

ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಶ್ರೀ 600 ರಲ್ಲಿ 591 ಅಂಕ ಪಡೆದು ರಾಜ್ಯದಲ್ಲಿ 10ನೇ ರ್ಯಾಂಕ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ, ಪ್ರಥ್ವಿರಾಜ್ ಗಾಣಿಗ 600ರಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 11ನೇ ರ್ಯಾಂಕ್ ಪಡೆದು, ವೈಷ್ಣವಿ 600ರಲ್ಲಿ 588 ಅಂಕ ಪಡೆದು ಕಾಲೇಜಿಗೆ ಹೆಸರು ತಂದಿದ್ದಾರೆ.

ವಾಣಿಜ್ಯ ವಿಭಾಗ ಶೇಕಡಾ 97.14% ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 96.72% ಫಲಿತಾಂಶ ಲಭಿಸಿದ್ದು, ಶೇಕಡಾ 96.88% ಕಾಲೇಜಿನ ಫಲಿತಾಂಶವಾಗಿದೆ.
ಕನ್ನಿಕಾ 600ರಲ್ಲಿ 580 ಹಾಗೂ ಐಶ್ವರ್ಯ 600ರಲ್ಲಿ 579 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕಾಲೇಜಿನ ಫಲಿತಾಂಶದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 34, ಪ್ರಥಮ ಶ್ರೇಣಿಯಲ್ಲಿ 52 ವಿದ್ಯಾರ್ಥಿಗಳು ತೇಗರ್ಡೆ ಹೊಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಂಚಾಲಕರಾದ ವಂ।ಪೌಲ್ ರೇಗೊ, ಪ್ರಾಂಶುಪಾಲರಾದ ರೇಶ್ಮಾ ಫೆರ್ನಾಂಡಿಸ್, ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ















