

ಕುಂದಾಪುರ: ಅಸೋಸಿಯೇಷನ್ ಆಫ್ ಕನ್ಸಜ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಕಿಟೆಕ್ಟರ್ (ರಿ)ಕುಂದಾಪುರ ಇದರ ವತಿಯಿಂದ ಮಹಾಮೇಧಾವಿ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಇಂಜಿಸಿಯರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15ರ ಸೋಮವಾರ ಸಂಜೆ 50ಕ್ಕೆ ಕುಂದಾಪುರದ ಚಿಕ್ಕನಸಾಲ್ ರಸ್ತೆಯ ಮೊಗವೀರ ಭವನದಲ್ಲಿ ನಡೆಯಲಿದೆ. ಎಂ ಐ.ಟಿ ಮಣೆಪಾಲ ಸಿವಿಲ್ ಇಂಜಿಸಿಯರಿಂಗ್ ಮುಖ್ಯಸ್ಥರಾದ ಡಾ.ಪುರುಪೋತ್ತಮ ಜಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಇಂಜಿನಿಯರ್ ಗಣೇಶ್ ಗುಲ್ವಾಡಿ, ಬೀಜಾಡಿ ಪೂಜಾ ಟೈಲ್ಸ್ ಮತ್ತು ಮಾರ್ಬಲ್ಸ್ ನ ಸುಭಾಷ್ ಜೈನ್, ಕುಂದಾಪುರ ಮೂಕಾಂಐಕ ಟ್ರೇಡರ್ಸ್ ನ ಪ್ರಶಾಂತ್ ಮುರುಡೇಶ್ವರ್, ಉಡುಪಿ ಸ್ಟೀಲ್ ರೈಲಿಂಗ್ ಮತ್ತು ಎಸ್ ಎಸ್ ಸಪ್ಲೈರ್ ಹನುಮಾನ್ ರಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದು.
ಅಸೋಸಿಯೇಷನ್ ಅಧ್ಯಕ್ಷರಾದ ಇಂಜಿನಿಯರ್ ಇಕ್ಬಾಲ್ ಪಿ. ಎಂ. ಕಾರ್ಯದರ್ಶಿ ಇಂಜಿನಿಯರ್ ಹರೀಶ್ ಕುಲಾಲ್. ಖಚಾಂಚಿ, ಅರ್ಕಿಟೆಕ್ಟರ್ ವಿನೋದ್ ಬರೆಟ್ಟೊ ಹಾಗೂ ಸರ್ವ ಸದಸ್ಯರು ಮಾದ್ಯಮಕ್ಕೆ ತಿಳಿಸಿದ್ದಾರೆ.

