


ಶ್ರೀನಿವಾಸಪುರ : ಕನ್ನಡನಾಡು ನುಡಿಗಾಗಿ ಹೋರಾಡಿದ ಮಹನೀಯರ ಸ್ಮರಣೆಯೊಂದಿಗೆ ಅವರ ಆದರ್ಶ ಮೌಲ್ಯಗಳಡಿ ಉತ್ತಮ ಶಿಕ್ಷಣ ಪಡೆಯಬೇಕೆಂದು ಮಕ್ಕಳಿಗೆ ಎಂದು ಶಾಸಕ.ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು. ಪಟ್ಟಣ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ೭೧ ನೇ ಕನ್ನಡರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ಕ್ಷೇತ್ರ ಜನತೆ ಸೇವಕ ನಾನು ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರಲು ದುಡಿಯುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಮುಳಬಾಗಿಲು ವೃತ್ತದಿಂದ ಪುಂಗನೂರು ಕ್ರಾಸ್ನ ಶನೇಶ್ಚರ ದೇವಾಲಯದ ವರೆಗೆ ೬ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾರ್ಯವು ಕೇವಲ ಒಂದು ತಿಂಗಳಲ್ಲಿ ಪ್ರಾರಂಭವಾಗುತ್ತದೆ.
ಈಗಾಗಲೇ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲದ ಕಲ್ಲಿನ ಮಹಾದ್ವಾರಕ್ಕಾಗಿ ೧.೫೦ ಕೋಟಿ ವೆಚ್ಚದಲ್ಲಿ ನಿರ್ಮಣವಾಗುತ್ತಿದೆ , ಅಲ್ಲದೆ ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಪುರ್ನನಿರ್ಮಾಣಕ್ಕೆ ಬೇಕಾದ ಅನುದಾನವನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ . ಅಲ್ಲದೆ ಕ್ಷೇತ್ರದಲ್ಲಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಬೇಕಾದ ಅನುದಾನಗಳನ್ನು ನೀಡಲಾಗಿದೆ ಇನ್ನು ಕ್ಷೇತ್ರ ಜನತೆ ಧಾರ್ಮಿಕ ಹಾಗು ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ಅದಕ್ಕೂ ಸಹ ವ್ಯವಸ್ಥೆ ಮಾಡಿಕೊಡುತ್ತೇನೆ. ನಾನು ಮಾತು ಹೇಳಿದಂತೆ ನಡೆಯುತ್ತೇನೆ.
ತಹಶೀಲ್ದಾರ್ ಸುಧೀಂದ್ರ ಮಾತನಾಡಿ ನಾವು ನಮ್ಮ ಬಾಷೆಯನ್ನು ಉಳಿಸಿ ಬೆಳುಸುವಂತೆ ಮಾಡಬೇಕಾಗಿದೆ ಇಂತಹ ಸಣ್ಣಪುಟ್ಟ ವಿಷಯಗಳಲ್ಲಿ ಕನ್ನಡವನ್ನು ಜಾರಿಗೆ ತರುವ ಮೂಲಕ ನಾವು ನಮ್ಮ ತನವನ್ನು ಪೋಷಿಸದಂತೆ ಆಗುತ್ತದೆ ಎಂದು ತಿಳಿಸುತ್ತಾ, ಕನ್ನಡ ಬಾಷೆಯನ್ನು ಉಳಿಸಿಬೆಳಸುವ ನಿಟ್ಟಿನಲ್ಲಿ ನಮ್ಮ ಅನೇಕ ಮಹನೀಯರು ಹೋರಾಡಿದ್ದು, ಮಹನೀಯರು ಉಳಿಸಿ,ಬೆಳಸಿದ ಕನ್ನಡ ಬಾಷೆಯನ್ನು ಉಳಿಸಿ ಬೆಳುಸುವಂತೆ ಮಕ್ಕಳಲ್ಲಿ ವಿನಂತಿಸುತ್ತಾ ಮಕ್ಕಳೆಲ್ಲರು ತಮ್ಮ ಸ್ನೇಹಿತರು ಹಾಗು ಪೋಷಕರೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡವನ್ನು ಉಳಿಸಬೇಕಾಗಿದೆ.
ಇಓ.ಕೆ.ಸರ್ವೇಶ್, ಪ್ರಬಾರಿ ಬಿಇಓ.ಎನ್.ಶ್ರೀಧರ್, ಪ್ರಭಾರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಲ್. ವೆಂಕಟಾಚಲಪತಿ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಪೊಲೀಸ್ ಇನ್ಸ್ಪೆಕ್ಟರ್ ಶಂಕರಚಾರಿ,ಇಸಿಓಗಳಾದ ಸುಂಬ್ರಮಣಿ, ಶ್ರೀನಿವಾಸ್, ಅಬಕಾರಿ ಅಧಿಕಾರಿ ಪುಷ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀನಿವಾಸ್,ಸಿಆರ್ಪಿ. ಸಂಘದ ಅಧ್ಯಕ್ಷ ವೇಣುಗೋಪಾಲ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಟಿಎಚ್ಒ .ಸ್ವರೋತ್ತಮ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

