ಹೋಲಿ ರೋಸರಿ ಚರ್ಚ್ ಅಲಂಗಾರ್ ನಲ್ಲಿ ಪ್ರತಿಭಾ ಪುರಸ್ಕಾರ

ರಾಜ್ಯ ಮಟ್ಟದಲ್ಲಿ ಕ್ರೀಡಾ ಗಾಯನ ಮತ್ತು ಅಧ್ಯಯನ ಕ್ಷೇತ್ರದಲ್ಲಿ 7 ಸಾಧಕರು ಮತ್ತು ಎಸ್‌ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ 28 ಟಾಪರ್‌ಗಳನ್ನು ಸನ್ಮಾನಿಸಲಾಯಿತು.ಚರ್ಚಿನ ಧರ್ಮಗುರು ವಂ| ವಾಲ್ಟರ್ ಡಿಸೋಜಾ 21 ಆಯೋಗಗಳ ಸಂಯೋಜಕ ಶ್ರೀ ರಾಜೇಶ್ ಡಿಸೋಜ, ಪಾಲನ ಮಂಡಳಿ.ಕಾರ್ಯದರ್ಶಿ ಶ್ರೀಮತಿ ಮೇಬಲ್ ಲೋಬೋ ಉಪಸ್ಥಿತರಿದ್ದರು ಶಿಕ್ಷಣ ಆಯೋಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀ ವಿನೋದ್ ಡಿಎಸ್‌ಎ ಸ್ವಾಗತಿಸಿದರು,  ಶ್ರೀ ಗ್ಲಾನಿಶ್ ಮಾರ್ಟಿಸ್ ಮತ್ತು ಕು. ಅಶ್ವಿನಿ ಡಿಸೋಜಾ ಅವರು ಸನ್ಮಾನಿತರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶ್ರೀ ಎರಿಕ್ ಲೋಬೋ ನಿರೂಪಿಸಿದರು.

ಗುರುಭವನ ನಿರ್ಮಾಣಕ್ಕಾಗಿ 5 ಹಳೆ ಕಟ್ಟಡಗಳ ನೆಲಸಮ ಆರಂಭ
ಶಿಕ್ಷಕರ ಬಹುನಿರೀಕ್ಷಿತ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ-ಕೃಷ್ಣಮೂರ್ತಿ

ಕೋಲಾರ:- ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಐದು ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ನೆಲಸಮಗೊಳಿಸಲು ಕ್ರಮ ಕೈಗೊಂಡಿದ್ದು, ಗುರುಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಸಿದ್ದಗೊಳಿಸಲಾಗುತ್ತಿದೆ ಎಂದು ಗುರುಭವನ ಸಮಿತಿ ಅಧ್ಯಕ್ಷರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ನಗರದ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಹಳೆ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯವನ್ನು ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು.
ಗುರುಭವನ ನಿರ್ಮಾಣ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಸಂಸದ ಎಸ್.,ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದರು.
ಗುರುಭವನಕ್ಕಾಗಿ ಈ ಜಾಗದಲ್ಲಿ ಉತ್ತರ ದಕ್ಷಿಣ 145 ಅಡಿ ಹಾಗೂ ಪೂರ್ವ,ಪಶ್ಚಿಮ-80 ಅಡಿಗಳ ನಿವೇಶನ ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅತಿ ಶೀಘ್ರ ಶಿಲಾನ್ಯಾಸ ನಡೆಸುವ ಕುರಿತು ಗುರುಭವನ ಸಮಿತಿ ಪ್ರಯತ್ನ ಮುಂದುವರೆಸಿದೆ ಎಂದರು.
ನೆಲಸಮಗೊಳಿಸುತ್ತಿರುವ ಕಟ್ಟಡದಲ್ಲಿನ ಬಾಗಿಲು, ಕಿಟಕಿಗಳನ್ನು ಅರಣ್ಯ ಇಲಾಖೆ ಬೆಲೆ ನಿಗಧಿ ಮಾಡಿದ ನಂತರ ಹರಾಜು ಹಾಕಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಂತೆ ಕೋಲಾರದಲ್ಲೂ ಅತಿ ಶೀಘ್ರ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಈ ಸಂಬಂಧ ಮಾಹಿತಿ ನೀಡಿ, ಗುತ್ತಿಗೆದಾರರಾದ ಮಮತಾ ಕೋಂ ಮುನೇಶ್ ಅವರು ಕಟ್ಟಡದ ನೆಲಸಮ ಗುತ್ತಿಗೆ ಪಡೆದಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಈ ಕಾರ್ಯ ಮುಗಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಗುರುಭವನ ನಿರ್ಮಾಣ ಈ ಜಿಲ್ಲೆಯ ಎಲ್ಲಾ ಶಿಕ್ಷಕರ ಆಶಯವಾಗಿದ್ದು, ಈಗಾಗಲೇ ತಡವಾಗಿದೆ, ನಮ್ಮ ಅವಧಿಯಲ್ಲಿ ಗುರುಭವನ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದು, ವಿಧಾನಪರಿಷತ್,ವಿಧಾನಸಭಾ ಸದಸ್ಯರು, ಸಂಸದರ ನಿಧಿ ಸೇರಿದಂತೆ ಹಣ ಕ್ರೋಢೀಕರಿಸಲು ಪ್ರಯತ್ನ ಮುಂದುವರೆಸಿರುವುದಾಗಿ ತಿಳಿಸಿದರು.
ಗುರುಭವನ ಸಮಿತಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಡಯಟ್ ಪ್ರಾಂಶುಪಾಲರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ,ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಸದಸ್ಯರಾಗಿ ಬಿಇಒ ಕನ್ನಯ್ಯ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್,ಶಿಕ್ಷಕರ ಸಂಘದ ಮಹಿಳಾ ಪ್ರತಿನಿಧಿ ಚಾಮುಂಡೇಶ್ವರಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಿಕ್ಷಕ ಸಂಘಟನೆಗಳ ಮುಖಂಡರಾದ ಅಪ್ಪೇಗೌಡ, ಎಂ.ನಾಗರಾಜ್, ಶಿವಕುಮಾರ್, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್,ಮುಖ್ಯಶಿಕ್ಷಕರ ಸಂಘದ ಖಜಾಂಚಿ ರವಿ, ಟಿ.ಎಲ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

