂದು ಇಲಾಖೆಯನ್ನು ಅಭಿವೃದ್ದಿಪಡಿಸಲಾಗಿದೆ.
ಈಗ ಏಕಾಏಕಿ ಮುಚ್ಚುವ ನಿರ್ಧಾರ ಸರಿಯಲ್ಲ ಎಂದ ಅವರು, ಈ ಹಿಂದೆ ರೇಷ್ಮೆ ಗೂಡು ಬೆಲೆ ಕಳೆದುಕೊಂಡಾಗ ಅಂದು ರೇಷ್ಮೆ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಪ್ರತಿ ಕೆಜಿಗೆ 10 ರೂ ಪ್ರೊತ್ಸಾಹಧನ ಕೊಟ್ಟು ಕೈಹಿಡಿದಿದ್ದನ್ನು ಸ್ಮರಿಸಿದ್ದಾರೆ.
2024-25ರ ವೇಳೆಗೆ 1.25 ಲಕ್ಷ ಹೆಕ್ಟೇರ್ ಹಿಪ್ಪುನೇರಳೆ ತೋಟ ನಿರ್ಮಾಣ ಹಾಗೂ 1.05 ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆ ಹಾಗೂ 0.15 ಲಕ್ಷ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದನೆ ಗುರಿ ಸಾಧನೆಗೆ ಇಲಾಖೆ ಉಳಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್

ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಮರು ಆಯ್ಕೆಯಲ್ಲಿ ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ ಇವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಭಾರತೀಯ ಮೂಲದ ರಿಷಿ ಸುನಕ್ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ಭರವಸೆ ನೀಡಿದ್ದಾರೆ.

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.

    ಈ ಪೈಪೋಟಿಯಲ್ಲಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್‌ನಿಂದ ಹಿಂದೆ ಸರಿದ ಕಾರಣ ಸುನಕ್ ಹಾದಿ ಸುಗಮಗೊಂಡಿತು. ಸುನಕ್ ವಿರುದ್ಧ, ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್‌ ಸ್ಪರ್ಧಿಸಿದ್ದರು. ಪೆನ್ನಿ ಮೋರ್ಡೆಂಟ್‌ ಕೇವಲ 26 ನಾಯರ ಬೆಂಬಲ ಪಡೆದರು. ಹೀಗಾಗಿ ಕಣದಿಂದ ಹೊರಬಿದ್ದರು. ಇದರೊಂದಿಗೆ ಭಾರಿ ಬಹುಮತದೊಂದಿದೆ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬೊರಿಸ್ ಜಾನ್ಸನ್ ಆಡಳಿತದಲ್ಲಿ ರಿಷಿ ಸುನಕ್ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜಾನ್ಸನ್ ಜನಪ್ರಿಯತೆ ಪಾತಾಳಕ್ಕೆ ಕುಸಿದರೆ, ರಿಷಿ ಸುನಕ್ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಜನಪ್ರಿಯರಾದರು. ಬ್ರಿಟನ್ ಉದ್ಯಮ ಕ್ಷೇತ್ರಕ್ಕೆ ನೆರವು ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ

ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು.

ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿಯವರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್”


ಕುಂದಾಪುರ, ಅ.24: ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಇವರಿಗೆ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬಿನಿಂದ “ನೇಶನಲ್ ಬ್ಯುಲ್ಡ್ ಎವಾರ್ಡ್” ಲಭಿಸಿದೆ.
ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ವಲಯ 3 ಮತ್ತು 4ರ ಆತಿಥ್ಯದಲ್ಲಿ ಆಯೋಜಿಸಿದ ಮಾಧವಕೃಷ್ಣ ಸಭಾಭವನ, ಹೋಟೆಲ್ ಕಿದಿಯೂರು, ಉಡುಪಿಯಲ್ಲಿ ನಡೆದ 20ನೇ ಅಕ್ಟೋಬರ್ ರಂದು “ಜ್ಞಾನ ಪೂರ್ಣ” ರೋಟರಿ ಜಿಲ್ಲಾ ಸಾಕ್ಷರತಾ ಕಾರ್ಯಾಗಾರ ಹೊಸ ಶಿಕ್ಷಣ ನೀತಿ ಎಂಬ ಕಾರ್ಯಕ್ರಮದಲ್ಲಿ ಆಯ್ದ ಶಿಕ್ಷಕರಿಗೆ ನೇಷನ್ ರೋಟರಿ ಇಂಡಿಯಾ ಮಿಷನ್ ವತಿಯಿಂದ ಶೈಕ್ಷಣಿಕ ಕ್ಷೇತ್ರದ ವಿಶೇಷ ಸಾಧನೆಗಾಗಿ ನೀಡುವ ಆಯ್ದ ಶಿಕ್ಷರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನೀಡಲಾಯಿತು, ಅವರಲ್ಲಿ ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಒರ್ವರಾಗಿದ್ದಾರೆ.


ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಎಚ್. ಭಾ.ಸೇ.ಆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲೆ ಉದ್ಘಾಟಕರಾಗಿದ್ದು, ಅಧ್ಯಕ್ಷತೆಯನ್ನು ರೊ. ಡಾ. ಜಯ್‍ಗೌರಿ, ಜಿಲ್ಲಾ ರೋಟರಿ ಗವರ್ನರ್, 3182 ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಿವರಾಜ್ ಎನ್. ಕೆ.ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ, ರೊ. ಅಭಿನಂದನ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ತರಬೇತುದಾರರು, ರೊ. ಡಿ.ಎಸ್. ರವಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ಸಲಹೆಗಾರರು ರೊ. ಎಚ್. ಎಲ್. ರವಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ವೃತ್ತಿ ಸೇವಾ ನಿರ್ದೇಶಕರು ರೊ. ಬಿ. ಸಿ. ಗೀತಾ, ಜಿಲ್ಲಾ ಗವರ್ನರ್ 2023-24 ರೊ. 03 ದೇವಾನಂದ್, ಜಿಲ್ಲಾ ಗವರ್ನರ್ 2024-25 ಯಾಗಿದ್ದು, ಸಂಪನ್ಮೂಲ ಅತಿಥಿಗಳಾಗಿ ಪ್ರೊ. ಕರುಣಾಕರ ಕೋಟೆಕಾರ್ ನಿರ್ದೇಶಕರು, ಅಂತರಾಷ್ಟೀಯ ಶೈಕ್ಷಣಿಕ ಸಂಯೋಜಕರು, ಮಾಹೆ, ಮಣಿಪಾಲ ಡಾ. ಅಶೋಕ ಸಾಮ್ಯ ಉಪ. ಪ್ರಾಂಶುಪಾಲ, ಡಯಟ್, ಉಡುಪಿ ಶ್ರೀ ಒ.ಆರ್. ಪ್ರಕಾಶ್, ಉಪನ್ಯಾಸಕರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಶ್ರೀ ವಿಠಲ ನಾಯಕ್, ಶಾಲಾ ಶಿಕ್ಷಕರು, ಕಲ್ಲಡ್ಕ, ಬಂಟ್ವಾಳ ಇವರಿದ್ದ ಕಾರ್ಯಕ್ರಮದಲ್ಲಿ ಚಂದ್ರ ಶೇಖರ ಬೀಜಾಡಿಯವ
ರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನ್ನು ಕೊಡಮಾಡಲಾಯಿತು.

ಈ ಮೊದಲು ಕೂಡ ಚಂದ್ರ ಶೇಖರ ಬೀಜಾಡಿಯವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ತಾಲೂಕು, ಜಿಲ್ಲಾ ಮಟ್ಟದ ಕ್ರೀಡೋತ್ವವಗಳಲ್ಲಿ ಅತ್ಯುತ್ತಮ ನಿರೂಪರಾಗಿದ್ದು, ರಾಜ್ಯ ಮಟ್ಟದ ಕೂಡ ಅತ್ಯುತ್ತಮ ಕಾರ್ಯ ನಿರೂಪಕರೆಂದು ಹೆಸರು ಗಳಿಸಿದ್ದಾರೆ.

ಉಡುಪಿ ಸೈಂಟ್ ಮೇರೀಸ್ ಆ.ಮಾ. ಶಾಲಾ ಕ್ರೀಡಾಕೂಟ – “ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜೀವನ ಕೌಶಲ್ಯ ವೃದ್ಧಿ”: ಗೌತಮ್ ಶೆಟ್ಟಿ ಟೊರ್ಪೆಡೋಸ್

ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ” ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.

ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಶಾಲಾ ಹಳೆ ವಿದ್ಯಾರ್ಥಿನಿ ಅಶ್ಮಿತಾ ರೆಬೆಲ್ಲೊ ಮುಖ್ಯ ಅತಿಥಿಗಳಾಗಿದ್ದರು.

