ಪ್ರತಿಭಾ ಪುರಸ್ಕಾರ – ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಬೇಕು ಅ| ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಭಾನುವಾರ ಪಾಂಬೂರಿನ ಮಾನಸ ಪುನರ್ವಸತಿ ಕೇಂದ್ರದಲ್ಲಿ ಕಥೊಲಿಕ್ ಸಭಾ ಮತ್ತು ಜಾನ್ ಡಿ’ಸಿಲ್ವಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಹಲವಾರು ಅವಕಾಶಗಳಿವೆ ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ. ವಿದ್ಯಾರ್ಥಿಗಳು ಕೇವಲ ಬಾವಿಯೊಳಗಿನ ಕಪ್ಪೆಯಾಗದೆ ಮುಂದೆ ಯಾವ ಗುರಿ ತಲುಪಬೇಕು ಎನ್ನುವುದನ್ನು ಚಿಕ್ಕಂದಿನಲ್ಲೇ ನಿರ್ಧಾರ ಮಾಡಿದಾಗ ಮಾತ್ರ ಯಶಸ್ಸು ಲಭಿಸಲು ಸಾಧ್ಯವಿದೆ.
ಭಾರತದಲ್ಲಿ ನಮ್ಮ ಮಕ್ಕಳಿಗೆ ಹಲವಾರು ಅವಕಾಶಗಳಿದ್ದು ಅದರ ಸದುಪಯೋಗ ಪಡೆಯುವ ಕೆಲಸ ನಡೆಯಬೇಕು ಮುಂದಿನ 20 ವರ್ಷಗಳಿಗೆ ಬೇಕಾದ ಉದ್ಯೋಗಗಳು ಭಾರತದಲ್ಲೇ ಇದ್ದು ಅದಕ್ಕೆ ಬೇಕಾದ ರೀತಿಯ ಶಿಕ್ಷಣವನ್ನು ಪಡೆಯುವತ್ತ ನಮ್ಮ ಮಕ್ಕಳು ಪ್ರಯತ್ನಿಸಬೇಕು. ಮಕ್ಕಳು ತಮ್ಮನ್ನು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮವಾದ ಫಲಿತಾಂಶದೊಂದಿಗೆ ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿಯಂತೆ ಚಿಕ್ಕಂದಿನಲ್ಲೇ ಇದಕ್ಕೆ ಸಜ್ಜುಗೊಳ್ಳಬೇಕು ಎಂದರು.
ಮಾಜಿ ಶಾಸಕ ಜೆ ಆರ್ ಲೋಬೊ ಮಾತನಾಡಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಸರಕಾರಿ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಸರಕಾರಿ ಕ್ಷೇತ್ರ ಭ್ರಷ್ಠಾಚಾರದಿಂದ ಕೂಡಿದೆ ಎಂಬ ಮಾತು ಸರಿಯಲ್ಲ ಹೇಗೆ ಒಂದು ತಾವರೆ ಹೂವು ಕೆಸರಿನಲ್ಲಿ ಇದ್ದು ಕೊಂಡು ಅರಳಿ ತನ್ನ ಸೌಂದರ್ಯವನ್ನು ಸಮಾಜಕ್ಕೆ ನೀಡುತ್ತದೆಯೋ ಅದೇ ರೀತಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಭ್ರಷ್ಠಾಚಾರದ ಕ್ಷೇತ್ರ ಎಂಬ ಹಣೆಪಟ್ಟಿಯನ್ನು ತೆಗೆದು ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಮಾದರಿಯಾಗಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಶಕ್ತರನ್ನಾಗಿಸಲು ಹೆತ್ತವರು ಪ್ರಯತ್ನಿಸುವುದರೊಂದಿಗೆ ಹೆಚ್ಚು ಸರಕಾರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವತ್ತ ಉತ್ತೇಜನ ನೀಡಬೇಕು ಎಂದರು..
ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು
ಜಾನ್ ಡಿಸಿಲ್ವಾ ಫೌಂಡೇಶನ್ ಇದರ ಮುಖ್ಯಸ್ಥರಾದ ಜೋನ್ ಡಿಸಿಲ್ವಾ ಮತ್ತು ಗ್ಲ್ಯಾಡಿಸ್ ಡಿಸಿಲ್ವಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಕಾರ್ಯದರ್ಶಿ ಕಾರ್ಯಕ್ರಮದ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು
.

