

ಕೋಲಾರ: ಡಿಸೆಂಬರ್ 6ರ ಶನಿವಾರ ಕುಂದಾಪುರದ ಶೆರೋನ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆ ಕುಂದಾಪುರ ಭಂಡಾರ್ಕಾರ್ ಕಾಲೇಜ್ನ 1984-85ನೇ ಸಾಲಿನ ಬಿ.ಕಾಂ. ಪದವೀಧರ ಸ್ನೇಹಿತರ 40ನೇ ವರ್ಷದ ಸ್ನೇಹ ಮಿಲನದ ಅಂಗವಾಗಿ ಪತ್ರಕರ್ತ-ಲೇಖಕ ವಿಶ್ವ ಕುಂದಾಪುರ ಅವರ ಸಾಹಿತ್ಯ ಕೃಷಿ ಪಕ್ಷಿನೋಟ' ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶ್ವ ಅವರ ಪ್ರಕಟಗೊಂಡಿರುವ ಎಲ್ಲ 20 ಸ್ವತಂತ್ರ, ಅನುವಾದ ಮತ್ತು ಸಂಪಾದಿತ ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಕೃತಿಗಳನ್ನು ಪ್ರದರ್ಶಿಸಲಾಯಿತು. ತಮ್ಮ ಕಾಲೇಜ್ನಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿ ಇಷ್ಟೊಂದು ಕೃತಿ ರಚನೆ ಮಾಡಿರುವುದು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಪುಸ್ತಕ ಪ್ರದರ್ಶನ ವೀಕ್ಷಿಸಿದ ವಾಣಿಜ್ಯ ವಿಭಾಗದ ಮಾಜಿ ಮುಖ್ಯಸ್ಥ, ಪ್ರಾಧ್ಯಾಪಕ ಮೋಹನ್ದಾಸ್ ಪೈ ಮತ್ತು ಗ್ರಂಥಪಾಲಕ ಕೆ. ಆನಂದ್ ಸಂತೋಷ ವ್ಯಕ್ತಪಡಿಸಿದರು. ವಿಶ್ವ ಕುಂದಾಪುರ ಅವರಕರ್ನಾಟಕ ಸ್ಟುಡೆಂಟ್ಸ್ ಇನ್ ಫ್ರೀಡಂ ಮೂವ್ಮೆಂಟ್’ ಕೃತಿಯನ್ನು ಸಹಪಾಠಿಗಳಿಗೆ ಸ್ಮರಣಿಕೆಯಾಗಿ ವಿತರಿಸಲಾಯಿತು.
ಕಾರ್ಯಕ್ರಮದ ಭಾಗವಾದ ಪ್ರತಿಭೋತ್ಸವದಲ್ಲಿ ವಿಶ್ವ, ಕಾಲೇಜ್ ಜೀವನದ ಸವಿನೆನಪುಗಳನ್ನು ಮೆಲುಕು ಹಾಕುವ ಸ್ವರಚಿತ ಕವನ ವಾಚನ ಮಾಡಿ ರಂಜಿಸಿದರು.

ಚಿತ್ರಗಳು:
- ವಿಶ್ವ ಬುಕ್ಸ್
- ವಿಶ್ವ ಕವನ ವಾಚನ