ಕಿನ್ನಿಕಂಬಳ: ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನದ ಸಂಭ್ರಮಚಾರಣೆ

ಕಿನ್ನಿಕಂಬಳ: ರೋಸಾ ಮಿಸ್ಟಿಕಾ ಪಿಯು ಕಾಲೇಜು ಕಿನ್ನಿಕಂಬಳದಲ್ಲಿ ಸಾಂಪ್ರದಾಯಿಕ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು  ಸಾಂಪ್ರದಾಯಿಕ ಉಡುಗೆ ದರಿಸಿ ಬಂದಿದ್ದರು.. ಅವರು ಸಾಮೂಹಿಕವಾಗಿ ಪ್ರದರ್ಶಿಸಿದ ಮತ್ತು ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ವಿವಿಧ ಶೈಲಿಯ ಅವರ ಉಡುಪು ಸರಳವಾಗಿ ಅದ್ಭುತವಾಗಿದ್ದವು. ಸಮಾರಂಭವು ಪ್ರಾರ್ಥನೆ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಬೇಡಿಕೊಳ್ಳುವುದರೊಂದಿಗೆ ಪ್ರಾರಂಭವಾಯಿತು. 12 ನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು.

ಶ್ರೀ ಜೇಸನ್ ಮೊಂತೇರೊ ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದರು. ಮುಖ್ಯ ಅತಿಥಿ ಮತ್ತು ಪ್ರಾಂಶುಪಾಲರಾದ ಸಿಸ್ಟರ್ ಸಾಧನಾ ಅವರು ಅಧ್ಯಾಪಕರೊಂದಿಗೆ ವಿಶೇಷ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಶ್ರೀ ಜೇಸನ್ ಮೊಂತೆರೊ ಅವರು ವಿದ್ಯಾರ್ಥಿಗಳಿಗೆ ತಮ್ಮ ಭಾಷಣದಲ್ಲಿ ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕು ಏಕೆಂದರೆ ಆ ವೇದಿಕೆಗಳು ಯುವ ಮನಸ್ಸುಗಳನ್ನು ಹಿಡಿದಿಟ್ಟುಕಳ್ಳಲು ಸಹಾಯ ಮಾಡುತ್ತದೆ. ಜೀವನಕ್ಕೆ ಸರಿಯಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸರಿಯಾದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು” ಎಂದು ಸಂದೇಶ ನೀಡಿ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಾಲೇಜನ ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು.

ಪ್ರಾಂಶುಪಾಲರಾದ ಸಿಸ್ಟರ್ ಸಾಧನಾ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಕಾಲೇಜಿಗೆ ಕೀರ್ತಿ ತಂದಿರುವುದಕ್ಕೆ ನಮಗೆ ಹೆಮ್ಮೆ ಎಂದು ಭಾಗವಹಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಹಾಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ ನಮ್ಮ ಸಂಪ್ರದಾಯಗಳನ್ನು ರಕ್ಷಿಸಲು ಕರೆ ನೀಡಿದರು.

ಕಾರ್ಯಕ್ರಮದ ಎರಡನೇ ಭಾಗವಾಗಿ ಸಾಂಪ್ರದಾಯಿಕ ರ್ಯಾಂಪ್ ವಾಕ್ ಮಾಡಿ. Mr. Mystican ಮತ್ತು Ms Mystican ಪ್ರಶಸ್ತಿಯನ್ನು ಗೆಲ್ಲಲು ವಿದ್ಯಾರ್ಥಿಗಳು ಹುಮ್ಮಸಿನಲ್ಲಿದ್ದರು, ವಿದ್ಯಾರ್ಥಿಗಳು ಇದರಲ್ಲಿ ಉತ್ಸಾಹದಲ್ಲಿ ಭಾಗವಹಿಸಿದ್ದು. ಅಂತಿಮವಾಗಿ ಈ ಸ್ಪರ್ಧೆಯಲ್ಲಿ “ರಿಯಾ ಕುಟಿನ್ಹಾ” ಮಿಸ್ ಮಿಸ್ಟಿಕನ್ ಆಗಿ ಮತ್ತು “ಶ್ರೀ ರೊನಾಲ್ಡ್ ಡಿಸೋಜಾ” ಮಿಸ್ಟರ್ ಮಿಸ್ಟಿಕನ್ ಪ್ರಶಸ್ತಿ ಪಡೆದುಕೊಂಡರು. ಶ್ರೀಮತಿ ಕಾರ್ಮೆಲಾ ತಾವ್ರೊ ಸ್ವಾಗತ ಕೋರಿದರು ಕಾರ್ಯಕ್ರಮವನ್ನು ಶ್ರೀ ಫೆರ್ನಾಂಡಿಸ್ ಸಂಯೋಜಿಸಿದ್ದರು.ಮಿಸ್ ಇಶಾ ಡಿಸೋಜಾ ಧನ್ಯವಾದ ಸಮರ್ಪಿಸಿದರು.

ರಾಷ್ಟ್ರ ಮಟ್ಟದಲ್ಲಿ ಆರ್‍ಪಿಐ ಪಕ್ಷವನ್ನು ಸಂಘಟಿಸಲಾಗುವುದು. ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ:ಡಾ. ಎಂ.ವೆಂಕಟಸ್ವಾಮಿ

ಶ್ರೀನಿವಾಸಪುರ: ರಾಷ್ಟ್ರ ಮಟ್ಟದಲ್ಲಿ ಆರ್‍ಪಿಐ ಪಕ್ಷವನ್ನು ಸಂಘಟಿಸಲಾಗುವುದು. ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಾಗುವುದು. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರಕವಾಗಿ ಕಾರ್ಯಕ್ರಮ ರೂಪಸಿ ಜಾರಿಗೊಳಿಸಲಾಗುವುದು ಎಂದು ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಡಾ. ಎಂ.ವೆಂಕಟಸ್ವಾಮಿ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್‍ಪಿಐ ದೇಶದ 31 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದು, ತುಳಿತಕ್ಕೆ ಒಳಗಾದ ಜನರ ಪರ ಧ್ವನಿಯೆತ್ತಿದೆ ಎಂದು ಹೇಳಿದರು.
ನಾನು ನೂತನ ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷನಾಗಿ ಆಂತರಿಕ ಪ್ರಜಾಪ್ರಭುತ್ವ ಹಾಘೂ ಸಾಮೂಹಿಕ ನಾಯಕತ್ವ ಬೆಂಬಲಿಸುತ್ತೇನೆ. ರಾಜ್ಯದಲ್ಲಿ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುತ್ತೇನೆ. ಅವರ ಗೆಲುವಿಗಾಗಿ ಕಾರ್ಯಕರ್ತರು ಹೆಗಲು ನೀಡಿ ಶ್ರಮಿಸಬೇಕು ಎಂದು ಹೇಳಿದರು.
ಮುಖಂಡರಾದ ಜಿ.ಸಿ.ವೆಂಕಟರವಣಪ್ಪ, ಎಸ್.ನಾರಾಯಣಸ್ವಾಮಿ, ಶಿವಪ್ರಸಾದ್ ಡಾ, ಎಂ.ವೆಂಕಟಸ್ವಾಮಿ ಅವರ ಸೇವೆ ಹಾಗೂ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಎಂ.ವೆಂಕಟಸ್ವಾಮಿ ಅವರನ್ನು, ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸನ್ಮಾನಿಸಲಾಯಿತು.
ಮುಖಂಡರಾದ ಪ್ರಸನ್ನ, ಡಿ.ಎಂ.ಅಂಬರೀಶ್, ಎನ್.ತಿಮ್ಮಯ್ಯ, ರಾಮಾಂಜಮ್ಮ, ಈರಪ್ಪ, ಚಲಪತಿ, ಎನ್.ಪಾಪಣ್ಣ, ಶ್ರೀನಿವಾಸ್, ವೆಂಕಟೇಶ್, ರವಿ, ಆರ್.ಚಂದ್ರಶೇಖರ್, ಶಿವಣ್ಣ, ಬ್ಯಾಟರಾಜ್ ಮತ್ತಿತರರು ಇದ್ದರು.
ಮೆರವಣಿಗೆ: ಪಟ್ಟಣದ ಮುಳಬಾಗಲು ವೃತ್ತದಿಂದ ಎಂಜಿ ರಸ್ತೆ ಮೂಲಕ ಸಮಾರಂಭ ಏರ್ಪಡಿಸಿದ್ದ ಸ್ಥಳಕ್ಕೆ ಡಾ. ಎಂ. ವೆಂಕಟಸ್ವಾಮಿ ಅವರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಅ.27 ರಿಂದ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿ ರಥಯಾತ್ರೆ
ವರ್ತೂರು ಪ್ರಕಾಶ್‍ಗೆ ಕೋಲಾರ ತಾಲ್ಲೂಕಿನ ಉಸ್ತುವಾರಿ-ಸಚಿವ ಮುನಿರತ್ನ ಸೂಚನೆ

