

ಬಸ್ರೂರು ; ಬಸ್ರೂರು ಸೆಂಟ್ ಫಿಲಿಪ್ ಚರ್ಚಿನಲ್ಲಿ ಸ್ತ್ರೀ ಸಂಘಟನೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಉಡುಪಿ ಧರ್ಮ ಕೇಂದ್ರದ ಯಾಜಕ ಕರೊಯೋಲೆಯ ನಿರ್ದೇಶಕರಾದ ವಂ। ಧರ್ಮಗುರು ಫಾದರ್ ಅಶ್ವಿನ್ ಆರಾನಾ ಅತಿಥಿಗಳಾಗಿ ಆಗಮಿಸಿ “ಸ್ತ್ರೀಯರು ಈಗಿನ ಕಾಲದಲ್ಲಿ ಸ್ಥಾನಮಾನ ಪಡೆದಿದ್ದು ಎಲ್ಲಾ ಹುದ್ದೆ ಹಾಗೂ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ ಮತ್ತು ಕೇವಲ ಕುಟುಂಬ ಅಲ್ಲದೇ ಸುಭದ್ರ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ, ಆದ್ದರಿಂದ ನಾವು ಅವರನ್ನು ಗೌರವದಿಂದ ಕಾಣಬೇಕು” ಎಂದರು.
ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ರವರು “ಸ್ತ್ರೀಯರು ಸಮಾಜದ ಶಕ್ತಿ ಅವರು ಶಾಂತಿ , ಸಹನೆ ,ಸೇವೆ ಹಾಗೂ ಆದರ್ಶ ಗುಣಗಳಿಂದ ಉತ್ತಮ ಸಮಾಜ ಕಟ್ಟುತ್ತಾರೆ “ಎಂದರು, ಸಹಾಯಕ ಧರ್ಮಗುರುಗಳಾದ ಫಾದರ್ ಶರೂನ್ ಡಿಸೋಜ, ಸ್ತ್ರೀ ಸಂಘಟನೆ ವಲಯ ಅಧ್ಯಕ್ಷೆ ಶರ್ಮಿಳಾ ಬರೆಟ್ಟೊ , ಬಸ್ರೂರು ಘಟಕದ ಅಧ್ಯಕ್ಷೆ ಅನಿತಾ ಕಾರ್ವಾಲೊ ಉಪಸ್ಥಿತರಿದ್ದರು ಅನೇಕ ಸ್ತ್ರೀಯರು ಭಾಗವಹಿಸಿದ್ದರು.