ಸಾಮಾಜಿಕ ಕಾಳಜಿಯ ನೆರವಿಗೆ ಕೋಚಿಮುಲ್‍ನಿಂದ 12 ಕೋಟಿ ದತ್ತಿ ನಿಧಿ
ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರ್ಣ ಸಹಕಾರ-ಕೆ.ವೈ.ನಂಜೇಗೌಡ

ಕೋಲಾರ:- ಹಾಲು ಒಕ್ಕೂಟ ಸಾಮಾಜಿಕ ಕಾರ್ಯಗಳಿಗಾಗಿಯೇ 12 ಕೋಟಿ ದತ್ತಿ ನಿಧಿ ಸ್ಥಾಪಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹಾಗೂ ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ಒದಗಿಸಲು ಸಿದ್ದವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕೋಚಿಮುಲ್‍ನಿಂದ ಮುದ್ರಿಸಿ ಹೊರ ತಂದಿರುವ ನನ್ನನ್ನೊಮ್ಮೆ ಗಮನಿಸಿ'ಪ್ರಶ್ನೋತ್ತರ ಕೋಠಿ,ಚಿತ್ರಬಿಡಿಸು ಅಂಕಗಳಿಸು’ , ಕನ್ನಡ,ಇಂಗ್ಲೀಷ್, ಉರ್ದು ಮಾಧ್ಯಮದ ಅಭ್ಯಾಸಹಾಳೆಗಳು ಸೇರಿದಂತೆ ಒಟ್ಟು 17 ಶೀರ್ಷಿಕೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ, ಶಾಲೆಗಳಿಗೆ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.


ರೈತರ ಮಕ್ಕಳಿಗೆ ನಿರಂತರ ಪ್ರೋತ್ಸಾಹ


ಕೋಚಿಮುಲ್ ಹಾಲು ಉತ್ಪಾದಕರ ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿವೇತನ ನೀಡುತ್ತಿದ್ದು, ಎಸ್ಸೆಸ್ಸೆಲ್ಸಿ ಸಾಧಕರಿಗೆ ತಲಾ 5 ಸಾವಿರ, ಪಿಯುಸಿ ಸಾಧಕರಿಗೆ ತಲಾ 7.500, ವೈದ್ಯಕೀಯ ವಿದ್ಯಾರ್ಥಿಗಳಿಗೆ 25 ಸಾವಿರ, ಇಂಜಿನಿಯರಿಂಗ್ ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ ಹಾಗೂ ಐಎಎಸ್,ಕೆಎಎಸ್ ಆಕಾಂಕ್ಷಿಗಳಿಗೆ 50 ಸಾವಿರ ನೆರವು ನೀಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಯಲಹಂಕದಲ್ಲಿ ಈಗಾಗಲೇ ಅವಿಭಜಿತ ಜಿಲ್ಲೆಯ ಶಿಕ್ಷಣಾರ್ಥಿಗಳಿಗಾಗಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ನಿವೇಶನವನ್ನು ಸರ್ಕಾರ ಒದಗಿಸಿದೆ ಎಂದರು.


100 ಕೋಟಿ ರೂ ಅಭಿವೃದ್ದಿ ನಿಧಿ


ಕೋಚಿಮುಲ್‍ನಲ್ಲಿ 100ಕೋಟಿ ರೂಗಳ ಅಭಿವೃದ್ದಿ ನಿಧಿ ಇಟ್ಟಿದ್ದೇವೆ, ಎಂವಿಕೆ ಡೇರಿ ಸ್ಥಾಪಿಸುವ ಯತ್ನ ಮುಂದುವರೆದಿದೆ ಎಂದ ಅವರು, ತಾಲ್ಲೂಕು ಹಂತದಲ್ಲಿ ಶಿಬಿರಕಚೇರಿ, ಎಂಪಿಸಿಎಸ್‍ಗಳಿಗೆ ನೂತನ ಕಟ್ಟಡ, ರಾಸು ಸತ್ತರೆ 75 ಸಾವಿರ ರೂ ವಿಮೆ ಮತ್ತಿತರ ಸಾಮಾಜಿಕ ಕಾರ್ಯಗಳಿಗೂ ಸಿದ್ದವಿದ್ದೇವೆ ಎಂದರು.


ಎಸ್ಸೆಸ್ಸೆಲ್ಸಿ ಫಲಿತಾಂಶಮೊದಲ ಸ್ಥಾನಕ್ಕೆ ತನ್ನಿ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವೆಂಕಟರಾಜಾ, ಕಳೆದ ವರ್ಷ ಫೆಬ್ರವರಿಯಲ್ಲಿ ಈ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿದ್ದು, ಶೇ.94ರಷ್ಟು ಫಲಿತಾಂಶದ ಸಾಧನೆ ಮಾಡಿದ್ದೀರಿ, ಈಬಾರಿ ಅತಿ ಬೇಗ ಮಕ್ಕಳಿಗೆ ಒದಗಿಸುತ್ತಿದ್ದು, ಈ ಪುಸ್ತಕಗಳನ್ನು ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಬಳಸುವಂತೆಮಾಡಿ ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿ ಮಾಡುತ್ತಿರುವ ಕಾರ್ಯ ಬೇರೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಜಿಪಂ ಸಿಇಒ ಯುಕೇಶ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಸರ್ಕಾರದ ಕಾರ್ಯಕ್ರಮಗಳಿಗೆ ಕೋಚಿಮುಲ್ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು, ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಂಪನ್ಮೂಲ ಶಿಕ್ಷಕರು ತಯಾರಿಸಿರುವ ಈ ಪುಸ್ತಕಗಳು ಪರಿಣಾಮಕಾರಿಯಾಗಿ ಬಳಕೆಯಾಗಲಿ, ಇದರಿಂದ ಜಿಲ್ಲೆಯ ಫಲಿತಾಂಶ ಮತ್ತಷ್ಟು ಉತ್ತಮವಾಗಲಿ ಎಂದರು.
ಕಾರ್ಪೋರೇಟ್ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಕೋಚಿಮುಲ್ ಜಿಲ್ಲೆಯ ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಈ ಬಾರಿ ಮತ್ತಷ್ಟು ಸಾಧನೆ ಮಾಡಲಿ, ಗುಣಾತ್ಮಕತೆಗೆ ಒತ್ತು ಸಿಗಲಿ ಎಂದು ತಿಳಿಸಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಿ ಎಂದರು.
ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಘನತೆ ಎತ್ತಿ ಹಿಡಿಯಲು ಇಲಾಖೆ ಜತೆ ಎಲ್ಲಾ ಶಿಕ್ಷಕರು ಶ್ರಮಿಸುತ್ತಿದ್ದಾರೆ, ವಿಶೇಷ ತರಗತಿಗಳು ನಡೆಯುತ್ತಿವೆ, ಈ ಬಾರಿ ಬೇಗ ಮಕ್ಕಳಿಗೆ ಈ ಸಂಪನ್ಮೂಲ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಾಲೆಗಳಲ್ಲಿ ಮಕ್ಕಳಿಗೆ ಇಲಾಖೆ ನೀಡಿರುವ ಈ ಪುಸ್ತಕ ಪರಿಣಾಮಕಾರಿಯಾಗಿ ಬಳಕೆಯಾಗಿದ್ದು, ಕಳೆದ ಬಾರಿ ಜಿಲ್ಲೆಯಲ್ಲಿ ಶೇ.94.53 ಫಲಿತಾಂಶ ಹಾಗೂ ಶೇ.60 ಸಾಧಕರ ಸಂಖ್ಯೆ ಶೇ.85ಕ್ಕಿಂತ ಹೆಚ್ಚಿತ್ತು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಈ ಪ್ರಶ್ನೋತ್ತರ ಅಧ್ಯಾಯವಾರು ಮಾಹಿತಿಯ ಸಾಫ್ಟ್ ಕಾಪಿಯನ್ನು ಶಾಲೆಗಳಿಗೆ ಒದಗಿಸಿದ್ದು, ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ 426 ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಅವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿ ಕೋಚಿಮುಲ್ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಜಿಲ್ಲೆಯ ಮಕ್ಕಳಿಗೆ ನೆರವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಕೋಚಿಮುಲ್ ಎಂಡಿ ಹೆಚ್.ಮಹೇಶ್, ವ್ಯವಸ್ಥಾಪಕ ನಾಗೇಶ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ,ಶಶಿವಧನ, ಉಪಪ್ರಾಂಶುಪಾಲರಾದ ವೆಂಕಟೇಶಪ್ಪ, ಕೆಂಪೇಗೌಡ, ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ರವಿ, ಮೆಥೋಡಿಸ್ಟ್ ಶಾಲೆಯ ಮಂಜುಳಾ, ಬಾಪೂಜಿ ಶಾಲೆಯ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.

ಅಲಂಗಾರ್‌ ಹೋಲಿ ರೋಸರಿ ಚರ್ಚಿನಲ್ಲಿ ವಾರ್ಷಿಕ ಹಬ್ಬದ ಆಚರಣೆ

26 ಅಕ್ಟೋಬರ್ 2022 ರಂದು, ಅಲಂಗಾರ್‌ನ ಹೋಲಿ ರೋಸರಿ ಚರ್ಚ್ ತನ್ನ ವಾರ್ಷಿಕ ಹಬ್ಬವನ್ನು ಆಚರಿಸಿತು. ಮೂಡುಬಿದಿರೆ ಚರ್ಚ್‌ನ ಧರ್ಮಗುರು, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ಅ| ವಂ||ಓನಿಲ್ ಡಿಸೋಜ ದಿವ್ಯ ಬಲಿಪೂಜೆಯ ನೇತ್ರತ್ವ ವಹಿಸಿದ್ದರು. ಸುಮಾರು 25 ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು.

“ಒಡನಾಟ ಬಲಗೋಳಿಸೋಣ –ಒಗ್ಗಟ್ಟಿನ ಸಮುದಾಯ ಕಟ್ಟೋಣ”  ಎಂಬುದು ಹಬ್ಬದ  ಧ್ಯೇಯವಾಕ್ಯವಾಗಿತ್ತು.  

ವಾರ್ಷಿಕ ಹಬ್ಬದಲ್ಲಿ ಅಪಾರ ಸಂಖ್ಯೆಯ ಭಕ್ತರು ಹಾಗೂ ಮೇರಿ ಮಾತೆಯ ಭಕ್ತರು ಪಾಲ್ಗೊಂಡಿದ್ದರು ವಾರ್ಷಿಕ ಔತಣಕೂಟವನ್ನು ಆಯೋಜಿಸಲು ಸಹಕರಿಸಿದ ಎಲ್ಲಾ ದಾನಿಗಳಿಗೆ, ಹಿತೈಷಿಗಳಿಗೆ ಮತ್ತು ಚರ್ಚ್ ಭಕ್ತಾಧಿಗಳಿಗೆ ಚರ್ಚಿನ ಧರ್ಮಗುರು ವಂ|.ವಾಲ್ಟರ್ ಡಿಸೋಜ ಧನ್ಯವಾದಗಳನ್ನು ಅರ್ಪಿಸಿದರು.