ಕೋಲಾರ:- ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿ ರಥಯಾತ್ರೆ ಅ.27 ರಿಂದ ನ.7 ರವರೆಗೂ 12 ದಿನಗಳ ಕಾಲ ಸಾಗಿ ಬರುವ ಹಿನ್ನಲೆಯಲ್ಲಿ ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸಚಿವರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ರಥಯಾತ್ರೆಯ ಉಸ್ತುವಾರಿಯನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ವಹಿಸಿಕೊಳ್ಳುವಂತೆ ಸಚಿವ ಮುನಿರತ್ನ ಸೂಚಿಸಿದರು.
ಬೆಂಗಳೂರಿನ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ 12 ದಿನಗಳ ಕಾಲ ಸಂಚರಿಸುವ ರಥಯಾತ್ರೆ ದಿನಕ್ಕೆ 15 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಿದ್ದು, ಆ ವ್ಯಾಪ್ತಿಯ ಪ್ರಸಿದ್ದ ಕ್ಷೇತ್ರಗಳ ಮೃತ್ತಿಗೆ ಹಿಡಿಮಣ್ಣನ್ನು ಸಂಗ್ರಹಿಸಿ ರಥದಲ್ಲಿ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಅ.27 ಕೋಲಾರದಲ್ಲಿ ರಥಯಾತ್ರೆ ಸಂಚಾರ


ಕೋಲಾರ ತಾಲ್ಲೂಕಿನಲ್ಲಿ ಅ.27 ರಂದು ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆ ಸರ್ಕಾರಿ ರಥವಾಗಿ ಆಗಮಿಸಿದ್ದು, ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷರಾದ ಎಸ್.ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವ ವಹಿಸಲಿದ್ದು, ತಾಲ್ಲೂಕಿನ 15 ಗ್ರಾಮ ಪಂಚಾಯತಿಗಳಲ್ಲಿ ರಥ ಸಂಚರಿಸಲಿದ್ದು, ಅ.27 ಮತ್ತು 28 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ನಡೆಯಲಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರಸಿದ್ದ ಪುಣ್ಯಕ್ಷೇತ್ರಗಳ ಮೃತ್ತಿಕೆ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ರಥಯಾತ್ರೆ ಸಾಗಿ ಬಂದಾಗ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು,ಸಾರ್ವಜನಿಕರು ಜತೆಗಿದ್ದು, ಅದ್ದೂರಿಯಾಗಿ ಸ್ವಾಗತಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ವರ್ತೂರು ಪ್ರಕಾಶ್ ತಿಳಿಸಿ, ಹೆಚ್ಚಿನ ಜನ ಭಾಗವಹಿಸಲಿದ್ದು, ಅಗತ್ಯವಾಗಿ ಊಟ,ತಿಂಡಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ತಿಳಿಸಿದರು.

ಅ,29,30 ರಂದು ಶ್ರೀನಿವಾಸಪುರದಲ್ಲಿ


ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆ ಅ.29 ಹಾಗೂ 30 ರಂದು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸಂಚರಿಸಲಿದ್ದು, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವ ವಹಿಸುವರು. ಅಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಉಪಸ್ಥಿತರಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸುವಾಗ ಸಾವಿರಾರು ಜನ ಭಾಗವಹಿಸಲು ವ್ಯವಸ್ಥೆ ಮಾಡಲಿದ್ದಾರೆ.

ಮುಳಬಾಗಿಲಿಗೆ ಅ.31, ನ.1 ರಂದು


ಮುಳಬಾಗಿಲು ತಾಲ್ಲೂಕಿಗೆ ರಥಯಾತ್ರೆ ಅ.31 ಮತ್ತು ನ.1 ರಂದು ಆಗಮಿಸಿ ಇಡೀ ತಾಲ್ಲೂಕಿನಲ್ಲಿ ಸಂಚಾರ ನಡೆಸಲಿದ್ದು, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ನೇತೃತ್ವ ವಹಿಸುವರು.
ಹಾಗೆಯೇ ಕೆಜಿಎಫ್ ತಾಲ್ಲೂಕಿನಲ್ಲಿ ನ.2 ಮತ್ತು 3 ರಂದು ಯಾತ್ರೆ ಸಾಗಿ ಬರಲಿದ್ದು, ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವ ವಹಿಸಲಿದ್ದಾರೆ. ಯಾತ್ರೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಂಚರಿಸಲಿದೆ.
ಬಂಗಾರಪೇಟೆ ತಾಲ್ಲೂಕಿನಲ್ಲಿ ಯಾತ್ರೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಸಾಗಿ ಬರಲಿದ್ದು, ನ.4 ಮತ್ತು 5 ರಂದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದೆ.
ಮಾಲೂರು ತಾಲ್ಲೂಕಿನಲ್ಲಿ ನ.6 ಮತ್ತು 7 ರಂದು ನಾಡಪ್ರಭುವಿನ ರಥ ಯಾತ್ರೆ ಸಂಚರಿಸಲಿದ್ದು, ಮಾಜಿ ಶಾಸಕ ಮಂಜುನಾಥಗೌಡ, ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವ ವಹಿಸುವರು.

