

ಕುಂದಾಪುರ; ರಂಗೋಲಿಯಲ್ಲಿ ಮೂಡಿದ ಕೆ.ಕೆ. ಹೆಬ್ಬಾರರ ಭಾವ ಚಿತ್ರ ಏಪ್ರಿಲ್ 15 ರ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ವತಿಯಿಂದ ಇಲ್ಲಿನ ಕಲಾವಿದ್ಯಾರ್ಥಿಯರಾದ ಕೃತಿ ಕೆ. ದೇವಾಡಿಗ, ಸಾತ್ವಿಕ್ ಆರ್, ರಿಶು ಜೆ. ಶೆಟ್ಟಿಯವವರಿಂದ ರಚಿತವಾದ ರಂಗೋಲಿ ಕಲಾಕೃತಿ. ಸುಮಾರು 112 ಚ.ಅಡಿ ವಿಸ್ತೀರ್ಣದ ಈ ಕೃತಿಯು ಉಡುಪಿಯ ಖ್ಯಾತ ಮತ್ತು ಪದ್ಮಶ್ರೀ, ಪದ್ಮ ವಿಭೂ಼ಷಣ ಚಿತ್ರಕಲಾವಿದರಾದ ಕೆ.ಕೆ. ಹೆಬ್ಬಾರರ ಸ್ಮರಣಾರ್ಥವಾಗಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಗೌರವಾರ್ಥವಾಗಿ ಕಪ್ಪು ಬಿಳುಪಿನ ರಂಗೋಲಿಯಲ್ಲಿ ರಚಿಸಲಾಗಿದೆ ಇದನ್ನು ನಾಳೆ ಏಪ್ರಿಲ್ 15 ರಂದು ಪ್ರದರ್ಶನ ಆಗಲಿದೆ. ಕಲಾ ಅಸಕ್ತರಿಗೆ ಕಲಾವಿದ ಹರೀಶ್ ಸಾಗಾ ಮತ್ತು ತಂಡ ಸ್ವಾಗತಿಸಿದೆ.
ಪ್ರದರ್ಶನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆ ತನಕ ಇರುತ್ತದೆ






