

ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 2025- 26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ನ ಪದಗ್ರಹಣ ಸಮಾರಂಭವು ಇತ್ತೀಚೆಗೆ ಜರುಗಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗ್ರತಿ ಮೂಡಿಸಲು ಸಂಸ್ಥೆಯು ‘ಗೋ ಗ್ರೀನ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರವಿಂದ ಮೋಟಾರ್ಸ್ ನ ನಿರ್ದೇಶಕರಾದ ಆರೂರ್ ಅರ್ಜುನ್ ರಾವ್ ಅವರು ವಿದ್ಯಾರ್ಥಿ ಪರಿಷತ್ ಗೆ ನೂತನವಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಅವರ ಯಶಸ್ಸಿನ ಗುಟ್ಟನ್ನು ತಿಳಿಸಿ, ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ, ಯಶಸ್ಸು ನಿಧಾನವಾಗಿಯಾದರೂ ಬಂದೇ ಬರುತ್ತದೆ ಎಂದು ಹಿತವಚನ ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ರೋಹನ್ ಡಿ’ಅಲ್ಮೇಡಾ, ನಾಯಕರಾದವರು ಸಿಂಹದಂತೆ ಧೈರ್ಯ, ಘರ್ಜನೆ ಮತ್ತು ಸವಾಲುಗಳನ್ನು ಎದುರಿಸುವ ನಾಯಕತ್ವದ ಗುಣಗಳನ್ನು ಹೊಂದಿರಬೇಕೆಂದು ತಿಳಿಸಿದರು. ನಮ್ಮನ್ನು ನಾವೇ ಸ್ವಯಂ ನಿರ್ಮಿತ ನಾಯಕರಾನ್ನಾಗಿ ಪರಿವರ್ತಿಸಬೇಕೆಂದು ತಿಳಿಸಿ, ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಬೇಕೆಂದು ಒತ್ತಿ ಹೇಳಿದರು .
ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳಾದ 12ನೇ ತರಗತಿಯ ಸ್ವಿಥಿನ್ ಲೋಬೊ ಹಾಗೂ 10ನೇ ತರಗತಿಯ ಸಾದ್ವಿ ಸಂದೇಶ್ ರೈ ಮುಂದಿನ ಶೈಕ್ಷಣಿಕ ವರ್ಷದ ತಮ್ಮ ಯೋಜನೆಗಳನ್ನು ವಿವರಿಸಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಿನ್ಮಯ್ ಸಚ್ಚಿದಾನಂದ ಸ್ವಾಗತಿಸಿದರು, ಆಯಿಷಾ ಯುಸ್ರ ಧನ್ಯವಾದವಿತ್ತರು. ವೆನೆಷಾ ಮತ್ತು ಆಂಡ್ರಿಯಾ ನಿರೂಪಿಸಿದರು.
Mangluru – St Aloysius Gonzaga School Holds Investiture Ceremony 2025-2026

Mangluru; St Aloysius Gonzaga School, Mangaluru, hosted its grand Investiture Ceremony on 27 June 2025, to formally induct the newly elected Student Council for the academic year 2025–26. The Chief Guest for the day, Mr Aroor Arjun Rao, Director of Arvind Motors Pvt Ltd and Supreme Auto Dealers Pvt Ltd, graced the occasion and delivered a motivational address, urging the young leaders to lead with integrity, discipline, and vision.
In an inspiring address, Chief Guest Mr. Rao encouraged students to trust themselves and persevere, sharing his own experiences in motor sports. The Principal reinforced this message, highlighting key leadership qualities and urging students to be courageous and proactive, drawing lessons from Mr. Rao’s achievements and parental examples. He also emphasized that every challenge has a solution, underscoring the importance of teamwork and collaboration in achieving success.











