HOLY ROSARY CHURCH, KUNDAPUR – 450 th JUBILEE SOUVENIR 2021

ಪತ್ರಕರ್ತರೊಂದಿಗೆ ಸಂವಾದ: ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ,ಆರೋಗ್ಯಸಚತೆಗೆ ಒತ್ತು – ಭರವಸೆ

ಕೋಲಾರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ , ಆರೋಗ್ಯ ಸಚತೆಗೆ ಒತ್ತು – ಭರವಸೆ

ಕೋಲಾರ : ಕುಡಿಯುವ ನೀರಿನ ಪೂರೈಕೆ , ಅಭಿವೃದ್ಧಿ ಪರ ಆಡಳಿತಕ್ಕೆ ಆದ್ಯತೆ , ಶಿಕ್ಷಣ , ಆರೋಗ್ಯ ಕ್ಷೇತ್ರಗಳಿಗೆ ಒತ್ತು , ಸ್ವಚ್ಛತೆ ಮೂಲ ಸೌಕರ್ಯ ಕೊರತೆ ನೀಗಿಸುವ ಪ್ರಯತ್ನ , ಎಲ್ಲಾ ಇಲಾಖೆಗಳ ಖಾಲಿ ಹುದ್ದೆಗಳನ್ನು ತುಂಬಲು ಅಗತ್ಯ ಕ್ರಮವಹಿಸಲಾಗುವುದು ಎಂದು ನೂತನ ಜಿಲ್ಲಾಕಾರಿ ಅಕ್ರಂಪಾಷಾ ಹೇಳಿದರು .

ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು , ತಮ್ಮ ಆಡಳಿತದ ಆದ್ಯತೆಗಳ ಕುರಿತು ವಿವರಣೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು ಜನರಿಗೆ ಲಭ್ಯವಾಗದಿರುವುದು ಕುರಿತು ಗಮನಿಸಿದ್ದು , ಶುದ್ಧ ಕುಡಿಯುವನೀರು ಪೂರೈಕೆ ಮಾಡುವ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೋಲಾರ ನಗರದಸೇರಿದಂತೆ ಬಹುತೇಕ ಕೊರತೆ ಎದ್ದು ಪಟ್ಟಣಗಳಲ್ಲಿ ಸ್ವಚ್ಛತೆಯ ಕಾಣಿಸುತ್ತಿದ್ದು , ಸ್ವಚ್ಛಕಾ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು , ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು. ಕೋಲಾರ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಮಾಡಬೇಕೆಂಬ ಬಗ್ಗೆ ಬಹಳ ವರ್ಷಗಳ ಬೇಡಿಕೆ ಇದ್ದು , ಈ ಬೇಡಿಕೆಯನ್ನು ಬಜೆಟ್ ನಂತರ ಈಡೇರಿಸುವ ಪ್ರಯತ್ನ ನಡೆಸಲಾಗುವುದು ಎಂದ ಅವರು , ಇದೇ ರೀತಿ ನಗರದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಿ ಜನಪ್ರತಿನಿಗಳ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರಲಾಗುವುದು , ಕೋಲಾರ ನಗರಕ್ಕೆ ಹೊಸರೂಪ ನೀಡಲಾಗುವುದು ಎಂದರು.

ಅಲ್ಪಸಂಖ್ಯಾತರ ಇಲಾಖೆಗೆ ಹೊಸ ರೂಪ

ಹಿಂದೆ ತಾವು ಅಲ್ಪಸಂಖ್ಯಾತರ ಆಯುಕ್ತರಾಗಿ ಕೆಲಸ ನಿರ್ವಹಿಸಿದಾಗ ರಾಜ್ಯಾದ್ಯಂತ 150 ಮೊರಾರ್ಜಿದೇಸಾಯಿ ವಸತಿ ಶಾಲೆಗಳು , 350 ಹಾಸ್ಟೆಲ್‌ಗಳು ಮತ್ತು 200 ಶಾಲೆಗಳನ್ನು ಆರಂಭಿಸಿ ಹೊಸದಾಗಿ 11 ಲಕ್ಷ ಮಕ್ಕಳಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಖಾತೆಗೆ ತಲುಪುವಂತೆ ಮಾಡಲಾಗಿತ್ತು ಎಂದರು.

