HOLY ROSARY CHURCH, KUNDAPUR – 450 th JUBILEE SOUVENIR 2021

ಸಂತ ಮೇರಿ ಮಹಾವಿದ್ಯಾಲಯ, ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ‘ಎನ್.ಸಿ.ಸಿಯ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆ


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯನ್ನು ಏರ್ಪಡಿಸಲಾಯಿತು

ಇಂದು ನಾವು ದಿನನಿತ್ಯದ ಜೀವನದಲ್ಲಿ ಕೆಲವು ಅಂಗಡಿಯಿಂದ ಸಣ್ಣಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ತರುತ್ತಿದ್ದೇವೆ. ಇಂಥ ಪ್ಲಾಸ್ಟಿಕ್‌ ವಸ್ತುವಿನ ಮರುಬಳಕೆ ಮಾಡಲಾಗದೆ ಅವುಗಳನ್ನು ಎಸೆಯುವುದರಿಂದ ನಮ್ಮ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಂತ ಐಡಿ ಎಸ್ಎಸ್ಸಿ ಐಜಿಸಿ ಕ್ಯಾಂಪಲ್ಲಿ ಭಾಗವಹಿಸಿದ ಕೆಡೆಟ್ ಪೂಜಾ ಶೆಟ್ಟಿ, ಮೈಸೂರಲ್ಲಿ ನಡೆದಂತ ಏಕ್ ಭಾರತ ಶ್ರೇಷ್ಠ ಭಾರತ್ಕ್ಯಾಂಪಲ್ಲಿ ವಿಜೇತರಾದ ಸೋನಾಲಿಕುಲಾಲ್,ಉಳಿದ್ರಾ ಖುಷಿರವರನ್ನು ಅಭಿನಂದಿಸಲಾಯಿತು ಹಾಗೂ ಕೆಡೆಟ್ಗಳಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕರಪತ್ರಗಳನ್ನು ನೀಡಲಾಯಿತು.

ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹಾಗೂ ಪರಿಸರ ಕಾಳಜಿಯ ವಿವಿಧ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಯುವಕರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಮಾಡಲು ಶ್ರಮಿಸಬೇಕೆಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕರೆ ನೀಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಫಸ್ಟ್ ಆಫೀಸರ್ ಜಾನ್ ವಿಲಿಯಂ ವೇಗಸ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು. ಕೆಡೆಟ್ ಕೃತಿಕಾ ಸ್ವಾಗತಿಸಿ , ಅದಿತಿ ಆಚಾರ್ಯ ವಂದಿಸಿದರು. ಕೆಡೆಟ್ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ಇಯಾನ್ ಕೇರ್ಸ್ ನ ಸರ್ವ ಧರ್ಮ ಸಂಗಮದಲ್ಲಿ ‘ಮಿತ್ರರ ಸನ್ನಿಧಿ’ ಯ ಉದ್ಘಾಟನೆ

