

ಯಾದಗಿರಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಜಾಗೊ೦ಡಿದ್ದ ಬಳಿಕ ಊರಿಗೆ ತೆರಳಲು ವಾಹನ
ಸಿಗದಿದ್ದಕ್ಕೆ KKRTC ಬಸ್ಸನ್ನೆ ಕದ್ದೊಯ್ದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ
ಪಟ್ಟಣದಲ್ಲಿ ನಡೆದಿದೆ. ಸೈದಾಪುರ ಬಸ್ ನಿಲ್ದಾಣದಲ್ಲಿ ,ನಿಲ್ಲಿಸಿದ ಬಸ್ ಅನ್ನು ಮಹಿಪಾಲರೆಡ್ಡಿ ಎ೦ಬ
ವಜಾಗೋ೦ಡ ನೌಕರ ಕದ್ದು ಒಯ್ದಿದ್ದಾನೆ. ಕೆಕೆಆರ್ಟಿಸಿಯ ಚಾಲಕ ಕಮ್ ನಿರ್ವಾಹಕನಾಗಿದ್ದ
ಮಹಿಪಾಲರೆಡ್ಡಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಆತನನ್ನು ವಜಾಮಾಡಲಾಗಿತ್ತು.
ವಜಾಗೊ೦ಡ ಚಾಲಕ ಮಹಿಪಾಲರೆಡ್ಡಿಯಿಂದ ಇದೀಗ ಬಸ್ ಕಳ್ಳತನ ನಡೆದಿದೆ. ಸ್ವಗ್ರಾಮ
ರಾಜನಹಳ್ಳಿಗೆ ಹೋಗಲು ಯಾವುದೇವಾಹನಸಿಕ್ಕಿರಲಿಲ್ಲ. ಬಸ್ ಕಳ್ಳತನ ಮಾಡಿ ಗ್ರಾಮದ ದೇವಸ್ಮಾನದ
ಬಳಿ ನಿಲ್ಲಿಸಿದ್ದಾನೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ಮಹಿಪಾಲರೆಡ್ಡಿ ವಿರುದ್ಧ ಕೆಎಸ್
ದಾಖಲಾಗಿದೆ. ಕಳ್ಳತನವಾಗಿದ್ದ ಕಕೆಆರ್ಟಿಸಿ ಬಸ್ ಅನ್ನು ಪೊಲೀಸರು ವಾಪಸ್ ತ೦ದಿದ್ದಾರೆ.

