

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ರಂಗೋಲಿ ಕಲಾ ಪರಿಷತ್ತ್ (ರಿ.) ಹಾಗೂ ‘ಕುಂದಪ್ರಭ’ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಹಾಗೂ ರಂಗೋಲಿ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಪರಿಸರದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಸಾಂಪ್ರದಾಯಿಕ ಬಣ್ಣದ ಹುಡಿಗಳ ರಂಗೋಲಿ ಅಲ್ಲದೇ ಹೂವು, ದವಸ ಧಾನ್ಯ ಇತ್ಯಾದಿ ಪರಿಕರಗಳ ಮೂಲಕ ವೈಶಿಷ್ಟ್ಯಪೂರ್ಣ ರಂಗೋಲಿ ರಚಿಸಲು ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗ, ಪ. ಪೂ. ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹಿರಿಯ ವಿಭಾಗದ ಸ್ಪರ್ಧೆ ಇರುತ್ತದೆ.
ಸಾರ್ವಜನಿಕ ಸ್ಪರ್ಧೆಗಳಲ್ಲಿ ಯಾರೂ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಕಲಾವಿದರಿಗೆ 4 ಅಡಿ ಚಚೌಕದ ಸ್ಥಳಾವಕಾಶ ನೀಡಲಾಗುತ್ತಿದ್ದು, ರಂಗೋಲಿ ಹುಡಿಯನ್ನು ಸ್ಪರ್ಧಾಳುಗಳೇ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸದೇ ರಂಗೋಲಿ ಪ್ರದರ್ಶನ ನೀಡುವ ಕಲಾವಿದರಿಗೆ ಸ್ಪರ್ಧೆಯ ನಿಯಮಗಳು ಅನ್ವಯವಾಗದು. ಕಲಾವಿದರೇ ಪರಿಕರಗಳನ್ನು ವ್ಯವಸ್ಥೆಮಾಡಿಕೊಳ್ಳಬೇಕು. ಆಯ್ಕೆಯಾದ ಉತ್ತಮ ರಂಗೋಲಿಗಳಿಗೆ ನಗದು ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ. ಭಾಗವಹಿಸಿದವರೆಲ್ಲರಿಗೂ ಶಿಫಾರಸು ಪತ್ರ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು 30-11-2026ರ ರೊಳಗೆ ಡಾ| ಭಾರತಿ ಮರವಂತೆ 9845856822 ಅಧ್ಯಕ್ಷರು ರಂಗೋಲಿ ಕಲಾ ಪರಿಷತ್ತ್, ‘ಕುಂದಪ್ರಭ’ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್, ಕುಂದಾಪುರ ಈ ವಿಳಾಸಕ್ಕೆ ಪತ್ರ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