ಮಿಲಾಗ್ರಿಸ್ ಚರ್ಚ್ ನವೀಕರಣ ಯೋಜನೆ ಪೂರ್ಣಗೊಂಡು ಆಶಿರ್ವದಿಸಲಾಯಿತು

ಮಿಲಾಗ್ರಿಸ್ ಚರ್ಚ್ ಎಂದು ಜನಪ್ರಿಯವಾಗಿರುವ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಕಳೆದ ವರ್ಷ ಚರ್ಚ್ ನವೀಕರಣವನ್ನು ಆರಂಭಿಸಿ ಅದರ ಕಾಮಗಾರಿ ಎರಡು ಹಂತಗಳಲ್ಲಿ ನಡೆದಿದ್ದು,. ಎರಡನೇ ಹಂತದ ಭಾಗವಾಗಿ ಕೆಳಗಡೆ ಸಡಿಲವಾದ ಮಣ್ಣಿನಿಂದ ಕುಸಿದು ಬಿದ್ದಿದ್ದ ಚರ್ಚ್‌ನ ನೆಲಹಾಸನ್ನು ಮರುರೂಪಿಸಲಾಗಿದೆ..

   ಇದರ ಆಶಿರ್ವಚನವನ್ನು  ಮಂಗಳೂರಿನ ವಿಶ್ರಾಂತ ಬಿಷಪ್ ಅತಿ ವಂದನೀಯ ಡಾ ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸಿ, ನವೀಕೃತ ನೆಲಹಾಸನ್ನು ಸಾಮೂಹಿಕವಾಗಿ ನೆರವೇರಿಸಿ ಆಶೀರ್ವದಿಸಿದರು. ಧರ್ಮಪ್ರಾಂತ್ಯದ ವಿಕಾರ್ ಜನರಲ್ Msgr ಮ್ಯಾಕ್ಸಿಮ್ ನೊರೊನ್ಹಾ ಅವರು ಸಂದೇಶ ನೀಡಿ ’ಪ್ರಾರ್ಥನೆ ಮತ್ತು ಪ್ರಾರ್ಥನೆಯನ್ನು ನಮ್ಮ ಕ್ರಿಶ್ಚಿಯನ್ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಕರೆ ನೀಡಿದರು. ನಾವು ನಿರಂತರ ಪ್ರಾರ್ಥನೆ ಮಾಡಿದರೆ ನಾವು ದೇವರಿಗೆ ಹತ್ತಿರವಾಗುತ್ತೇವೆ ಮತ್ತು ನಾವು ಹತ್ತಿರವಾಗಬೇಕೆಂದು ದೇವರು ಬಯಸುತ್ತಾನೆ ಎಂದು ಅವರು ಹೇಳಿದರು. ಯೇಸು ತನ್ನ ಸೇವೆಯ ಸಮಯದಲ್ಲಿ ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸಿದನು ಮತ್ತು ಅವನು ಎಲ್ಲರನ್ನು ಸತತವಾಗಿ ಪ್ರಾರ್ಥಿಸಲು ಕರೆ ನೀಡಿದ್ದನ್ನು’ ಅವರು ನೆನಪಿಸಿದರು.

     ಸಾಮೂಹಿಕ ಸಾಮೂಹಿಕ ಪ್ರಾರ್ಥನೆಯ ನಂತರ ಫಾದರ್ ಬೊನವೆಂಚರ್ ನಜರೆತ್ ಅವರು ಈ ಕಾರ್ಯವನ್ನು ಸಾಧ್ಯವಾಗಿಸಿದ ಎಲ್ಲಾ ದಾನಿಗಳಿಗೆ, ಹಿತೈಷಿಗಳಿಗೆ, ಧರ್ಮಕೇಂದ್ರದವರಿಗೆ, ಎಂಜಿನಿಯರ್‌ಗಳಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಎಪಿಸ್ಕೋಪಲ್ ಸಿಟಿ ಡೀನ್ ವಿ. ರೆವ್ ವಿನ್ಸೆಂಟ್ ಮೊಂತೇರೊ, ಮಿಲಾಗ್ರಿಸ್ ಚರ್ಚಿನ  ಧರ್ಮಗುರುಗಳು, ಅತಿಥಿ ಧರ್ಮಗುದುಗಳು, ಧರ್ಮಭಗಿನಿಯರು ಭಕ್ತಾಧಿಗಳು ಈ ಧಾರ್ಮಿಕ ವಿಧಿಯಲ್ಲಿ ಭಾಗಿಯಾದರು.

ಸರ್ಕಾರದ ಮುಖ್ಯ ಸಚೇತಕ ಡಾ|| ವೈ.ಎ ನಾರಾಯಣಸ್ವಾಮಿ ಉನ್ನತ ವಿದ್ಯಾಬ್ಯಾಸ ಮುಗಿಸಿ ಸ್ವಗ್ರಹಕ್ಕೆ ಬಂದ ಗೆಳೆಯರ ಮಕ್ಕಳನ್ನು ಭೇಟಿ ಮಾಡಿದರು

ಶ್ರೀನಿವಾಸಪುರ: ಪಿಯುಸಿ ತರಗತಿಯಲ್ಲಿ ಇಬ್ಬರು ಜೊತೆಯಲ್ಲೇ ವಿದ್ಯಾಬ್ಯಾಸ ಪೂರ್ಣ ಗೊಳಿಸಿ ನಂತರ ಉನ್ನತ ವಿದ್ಯಾಬ್ಯಾಸ ಮುಗಿಸಿ ಇಂಗ್ಲೇಂಡ್ ನಲ್ಲಿ ಗ್ಯಾಸ್ಟೋ ಸರ್ಜನ್ ಆಗಿ ಸೇವೆ ಸಲ್ಲಿಸಿ ಸ್ವಂತ ಮನೆಗೆ ಆಗಮಿಸಿದ್ದ ವೇಳೆಯಲ್ಲಿ ವಿದಾನಪರಿಷತ್ ಸದಸ್ಯ ಹಾಗು ಸರ್ಕಾರದ ಮುಖ್ಯ ಸಚೇತಕ ಡಾ|| ವೈ.ಎ ನಾರಾಯಣಸ್ವಾಮಿ ತನ್ನ ಸ್ನೇಹಿತ ಡಾ|| ವೈ.ಕೆ ವಿಶ್ವನಾಥ್ ನಿವಾಸಕ್ಕೆ ಬೇಟಿನೀಡಿ ಅಭಿನಂದಿಸಿ ಶುಭ ಕೋರಿದ್ದಾರೆ.
ಪಟ್ಟಣದ ಎಂ.ಜಿ ರಸ್ತೆಯ ವೈ.ಎಸ್ ಕೃಷ್ಣಯ್ಯ ಶಟ್ಟಿ ಅವರ ನಿವಾಸಕ್ಕೆ ಡಾ|| ವೈ.ಎ ನಾರಾಯಣಸ್ವಾಮಿ ಬೇಟಿನೀಡಿ ಕೃಷ್ಣಯ್ಯ ಶಟ್ಟಿರವರ ಮಗ ಹಾಗು ತನ್ನ ಹಳೇ ವಿದ್ಯಾರ್ಥಿ ದಿಸೆಯ ಸ್ನೇಹಿತ ಡಾ|| ವೈ.ಕೆ ವಿಶ್ವನಾಥ್‍ರನ್ನು ಬೇಟಿಮಾಡಿ ಕುಷಲೋಪರಿ ವಿಚಾರಿಸಿ ಇಂಗ್ಲೇಂಡ್ ನಲ್ಲಿ ಗ್ಯಾಸ್ಟೋ ಸರ್ಜನ್ ಮತ್ತು ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ತಾನು ಹುಟ್ಟಿ ಬೆಳೆದ ಮಾವಿನ ನಗರದ ತಮ್ಮ ನಿವಾಸಕ್ಕೆ ಮರಳಿ ಬಂದ ವಿಷಯವನ್ನು ತಿಳಿದು ಬೇಟಿನೀಡಿ ಸಂತಸವನ್ನು ವ್ಯಕ್ತಪಡಿಸಿ ತಮ್ಮ ಆರೋಗ್ಯ ಸೇವೆ ಜನತೆಗಾಗಿ ಸದಾಮುಂದುವರೆಯಲಿ ನಾನೂ ಕೂಡಾ ಶಿಕ್ಷಕರ ಆಶೀರ್ವಾದದಿಂದ ಎಂ.ಎಲ್.ಸಿಆಗಿ, ಜನಸೇವಕನಾಗಿ ರಾಜಕಾರಣದಲ್ಲಿ ಸ್ಥಿರವಾಗಿದ್ದೇನೆ ಈ ನಮ್ಮ ಸ್ನೇಹ ಸದಾ ಮುಂದುವರಿದು ಬಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಶುಭ ಕೋರಿ ಡಾ|| ವೈ.ಎ ನಾರಾಯಣಸ್ವಾಮಿ ವೈ.ಎಸ್ ಕೃಷ್ಣಯ್ಯ ಶಟ್ಟಿ ಇವರ ಪುತ್ರ ವೈದ್ಯರನ್ನು ಗೌರವಿಸಲಾಯಿತು.
ಈ ವೇಳೆಯಲ್ಲಿ ವೈ.ಎಸ್ ಕೃಷ್ಣಯ್ಯ ಶೆಟ್ಟಿ, ಬದ್ರಿನಾಥ್, ಸರ್ಕಾರಿ ನೌಕರರ ಸಂಘದ ನಿರ್ದೆಶಕ ಮಂಜುನಾಥ್, ಉಪನ್ಯಾಸಕ ಸೀತರೆಡ್ಡಿ ಮತ್ತಿತರರು ಹಾಜರಿದ್ದರು.

ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೀರಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಚರಂಡಿ ಹಾಗೂ ಶಾಲಾ ಕೊಠಡಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮದ ಇಬ್ಬರಿಗೆ ಪಡಿತರ ಚೀಟಿ ಸಮಸ್ಯೆ ಹಾಗೂ ಒಬ್ಬರಿಗೆ ಅಂಗವಿಕ ವೇತನದ ಸಮಸ್ಯೆ ಇರುವುದಾಗಿ ತಿಳಿಸಲಾಗಿದೆ. ಸಮಸ್ಯೆ ಪರಿಹರಿಸಲಾಗುವುದು. ಕಂದಾಯ ಇಲಾಖೆ ವತಿಯಿಂದ ಖಾತೆ, ವಿಭಾಗಪತ್ರ, ಪಹಣಿ ತಿದ್ದುಪಡಿಯಂಥ ಕೆಲಸ ಆಗಬೇಕಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲಾಗುವುದು. ಪಶುಪಾಲನಾ ಇಲಾಖೆ ವತಿಯಂದ ಗ್ರಾಮದ 42 ರಾಸುಗಳಿಗೆ ಚರ್ಮಗಂಟು ರೋಗ ನಿವಾರಕ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷ ಮಂಜುನಾಥ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಂ.ಶ್ರೀನಿವಾಸನ್, ಡಾ. ಮಂಜುನಾಥರೆಡ್ಡಿ, ಮಂಜುನಾಥ್, ಅನ್ವರ್ ಸಾಬ್, ಕೃಷ್ಣಪ್ಪ, ಶಿವಕುಮಾರ್, ಲಿಖಿತಾ, ನಟೇಶ್, ಬಿ.ವಿ.ಮುನಿರೆಡ್ಡಿ, ಹರಿಪ್ರಸಾದ್, ಜನಾರ್ಧನ್, ವಿನೋದ್ ಸಾಕಮ್ಮ, ಭಾವನಾ, ಜಗದೀಶ್ ಕುಮಾರ್, ಹರಿಪ್ರಸಾದ್, ಮಂಜಣ್ಣ, ಬಲರಾಮಚಂದ್ರೇಗೌಡ, ಹರೀಶ್ ಕುಮಾರ್, ಸುರೇಶ್, ಪುಷ್ಪಲತಾ, ಕೃಷ್ಣಪ್ಪ, ಗೀತಮ್ಮ, ಜಗದೀಶ್ ನಾರಾಯಣಸ್ವಾಮಿ, ನಾಗರಾಜ್, ಆವಲಪ್ಪ ಮತ್ತಿತರರು ಇದ್ದರು.