3 DAYS CHARISMATIC RETREAT HELD AT INFANT JESUS SHRINE, BIKARNAKATTE, MANGALORE

Report: Fr. Stephen Lobo OCD Photos: Stanly Bantwal, Editor:Bernarad Dcosta

The Carmel Hill of Infant Jesus Shrine, Bikarnakatte saw a great multitude joining for 3 days of retreat led by well-known charismatic preacher Br Prakash and Team from Bandra, Mumbai.

The Charismatic retreat was held for 3 days from 24th to 26th October from 9.00 am to 5.00 pm in the premises of Infant Jesus Shrine, Carmel Hill, Bikarnakatte, Mangalore.  The retreat included morning prayers, Rosary, Praise and worship, spiritual talks, Holy Eucharist and Adoration of the Blessed Sacrament. Fr Rovel D Souza, Director of the Infant Jesus Shrine, along with Fr Noel Mascharenhas, Redemptorist priest from Mumbai Diocese and Fr Melwyn Noronha, Parish Priest of Pakshikere led the faithful into prayer and nourished with the Eucharist. Br Prakash D Souza empowered the faithful with the word of God and led the adoration for all 3 days.

Every day lunch was served for all the participants. There were more than 13 thousand faithfuls gathered from far and near to participate in this retreat. Ballok Jezu Kuttom, Carmel Soldiers and other volunteers worked tirelessly to make this retreat a successful one.

ಭಾರತ್ ಜೋಡೋ ಮಾಡೋ ಮೊದಲು ಕೋಲಾರದಲ್ಲಿ
ಕಾಂಗ್ರೆಸ್ ಜೋಡೋ ಮಾಡಲಿ-ಡಾ.ವೈಎಎನ್ ವ್ಯಂಗ್ಯ

ಕೋಲಾರ:- ಭಾರತ್ ಜೋಡೋ ಬದಲಿಗೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಜೋಡೋ ಮೊದಲು ಮಾಡಬೇಕಾಗಿತ್ತು ಎಂದು ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು.
ಅವರೇ ಹೇಳಿಕೊಂಡಿರುವಂತೆ 4 ತಲೆಮಾರುಗಳಿಗೆ ದುಡ್ಡು ಮಾಡಿಕೊಂಡಿರುವ ಮಹಾ ಜ್ಞಾನಿಗಳು ಕೋಲಾರ ಜಿಲ್ಲೆಯ ಕಾಂಗ್ರೆಸ್‍ನಲ್ಲಿದ್ದಾರೆ ಅವರು ಮೊದಲು ಅವರ ಪಕ್ಷ ಸರಿಪಡಿಸಿಕೊಂಡರೆ ಭಾರತ್ ಜೋಡೋ ಆಮೇಲೆ ಎಂದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಭಿನ್ನಮತದಿಂದ ನಗೆಪಾಟಲಿಗೀಡಾಗಿದೆ ಇದನ್ನು ಸರಿಪಡಿಸದೇ ಇವರು ಮಾಡೋ ಭಾರತ್ ಜೋಡೋ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಡಿಕೆಶಿ-ಸಿದ್ದರಾಮಯ್ಯರನ್ನು ಜೋಡೋ ಮಾಡುವ ಕೆಲಸ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರದವರೆಗೆ ಜೋಡೋ ಯಾತ್ರೆ ಆಯೋಜಿಸಿದ್ದಾರೆ. ಅದರೆ ರಾಜ್ಯದ ಪ್ರವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಒಟ್ಟಾಗಿ ಜೋಡಿಯಾಗಿ ಎಲ್ಲೂ ಕಾಣಿಸಲೇ ಇಲ್ಲಾ. ಇವರಿಬ್ಬರ ಮಧ್ಯೇ ರಾಹುಲ್ ಗಾಂಧಿ ಇರುತ್ತಿದ್ದರು ಎಂದರು.


ಸಂಸ್ಕಾರವಿಲ್ಲದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವ ಇದೆ ಅದರೆ ಅವರಿಗೆ ಇತ್ತೀಚೆಗೆ ಏಕವಚನ ಮತ್ತು ಬಹುವಚನದ ಬಗ್ಗೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ, ಸಂಸ್ಕಾರ ಮೊದಲು ಕಲಿಯಬೇಕು, ಅವರು ಮೈಸೂರಿನ ಕಡೆಯವರಾಗಿದ್ದು ಸ್ವಚ್ಚವಾದ ಕನ್ನಡದ ಪಂಡಿತ್ಯ ಹೊಂದಿದವರೆಂದು ನಾವು ಭಾವಿಸಿದ್ದನ್ನು ಸುಳ್ಳು ಮಾಡಿದ್ದಾರೆ ಎಂದು ವ್ಯಂಗವಾಡಿದರು.
ಪ್ರಶ್ನೆಯೊಂದಕ್ಕೆ ಬಿಜೆಪಿ ಪಕ್ಷದಲ್ಲಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಚುನಾವಣಾ ಆಕಾಂಕ್ಷಿಗಳ ನಡುವೇ ಪೈಪೋಟಿ ಇದೆ ನಿಜ. ಅದರೆ ಅದನ್ನು ಭಿನ್ನಾಭಿಪ್ರಾಯ ಎನ್ನಲಾಗದು, ಬಿ.ಜೆ.ಪಿ. ಪಕ್ಷವು ರಾಜ್ಯದಲ್ಲಿ ಬಲಾಢ್ಯವಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರು ಸಭೆಯೊಂದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗ ಬೇಕೆಂಬ ಆಸೆ ಪಡುವುದರಲ್ಲಿ ನಾನು ಮೊದಲಿಗನಾಗಿದ್ದೆನೆ ಎಂದು ಹೇಳಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು ಎಂದು ಈಗಾಗಲೇ ಅವರೇ ಸ್ಪಷ್ಟನೆ ನೀಡಿದ್ದಾರೆ, ಅವರು ಎಂದಿಗೂ ಬಿಜೆಪಿಯಿಂದ ದೂರವಾಗುವುದಿಲ್ಲ ಎಂದರು.

