

ಶ್ರೀನಿವಾಸಪುರ : ಮುಖ್ಯವಾಗಿ ನಮ್ಮ ಸ್ವಂತ ತಾಲೂಕನ್ನು ಭ್ರಷ್ಟಚಾರ ಮುಕ್ತ ಮಾಡುವುದೇ ನನ್ನ ಉದ್ದೇಶ. ನಾವು ಸ್ವರಾಜ್ಯ ಮಾಡಬೇಕು ಎನ್ನುವ ಉದ್ದೇಶ ನಮಗೆ ಆದರೆ ಹಳ್ಳಿಗಳ ಕಡೆ ಕರೆಪ್ಷನ್ ಮಾಡುತ್ತಿದ್ದಾರೆ ಎಂದು ರಾಜ್ಯ ಉಪಲೋಕಾಯುಕ್ತಾ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಗ್ರಾ.ಪಂ. ಕಚೇರಿಗಳಿಗೆ ಮಂಗಳವಾರ ಬೇಟಿ ನೀಡಿ ವಿವಿಧ ಕಾಮಗಾರಿಗಳ ಹಾಗು ಇತರೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು.
ಎಲ್ಲಿ ಹೋದರು ನಿಮ್ಮ ತಾಲೂಕು ಸರಿಮಾಡಿ ಎಂದು ಹೇಳುತ್ತಾರೆ ಇದರಿಂದಾಗಿ ಪದೇ ಪದೇ ನಮ್ಮ ತಾಲೂಕುನ್ನು ಸರಿಪಡಿಸಲು ತಾಲೂಕಿಗೆ ಬೇಟಿ ನಿಡುತ್ತಿದ್ದೇನೆ.ಅಧಿಕಾರಿಗಳಿಗೆ ಆತ್ಮಸಾಕ್ಷಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಜನ ಬದಲಾಗಬೇಕು ನಂತರ ಸಮಾಜ ಬದಲಾಗಲು ಸಾಧ್ಯ.
ಕೋಲಾರ ಜಿಲ್ಲೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರμÁ್ಟಚಾರ ನಿಯಂತ್ರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ಕಡತಗಳ ಪರಿಶೀಲನೆ ನಡೆಸಿದರು. ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ತಾಲ್ಲೂಕಿನ ಜೆ. ತಿಮ್ಮಸಂದ್ರ, ಆರಿಕುಂಟೆ, ದಳಸನೂರು, ಮಾಸ್ತೇನಹಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಸರ್ಕಾರದ ಪ್ರಮುಖ ಯೋಜನೆಗಳಾದ ನರೇಗಾ ಅನುμÁ್ಠನ, ಕುಡಿಯುವ ನೀರು ಯೋಜನೆಗಳ ಪ್ರಗತಿ, ನೈರ್ಮಲ್ಯ ನಿರ್ವಹಣೆ ಮತ್ತು ಕಂದಾಯ ವಸೂಲಾತಿಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಕಡತಗಳ ಪರಿಶೀಲನೆ ವೇಳೆ ಆಡಳಿತ ನಿರ್ವಹಣೆಯಲ್ಲಿನ ಹಲವು ಗಂಭೀರ ಲೋಪದೋಷಗಳು ಬೆಳಕಿಗೆ ಬಂದವು. ಮುಖ್ಯವಾಗಿ, ಕೆಲ ಯೋಜನೆಗಳ ಅನುμÁ್ಠನದಲ್ಲಿನ ವಿಳಂಬ ಮತ್ತು ಕಡತ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಬಿ. ವೀರಪ್ಪ ಅವರು, “ಸಾರ್ವಜನಿಕರ ಹಣದ ಸದ್ಬಳಕೆ ಮತ್ತು ಪಾರದರ್ಶಕ ಆಡಳಿತಕ್ಕೆ ಅಡೆತಡೆ ಉಂಟುಮಾಡುವ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು” ಎಂದು ಖಡಕ್ ಎಚ್ಚರಿಕೆ ನೀಡಿದರು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಜಾರಿಗೊಳಿಸುವಂತೆ, ಹಾಗೂ ಕಡತಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದೇ ಸಮಯದಲ್ಲಿ ದಳಸನೂರು ಗ್ರಾಮದ ವಸತಿನಿಲಯ, ಆಸ್ಪತ್ರೆ, ಸರ್ಕಾರಿ ಶಾಲೆಗೆ ಬೇಟಿ ನೀಡಿ ಸ್ವಚ್ಚತೆ ಕಾಪಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದರು. ಮಾಸ್ತೇನಹಳ್ಳಿ ಗ್ರಾ.ಪಂ ಸಂಬಂದಿಸಿದಂತೆ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿ ಸಾರ್ವಜನಿಕರ ಸಹಿ ಪಡೆದು ಆ ಭೂಮಿಯನ್ನು ಗ್ರಾ.ಪಂ ಅದ್ದುಬಸ್ತುನಲ್ಲಿ ಇಡಲು ಪಿಡಿಒರವರಿಗೆ ಸೂಚಿಸಿದರು.
