

ಶ್ರೀನಿವಾಸಪುರ : ಈಗಾಗಲೇ ಅರಣ್ಯ ಇಲಾಖೆ ಹಾಕಿರುವ ಸಿಮೆಂಟ್ ಪಿಲ್ಲರ್ಗಳನ್ನು ಗುರುವಾರದೊಳಗೆ ತೆರವುಗೊಳಿಸದಿದ್ದರೆ ಸ್ವಇಚ್ಛೆಯಿಂದಲೇ ರೈತರೇ ತೆರವುಗೊಳಿಸುತ್ತಾರೆ ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಎಚ್ಚರಿಸಿದರು.
ಭೂಸಂತ್ರಸ್ಥ ಹೋರಾಟ ಸಮಿತಿಯ ವತಿಯಿಂದ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿವರೆಗೆ ರೈತರು ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ರೈತರ ಜಮೀನುಗಳಿಗೆ ಅತಿಕ್ರಮ ಪ್ರವೇಶ ಮಾಡಿ ಉತ್ತರ ಮಾವು ತೋಟಗಾರಿಕಾ ಬೆಳೆಗಳು ಸೇರಿದಂತೆ ಟೊಮೆಟೊ, ಕೋಸು, ಕ್ಯಾರೆಟ್ ಮುಂತಾದ ತರಕಾರಿ ಬೆಳೆಗಳನ್ನು ದೌರ್ಜನ್ಯದಿಂದ ನಾಶಪಡಿಸಲಾಗಿದೆ. ಇದರಿಂದ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.
ಬೆಳೆ ರಕ್ಷಿಸಲು ಮುಂದಾದ 24 ರೈತರ ಮೇಲೆ ಎಫ್ಐಆರ್ ದಾಖಲಿಸಿ ರಾತ್ರೋರಾತ್ರಿ ಬಂಧಿಸುವ ಮೂಲಕ ಅರಣ್ಯ ಇಲಾಖೆ ಕರ್ನಾಟಕ ಭೂಸುಧಾರಣ ಹಾಗೂ ಕಂದಾಯ ಕಾಯ್ದೆಗಳನ್ನು ಉಲ್ಲಂಘಿಸಿದೆ. ಬಗರ್ಹುಕ್ಕುರು ಸಾಗುವಳಿದಾರರ ಹಕ್ಕುಗಳಿಗೆ ಗಂಭೀರ ಧಕ್ಕೆ ಉಂಟಾಗಿದೆ. ಇಂತಹ ಅಮಾನವೀಯ ಕ್ರಮಗಳನ್ನು ಭೂಸಂತ್ರಸ್ಥ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ರೈತರ ತಂಟೆಗೆ ಬಂದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಕೋಮುಲ್ ಅಡ್ಡಗಲ್ ಕ್ಷೇತ್ರದ ನಿರ್ದೇಶಕ ಕೆ.ಕೆ. ಮಂಜುನಾಥ್ ಮಾತನಾಡಿ, ದೇಶದ ಬೆನ್ನೆಲುಬಾದ ರೈತರಿಗೆ ತೊಂದರೆ ನೀಡಿದರೆ ಯಾವುದೇ ಕಾರಣಕ್ಕೂ ದೇಶ ಉದ್ದಾರವಾಗುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿ, ರೈತ ಅನ್ನದಾತ. ಸರ್ಕಾರಗಳ ನೀತಿಗಳು ಹಾಗೂ ಕಾರ್ಪೋರೇಟಿಕರಣದ ಕೃಷಿ ಬೆಂಬಲಿಸುವ ಧೋರಣೆಯಿಂದ ರೈತರು ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಸಿಎಫ್ ಗಿರೀಶ್, ಇನ್ನುಮುಂದೆ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಯಿಂದ ರೈತರ ಭೂಮಿಯನ್ನು ವಶಕ್ಕೆ ಪಡೆಯುವುದಿಲ್ಲ. ಇಲಾಖೆಗೆ ಸಂಬಂಧಿಸಿದ ಎಲ್ಲಾ ಭೂದಾಖಲೆಗಳನ್ನು ಎಸ್ಐಟಿ ಸಮಿತಿಗೆ ವರದಿ ರೂಪದಲ್ಲಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನಾ ನಿರತರು ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಚರ್ಚೆ ನಡೆಸಿ ಪ್ರತಿಭಟನೆಯನ್ನು ಶಾಂತಗೊಳಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ಎಸ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಯಶ್ವಂತ್, ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್, ವಿವಿಧ ಸಂಘಟನೆ ಮುಖಂಡರಾದ ಬಂದರಹಳ್ಳಿ ಮುನಿಯಪ್ಪ, ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ, ಬದ್ರಿನರಸಿಂಹ, ಶಿವಪುರ ಗಣೇಶ್, ಶಂಕರ್, ಎಸ್.ಜಿ. ಜಗದೀಶ್ ಕುಮಾರ್, ಜೆ.ವಿ. ಕಾಲೋನಿ ವೆಂಕಟೇಶ್, ಎಸ್.ಜಿ.ವಿ. ವೆಂಕಟೇಶ್, ಗುರಪ್ಪ, ವಿನೋದ್, ಡಿಎಸ್ಆರ್, ಶ್ರೀನಾಥರೆಡ್ಡಿ, ಗುರುಪ್ರಸಾಧ್, ಹೂಹಳ್ಳಿ ಕೃಷ್ಣಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ಸಾಧಿಕ್ ಅಹ್ಮದ್, ಬಿ.ಕೆ. ಶ್ರೀನಿವಾಸ್, ಕೆಪಿಆರ್ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ. ಸೈಯದ್ ಫಾರುಕ್, ಚಲ್ದಿಗಾನಹಳ್ಳಿ ಈರಪ್ಪ, ರಾಮಾಂಜಮ್ಮ, ನಾರಾಯಣಕುಮಾರ್, ನರಸಿಂಹಮೂರ್ತಿ, ಮಂಜುನಾಥರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಗೋರವನಕೊಳ್ಳ ಹಾಗೂ ಪಿಎಸ್ಐ ಜಯರಾಮ್ ಉಪಸ್ಥಿತರಿದ್ದರು.


