

ಶ್ರೀನಿವಾಸಪುರ : ಇಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣದ ನಂತರ ಯಾವುದೇ ಸರ್ಕಾರವಾಗಲಿ ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಕಷ್ಟ ಸ್ವಯಂ ಉದ್ಯೋಗದಾತರಾಗಬೇಕೆಂದು ಎಂ.ಡಿ.ಟಿ.ಸಿ, ಕೆ.ವಿ.ಐ.ಸಿಯ ಪ್ರಾಂಶುಪಾಲ ವಿ.ಬಂಗಾರನಾಯ್ಕ ಕರೆ ಕೊಟ್ಟರು.
ತಾಲೂಕಿನ ದಳಸನೂರು ಸರ್ಕಾರಿ ಐಟಿಐ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನ ಉದ್ಯೋಮಶೀಲತ ತಿಳುವಳಿಕೆ ಮತ್ತು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯ (ಪಿ.ಎಂ.ಇ.ಜಿ.ಪಿ) ಅಡಿಯಲ್ಲಿ ನಿಯಮವಾಳಿಗಳ ಪ್ರಕಾರ ಅರ್ಹ 18ನೇ ವರ್ಷ ಮೇಲ್ಪಟ್ಟ ಮತ್ತು ಕನಿಷ್ಠ 8ನೇ ತರಗತಿ ವಿದ್ಯಾರ್ಹತೆ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ, ಸೇವಾ ವಲಯ, ಉತ್ಪಾದನೆ ಮತ್ತು ಇತರೆ ವಲಯಗಳ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ತರಬೇತಿ ನೀಡಿ, ಬ್ಯಾಂಕ್ ಮೂಲಕ ಪ್ರಥಮ ಸಾಲ ಗರಿಷ್ಠ 5 ವರ್ಷ ಕಾಲಾವದಿಯುಳ್ಳ ಕನಿಷ್ಠ 2 ಲಕ್ಷದಿಂದ ಗರಿಷ್ಠ 50 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಿ, ಶೇಕಡ 25 ರಿಂದ 35ರಷ್ಟು ಸಬ್ಸಿಡಿ ನೀಡುತ್ತದೆ ಮತ್ತು ಸಾಲ ಪಡೆದ ಫಲಾನುಭವಿಗಳು 5 ವರ್ಷದ ಒಳಗೆ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಿದರೆ, ಗರಿಷ್ಠ 1 ಕೋಟಿಯ ವರೆಗೂ ದ್ವಿತೀಯ ಸಾಲ ಪಡೆಯ ಬಹುದು. ಆದ್ದರಿಂದ ಈ ಸದಾವಕಾಶವನ್ನು ಸದುಪಯೋಗ ಪಡೆಸಿಕೊಂಡು ಸ್ವಾವಲಂಭಿಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ನಿಟ್ಟಿನಲ್ಲಿ ಬೆಂಗಳೂರಿನ ಎಂ.ಡಿ.ಟಿ.ಸಿ, ಕೆ.ವಿ.ಐ.ಸಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಬಹುದು, ಅಥವಾ ಆಯೋಗದೊಂದಿಗೆ ಪಿ.ಟಿ.ಐ ಒಡಂಬಡಿಕೆ ಮಾಡಿಕೊಂಡಿರುವ ಮಾಡ್ರನ್ ಏಜುಕೇಷನಲ್ ಟ್ರಸ್ಟ್, ಮಾಡ್ರನ್ ಕಂಪ್ಯೂಟರ್ ಸೆಂಟರ್ ಮಾಲೀಕರನ್ನು ಖುದ್ದು ಅಥವಾ ಮೊಬೈಲ್ ಮೂಲಕ 9901020518 ಸಂಪರ್ಕಿಸಿ ಅರ್ಜಿ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಸ್ವಾವಲಂಭಿಗಳಾಗಬೇಕೆಂದು ತಿಳಿಸಿದರು.
ದಳಸನೂರು ಸರ್ಕಾರಿ ಐಟಿಐ ಪ್ರಾಂಶುಪಾಲ ಸಿ.ಎಂ. ರಮೇಶ್ ರವರು ಮಾತನಾಡಿ ಸರ್ಕಾರದ ಮಹತ್ತರ ಯೋಜನೆಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಾದ ತಾವೆಲ್ಲರೂ ತಿಳಿದುಕೊಂಡು, ತಮ್ಮ ಓದು ಮುಗಿದ ನಂತರ ಕಂಪನಿಗಳಲ್ಲಿ ಕೆಲಸಗಾರರಾಗಿ ಕೆಲಸ ಮಾಡದೇ, ಆಯೋಗ ನೀಡುವ ಹಾಗೂ ವಿದ್ಯಾರ್ಹತೆಗೆ ಸರಿಹೊಂದುವ ತರಬೇತಿ ಪಡೆದು ಭಾರತ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯ(ಪಿ.ಎಂ.ಇ.ಜಿ.ಪಿ) ಅಡಿಯಲ್ಲಿ ಅರ್ಥಿಕ ಸಹಾಯ ಪಡೆದು ಸ್ವಯಂ ಉದ್ಯೋಗದಾತರಾಗಿ ಇತರರಿಗೆ ಕೆಲಸ ನೀಡುವ ಮೂಲಕ ಉತ್ತಮ ಜೀವನ ನಡೆಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರಿವು ಕಾರ್ಯಕ್ರಮವನ್ನು ಆಯೋಜಿಸಿದ್ದ ಮಾಡ್ರನ್ ಏಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಗಾಂಡ್ಲಹಳ್ಳಿ ರಾಮಾಂಜಪ್ಪ ಬಿ. ತಮ್ಮ ಅನುಭವಗಳನ್ನು ಹಂಚಿಕೊಂಡರು.
ತರಬೇತಿ ಅಧಿಕಾರಿ ಎಂ.ಎಂ. ವೆಂಕಟೇಶ್, ಅಧ್ಯಾಪಕರಾದ ಚಂದ್ರಪ್ಪ, ಸುಬ್ರಮಣಿ, ವೆಂಕಟೇಶ್, ರಾಧಾಕೃಷ್ಣ, ನಾರಾಯಣಗೌಡ, ಕುಮಾರಿ ನವ್ಯ ಮತ್ತು ಬೋಧಕ ಸಿಬ್ಬಂಧಿ ವರ್ಗ ಹಾಜರಿದ್ದರು.