ನ.11 ರಂದು ಪ್ರಧಾನಿಗಳಿಂದ ನಾಡಪ್ರಭುವಿನ 108 ಅಡಿ ಪುತ್ಥಳಿ ಲೋಕಾರ್ಪಣೆ ಹಿನ್ನಲೆ – ಕೋಲಾರದಲ್ಲಿ ಅ.27 ಕೆಂಪೇಗೌಡರ ರಥಯಾತ್ರೆಗೆ ಚಾಲನೆ- ಡಾ.ವೈ.ಎ. ನಾರಾಯಣಸ್ವಾಮಿ

ಕೋಲಾರ:- ಪ್ರಧಾನಿ ನರೇಂದ್ರ ಮೋದಿಯವರಿಂದ ನ.11 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಹಿನ್ನಲೆಯಲ್ಲಿ ಕೈಗೊಂಡಿರುವ ಕೆಂಪೇಗೌಡ ಪ್ರಗತಿಯ ರಥಯಾತ್ರೆಗೆ ಅ.27 ರಂದು ಬೆಳಗ್ಗೆ 10-30 ಗಂಟೆಗೆ ನಗರದ ಟೇಕಲ್ ರಸ್ತೆಯ ಬ್ರಿಡ್ಜ್ ಸಮೀಪ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಈ ಸಂಬಂಧ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿ ನಡೆಸಿದ ಅವರು, ನ.11 ರಂದು ಪ್ರಧಾನಿ ನರೇಂದ್ರಮೋದಿಯವರು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಹಾಗೂ ಕೆಂಪೇಗೌಡರ 108 ಅಡಿಗಳ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಿರುವ ಹಿನ್ನಲೆಯಲ್ಲಿ ಕೆಂಪೇಗೌಡರ ವಿಚಾರಧಾರೆಗಳನ್ನು ಪಸರಿಸಲು ಈ ರಥಯಾತ್ರೆಯನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯ ಪವಿತ್ರ ಕ್ಷೇತ್ರಗಳ ಮೃತ್ತಿಕೆ ಸಂಗ್ರಹಿಸಲಾಗುವುದು ಎಂದರು.
ಬಿಜೆಪಿ ಸರ್ಕಾರದ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ಕೆಂಪೇಗೌಡರ ಅಭಿವೃದ್ದಿ ಪ್ರಾಧಿಕಾರಕ್ಕೆ 100 ಕೋಟಿ ಮಂಜೂರಾತಿ ಆಗಿದ್ದು. ಇದರಲ್ಲಿ 64 ಕೋಟಿರೂ ವೆಚ್ಚದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿಯನ್ನು 100 ಟನ್ ಕಂಚು ಹಾಗೂ 120 ಟನ್ ಸ್ಟಿಲ್ ಬಳಸಿ ನಿರ್ಮಿಸಿದ್ದು, ಗುಜರಾತ್‍ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿ ನಿರ್ಮಿಸಿದ ಶಿಲ್ಪಿ ರಾಮ್‍ಸುತಾರ್ ಇದನ್ನು ನಿರ್ಮಿಸಿದ್ದು, ಅದ್ಬುತವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
545 ವರ್ಷಗಳ ಹಿಂದೆ ಅಭೂತಪೂರ್ವ ಕಲ್ಪನೆಯೊಂದಿಗೆ ಬೆಂಗಳೂರು ನಗರ ಕಟ್ಟಿದ, ಸುಮಾರು 40 ಸಮುದಾಯಗಳಿಗೆ ಒಂದೊಂದು ಪೇಟೆ ನಿರ್ಮಿಸಿ ಸಮಾನತೆ ಮೆರೆದ ಕೆಂಪೇಗೌಡರ ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಮತ್ತು ಮುಂದಿನ ಪೀಳಿಗೆಯೂ ಮರೆಯದಂತೆ ಮಾಡಲು ಪ್ರತಿಮೆ ಇರುವ 23 ಎಕರೆ ಜಾಗದಲ್ಲಿ 25 ಕೋಟಿ ರೂ ವೆಚ್ಚದಿಂದ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಒಟ್ಟಾರೆ ರಾಜ್ಯದ ಬಿಜೆಪಿ ಸರ್ಕಾರ ಇದಕ್ಕಾಗಿ 110 ಕೋಟಿ ರೂ ಖರ್ಚು ಮಾಡಿದೆ ಎಂದು ತಿಳಿಸಿದರು.
12ನೇ ಶತಮಾನದ ಶ್ರೀ ಬಸವೇಶ್ವರ ಅವರ ಅನುಭವ ಮಂಟಪ, ಸಮಾನತೆ ಮಾರ್ಗದರ್ಶನಗಳನ್ನು ಅನುಸರಿಸಿರುವ ಕೆಂಪೇಗೌಡರು ವಿಜಯನಗರದ ಮಹಾರಾಜರಾಗಿದ್ದ ಶ್ರೀಕೃಷ್ಣದೇವಾರಾಯ ಆಡಳಿತ ಸಂಸ್ಥಾನಕ್ಕೆ ಸೇರಿದವರಾಗಿದ್ದು ಅವರ ಮಾರ್ಗದರ್ಶನದಲ್ಲಿ ಆಡಳಿತವನ್ನು ನಡೆಸುವ ಮೂಲಕ ಸಮಾಜಸುಧಾರಣೆಗೆ ಸಾಕ್ಷಿಯಾಗಿ ಅವರ ದೂರದೃಷ್ಟಿಯಿಂದಾಗಿ ಇಂದು ಬೆಂಗಳೂರು ಐಟಿ, ಬಿಟಿ ತಂತ್ರಜ್ಞಾನದೊಂದಿಗೆ ವಿಶ್ವದ 5ನೇ ಮಹಾನಗರವಾಗಿದೆ ಎಂದರು.


