

ಗಂಗೊಳ್ಳಿ, ನವಂಬರ್ 1, 2026 ರಂದು ಭಾನುವಾರ ಬೆಳಿಗ್ಗೆ ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿನಿಯರು ದೀಪವನ್ನು ಕರದಲ್ಲಿ ಹಿಡಿದು “ಹಚ್ಚೇವು ಕನ್ನಡದ ದೀಪ” ಎಂಬ ಗಾಯನವನ್ನು ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿ ನಾಯಕ ನವೀನ್ “ಜಗತ್ತಿನಲ್ಲಿ ಕನ್ನಡ ನಾಡಿನ ವೈಶಿಷ್ಟ್ಯತೆಯನ್ನು” ಭಾಷಣದ ಮೂಲಕ ಅರ್ಥಪೂರ್ಣವಾಗಿ ತಿಳಿಸಿದನು. ಜಂಟಿ ಕಾರ್ಯದರ್ಶಿ ಭ. ಗ್ರೇಸಿ ಲೋಬೋ ಮಾತನಾಡಿ ” ಹೆತ್ತ ತಾಯಿ ಹೊತ್ತ ನಾಡಿನ ಋಣ ತೀರಿಸಲು ಸದಾ ಪ್ರಯತ್ನ ಪಡಬೇಕು ” ಎಂದರು. ಮುಖ್ಯ ಶಿಕ್ಷಕಿ ಭ. ಕ್ರೆಸೆನ್ಸ್ “ರಾಜ್ಯೋತ್ಸವ”ದ ಮಹತ್ವವನ್ನು ತಿಳಿಸಿದರು. ಕನ್ನಡ ‘ರಾಜ್ಯೋತ್ಸವದ ಡಾಕ್ಯುಮೆಂಟರಿ ‘ಯನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು. ನಾಡಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ಸಿಹಿ ತಿಂಡಿ ವಿತರಿಸಲಾಯಿತು. ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಭ. ವಿಜಯ, ಶಿಕ್ಷಕ -ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.





