

ಶ್ರೀನಿವಾಸಪುರ : ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಬಾಡಿಗೆದಾರರಿಗೆ ಮುನ್ಸೂಚನೆಯನ್ನು ನೀಡದೇ ಸದರಿ ಛಾವಣಿಯನ್ನು ಪುರಸಭೆ ಸಿಬ್ಬಂದಿಯಿಮದ ತೆರವುಗೊಳಸಲಾಗುವುದು. ಠೇವಣಿದಾರರು ನಿಗಧಿತ ದಿನಾಂಕದಂದು ಬಾಡಿಗೆಗಳನ್ನು ಕಟ್ಟುವಂತೆ ಸೂಚಿಸಿ, ಪುರಸಭೆಯು ಸೂಚಿಸಿರುವ ಷರತ್ತುಗಳನ್ನು ಪಾಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜು ಕರೆನೀಡಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಈ ಸಾಲಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿಖಾನೆ, ಬಸ್ಟಾಂಡ್ ಶುಲ್ಕ, ಮುಸಾಫೀರ್ಖಾನ ವಾಣಿಜ್ಯ ಸಂಕೀರ್ಣ ನೆಲಮಹಡಿಯ ವಾಹನ ಶುಲ್ಕ ಸೇರಿ ೨೩ ಲಕ್ಷ ೬೬ ಸಾವಿರ ಹರಾಜು ನಡೆದಿದೆ ಎಂದು ಮಾಹಿತಿ ನೀಡಿದರು.
ಕಂದಾಯ ನಿರೀಕ್ಷಕ ಎನ್.ಶಂಕರ್, ಹಿರಿಯ ಆರೋಗ್ಯ ನಿರೀಕ್ಷಕ ವಿಜಯ್ಕುಮಾರ್, ಕಿರಿಯ ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಸಿಬ್ಬಂದಿಗಳಾದ ವೆಂಕಟೇಶಯ್ಯ , ಸಂತೋಷ್, ಎನ್.ಪ್ರತಾಪ್, ನಾಗೇಶ್, ಶಿವಪ್ರಸಾದ್ ಇದ್ದರು.

