

ಮಂಗಳೂರು ಅಕ್ಟೋಬರ್ 30:ಸಂತ ಅಲೋಶಿಯಸ್ ಗೊನ್ಝಾಗ ಶಾಲೆ, ಮಂಗಳೂರು ಇದರ ಕಲಾ ಶಿಕ್ಷಕರಾದ ಶ್ರೀ ಜೀವನ್ ಸಾಲ್ಯಾನ್ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ 2025–26ನೇ ಸಾಲಿನ 53ನೇ ವಾರ್ಷಿಕ ಕಲಾ ಪ್ರಶಸ್ತಿಗೆ ಭಾಜನರಾಗುವ ಮೂಲಕ ಶಾಲೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದಾರೆ.
ಅವರು ರಚಿಸಿದ ‘ಪರಾಗಸ್ಪರ್ಶ – 24°C’ (Pollination – 24°C) ಎಂಬ ಕಲಾಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ್ದು, ಇದರೊಂದಿಗೆ ₹25,000 ನಗದು ಬಹುಮಾನವನ್ನು ಪಡೆದಿದ್ದಾರೆ. 2026ರ ಅಕ್ಟೋಬರ್ 30ರಂದು ಗದಗದ ಸಂಸ್ಕೃತಿ ಕನ್ವೆನ್ಷನ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತಿವರ್ಷ ಕಲಾವಿದರ ಸೃಜನಶೀಲತೆ, ಕಲಾತ್ಮಕ ಪ್ರತಿಭೆ ಹಾಗೂ ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
ಶ್ರೀ. ಜೀವನ್ ಸಾಲ್ಯಾನ್ ಅವರ ಈ ಸಾಧನೆಯು ಶಾಲೆಯ ಪಾಲಿಗೆ ಹೆಮ್ಮೆಯ ಕ್ಷಣವಾಗಿದ್ದು, ಕಲಾ ಕ್ಷೇತ್ರದಲ್ಲಿ ಅವರಿಗಿರುವ ಆಸಕ್ತಿ, ಪರಿಶ್ರಮ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಅವರ ಈ ಗೌರವವು ವಿದ್ಯಾರ್ಥಿಗಳಲ್ಲಿಯೂ ಕಲಾಭಿರುಚಿ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದೆ.
ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ. ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಉಪ ಪ್ರಾಂಶುಪಾಲರಾದ ಲಾರೆಲ್ ಡಿ.ಸೋಜಾ, ಮತ್ತು ಅಪರ್ಣಾ ಸುರೇಶ್,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಶ್ರೀ .ಜೀವನ್ ಸಾಲ್ಯಾನ್ ಅವರನ್ನು ಈ ಗೌರವಯುತ ಸಾಧನೆಗಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ಕಲಾ ಪಯಣವು ಇನ್ನಷ್ಟು ಯಶಸ್ಸಿನ ಶಿಖರಗಳನ್ನು ತಲುಪಲಿ ಎಂದು ಶುಭ ಹಾರೈಸಿದ್ದಾರೆ.
Art Teacher Jeevan Salian Honoured with Karnataka Lalithakala Academy Award-A Proud moment for St Aloysius Gonzaga School

Adding another feather to the cap of St Aloysius Gonzaga School, Mangaluru, art teacher Mr Jeevan Salian has been honoured with the prestigious 53rd Annual Art Award by the Karnataka Lalithakala Academy, Bengaluru, for the year 2025–26.
He received a cash prize of ₹25,000 for his artwork titled ‘Pollination – 24°C’, in recognition of his artistic creativity and excellence. The award was presented on October 30, 2026, at Sanskriti Conventions, Gadag.
The Karnataka Lalithakala Academy, functioning under the Department of Kannada and Culture, Government of Karnataka, recognises and promotes artistic talent and creative expression through its annual awards.
Mr Salian’s achievement is a moment of pride for the school and stands as a testament to his dedication to the field of art. His recognition also serves as an inspiration to young learners to explore their creativity and pursue artistic excellence.
The management, Principal Rev.Fr Rohan D Almedia SJ, staff and students of St Aloysius Gonzaga School congratulate Mr Jeevan Salian on this prestigious achievement and wish him continued success in his artistic journey.



