

ಕುಂದಾಪುರ,ಮಾ,3; “ಇವತ್ತು ಯೇಸು ಕ್ರಿಸ್ತ್ರರು ಮೂರು ಸಂಸ್ಕಾರಗಳನ್ನು ಸ್ಥಾಪಿಸಿದ ಬಹಳ ಪವಿತ್ರವಾದ ದಿನ. ಒಂದು ಯಾಜಕತ್ವದ ದಿನ ಯಾಜಕರು ಮನುಷ್ಯ ಮಧ್ಯದಿಂದ ಆರಿಸುವನು, ಆತ ದೇವ ಮತ್ತು ಮನುಸ್ಯರ ಮಧ್ಯೆ ಸೇವೆ ನೀಡುವನಾಗಿದ್ದಾನೆ, ಯಾಜಕನಾಗಿ ಒಂದು ಸಲ ತೈಲದಿಂದ ಆಶಿರ್ವಾದಿಸಲ್ಪಟ್ಟ ಯಾಜಕನು ಎಂದೆಂದಿಗೂ ಯಾಜಕನಾಗಿರುವನು. ಮತ್ತೊಂದು ಕೊನೆಯ ಭೋಜನ, ನಾನು ಜಗತ್ತಿನ ಮುಕ್ತಿಗಾಗಿ ನನ್ನನ್ನು ಬಲಿದಾನ ಅರ್ಪಿಸಿದ ನೆನಪಿಗಾಗಿ, ನನ್ನ ದೇಹವೇ ಈ ರೊಟ್ಟಿಯೆಂದು ನಂಬಿ, ಭೋಜನ ರೂಪದ ಬಲಿದಾನವನ್ನು ನನ್ನ ನೆನಪಿಗಾಗಿ ದಿನ ನಿತ್ಯ ಅರ್ಪಿಸಿರಿ, ಎಂದು ಹೇಳಿ ಯೇಸು ಕ್ರಿಸ್ತರು ತನ್ನ ಅನುಯಾಯಿಗಳಿಗೆ ಬಲಿದಾನದ ಶಾಸ್ವತ ಕಾಣಿಕೆ ನೀಡಿದ್ದಾರೆ. ಎಂದು ಹೇಳಿದರು. ಯೇಸು ಕ್ರಿಸ್ತರ ಮತ್ತೊಂದು ಸಂಸ್ಕಾರ ಪಾದ ತೊಳೆಯುವುದು, ಯೇಸು ಕ್ರಿಸ್ತರು ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಇತರರನ್ನು ಪ್ರೀತಿಸಬೇಕು, ಪ್ರೀತಿ ಅಂದರೆ ತ್ಯಾಗ, ಸೇವೆ, ಒಳ್ಳೆತನ, ನೀವು ಸ್ವರ್ಗ ರಾಜ್ಯ ಬೇಕು ಅನ್ನುವರು, ಎಲ್ಲರಕಿಂತ ಸಣ್ಣವರಾಗಬೇಕು, ಅದಕ್ಕೆ ಅಂದಿನ ಕಾಲದಲ್ಲಿ ಗುಲಾಮರು ಧನಿಗಳ ಪಾದ ತೊಳೆಯುತಿದ್ದರು, ಹಾಗೆ ಯೇಸು ಕ್ರಿಸ್ತರು ಗುಲಾಮರಂತೆ ಸಣ್ಣವರಾಗಿ ಶಿಸ್ಯರ ಪಾದ ತೊಳೆದು ನಮಗೆ ಮಾರ್ಗದರ್ಶನ ನೀಡಿದ್ದಾರೆ, ಪಾದ ತೊಳೆಯುವುದು ಒಂದು ನಿದರ್ಶನ ಮಾತ್ರ, ಯೇಸು ಕ್ರಿಸ್ತರು ಪಾದ ತೊಳೆದ ಕಾರಣ, ನಾವು ಸಣ್ಣವರಾಗಿ ಸೇವೆ ಸಲ್ಲಿಸಲಿಕ್ಕಾಗಿ ನಾವು ಇತರರಿಗೆ ಸಹಾಯ, ದಾನ, ಧರ್ಮ, ಕರುಣೆ, ಹೀಗೆ ಒಳ್ಳೆಯ ಕೃತ್ಯಳನ್ನು ಮಾಡಲಿಕ್ಕೆ ನಮಗೆ ಯೇಸುಕ್ರಿಸ್ತರು ನಮಗೆ ಸಂದೇಶ ನೀಡಿರುವುದಾಗಿ’ ಅ।ವಂ।ಪೌಲ್ ರೇಗೊ ಹೇಳಿದರು.
ಅವರು ಮಾ. 2 ರಂದು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಕೊನೆಯ ಭೋಜನದ ಹಬ್ಬದ ಧಾರ್ಮಿಕ ಸಂಸ್ಕಾರಗಳ ಮುಖ್ಯ ಯಾಜಕರಾಗಿ ಸಂದೇಶ ನೀಡಿದರು.
ಕುದಾಪುರ ಚರ್ಚ್ ಪರಿಧಿಯಲ್ಲಿನ ಆರಿಸಿದ ಪ್ರತಿನಿಧಿಗಳ, ವೇದಿ ಸೇವಕರ, ಮತ್ತು ಸಾಮಾನ್ಯ ಜನರ ಪಾದ ತೊಳೆಯುವ ಆಚರಣೆ ನೆರವೇರಿಸಿ, ಪರಮ ಪ್ರಸಾದದ ಆರಾಧನೆಯನ್ನು ನೆಡಸಿಕೊಟ್ಟರು. ಈ ಪ್ರಾರ್ಥನ ವಿಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.




































