ಮಕ್ಕಳ ಕ್ರಿಯಾತ್ಮಕ ದಸರಾ ರಜಾ-ಮಜಾ ಶಿಬಿರ 2022


ಮಲ್ಪೆ : ಜಾಗತೀಕರಣದಿಂದಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು ಬಹುಕುಟುಂಬದಲ್ಲಿದ್ದ ಅನೇಕ ಪದ್ಧತಿ ರೀತಿ-ನೀತಿಗಳು ದೂರವಾಗಿ ಅಜ್ಜ-ಅಜ್ಜಿಯರ ಪ್ರೀತಿ ಮಮತೆ ಮಾರ್ಗದರ್ಶನ ಈಗ ನಮ್ಮ ಮಕ್ಕಳಿಗೆ ಮರೀಚಿಕೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ರಜಾ ದಿನಗಳಲ್ಲಿ ಮನೆಯಲ್ಲಿದ್ದು ಟಿ.ವಿ. ನೋಡುತ್ತಾ ಕಾಲಕಳೆಯಬೇಕಾಗಿದೆ. ಇದನ್ನು ದೂರ ಮಾಡಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಏಕಾಗ್ರತೆ ಸೌಹಾರ್ದತೆ ಹೆಚ್ಚುತ್ತದೆ ಎಂದು ರೋ| ಶ್ರೀ ದೇವ ಆನಂದ್ ರೋಟರಿ ಜಿಲ್ಲಾ ಗವರ್ನರ್ 3182 ಹೇಳಿದರು.
ಅವರು ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಉಡುಪಿ ಮಿಡ್‍ಟೌನ್, ಗಾಂಧಿ ಶತಾಬ್ದಿ ಸ.ಮಾ.ಹಿ.ಪ್ರಾ ಶಾಲೆ ಮಲ್ಪೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ಮಕ್ಕಳ ಕ್ರಿಯಾತ್ಮಕ ದಸರಾ ರಜಾ-ಮಜಾ ಶಿಬಿರ ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಯಾಗಿ ರೋ| ಶ್ರೀ ಸಂತೋಷ್‍ಕುಮಾರ್ ಜೆ. ಫೆರ್ನಾಂಡಿಸ್ ಮಾತಾಡಿ ಈ ಮೂರು ದಿನದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪಂಜಿನಿಂದ ಗೊಂಬೆ, ಹೂದಾನಿ, ಪೇಪರ್‍ಕ್ರಾಫ್ಟ್, ಅಭಿನಯಗೀತೆ, ರಂಗಕಲೆ, ಪರ್ಯಾಯ ಕವನ, ಎಂಬೋಸಿಂಗ್‍ಪೈಂಟ್ (ಉಬ್ಬು ಶಿಲ್ಪ) ಇವುಗಳ ತಯಾರಿಕೆ ಮಾಡುವುದನ್ನು ತಿಳಿಸುತ್ತಾ ಮಕ್ಕಳಲ್ಲಿ ಗುಂಪು ನಿರ್ವಹಣೆ ಕೌಶಲ್ಯ ಅನಾವರಣಗೊಂಡು ಬದುಕುವ ಕಲೆಗೆ ಪೂರಕ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಅಶೋಕ ಕೋಟ್ಯಾನ್ ಮಾತಾಡಿ ಇದೊಂದು ಅಭೂತಪೂರ್ವ ಕಾರ್ಯಕ್ರಮ ಇಂದು ನಾವೆಲ್ಲ ಪಾಶ್ಚಾತ್ಯ ಸಂಸ್ಕøತಿಯನ್ನು ಅನುಚಾನವಾಗಿ ಸ್ವೀಕರಿಸಿ ನಮ್ಮ ದೇಶಿಯತೆಯನ್ನು ದೂರ ಮಾಡಿದ್ದೇವೆ. ಇಂತಹ ಶಿಬಿರಗಳಿಂದ ಎಲ್ಲಾ ಕೌಶಲ್ಯಗಳು ಪುನರಪಿ ವಿದ್ಯಾರ್ಥಿಗಳಿಗೆ ನೆನೆಪಿಸಿಕೊಟ್ಟು ಜೀವನಮೌಲ್ಯ ಹೆಚ್ಚಿಸುವ ಈ ಪ್ರಯತ್ನ ನಿಜಕ್ಕೂ ಅಭಿನಂದಾರ್ಹವಾದದು ಎಂದು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ಶ್ರೀಮತಿ ಸಂಧ್ಯಾ ಅವರು ನಿರ್ವಹಿಸಿ ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಏಕಾಗ್ರತೆ ಜೀವನಮೌಲ್ಯ ಬೆಳೆಯುತ್ತದೆ, ಅಲ್ಲದೇ ಮಕ್ಕಳು ಟಿ.ವಿ. ಮೊಬೈಲ್ ಬಳಕೆ ಕಡಿಮೆ ಮಾಡಲು ಇದು ಉತ್ತೇಜನ ನೀಡುತ್ತದೆ ಮತ್ತು ಸಮಯ ಸದ್ವಿನಿಯೋಗ ಮಾಡುವ ಪ್ರವೃತ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ರೋ | ರಾಮದೇವ ಕಾರಂತ ಐರೋಡಿ, ಶ್ರೀ ಬಾಲಕೃಷ್ಣ ಮೆಂಡನ್, ಶ್ರೀ ಶಂಕರ ಮುಖ್ಯ ಶಿಕ್ಷಕ ಗಾಂಧಿ ಶತಾಬ್ದಿ ಸ.ಮಾ.ಹಿ.ಪ್ರಾ. ಶಾಲೆ ಮಲ್ಪೆ ಹಾಗೂ ಶಿಬಿರ ನಿರ್ದೇಶಕ ಶ್ರೀ ರಮೇಶ ವಕ್ವಾಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾಮೋಹನ್ ಬೆಳ್ಮಣ್ ನಿರೂಪಿಸಿ, ಶಾಲಾ ಮುಖ್ಯ ಶಿಕ್ಷಕ ಶ್ರೀ ಶಂಕರ ಸ್ವಾಗತಿಸಿ, ಶ್ರೀ ರಮೇಶ ವಕ್ವಾಡಿ ಪ್ರಾಸ್ತಾವನೆಗೈದು, ಕು| ಅನಿಶಾ ಪೇತ್ರಿ ವಂದಿಸಿದರು. ಸುಮಾರು 55 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

“ಚೆಸ್ ಆಟ ಮಾನಸಿಕ,ಬೌದ್ಧಿಕ ಬೆಳವಣಿಗೆಗೆ ಸಹಕಾರಿ”-
ಡಿ.ವೈ.ಎಸ್‌.ಪಿ ಶ್ರೀಕಾಂತ್

ಕುಂದಾಪುರ-ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ) ಆಶ್ರಯದಲ್ಲಿ, 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮರಣಾರ್ಥ ಅಖಿಲ‌ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ ಕುಂದಾಪುರದ ನಾರಾಯಣ ಗುರು ಎ‌.ಸಿ.ಹಾಲ್ ನಲ್ಲಿ ಜರುಗಿತು. ದೀಪ ಬೆಳಗಿಸಿ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಡಿ‌.ವೈ.ಎಸ್.ಪಿ ಶ್ರೀಕಾಂತ್ ಮಾತನಾಡಿ “ಹಿರಿಯರು ಕಿರಿಯರೆಂಬ ವಯಸ್ಸಿನ ಭೇದವಿಲ್ಲದೆ ಆಡಬಹುದಾದ ಈ ಚೆಸ್ ಆಟದಿಂದ ಮೆದುಳು ಚುರುಕುಗೊಳ್ಳುತ್ತದೆ ಹಾಗೂ ಮಾನಸಿಕ,ಬೌದ್ಧಿಕ ಬೆಳವಣಿಗೆಗೆ ಇದು ಸಹಕಾರಿ ಎಂದರು‌‌.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್ ಮಾತ‌ನಾಡಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಬಹಳಷ್ಟು ವರ್ಷಗಳಿಂದ ಹತ್ತು ಹಲವಾರು ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದೆ.ಕ್ರೀಡಾಪಟುಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್.ಪೂಜಾರಿ,ಡಿಜಿಫ್ಲಿಕ್ ಇನ್ಷುರೆನ್ಸ್ ಕಂಪೆನಿಯ ಸಿ.ಇ.ಎ,ರಂಜನ್ ನಾಗರಕಟ್ಟೆ ಸಕ್ಸಸ್ ಅಕಾಡೆಮಿಯ ಸಂಸ್ಥಾಪಕ ರಂಜನ್ ನಾಗರಕಟ್ಟೆ,ಉಡುಪಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಮಿತ್ ಕುಮಾರ್ ಶೆಟ್ಟಿ,ಚೀಫ್ ಆರ್ಬಿಟರ್ ವಸಂತ್.ಬಿ.ಹೆಚ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಚೆಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅವನಿ‌ ಆಚಾರ್ಯ ಉಡುಪಿ, ಪ್ರಗತಿ ನಾಯಕ್ ಬ್ರಹ್ಮಾವರ ಇವರನ್ನು ಸನ್ಮಾನಿಸಲಾಯಿತು.ಈ ಚೆಸ್ ಪಂದ್ಯಾಟದಲ್ಲಿ ಭಾರತದ ಒಟ್ಟು 355 ಸ್ಪರ್ಧಿಗಳು ಭಾಗವಹಿಸುತ್ತಿದ್ದು ದಾಖಲೆಯ ಪುಟಗಳನ್ನು ಸೇರಲಿದೆ.

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ,ಶಿವನಾರಾಯಣ ಐತಾಳ್ ಕೋಟ ಮತ್ತು ಸೌಂದರ್ಯ ಕಾರ್ಯಕ್ರಮ ನಿರೂಪಣೆಗೈದರು.

ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ : ಹವಾಮಾನ ಇಲಾಖೆ

.

ಬೆಂಗಳೂರು ;ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿ, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಅಲರ್ಟ್‌ ಘೋಷಣೆ ಮಾಡಿದೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ಮಳೆಯಾಗಲಿದ್ದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.ಮುಂದಿನ 48 ಘಂಟೆಗಳು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು, ಗದಗ, ಕಲಬುರ್ಗಿ ಜಿಲ್ಲೆಗಳ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗಲಿದ್ದು, ಗರಿಷ್ಠ ಮತ್ತು ಕನಿಷ್ಠತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್‌ ಆಗಿರುವ ಸಾಧ್ಯತೆಯಿದೆ.

ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿ – ನಿಧನ (85)

ಕುಂದಾಪುರ: ಕಂದಾವರ ಕೊಂಗವಳ್ಳಿ ಮನೆ ದಿ. ಶಂಕರ ಶೆಟ್ಟರ ಪತ್ನಿ ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿಯವರು( 85 ವರುಷ) ಇದೇ 30 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರು ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಲೇಖಕಿ ಡಾ .ರೇಖಾ ವಿ. ಬನ್ನಾಡಿ ಇವರ ಮಗಳು. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು,ಕಾರ್ಕಳ ತಾಲೂಕು ಸಮಿತಿಯ ಗೌ.ಅಧ್ಯಕ್ಷರಾಗಿ ರಿಚಾರ್ಡ್ ಮಿರಾಂದ 3ನೇ ಭಾರಿ ಆಯ್ಕೆ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು,ಕಾರ್ಕಳ ತಾಲೂಕು ಸಮಿತಿಯ ಮಹಾಸಭೆ ಹಾಗೂ 2022-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಉಡುಪಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ಶೆಣೈ ರವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವಿದ್ಯುತ್ ಗುತ್ತಿಗೆದಾರರ ಸಂಘದ ಕಛೇರಿಯಲ್ಲಿ ನಡೆಯಿತು.