

ಕುಂದಾಪುರ, ಜು.19; ಇಂದು , ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ , ಲೋಕಸಭೆ ವಿರೋಧ ಪಕ್ಷದ ನಾಯಕ , ದೇಶದ ಯುವಜನತೆಯ ಕಣ್ಮಣಿ ರಾಹುಲ್ ಗಾಂಧಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಹಣ್ಣು ಹಂಪಲುಗಳನ್ನು ಒಳರೋಗಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು , ಆನಗಳ್ಳಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಆದರ್ಶ ಶೆಟ್ಟಿ ಹೇರಿಕುದ್ರು, ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೀತಾ ಎಸ್, ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸವಿತಾ ಬಿಲ್ಲವ, ಸತೀಶ್ ತೊಪ್ಲು, ಜೊಯ್ ರೆಬೆಲ್ಲೋ , ಗ್ಯಾರೆಂಟಿ ಅನುಷ್ಠಾನ ಸಮಿತಿಯ ಆಶಾ ಕರ್ವಾಲೋ, ಸಹರಾ ಕರ್ವಾಲೋ, ಹಂಗಳೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಧಾಕರ ಹಂಗಳೂರು, ರೋಶನ ಬರೆಟ್ಟೊ, ಪುರಸಭಾ ನಾಮನಿರ್ದೇಶನ ಸದಸ್ಯರಾದ ಅಶೋಕ್ ಸುವರ್ಣ, ಎಡೊಲ್ಪ್ ಡಿಕೊಸ್ಟಾ, ಕೋಣಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸೌಮ್ಯ ಮೋಗವೀರ , ಮುನಾವರ್ ಕೋಡಿ , ಹಸೈನಾರ್ ಕೋಡಿ, ಮುಬಾರಕ್ ಕೋಡಿ, ಜೋಸೆಫ್ ರೆಬೆಲ್ಲೋ ಇನ್ನಿತರರು ಉಪಸ್ಥಿತರಿದ್ದರು.