ಇದೇ ರೀತಿ ಕೋಲಾರ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ , ತರಗತಿಗಳನ್ನು ಕೊಡಿಸುವ ಮೂಲಕ , ಸ್ಮಾರ್ಟ್ ಶಿಕ್ಷಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದು ವಿವರಿಸಿದರು .

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಒತ್ತು

ಕೋಲಾರ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಹೆಸರುವಾಸಿಯಾಗಿದ್ದು , ಈಗ ಕೊಂಚ ಕಡಿಮೆಯಾಗಿದೆ . ಕೋಲಾರ ಜಿಲ್ಲೆಯ ಹಿಂದಿನ ಹೆಸರನ್ನು ಉಳಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಯುವ ಜನತೆಗೆ ತರಬೇತಿ ಮಾಹಿತಿ ನೀಡಲಾಗುವುದು , ಮಾಹಿತಿ ನೀಡುವ ಜೊತೆಗೆ ವಿವಿಧ ಹಂತಗಳಲ್ಲಿ ಹುದ್ದೆಗಳನ್ನು ತುಂಬಲು ಉದ್ಯೋಗ ಮೇಳವನ್ನು ನಡೆಸಲಾಗುವುದು , ಸಿಎಸ್‌ಆರ್ ನಿಯನ್ನು ಬಳಸಿಕೊಂಡು ಸರಕಾರಿ ಶಾಲೆಗಳ ಸ್ವರೂಪವನ್ನೇ ಬದಲಾಯಿಸಲಾಗುವುದು ಎಂದರು .

ಅಭಿವೃದ್ಧಿಪರ ಆಡಳಿತ

ಕೋಲಾರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವುದು ತಮ್ಮ ಗುರಿಯಾಗಿದ್ದು , ತುರ್ತು ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುವುದು , ಮಾಡುವ ಕೆಲಸದಲ್ಲಿ ಹಾಗೂ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಗುತ್ತಾ , ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಮೂಲಕ ಅನಗತ್ಯ ವಿಳಂಬವನ್ನು ನಿವಾರಿಸಲಾಗುವುದು ಎಂದು ವಿವರಿಸಿದರು .

ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಆಯಾ ಮುಖ್ಯಸ್ಥರಿಗೆ ಕೋರಲಾಗಿದೆ . ಪತ್ರ ಬರೆದು ನಗರಸಭೆಗಳಲ್ಲಿ ಶೇ .70 ರಷ್ಟು ಹುದ್ದೆ ಖಾಲಿ ಇವೆ , ಕಂದಾಯ ಇಲಾಖೆಯಲ್ಲಿ 18 ಶಿರಸ್ತೇದಾರರು , 70 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು . ಬಜೆಟ್ ನಂತರ ಸ್ಥಗಿತಗೊಂಡಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲಾ ಚಾಲನೆ ಕಾಮಗಾರಿಗಳಿಗೆ ಇಲಾಖೆಯ ತುಂಬುವಂತೆ ನೀಡಲಾಗುವುದು ಎಂದು ಹೇಳಿದ ಅವರು , ಕೋಲಾರ ಎಪಿಎಂಸಿ ವಿಸ್ತರಣೆಗೆ 36 ಎಕರೆ ಜಾಗವನ್ನು ಗುರುತಿಸಲಾಗಿದ್ದು , ಅರಣ್ಯ ಇಲಾಖೆಯಿಂದ ಹಸ್ತಾಂತರಿಸಲು ಪತ್ರ ಬರೆದಿದ್ದು , ಶೀಘ್ರವೇ ನಿರ್ಧಾರವಾಗಿ ಭೂಮಿ ಸಿಕ್ಕ ನಂತರ ವಿಸ್ತರಣೆ ಕಾರ್ಯ ಮಾಡಲಾಗುವುದು ಎಂದರು . ಜಲ್ಲಿ ಕ್ರಷರ್ , ಅಕ್ರಮ ಗಣಿಗಾರಿಕೆ , ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಶುದ್ದೀಕರಣ , ಕೃಷಿ , ತೋಟಗಾರಿಕೆ , ಹೈನುಗಾರಿಕೆ ಮೇಲೆ ಆಗಿರುವ ಪರಿಣಾಮಗಳ ಕುರಿತು ಗಮನಹರಿಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿದರು.