ರಾಜ್ಯಾದ್ಯಂತ ರಥಯಾತ್ರೆ ಸಂಚಾರ


ರಾಜ್ಯದ 20 ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಂಡಿದ್ದು, ದೇವಾಲಯ,ಕಲ್ಯಾಣಿಗಳು,ಆದರ್ಶ ವ್ಯಕ್ತಿಗಳು ಇರುವಂತ ಪ್ರದೇಶಗಳಿಂದ ಮೃತ್ತಿಕೆಗಳನ್ನು ಸಂಗ್ರಹಿಸಲಾಗುವುದು ಎಂದ ಅವರು ಈ ರಥಯಾತ್ರೆಗೆ ವಿಧಾನಸೌಧದ ಮುಂಭಾಗ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಅ.27 ರಂದು ಕಂದಾಯ ಸಚಿವ ಅಶೋಕ್ ಅವರು ಚಾಲನೆ ನೀಡಲಿದ್ದಾರೆ ಎಂದರು.
ರಥಯಾತ್ರೆ ಅ.27 ರಿಂದ ನ.8 ರವರೆಗೂ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಸಂಚರಿಸಲಿದ್ದು, ಗ್ರಾಮ ಪಂಚಾಯಿತಿ ಕೇಂದ್ರಗಳಿಗೂ ಭೇಟಿ ನೀಡಿ ಕೆಂಪೇಗೌಡರ ಆದರ್ಶವನ್ನು ಪ್ರಚಾರಪಡಿಸಲಿದೆ ಮತ್ತು ಇದು ಸರ್ಕಾರದ ಕಾರ್ಯಕ್ರಮವಾಗಿದ್ದು,ಎಲ್ಲಾ ಜಾತಿ,ಧರ್ಮ,ಪಕ್ಷಬೇಧ ಮರೆತು, ಎಲ್ಲಾ ಸಂಘ ಸಂಸ್ಥೆಗಳೂ ಭಾಗವಹಿಸುವಂತೆ ಕೋರಿದರು.
ರಥಯಾತ್ರೆ ಯಶಸ್ವಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸಂಚಾಲಕರನ್ನು ನೇಮಿಸಿದ್ದು, ಕೋಲಾರ ತಾಲ್ಲೂಕಿನಲ್ಲಿ ಸರ್ಕಾರಿ ಅಭಿಯೋಜಕ ಮಾಗೇರಿ ನಾರಾಯಣಸ್ವಾಮಿ ಮತ್ತು ಬೆಗ್ಲಿ ಪ್ರಕಾಶ್,ಶ್ರೀನಿವಾಸಪುರತಾಲ್ಲೂಕಿಗೆ ಚಂದ್ರಶೇಖರ್ ನಾಗದೇನಹಳ್ಳಿ, ಮಾಲೂರಿಗೆ ಪ್ರಭಾಕರ್, ವೆಂಕಟೇಶಗೌಡ, ಹರೀಶ್‍ಗೌಡರನ್ನು, ಬಂಗಾರಪೇಟೆ ತಾಲ್ಲೂಕಿಗೆ ಹನುಮಯ್ಯ, ಕೆ.ಚಂದ್ರಾರೆಡ್ಡಿ, ಶ್ರೀನಿವಾಸಗೌಡರನ್ನು, ಮುಳಬಾಗಿಲು ತಾಲ್ಲೂಕಿಗೆ ವೆಂಕಟರಮಣ ಹಾಗೂ ನಾಗಾರ್ಜುನ್ ಹಾಗೂ ಕೆಜಿಎಫ್ ತಾಲ್ಲೂಕಿಗೆ ವೆಂಕಟಪತಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ಜಿಲ್ಲಾಡಳಿತ ಸಹಕಾರದಿಂದ ಎಲ್ಲಾ ಗ್ರಾಮಪಂಚಾಯಿತಿಗೆ ಭೇಟಿ ನೀಡಲಾಗುವುದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು,ಮಾಜಿ ಶಾಸಕರು. ವಿವಿಧ ಪಕ್ಷಗಳ ಮುಖಂಡರುಗಳು ಸಾಮೂಹಿಕವಾಗಿ ಭಾಗವಹಿಸುವ ಮೂಲಕ ಸಾಮರಸ್ಯಕ್ಕೆ ನಾಂದಿಯಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರಥಯಾತ್ರೆ ಜಿಲ್ಲಾ ಸಹಸಂಚಾಲಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಮಾಜಿ ಅಧ್ಯಕ್ಷ ಕೃಷ್ಣರೆಡ್ಡಿ, ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿಚಲಪತಿ, ಜಿಲ್ಲಾ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜ್ಯಕಾರ್ಯದರ್ಶಿ ಕೃಷ್ಣಮೂರ್ತಿ,ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್ ಸಿಂಗ್, ಸತ್ಯನಾರಾಯಣರಾವ್, ಮಂಜುನಾಥ್, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ಆದಿತ್ಯವಾರ – ಫಿಟ್ ಇಂಡಿಯಾ ರನ್ (1 km) ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ

ದಿನಾಂಕ 30-10-2022, ಆದಿತ್ಯವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ, ಮಂಗಳೂರಿನ ಯಾನೆಪೋಯ ವಿಶ್ವವಿದ್ಯಾನಿಲಯದ ಏನ್ ಏಸ್ ಎಸ್ ಘಟಕ, ಭoಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ ಹಾಗೂ ನಾವುoದ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ರನ್ (1 km) ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುoದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಲಿದೆ. ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ

“ಗೌರವದಿಂದ ಬೆಳಕಿನಡೆ ನಡೆಯಬೇಕು, ಸಹಿಷ್ಣತೆಯಿಂದಲ್ಲ”- ದೀಪಾವಳಿ ಸಂಭ್ರಮದಲ್ಲಿ : ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ

Report: Fr Anil Fernandes, CCC Pics by Stanly Bantwal, Editor:Bernarad Dcosta

ಅ.24: “ಅಂತರ್ಧರ್ಮ ಹಿನ್ನೆಲೆಯಲ್ಲಿ ಬದುಕುವ ಸಾಮರ್ಥ್ಯ. ಒಗ್ಗಟ್ಟು, ಏಕತೆ ಮತ್ತು ಸೌಹಾರ್ದತೆಯನ್ನು ತರುವ ಪ್ರಯತ್ನ ನಡೆಯಬೇಕು. ವೈವಿಧ್ಯತೆಗಳು ಮತ್ತು ಗೌರವ, ಪ್ರೀತಿ ಮತ್ತು ವಿಶ್ವಾಸದ ಮನೋಭಾವದಲ್ಲಿ ವ್ಯತ್ಯಾಸಗಳು ಇಂದು ಹೆಚ್ಚು ಅಗತ್ಯವಿದೆ. ಆದರೆ ಇಂದು ನಾವು ಒಬ್ಬರನ್ನೊಬ್ಬರು ಸಹಿಸುವುದಿಲ್ಲ. ನಾವು ಪರಸ್ಪರ ಗೌರವಿಸಬೇಕು. ಗೌರವ, ಸಹಿಷ್ಣುತೆಗಿಂತ ಮುಖ್ಯವಾದುದು. ದೀಪಾವಳಿಯ ಆಚರಣೆಯು ಪ್ರತಿಯೊಬ್ಬರಿಗೂ ಅವಕಾಶ ಸೃಷ್ಟಿಸುತ್ತದೆ. ನಾವು ಇತರರ ಬಗ್ಗೆ ಗೌರವದಿಂದ ಇರಬೇಕೆಂದು ಕರೆ ನೀಡುತ್ತದೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಸಂದೇಶ ನೀಡಿದರು.

     ಅವರು ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು, ಸಂದೇಶ ಕಲಾಕೇಂದ್ರದಲ್ಲಿ ಸೋಮವಾರ, ಅಕ್ಟೋಬರ್ 24, 2022 ರಂದು ಆಯೋಜಿಸಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ  ಉದ್ಘಾಟನಾ ಸಂದೇಶದಲ್ಲಿ ಹೇಳಿದರು. ಸಂಜೆ ಹೊತ್ತು ನಡೆದ ಕಾರ್ಯಕ್ರಮದಲ್ಲಿ ಅವರು “ನಾವು ಸುತ್ತಮುತ್ತಲಿನ ಎಲ್ಲ ಜನರನ್ನು ನಮ್ಮ ಸಹೋದರ ಸಹೋದರಿಯರೆಂದು ಗುರುತಿಸಿ  ಗೌರವದಿಂದ ಕಂಡಾಗ ನಾವು ಪ್ರಪಂಚದ ನಿಜವಾದ ಬೆಳಕಾಗುತ್ತೇವೆ. ನಾವು ಒಂದು ಕುಟುಂಬಕ್ಕೆ ಸೇರಿದವರು. ಅವನು/ಅವಳು ಅಥವಾ ಅವರು ಯಾರು ಎಂದು ಪ್ರಶ್ನಿಸುವ ಬದಲು, ನಾವು ಅವಳು/ಅವನು ಅವರು ನಮ್ಮವರು, ಅವರು ನಮ್ಮ ಕುಟುಂಬ, ನಮ್ಮ ಸಂಬಂಧಿಕರು, ನಮ್ಮ ಸ್ನೇಹಿತರು ಎಂದು ಉತ್ತರಿಸುವಂತಿರಬೇಕು. “ನಾವು” ಎಂಬ ಸಂಸ್ಕೃತಿ ಅಳವಡಿಸಿಕೊಂಡರೆ, ನಮ್ಮ ದೀಪಾವಳಿ ಆಚರಣೆ ನಿಜವಾದ ಆಚರಣೆಯಾಗುತ್ತದೆ ಮತ್ತು ಅರ್ಥಪೂರ್ಣವಾಗಿಸುತ್ತದೆ.” “ಬೆಳಕಿನ ಹಾದಿಯಲ್ಲಿ ನಡೆಯುವ ಜನರ ಜೀವನ ಕಲೆ ನಮ್ಮದಾಗಬೇಕು. ಬೆಳಕಿನಲ್ಲಿ