ಕಲಾ ತಂಡಗಳ ಭವ್ಯ ಮೆರವಣಿಗೆ


ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆಯಲ್ಲಿ ನಾಡಪ್ರಭುವಿನ ಪುತ್ಥಳಿ ಹೊತ್ತ ರಥ, ಡಿಜಿ ಸೆಟ್, ಬ್ಯಾಂಡ್ ಸೆಟ್, ಕಲಾ ತಂಡಗಳು, ಡೊಳ್ಳುಕುಣಿತ, ಮೊಬೈಲ್ ಆರ್ಕೆಸ್ಟ್ರಾ, ತಮಟೆಗಳ ನಾದ ಜತೆ ಸಾಗಿ ಬರಲಿದೆ.
ರಥವನ್ನು ಸುರಕ್ಷಿತ ಸ್ಥಳದಲ್ಲಿ ಗೌರವಯುತವಾದ ರೀತಿಯಲ್ಲಿ ಸೂಕ್ತ ರಕ್ಷಣೆಯೊಂದಿಗೆ ನಿಲುಗಡೆ ಮಾಡಲು ಕ್ರಮವಹಿಸಬೇಕು ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮೆರವಣಿಗೆಯಲ್ಲಿ ರಥಯಾತ್ರೆಯೊಂದಿಗೆ ಸಾವಿರದಿಂದ 5 ಸಾವಿರ ಮಂದಿ ಪಾಲ್ಗೊಳ್ಳಬೇಕು. ಪ್ರತಿ ದಿನ ಸಾವಿರ ಮಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿದ್ದು, ಇದು ಸರ್ಕಾರಿ ಪ್ರಯೋಜಿತ ರಥಯಾತ್ರೆಯಾಗಿರುವುದರಿಂದ ಇದರಲ್ಲಿ ಸರ್ಕಾರದ ಆಡಳಿತ ಯಂತ್ರ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥಗೌಡ, ಹೂಡಿ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಬಿಜೆಪಿ ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಎಸ್.ಕೃಷ್ಣಾರೆಡ್ಡಿ ಮತ್ತಿತರರಿದ್ದರು.

ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು:ಶಿರಿನ್ ತಾಜ್

ಶ್ರೀನಿವಾಸಪುರ: ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಕಾರಣವಿಲ್ಲದೆ ಗೈರು ಹಾಜರಾಗಬಾರದು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಬೇಕು. ನ.1ರಂದು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಪಟ್ಟಣದಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ತಾಲ್ಲೂಕಿನ 27 ಇಲಾಖೆಗಳಿಂದ ತಯಾರಿಸಲಾದ ತಲಾ ಒಂದು ಸ್ಥಬ್ಧ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಬೇಕು. ನಾಡು ನುಡಿ ಮಹತ್ವ ಸಾರುವ ವಿಷಯ ಒಳಗೊಂಡಿರಬೇಕು. ಯಾವುದೇ ಇಲಾಖೆಗೆ ಇದರಿಂದ ವಿನಾಯಿತಿ ಇರುವುದಿಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ಪರ ಸಂಘಟನೆಗಳನ್ನು ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ವಿ.ಉಮಾದೇವಿ, ಡಾ. ಎಂ.ಸಿ.ವಿಜಯ, ಡಾ. ಮಂಜುನಾಥರೆಡ್ಡಿ, ಎಂ.ಶ್ರೀನಿವಾಸನ್, ಬಿ.ವಿ.ಮುನಿರೆಡ್ಡಿ, ಕೃಷ್ಣಪ್ಪ, ಕೆ.ಸಿ.ಮಂಜುನಾಥ್, ಲಿಖಿತ, ಭಾವನಾ, ನಂಜುಂಡೇಶ್ವರ, ಎ.ಈಶ್ವರ್, ನರಸಿಂಹಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದರು.