

ಬೈಂದೂರು ; ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಉಡುಪಿ ಜಿಲ್ಲಾ ಸಮಿತಿ ಹಾಗೂ ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ವಿಶ್ವ ಸಂಸ್ಥೆಯ ಕರೆಯ ಮೇರೆಗೆ “ಮಹಿಳೆಯರ ಹಾಗೂ ಮಕ್ಕಳ ಮೇಲಿನ ಹಿಂಸೆ ನಿರ್ಮೂಲನೆಗೆ ಒತ್ತಾಯಿಸಿ” ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ , ಬೈಂದೂರು ಆಡಳಿತ ಸೌಧದ ಉಪ ತಹಶೀಲ್ದಾರ್ ರವರ ಮುಖಾಂತರ ಉಡುಪಿ ಜಿಲ್ಲಾ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಮಹಿಳೆಯರ ಮೇಲಾಗುವ ಹಿಂಸೆಗಳ ನಿರ್ಮೂಲನೆಗೆ ಒತ್ತಾಯಿಸಿ ಮನವಿಯನ್ನು ಇಂದು (10-12-2025) ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ಕಾರ್ಯದರ್ಶಿ ನಾಗರತ್ನ ಪಡುವರಿ, ಕುಂದಾಪುರ ತಾಲೂಕು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಬಲ್ಕೀಸ್, ಸುಶೀಲಾ ಉಪ್ಪುಂದ, ಶೋಭಾ ನಾಡ, ಸುಶೀಲಾ ಹೇನಬೇರು ಉಪಸ್ಥಿತರಿದ್ದರು.