 “ಬೆಳಕಿನಲ್ಲಿ ನಡೆಯುವ ಜನರ ಜೀವನ ಕಲೆ,  ಕತ್ತಲಲ್ಲಿ ನಡೆಯುವ ಜೀವನ ಕಲೆಕಿಂತ ಮೀರಿಸುತ್ತದೆ, ಅದು ನಮ್ಮ ಸಂಸ್ಕೃತಿ, ಧರ್ಮದ ಶ್ರೇಷ್ಠತೆಯನ್ನು ತೋರಿಸುತ್ತದೆ. ಹಾಗೂ ಇತರರೊಂದಿಗೆ,  ಭಾವೈಕತೆ, ಒಗ್ಗಟ್ಟು, ಶಾಂತಿಯುತ ಮತ್ತು ಸಾಮರಸ್ಯದ ಜೀವನಕ್ಕೆ ಹಾಗೂ ಮತ್ತು ಮಾನವೀಯತೆಗೆ ಸಹಾಯ ಮಾಡುವುದು” ” ಎಂದು ಬಿಷಪ್ ಪೀಟರ್ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ಅಂತರ್ಗತವಾಗಿ ದೇವರ ಬೆಳಕಿನ ಕಿರಣವನ್ನು ಹೊಂದಿದ್ದು ಅದು ದೇವರ ಬೆಳಕಿನಲ್ಲಿ ನಡೆಯಲು ಕೊಡುಗೆ ನೀಡುತ್ತದೆ. ಜನರ ಸಾಮಾನ್ಯ ಒಳಿತಿಗಾಗಿ ನಾವು ಇತರರನ್ನು ಆತ್ಮವಿಶ್ವಾಸದಿಂದ ಪ್ರೀತಿಸಿದಾಗ ಅದು ಬೆಳಕಿನಂತೆ ಪ್ರಜ್ವಲಿಸುತ್ತದೆ, ಇತರ ಧರ್ಮಗಳ ಮೇಲಿನ ಸಂಕೋಚತನ, ಬಿಟ್ಟು ಬಾಳಿದರೆ ಕತ್ತಲೆಯಲ್ಲಿ ಬೆಳಕು ಬೆಳಗುತ್ತದೆ” ಎಂದು ಬಿಷಪ್ ಪೀಟರ್ ಹೇಳಿದರು.

     ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ  “ಹಂಚಿಕೊಳ್ಳುವಿಕೆ, ಇತರ ಧರ್ಮಗಳ ಕಡೆಗೆ ಮ್ರದು ಮನಸ್ಸು, ಹೃದಯ ಮುಕ್ತತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ, ಪ್ರೀತಿ ಮತ್ತು ಒಗ್ಗಟ್ಟಿನ ಸಂಸ್ಕೃತಿ, ದೀಪಾವಳಿ ಆಚರಣೆಯ ಮೂಲವಾಗಿದೆ’ ಎಂದು ಹೇಳಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ವರದಿಗಾರ ಮೊಹಮ್ಮದ್ ಆರೀಫ್ ಮಾತನಾಡಿ, ‘ಬೆಳಕಿನ ಹಬ್ಬವನ್ನು ಅನ್ಯ ಧರ್ಮದವರೊಂದಿಗೆ ಆಚರಿಸಿದಾಗ ಬೆಳಕಿನ ಶಕ್ತಿ ಹೆಚ್ಚುತ್ತದೆ, ಅಸೂಯೆ, ಕ್ರೋಧ, ಬಡತನ ಕತ್ತಲೆಯ ಪ್ರತೀಕವಾದರೆ, ಪ್ರೀತಿ, ಪರಸ್ಪರ ಸಹಕಾರ ಬೆಳಕಿನ ಪ್ರತೀಕ ಎಂದರು.

   ಸಾಮರಸ್ಯ ಸಂಸ್ಥೆ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಮಾತನಾಡಿ ’ಎಲ್ಲ ಧರ್ಮದವರ ಹಬ್ಬ ಹರಿದಿನಗಳನ್ನು ಆಚರಿಸುವ ಸಂಪ್ರದಾಯ, ಸಂಸ್ಕೃತಿ ಇದೆ. ಎಲ್ಲಾ ಜನರು ಶಾಂತಿ ಮತ್ತು ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲು ಮುಂದಾಗಾಬೇಕು’ ಎಂದು ಹೇಳಿದರು.

    ಈ ವಿಶೇಷ ಸಂದರ್ಭದಲ್ಲಿ ಸಂತ ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು ಇವರು ಮೇಣದ ಬತ್ತಿ (ಗೂಡುದೀಪ) ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಸ್ವರಾಂಜಲಿ, ಸಂಗೀತ ಶಾಲೆ-ಯೆಕ್ಕೂರು ಮತ್ತು ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಿಜೈ; ಸರಿಗಮ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿತ್ತು

    ರೆ.ಫಾ.ಸುದೀಪ್ ಪೌಲ್, ಎಂಎಸ್ಎಫ್ಎಸ್, ನಿರ್ದೇಶಕ ಸಂದೇಶ, ಶ್ರೀ ಸ್ಟ್ಯಾನಿ ಲೋಬೋ, ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು, ಸರಿಗಮ ಟ್ರಸ್ಟಿಗಳಾದ ಶ್ರೀ ಸ್ಟ್ಯಾನಿ ಆಲ್ವಾರಿಸ್, ಶ್ರೀ ವಿಜಯ್ ಆಲ್ಫ್ರೆಡ್,  ಶ್ರೀ ಥಾಮಸ್ ಪ್ರಸಾದ್, ಕಾರ್ಯದರ್ಶಿ, ಲಯನ್ಸ್ ಕ್ಲಬ್, ಬಿಜೈ, ಕೆ ಅಶ್ರಫ್ ಮಾಜಿ ಮೇಯರ್ , ಎಂಸಿಸಿ. ಇತರರು ಉಪಸ್ಥಿತರಿದ್ದರು.

      ಸಂತ ಮದರ್ ಥೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ತಲಿನೋ ಸ್ವಾಗತಿಸಿದರು.  ಉಪಾಧ್ಯಕ್ಷೆ  ಫ್ಲಾವಿ ಡಿಸೋಜಾ ವಂದಿಸಿದರು. ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

     ಔಪಚಾರಿಕ ಕಾರ್ಯಕ್ರಮದ ನಂತರ ಸ್ವರಾಂಜಲಿ ಸಂಗೀತ ಶಾಲೆ-ಯೆಕ್ಕೂರು, ಫಾ| ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಗಾಯನ ಪಂಗಡ, ಮಂಗಳೂರು. ಮತ್ತು ಕಲಾ ಸರಸ್ವತಿ ನಾಟ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.