

ಇರಾನ್:ಅಮೆರಿಕಮತ್ತುಇಸ್ರೇಲ್ ನಡೆಸಿದಜಂಟಿಕಾರ್ಯಾಚರಣೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾಅಲಿಖಮೇನಿಮೃತಪಟ್ಟಿದ್ದಾರೆ ಎಂದು ದೃಢೀಕರಣ ಆಗಿದೆ ಅಲ್ಲದೆ ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ,ಅಳಿಯ ಮತ್ತುಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದುಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿದಾಳಿಗೆ ಬಲಿಯಾದ ಇರಾನ್ ರಕ್ಷಣಾಸಚಿವಅಮೀರ್ ನಾಸಿರ್ಜಾದೆ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಇಂದು ಭಾನುವಾರ ಧ್ರಡಪಟ್ಟಿದೆ.
ಇರಾನಿನ ಪಾಲಿಗೆ ಇಂದು ಇತಿಹಾಸದ ಅತ್ಯಂತ ಕರಾಳ ಮತ್ತು ರಕ್ತಸಿಕ್ತ ಭಾನುವಾರ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ನ ಸರ್ವೋಚ್ಚ ನಾಯಕನಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿದ್ದ ಅಯತೊಲ್ಲಾ ಅಲಿ ಖಮೇನಿ ಇನ್ನು ನೆನಪು ಮಾತ್ರ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ವಾಯು ದಾಳಿಯಲ್ಲಿ 86 ವರ್ಷದ ಧರ್ಮಗುರು ಖಮೇನಿ ಹತರಾಗಿದ್ದಾರೆ ಎಂಬ ಸುದ್ದಿ ಜಗತ್ತನ್ನೇ ನಡುಗಿಸಿದೆ.
ಈ ಕಾರ್ಯಾಚರಣೆಯ ತೀವ್ರತೆ ಎಷ್ಟಿತ್ತು ಅಂದರೆ, ಇರಾನ್ ಅಧಿಕೃತವಾಗಿ ಈ ಸುದ್ದಿಯನ್ನು ಹೊರಹಾಕುವ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹತ್ಯೆಯನ್ನು ಖಚಿತಪಡಿಸಿದ್ದರು. “ನಮ್ಮ ಶತ್ರುಗಳ ಅಂತ್ಯ ಆರಂಭವಾಗಿದೆ” ಎಂಬ ಟ್ರಂಪ್ ಮಾತುಗಳು ಇರಾನ್ನ ಇಡೀ ಆಡಳಿತ ಯಂತ್ರವನ್ನೇ ಅಲುಗಾಡಿಸಿವೆ.
ಭಾನುವಾರ ಮುಂಜಾನೆ ಇರಾನ್ ಸರ್ಕಾರಿ ದೂರದರ್ಶನವು ದುಃಖತಪ್ತ ದನಿಯಲ್ಲಿ ಈ ಸಾವನ್ನು ದೃಢಪಡಿಸಿದಾಗ, ಇಡೀ ಟೆಹರಾನ್ ಸ್ತಬ್ಧವಾಗಿತ್ತು. ಇದು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಲ್ಲ, ಇರಾನ್ನ ಇಡೀ ರಕ್ಷಣಾ ಕೋಟೆಯನ್ನೇ ಭೇದಿಸಿದ ದಾಳಿ ಇದು. ಖಮೇನಿ ನೆರಳಿನಂತಿದ್ದ ಉನ್ನತ ರಾಜತಾಂತ್ರಿಕ ಸಲಹೆಗಾರ ಅಲಿ ಶಮ್ಯಾನಿ ಮತ್ತು ಇರಾನ್ನ ಅತ್ಯಂತ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಕ್ಕೂರ್ ಕೂಡ ಈ ದಾಳಿಯಲ್ಲಿ ಮಣ್ಣಾಗಿದ್ದಾರೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.
ಈ ಘಟನೆಯ ಬೆನ್ನಲ್ಲೇ ಪ್ರತಿಬಂಧಕ ದಾಳಿಯ ಜ್ವಾಲೆ ಎದ್ದಿದೆ. ಇರಾನ್ ಸುಮ್ಮನೆ ಕುಳಿತಿಲ್ಲ. ತನ್ನ ನಾಯಕನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಧ್ಯಪ್ರಾಚ್ಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ಮಳೆಯನ್ನು ಸುರಿಸುತ್ತಿದೆ. ಅಬುಧಾಬಿಯಲ್ಲಿ ಇಬ್ಬರು ಮತ್ತು ಇಸ್ರೇಲ್ನ ಟೆಲ್ ಅವಿವ್ನಲ್ಲಿ ಓರ್ವ ನಾಗರಿಕ ಬಲಿಯಾಗಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಲಭ್ಯವಾಗಿವೆ. ಅರಬ್ ಜಗತ್ತಿನಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ. ಈಗ ಇಡೀ ವಿಶ್ವದ ಕಣ್ಣು ಇರಾನ್ ಮೇಲಿದೆ. ಖಮೇನಿ ನಂತರ ಇರಾನ್ನ ಚುಕ್ಕಾಣಿ ಹಿಡಿಯುವವರು ಯಾರು?
ಮುಂದೆ ಚುಕ್ಕಾಣಿ ಹಿಡಿಯುವ ನಾಯಕ ಮುಸ್ಲಿಂ ಕಟ್ಟರ್ ಪಂಕ್ತಿ ಅಥವ ಖಮೇನಿಯ ಧೋರಣೆ ಯುಳ್ಳ ನಾಯಕ ಚುಕ್ಕಾಣಿ ಹಿಡಿದರೆ ವಿಶ್ವಕ್ಕೆ ಗಂಡಾಂತ ಖಂಡಿತ ಉಂಟು.
Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/Ev3k8gPa7GoEoPPXlyxtW6 (jananudi news orga)