ಪಟ್ಟಣದ ಬಾಲಕರ , ಬಾಲಕೀಯರ ವಸತಿ ನಿಲಯಗಳಿಗೆ ಬೇಟಿ ನೀಡಿ ಅಲ್ಲಿನ ಕೆಲ ಅವವ್ಯವಸ್ಥೆಗಳಿಗೆ ಅಲ್ಲಿನ ಅಧಿಕಾರರಿಗಳಿಗೆ ಸೂಚನೆ ನೀಡಿ ಬಂದಿದ್ದೇನೆ. ಜಿಲ್ಲೆಯಲ್ಲಿ 440 ಸುಮೋಟೋ ಕೇಸ್ ಹಾಕಲಾಗಿತ್ತು ಅದರಲ್ಲಿ ಈಗಾಗಲೇ 250 ಪರಿಹಾರ ಸಿಕ್ಕಿದ್ದು, ಈವತ್ತು 7 ಸುಮೋಟೋ ಕೇಸ್ ಹಾಕಲಾಗಿದ್ದು, 2 ತಿಂಗಳಿನಿಂದ 6 ತಿಂಗಳು ಗಡುವ ನೀಡಲಾಗಿದ್ದು, ಅದರಲ್ಲಿ ಸಂಬಂದಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು.
ಲೋಕಾಯುಕ್ತ ನ್ಯಾಯಮೂರ್ತಿ ಅರವಿಂದ್, ಜಿಲ್ಲಾ ಲೋಕಾಯುಕ್ತ ಎಸ್ಪಿ ಅಂಟನಿಜಾನ್, ಪೊಲೀಸ್ ಇಲಾಖೆ ಡಿವೈಎಸ್ಪಿ ಮೊನಿಶಾ, ಡಿವೈಎಸ್ಪಿಗಳಾದ ಟಿ.ಸಿ.ವೆಂಕಟೇಶ್, ಅನಿಲ್ಕುಮಾರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಕೆ.ಸರ್ವೆಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ರಾಜೇಶ್, ವಾಟರ್ ಬೋರ್ಡ್ ಎಇಇ ಸುರೇಶ್, ಬೆಸ್ಕಾಂ ಇಲಾಖೆ ಇಂಜಿನೀಯರ್ ನಂಜುಂಡೇಶ್ವರ, ಪಿಎಸ್ಐ ಜಯರಾಮ್, ಲೋಕಾಯುಕ್ತಾ ಇನ್ಸ್ಪೆಕ್ಟರ್ಗಳಾದ ಆಂಜನಪ್ಪ, ರೇಣುಕಾ, ಪ್ರದೀಪ್ಪೂಜಾರಿ, ಜೆ.ತಿಮ್ಮಸಂದ್ರ ಗ್ರಾ.ಪಂ. ಪಿಡಿಒಗಳಾದ ಕಲ್ಯಾಣಿ, ವಿನೋಧ, ಆರಿಕುಂಟೆ ಪಿಡಿಒ ಶಂಕರಪ್ಪ, ದಳಸನೂರು ಪಿಡಿಒ ಮಂಗಳಾಂಬ, ಮಾಸ್ತೇನಹಳ್ಳಿ ಪಿಡಿಒ ಕೆ.ಪಿ. ಶ್ರೀನಿವಾಸರೆಡ್ಡಿ, ಲೋಕಾಯುಕ್ತ ಇಲಾಖೆ ಸಿಬ್ಬಂದಿಗಳಾದ ಎಸ್.ಆರ್.ದೇವಪ್ಪ, ಶ್ರೀನಾಥ್, ನಾಗಭೂಷಣ್, ರಮೇಶ್, ಕಿಶೋರ್, ಶಿವಶಂಕರ್, ವಾಸದೇವ್, ಅಜಯ್, ಮಂಜಪ್ಪ, ನಾಗವೇಣಿ, ಯಶೋದ . ಮಾನಸ, ಪವಿತ್ರ, ಗೀತ, ಮುನಿರತ್ನ, ಶೋಭಾ, ತಾ.ಪಂ ಎಡಿ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್ ಉಪಸ್ಥಿತಿರಿದ್ದರು.


