

ಕುಂದಾಪುರ; ಜು. 19; ಲೋಕಸಭೆ ವಿಪಕ್ಷ ನಾಯಕರು ಕಾಂಗ್ರೆಸ್ ಮುಖಂಡರಾಗಿರುವ ಮಾನ್ಯ ಶ್ರೀ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ರಾಹುಲ್ ಗಾಂಧಿಯವರ ಅಭಿಮಾನಿಗಳಾದ ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸವಿತಾ, ಮಾಜಿ ಉಪಾಧ್ಯಕ್ಷರಾದ ಗೀತಾ ಎಸ್ ಹಾಗೂ ಜೋಸೆಫ್ ರೆಬೆಲ್ಲೋ ಅವರ ನೇತೃತ್ವದಲ್ಲಿ ಆನಗಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಧ್ಯಾಹ್ನದ ಊಟ ಮತ್ತು ಸಿಹಿ ತಿಂಡಿ ವ್ಯವಸ್ಥೆ ಮಾಡಲಾಯಿತು.