ಭಾನುವಾರ. ಜೂ 28, 2023 ರಂದು ಕಿನ್ನಿಗೋಳಿಯ ಕೊಯ್ಲಾದಲ್ಲಿ. ‘ಮಿತ್ರರ ಸನ್ನಿಧಿ’ ಎಂಬ ಸಭಾ ಸದನದ ಉದ್ಘಾಟನೆ, ಶ್ರಿ ದುರ್ಗಾ ಪರಮೇಶ್ವರಿ ಮಹಮಾಯಿ ದೇವಸ್ಥಾನದ ಮೊಕ್ತೇಸರ, ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಇವರಿಂದ. ದಿವಂಗತ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಕುಟಂಬಸ್ತರಿಂದ ಹಾಗೂ ಗಣ್ಯ ಅತಿಥಿಗಳಿಂದ. ದಿವಂಗತ ಮಿತ್ರರಾದ ಗಣೇಶ್ ಕುಡ್ವ ಹಾಗೂ ಗಣೇಶ್ ನಾಯಕ್ ರವರ ಭಾವಚಿತ್ರಗಳನ್ನು ‘ಮಿತ್ರರ ಸನ್ನಿಧಿ’ ಗೆ ವರ್ಗಾವಣೆ. ಹೊರಹೋಗುವ ಟ್ರಸ್ಟೀ ಡಾಕ್ಟರ್ ಡೆಂಜಿಲ್ ಪಿಂಟೋ ಅವರಿಗೆ ಸನ್ಮಾನ, ಟ್ರಸ್ಟೀ ಡಾಕ್ಟರ್ ಡೆರಿಕ್ ಲೋಬೋ ಅವರಿಂದ. ಆ ನಂತರ ಡಾಕ್ಟರ್ ಡೆಂಜಿಲ್ ಪಿಂಟೋ ರವರಿಂದ ಮದ್ಯ, ಹಾಗು ಅಮಲು ಪದಾರ್ಥಗಳ ಸೇವನೆಯಿಂದ ನಾವು ಹೇಗೆ ಪಾರಾಗಬಹುದು ಎಂಬ ಬಗ್ಗೆ ದಿಕ್ಸೂಚಿ ಭಾಷಣ. ವಂದನಿಯ ಸಿಪ್ರಿಯಾನ್ ಲುವಿಸ್ ರವರಿಂದ ಆಶೀರ್ವಚನ. ಯುಗಪುರುಷ ಕನ್ನಡ ಪತ್ರದ ಸಂಪಾದಕರಾದ ಶ್ರಿ ಭುವನಾಭಿರಾಮ ಉಡುಪ ರವರಿಂದ ಅಭಿನಂದನಾ ಭಾಷಣ. ಎಂ.ಸಿ.ಸಿ. ಬ್ಯಾಂಕ್ ಚೇರ್ಮ್ಯಾನ್, ಶ್ರಿ ಅನಿಲ್ ಲೋಬೋ ರವರ ಅಧ್ಯಕ್ಷತೆ. ಸಂಸ್ಥೆಯ ಪ್ರಧಾನ ಟ್ರಸ್ಟಿ ಹೇಮಾಚಾರ್ಯರಿಂದ ಸ್ವಾಗತ.

ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼಚೆಂ ಉದ್ಘಾಟನ್

ಮಾದಕ್ ಒಕ್ತಾಂ ತಶೆಂಚ್ ಅಮಾಲ್ ಪಿಯೊವ್ಣ್ಯಾಚ್ಯಾ ಪಿಡೆನ್ ಕಷ್ಟಾತೆಲ್ಯಾಂಕ್ ಸುಶೆಗ್ ದಿಂವ್ಚ್ಯಾ ಉದ್ದೇಶಾನ್ ಫಾಮಾದ್ ಕೊಂಕ್ಣಿ ಬರವ್ಪಿ, ಸಂಘಟಕ್ ತಶೆಂಚ್ ದಾಯ್ಜಿ ದುಬಾಯ್ ಸ್ಥಾಪಕಾಂ ಪಯ್ಕಿ ಎಕ್ಲೊ ಜಾವ್ನಾಸ್ಚ್ಯಾ ಹೇಮಾಚಾರ್ಯಾನ್ ಸ್ಥಾಪನ್ ಕೆಲ್ಲ್ಯಾ ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼ ಮ್ಹಳ್ಳ್ಯಾ ಸಭಾಸಾಲಾಚೆಂ ಉದ್ಘಾಟನ್ ಮೇ ೨೮ವೆರ್ ಕಿನ್ನಿಗೋಳಿಚ್ಯಾ ಕೊಯ್ಲಾಂತ್ ಚಲ್ಲೆಂ. ಶ್ರೀ ದುರ್ಗಾ ಪರಮೇಶ್ವರಿ ಮಹಮಾಯಿ ದಿವ್ಳಾಚೊ ಮೊಕ್ತೇಸರ್  ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಹಾಣೆ ʻಮಿತ್ರರ ಸನ್ನಿಧಿʼ ಉಗ್ತಾವ್ನ್ ʻಜಾತ್-ಕಾತ್-ಮತ್ ಲೆಕಿನಾಸ್ತಾಂ ಸರ್ವಾಂಕ್ ಲಾಗಿಂ ಹಾಡ್ನ್, ಸಮಾಜೆಂತ್ಲ್ಯಾ ಸಾದ್ಯಾ ಲೊಕಾನ್ ಕೆಲ್ಲಿ ಸೆವಾಯ್ ಒಳ್ಕೊನ್ ಘೆವ್ನ್, ತಾಂಣಿ ಸಂಸಾರ್ ಸಾಂಡುನ್ ಗೆಲ್ಲೆ ವೆಳಿಂ ತಾಂಕಾಂ ಶೃದ್ಧಾಂಜಲಿ ಭೆಟವ್ನ್, ತಾಂಚ್ಯಾ ಉಗ್ಡಾಸಾ ಖಾತಿರ್ ʻಮಿತ್ರರ ಸನ್ನಿಧಿʼ ಮ್ಹಳ್ಳೆಂ ಸಭಾಸಾಲ್ ಉಗ್ತಾಯಿಲ್ಲೆಂ ನಿಜಾಯ್ಕಿ ದೆಕಿಭರಿತ್ʼ ಮ್ಹಣಾಲೊ.

ಕಾರ್ಯಾಚೊ ಮಾನಾಚೊ ಸಯ್ರೊ, ಯುಗಪುರುಷ ಕನ್ನಡ ಪರ್ತಾಚೊ ಸಂಪಾದಕ್ ಶ್ರಿ ಭುವನಾಭಿರಾಮ ಉಡುಪ ಹಾಣೆ ಅಭಿನಂದನ್ ಭಾಶಣ್ ಕೆಲೆಂ.

ʻಮಿತ್ರರ ಸನ್ನಿಧಿʼ ಉಗ್ತಾವಣ್ ಕರ್ಚೆ ಆದಿಂ ದೆ| ಶೇಖರ ಪೂಜಾರಿ ಹಾಚ್ಯಾ ತಸ್ವಿರೆಕ್, ತಾಚ್ಯಾ ಕುಟ್ಮಾ ಸಾಂದ್ಯಾಂ ಸಂಗಿಂ  ಜಮ್ಲೆಲ್ಯಾ ಸಯ್ರ್ಯಾಂನಿ ಫುಲಾಂಚ್ಯೊ ಪಾಕ್ಳ್ಯೊ ಅರ್ಪುನ್ ಶೃದ್ಧಾಂಜಲಿ ಭೆಟಯ್ಲಿ. ಕಾರ್ಯಾಚೊ ಅಧ್ಯಕ್ಷ್ ಜಾವ್ನ್ ಹಾಜರ್ ಆಸ್ಲ್ಲೊ ಎಮ್. ಸಿ. ಸಿ. ಬ್ಯಾಂಕಾಚೊ ಚೇರ್ಮ್ಯಾನ್ ಶ್ರೀ ಅನಿಲ್ ಲೋಬೊ ಹಾಣೆ ʻಸರ್ವ ಧರ್ಮ ಸಂಗಮಾʼಕ್ ಸರ್ವ್ ರಿತಿಚೊ ಸಹಕಾರ್ ಭಾಸಾವ್ನ್ ʻಮಾದಕ್ ಒಕ್ತಾಂ ಸೆಂವ್ಚಿ ಏಕ್ ಸಮಾಜಿಕ್ ಪಿಡಾ. ಹಾಚ್ಯಾ ವಾಯ್ಟಾವಿಶಿಂ ಯುವಜಣಾಂಕ್ ಮಾಹೆತ್ ದಿಂವ್ಚೆ ಸಂಗಿಂ ತಾಕಾ ಬಲಿ ಜಾಲ್ಲ್ಯಾಂಕ್ ಪಾಟಿಂ ಹಾಡ್ಚ್ಯಾ ಇಯಾನ್ ಕೇರ್ಸ್ ಫೌಂಡೇಶನಾಚ್ಯಾ ವಾವ್ರಾಕ್ ಎಮ್.ಸಿ.ಸಿ. ಬ್ಯಾಂಕ್ ಸದಾಂಚ್ ಪಾಟಿಂಬೊ ದಿತೆಲೆಂ.” ಮ್ಹಳೆಂ.

ಕಾರ್ಯಾಚ್ಯಾ ನಿಮಾಣೆ ʻಇಯಾನ್ ಕೇರ್ಸ್ ಫೌಂಡೇಶನ್ʼ ಹಾಚೆಥಾವ್ನ್ ನಿವೃತ್ತ್ ಜಾಲ್ಲೊ ಟ್ರಸ್ಟಿ ಡೊ| ಡೆನ್ಜಿಲ್ ಪಿಂಟೊ ಹಾಕಾ ಸನ್ಮಾನ್ ಕೆಲೊ.