ಈ ಸಭೆಯಲ್ಲಿ 2022-25 ನೇ ಸಾಲಿನ ಕಾರ್ಕಳ ತಾಲೂಕು ಸಮಿತಿಯ ಗೌ.ಅಧ್ಯಕ್ಷರಾಗಿ ಮಿರಾಂದ ಇಲೆಕ್ಟ್ರಿಕಲ್ಸ್ ಕಾರ್ಕಳ ಇದರ ಮಾಲೀಕರಾಧ ಶ್ರೀ ರಿಚಾರ್ಡ್ ಮಿರಾಂದ ರವರು ಸತತ 3ನೇ ಭಾರಿ 3ನೇ ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಗೌ.ಉಪಾಧ್ಯಕ್ಷ ಸ್ಥಾನಕ್ಕೆ ನಿತ್ಯಾನಂದ ಇಲೆಕ್ಟ್ರಿಕಲ್ಸ್ ಕಾರ್ಕಳ ಇದರ ಮಾಲೀಕರಾದ ಶ್ರೀ.ನಿತ್ಯಾನಂದ ಭಂಡಾರಿ ಆಯ್ಕೆಯಾಗಿರುತ್ತಾರೆ.ಹಾಗೆಯೇ ಗೌ.ಉಪಾಧ್ಯಕ್ಷ ಸ್ಥಾನಕ್ಕೆ ಪ್ರದೀಪ್ ಇಲೆಕ್ಟ್ರಿಕಲ್ಸ್ ಮಾಲೀಕರಾದ ಶ್ರೀ.ಪ್ರದೀಪ್ ಉಪಾಧ್ಯಾಯ ಆಯ್ಕೆಯಾಗಿರುತ್ತಾರೆ.ಗೌ.ಕಾರ್ಯದರ್ಶಿ ಸ್ಥಾನಕ್ಕೆ ವಿವೇಕ್ ಇಲೆಕ್ಟ್ರಿಕಲ್ಸ್ ಬಜಗೋಳಿ ಇದರ ಮಾಲೀಕರಾದ ಶ್ರೀ.ಅನಿಲ್ ಎಸ್ ಪೂಜಾರಿ ಆಯ್ಕೆಯಾಗಿರುತ್ತಾರೆ.ಗೌ.ಜತೆ ಕಾರ್ಯದರ್ಶಿ ಸ್ಥಾನಕ್ಕೆ ಸಾಯಿ ಇಲೆಕ್ಟ್ರಿಕಲ್ಸ್ ಕಾರ್ಕಳ ಇದರ ಮಾಲೀಕರಾದ ಶ್ರೀ ಶಿವಾನಂದ ಕೆ.ಜಿ ಆಯ್ಕೆಯಾಗಿರುತ್ತಾರೆ.ಗೌ.ಕೋಶಾಧಿಕಾರಿ ಸ್ಥಾನಕ್ಕೆ ಬೈಲೂರು ಇಲೆಕ್ಟ್ರಿಕಲ್ಸ್ ಬೈಲೂರು ಇದರ ಮಾಲೀಕರಾದ ಶ್ರೀ.ಮನ್ಸೂರ್ ಅಹಮ್ಮದ್ ರವರು ಆಯ್ಕೆಯಾಗಿರುತ್ತಾರೆ.ಗೌ.ಕ್ರೀಡಾ ಕಾರ್ಯದರ್ಶಿ ಸ್ಥಾನಕ್ಕೆ ಬಾಲಾಜಿ ಇಲೆಕ್ಟ್ರಿಕಲ್ಸ್ ಕಾರ್ಕಳ ಇದರ ಮಾಲೀಕರಾದ ಶ್ರೀ.ರತ್ನವರ್ಮ ಅಜ್ರಿ ಇವರು ಆಯ್ಕೆಯಾಗಿರುತ್ತಾರೆ.ಕಾರ್ಯಕಾರಿಸಮಿತಿಗೆ ರತ್ನಾಕರ್ ಅಮೀನ್,ರಾಜೇಶ್ ಕೋಟ್ಯಾನ್,ಶಂಕರ್ ದೇವಾಡಿಗ,ಶುಭಕರ.ಕೆ,ಸುರೇಶ್ ಶೆಟ್ಟಿ, ಭಾಸ್ಕರ್ ಅಚಾರ್ಯ,ಸಿಂಥಿಯಾ ಕ್ಯಾಸ್ಟಲಿನೋ,ದಿನೇಶ್ ಭಂಡಾರಿ, ದಿನೇಶ್ ಕುಮಾರ್, ಲಕ್ಷ್ಮಣ್ ಸಿಂಗ್, ಸತ್ಯಕುಮಾರ್, ಹರೀಶ್ ಕುಂದರ್, ನಾರಾಯಣ್ ರಾವ್, ವಿನ್ಸೆಂಟ್ ಡಿಸೋಜ,ಸಂತೋಷ್ ಸೇರ್ವೆಗಾರ್ ಆಯ್ಕೆಯಾಗಿರುತ್ತಾರೆ.ಈ ಸಭೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯ ಗೌ.ಉಪಾಧ್ಯಕ್ಷರುಗಳಾದ ಅಶೋಕ್ ಸುವರ್ಣ,ಕೃಷ್ಣಕುಲಾಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಪೂಜಾರಿ ಜತ್ತನ್ನ ವಂದಿಸಿದರು.