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಡಿಕೋಸ್ತಾ ಉತ್ತೀರ್ಣ / Vinard DCosta of Kundapur clears CA Final Examination



ಕುಂದಾಪುರ, ಜು.5: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 2023 ಮೇ ಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ.ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿದ್ದಾರೆ.
ಇವರು ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು “ಇಂಟರ್ ಮಿಡಿಯಟ್” ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್‍ಶಿಪ್ ನ್ನು ಬೆಂಗಳೂರಿನ ‘ಮುರುಳಿ ಆ್ಯಂಡ್ ಸುಮಿತ್’ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು 432 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇವನು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮತ್ತು ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಭಂಡಾರ್ಕರ್ಸ್ ಪದವಿ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಗಳಿಸಿರುತ್ತಾನೆ.

Vinard DCosta of Kundapur passes the CA Final

Kundapur, June 5: Vinard J. DCosta of Kundapur has become a Chartered Accountant after clearing the CAfinal examination conducted by the Institute of Chartered Accountants of India held in May 2023

He is the son of writer and journalist Bernard DCosta and Vinaya DCosta of Kundapur. He was trained for Intermediate examinations from Carriers Coaching and Space Academy and perceived his Articleship in Bangalore under the Guidance of Murali and Sumeet- Chartered Accountants. He has secured 432 marks in CA Final Examination. He is a student of Holy Rosary English medium school and St. Mary’s P U College, Kundapura. He is a B.Com graduate from Bhandarkar’s Arts & Science College kundapura.

Holy Redeemer English Medium School, Belthangady :Investiture Ceremony and Clubs Inauguration

‘Great leaders are not born, rather they are made’

*Investiture Ceremony and Clubs Inauguration*

‘Great leaders are not born, rather they are made’

Investiture Ceremony of School Cabinet of Holy Redeemer English Medium School, Belthangady was held on July 3rd.  Investiture of School Cabinet Members and inauguration of various school clubs, sqauds and activities for the academic yearwas in a grandure. The program began by invoking God’s blessings through a  prayer dance and lighting the lamp. Correspondent V. Rev. Fr Walter D’Mello presided the program and motivated the all School Leaders to carry out their responsibilities faithfully. Chief guest Rev Fr Anil Avild Lobo, Parish Priest of St Francis Assisi Church, Nainad, inaugurated the school clubs, squads and activities innovatively. Headmaster Rev Fr Clifford Pinto administered the Oath to the members of School cabinet. The aims and objectives of  the clubs namely English Club, Kannada Club, Hindi Club, Eco Club and Science Club, and school squads namely, Blue Bunnies, Green Teens, Red Robins and Yellow Bees, very symbolically represented by the respective leaders.

School Cabinet Members and other leaders were honoured with badges and sashes. Trainers of school activities like Dance, Karate, Music, Singing and Art and Craft were felicitated. Students Sonia Bennis of Class 7 welcomed the gathering and Safeeda of Class 9 delivered the vote of thanks. Teacher Renita Lasrado compered the programme.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ 25 ಲಕ್ಷ ರೂ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಕೋಲಾರ,ಜು.4: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಆಪತ್ಕಾಲದ ವೇಳೆ ನೆರವಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 25 ಲಕ್ಷ ರೂಗಳನ್ನು ಮಂಜೂರು ಮಾಡಿದ್ದಾರೆ.
ಜುಲೈ 1 ರಂದು ಕೋಲಾರದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಈ ಕುರಿತು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮನವಿ ಸಲ್ಲಿಸಿತ್ತು.
ಈ ಮನವಿಯನ್ನು ಆಧರಿಸಿ ಕೆ.ವಿ.ಪ್ರಭಾಕರ್ ಅವರು ಜುಲೈ 3 ರಂದು ಸೋಮವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ 25 ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದಾರೆ.
25 ಲಕ್ಷ ರೂಗಳನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾರ್ತಾ ಇಲಾಖೆಯ ಆಯುಕ್ತರಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಈಗಾಗಲೇ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಮತ್ತು ಅವರ ಕುಟುಂಬದವರು ನಿಧನರಾದಾಗ ಸಂಘದ ವತಿಯಿಂದಲೇ ಆಪತ್ಕಾಲದ ನೆರವನ್ನು ಒದಗಿಸುತ್ತಿದೆ.
ಕೋವಿಡ್ ನಂತರದ ದಿನಗಳಲ್ಲಿ ಪತ್ರಕರ್ತರ ಸ್ಥಿತಿಗತಿ ಮತ್ತಷ್ಟು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ವೇಳೆ ಪತ್ರಕರ್ತರ ಮತ್ತು ಅವರ ಕುಟುಂಬದವರ ಆಪತ್ಕಾಲಕ್ಕೆ ಅನಕೂಲವಾಗುವಂತೆ 1 ಕೋಟಿ ರೂಗಳ ನಿಧಿಯನ್ನು ಸಂಗ್ರಹಿಸಲು ಪತ್ರಕರ್ತರ ಸಂಘವು ಮುಂದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸಂಘವು 3,30,555 ರೂಗಳನ್ನು ಸಂಗ್ರಹಿಸಿ ಡಿ.ಸಿ.ಸಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದೆ.
ಕೋಲಾರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಅನಕೂಲಕ್ಕಾಗಿ ಸ್ಥಾಪಿಸಿರುವ ಕಲ್ಯಾಣನಿಧಿಗೆ 25 ಲಕ್ಷ ರೂ ನೆರವು ಕೋರಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಹಣ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತು ಹಣ ಮಂಜೂರು ಮಾಡಿಸುವಲ್ಲಿ ಆಸಕ್ತಿ ವಹಿಸಿ ಶ್ರಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಕರಾವಳಿಯಲ್ಲಿ ಮಳೆಯ ಅಬ್ಬರ-ಉಡುಪಿ ಇಬ್ಬರ ಸಾವು-ಮಂಗಳೂರು ಕೆರೆಯಾಯ್ತು ಪಂಪ್ ವೆಲ್ ಭಾಗ


ಮಂಗಳೂರು, ಉಡುಪಿ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರ ಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆದ್ರ್ರ ಮಳೆಯು ಒಂದೆರಡು ದಿನಗಳಿಂದ ತೀವ್ರಗೊಂಡಿದ್ದು., ಸೋಮವಾರ ಬಿರುಸುಗೊಂಡಿದ್ದ ಮಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾನಿಯನ್ನು ಉಂಟುಮಾಡಿದೆ.

ಜೂ.8 ರವರೆಗೆ ಭಾರಿ ಮಳೆಯಾಗಲಿದೆಯೆಂದು ಹವಮಾನ ಇಲಾಖೆ ಎಚ್ಚರಿಸಿದೆ.


ಮಂಗಳೂರಿನಲ್ಲಿ ಪಂಪ್ ವೆಲ್ ಭಾಗದಲ್ಲಿ. ಮೇಲ್ ಸೇತುವೆ ಕೆಳಗಡೆ ಅಸಮರ್ಪಕ ಕಾಮಾಗಾರಿಯಿಂದ ನೀರು ನಿಂತು ದೊಡ್ಡ ಕೆರೆಯಂತೆ ಆಗಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ಉಡುಪಿಯ ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ (43) ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಅಂಗಡಿ ಮೊಗರಿನಲ್ಲಿ ಗಾಳಿ ಮಳೆಯಿಂದಾಗಿ ಮರ ಉರುಳಿ ಬಾಲಕಿ ಆಯಿಷತ್ ಮಿನ್ಹಾ (11) ಸಾವನ್ನಪ್ಪಿದ್ದಾಳೆ.

ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವೈದ್ಯರ ದಿನಾಚರಣೆ:ಡಾ|ಸೋನಿಯವರಿಗೆ ಸನ್ಮಾನ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಕುಂದಾಪುರ ಆಯುಷ್ಯಧಾಮ ಆಸ್ಪತ್ರೆಯ ವೈದ್ಯರಾದ ಡಾ ಸೋನಿ ಡಿಕೋಸ್ತಾರವರನ್ನು ಕುಂದಾಪುರದ ಹೋಟೆಲ್ ಶ್ರೇಯಸ್ ಇನ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು

ಸನ್ಮಾನ ಸ್ವೀಕರಿಸಿದ ವೈದ್ಯರು ಮಾತನಾಡಿ ’ತಮ್ಮ ಜವಾಬ್ದಾರಿ ಅರಿತು ಸೇವೆ ಮಾಡಿದಾಗ ಮಾತ್ರ ಸಮಾಜ ಅವರನ್ನು ಗೌರವಿಸುತ್ತದೆ. ಹಾಗೆಯೇ ರೋಗಿಗಳು ಕೂಡ ತಮ್ಮ ವೈದ್ಯರಲ್ಲಿ ವಿಶ್ವಾಸವಿರಿಸಿ ಅವರ ಸಲಹೆಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ಸಮಾರಂಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯ ಉಪಾಧ್ಯಕ್ಷ ಅಭಿಲಾಶ್, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ನಾಗೇಶ್ ನಾವಡ, ವಿಜಯ ಭಂಡಾರಿ, ಲೇಡಿ ಜೇಸಿ ಅಧ್ಯಕ್ಷ ಪ್ರೇಮಾ ಡಿಕುನ್ಹಾ, ಜೊತೆ ಕಾರ್ಯದರ್ಶಿ ಶೈಲಾ, ಸದ್ಯಸ್ಯರಾದ ದಿನೇಶ್ ಪುತ್ರನ್, ಅನಿತಾ ಡಿಸೋಜಾ, ನಾಗರಾಜ ಪಾಟ್ವಲ್, ಶ್ರುತಿ ಡಿಸೋಜಾ ಇನ್ನಿತರರು ಉಪಸ್ಥಿತರಿದ್ದರು
.

ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್‍ಗೆ ನೂತನ ಪಧಾಧಿಕಾರಿಗಳು-ಕ್ರೀಡಾ ಸಾಧಕರಾಗಲು ನಿರಂತರ ಅಭ್ಯಾಸ,ಪರಿಶ್ರಮ ಮುಖ್ಯ;ಎನ್.ಮುನಿಯಪ್ಪ

ಕೋಲಾರ: ಕ್ರೀಡೆಗಳನ್ನು ಹಣ ನೀಡಿ ಖರೀದಿಸಲು ಸಾಧ್ಯವಿಲ್ಲ. ಕ್ರೀಡೆಗಳು ಅಭ್ಯಾಸ ಮತ್ತ ಶ್ರಮದಿಂದ ಮಾತ್ರ ಸಾಧನೆಗೈಯಲು ಸಾಧ್ಯ ಎಂದು ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎನ್. ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಸಮರ್ಪಕವಾದ ಸೌಲಭ್ಯಗಳು ಹಾಗೂ ತರಭೇತಿಯ ಕೊರತೆಯಿಂದ ಜಿಲ್ಲೆಯಲ್ಲಿ ಉತ್ತಮವಾದ ಪ್ರತಿಭೆಗಳಿದ್ದರೂ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡೆಸಿದರು,
ನಮ್ಮ ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಅವರಿಗೆ ಉತ್ತಮವಾದ ತರಭೇತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಳಕಿಗೆ ತರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಮಾಡಲಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು,
ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ ಮಾತನಾಡಿ, ಕಳೆದ 30 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅಥ್ಲೇಟಿಕ್ಸ್ ತರಭೇತಿದಾರರಾದ ಲಿಂಗಪ್ಪ ಮತ್ತು ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಎ.ಎಲ್.ರಾಮ್‍ರಾವ್ ಅವರ ಅವಧಿಯಲ್ಲಿ ಕೋಲಾರದ ಪ್ರತಿಭೆಗಳು ರಾಜ್ಯ ಮತ್ತು ಅಂತರ್‍ರಾಜ್ಯ ಮಟ್ಟದ ಸ್ವರ್ಧೆಗಳಲ್ಲಿ ಪ್ರತಿನಿಧಿಸಿದ್ದರು ಆಗ ಕ್ರೀಡಾಪಟುಗಳಿಗೆ ಅರ್ಥಿಕವಾಗಿ ಸಹಾಯದ ಕೊರತೆ ಕಂಡು ಬಂದರೂ ಪ್ರೋತ್ಸಾಹಕ್ಕೆ ಕೊರತೆ ಇರಲಿಲ್ಲ ಎಂದರು.
ನಿಕಟ ಪೂರ್ವ ಪದಾಧಿಕಾರಿ ಜಗನ್ ಮಾತನಾಡಿ, ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಸಿಂಥೇಟಿಕ್ಸ್ ಟ್ರಾಕ್‍ಗೆ ಸರ್ಕಾರ 7 ಕೋಟಿ ರೂ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿದೆ ವಿಳಂಭ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಅಧ್ಯಕ್ಷರಾಗಿ ಎನ್. ಮುನಿಯಪ್ಪ,ಉಪಾಧ್ಯಕ್ಷ ಗೌಸ್ ಖಾನ್, ಕಾರ್ಯದರ್ಶಿ ಕೆ.ಆರ್. ರಾಘವೇಂದ್ರ, ಜಂಟಿ ಕಾರ್ಯದರ್ಶಿ ರಾಜೇಶ್ ಬಾಬು.ಸಿ, ಖಜಾಂಜಿ ಎಸ್.ಆರ್. ಪುರುಷೋತ್ತಮ್, ಸದಸ್ಯರಾಗಿ ಇಸ್ಮಾಯಿಲ್ ಖಾನ್, ನಾಗೇಶ್ ಎಂ. ಕೆ.ಆರ್. ಸತೀಶ್ ಕುಮಾರ್ ಎಂದು ವೇದಿಕೆಯಲ್ಲಿದ್ದವರನ್ನು ಪರಿಚಯಿಸಿದರು.

ಸಾಯಿಬಾಬಾ ದೇವಾಲಯ;ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಣೆ

ಶ್ರೀನಿವಾಸಪುರ:  ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಜನರು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಸರದಿಯ ಸಾಲಿನಲ್ಲಿ ನಿಂತು ಬಾಬಾ ದರ್ಶನ ಪಡೆದರು.

  ಗುರು ಪೂರ್ಣಿಮೆ ಪ್ರಯುಕ್ತ ಶಿರಿಡಿ ಸಾಯಿಬಾಬಾ ದೇವಾಲಯ ಹಾಗೂ ಬಾಬಾ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿದ್ದರು.

  ದೇವಾಲಯಕ್ಕೆ ಆಗಮಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮಹಿಳೆಯರು ಬಾಬಾ ಗೀತೆಗಳನ್ನು ಹಾಡಿದರು. ಬಾಬಾ ದರ್ಶನ ಪಡೆದ ಭಕ್ತರಿಗೆ ಊಟದ ವ್ಯವಸ್ಥೆ  ಮಾಡಲಾಗಿತ್ತು. ದಾನಿಗಳು ವಿಶೇಷ ಪ್ರಸಾದ ವಿತರಿಸಿದರು. ಪಟ್ಟಣದಲ್ಲಿ ಬಾಬಾ ವಿಗ್ರಹ ಮೆರವಣಿಗೆ ಏರ್ಪಡಿಸಲಾಗಿತ್ತು.  ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಕಾರ್ಯಕ್ರಮ.  ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ವಿಶೇಷ ಗೌರವಾರ್ಪಣೆ ಮಾಡಿ, ಗುರುಗಳಿಂದ ಆಶೀರ್ವಾದ ಪಡೆದರು. ಪೂಜಾ ಕಾರ್ಯಕ್ರಮ ದಲ್ಲಿ. ಕೆ .ಆರ್. ಕೇದಾರ್ ನಾಥ್,ವೈ.ಆರ್. ನಾಗೇಂದ್ರಬಾಬು, ಕೆ ಎಲ್ ರಾಮನಾಥ್, ಕೆ .ಟಿ.ಅಪ್ಪಿ ,ಡಿ.ಸಿ.ಬದ್ರಿನಾಥ್, ಬಿ.ಎಸ್. ಸುರೇಶ್, ಕೆ. ಶ್ರೇಯಸ್, ಪೃಥ್ವಿ ,ಕಾರ್ತಿಕ್,ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮ ವನ್ನು  ಹರೀಶ್, ನಾಗರಾಜಯ್ಯ,ನೆರವೆರಿಸಿದರು.