ಬೈರವೇಶ್ವರ ವಿದ್ಯಾನಿಕೇತನ : ಮಕ್ಕಳ ಅಕ್ಷರ ಕಲಿ ಕಾರ್ಯಕ್ರಮ ಶ್ರೀ ಮಂಗಳಾನಂದನಾಥ ಸ್ವಾಮಿಜಿಯವರಿಂದ ಉದ್ಗಾಟನೆ

ಶ್ರೀನಿವಾಸಪುರ 3 : ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಸ್ಕಾರ ಬೆಳಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖೀಯಾಗಿ ಬದುಕಲು ಸಾಧ್ಯ ಎಂದು ಆದಿಚುಂಚುನಿಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮಿಜಿ ಹೇಳಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಬುಧವಾರ ಮಕ್ಕಳ ಅಕ್ಷರ ಕಲಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ . ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ ಎಂದರು.
ಪ್ರತಿಯೊಂದು ಮಗುವಿಗೂ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತರೆ ಮುಂದಿನ ವಿದ್ಯಾಭ್ಯಾಸಕ್ಕೆ ಅದೇ ಭದ್ರಬುನಾದಿ ಆಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.
ಪಾಲಕರು ತಮ್ಮ ಮಕ್ಕಳ ಬೆಳವಣಿಗೆಯಂತೆ ಅವರ ವಿಧ್ಯಾಬ್ಯಾಸ ಹಾಗು ಆಸ್ತಿ ಇತರೆ ಅನೇಕ ರೀತಿಯಲ್ಲಿ ಕನಸ್ಸನ್ನು ಕಂಡಿರುತ್ತಾರೆ. ಪಾಲಕರು ತಮ್ಮ ಕನಸನ್ನು ನನಸು ಮಾಡಿಸುವ ರೀತಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ . ಪಾಲಕರ ಕನಸನ್ನು ನನಸು ಮಾಡುವ ರೀತಿಯಲ್ಲಿ ಮಕ್ಕಳು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಬೈರವೇಶ್ವರ ವಿದ್ಯಾನಿಕೇತನದ ಶಾಲಾ ಕಾಲೇಜುಗಳ ಆಡಳಿತಾಧಿಕಾರಿ ಶಿವರಾಮೇಗೌಡ, ಅರಣ್ಯ ಇಲಾಖೆಯ ಆರ್‍ಎಫ್‍ಒ ಮಹೇಶ್, ಶ್ರೀನಿವಾಸಪುರ ಬೈರವೇಶ್ವರ ಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಶಿಕ್ಷಣ ಚಿಂತಕರಾದ ಮಂಜುಳ, ಪ್ರಾಂಶುಪಾಲ ಗಂಗಾಧರ್, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ ಹಾಗೂ ಮಕ್ಕಳು ಪೋಷಕರು ಪಾಲ್ಗುಂಡಿದ್ದರು.

ಐಎಂಜೆಐಎಸ್ಸಿ ಕಾಲೇಜು ಮೂಡ್ಲಕಟ್ಟೆ- ಶಿಕ್ಷಕ-ರಕ್ಷಕಸಭೆ

ಕುಂದಾಪುರ ಜು:4 ಐ ಎಂ ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕುಂದಾಪುರ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆಯ “ಸಂವಾದ” ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಪ್ರಾಂಶುಪಾಲೆಯವರಾದ ಡಾ| ಪ್ರತಿಭಾ ಎಂ ಪಟೇಲ್ ರವರು ಸಭೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲಾ ತತ್ವವಿಚಾರತೆಯನ್ನು ಪೋಷಕರೊಂದಿಗೆ ಸಂವಾದ ಮಾಡಿದರು. ಬಹುತೇಕ ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರೊಂದಿಗೆ, ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪ್ರಶಂಶಿಸಿದರು
ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್ ರವರು, ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ| ಅಹಮದ್ ಖಲೀಲ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಸುಮನರವರು ನಿರೂಪಿಸಿದರು.

“ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯ

ಮಾಜಿ ಅಧ್ಯಕ್ಷ ರೊ. ಡಾ ವಿಶ್ವೇಶ್ವರ್ ತಮ್ಮ ಟ್ರಸ್ಟಿನ ಮೂಲಕ ರೋಟರಿ ಕುಂದಾಪುರ ದಕ್ಷಿಣದ ಮುಖಾಂತರ ಸ್ವರಾಜ್ಯ ೭೫ರ ಸಂಘಟನೆಯ ಬಸ್ರೂರಿನ ಪ್ರದೀಪ್ ಕುಮಾರ ಪ್ರಕಟಿಸಲಿರುವ “ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯವನ್ನು ಹಸ್ತಾಂತರಿಸಿದರು. ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಹಾಗೂ ಸಚಿನ್ ನಕ್ಕತ್ತಾಯ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು : ಬಿಇಓ ವಿ.ಉಮಾದೇವಿ

ಶ್ರೀನಿವಾಸಪುರ 4 : ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬಿಇಓ ವಿ.ಉಮಾದೇವಿ ಸಲಹೆ ನೀಡಿದರು.
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಸಮಾಜ ಸೇವಕ ಸಾಧಿಕ್ ಅಹಮದ್ ಹಾಗು ಎಟಿಎಸ್ ರಿಜ್ವಾನ್ ರವರು ಮಕ್ಕಳಿಗೆ ಉಚಿತ ಪಠ್ಯ ಪರಿಕರಗಳು ವಿತರಣಾ ಕಾಯಕ್ರಮದಲ್ಲಿ ಮಾತನಾಡಿದರು.
ಶಾಲೆಯಲ್ಲಿ 2 ಕೊಠಡಿಗಳ ಕೊರತೆ ಇದ್ದು, ಚುನಾವಣೆಯ ಸಂಬಂಧ ಯಾವುದೇ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಕಾಮಗಾರಿಗಾಗಿ ಟೆಂಡರ್ ಕರೆದು ಅತಿ ಶೀಘ್ರದಲ್ಲಿಯೇ ಕಾಮಾಗಾರಿ ಪ್ರಾರಂಭಗೊಳ್ಳುತ್ತವೆ ಎಂದರು . ಇಲಾಖೆ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುವುದಾಗಿ ತಿಳಿಸಿದರು.
ಸಮಾಜ ಸೇವಕ ಹಾಗೂ ದಾನಿ ಸಾಧಿಕ್ ಅಹಮದ್ ಮಾತನಾಡಿ ಶಿಕ್ಷಕರು ಸಮಾಜದ ಶಿಲ್ಪಿಗಳು. ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವುದರ ಮೂಲಕ ಸಮಾಜಕ್ಕೆ ಕೊಡಿಗೆಯಾಗಿ ನೀಡುತ್ತಾರೆ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಆರೋಗ್ಯವಂತ ಸಮಾಜವನ್ನು ಸೃಷ್ಟಿಮಾಡಬೇಕು ಎಂದು ಸಲಹೆ ನೀಡಿದರು.
ಬಿಆರ್‍ಸಿ ಸಂಯೋಜಕರಾದ ಕೆ.ಸಿ.ವಸಂತ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಸಂಪನ್ಮೂಲ ವ್ಯಕ್ತಿ ಚಂದ್ರಪ್ಪ, ಸಿಆರ್‍ಪಿಗಳಾದ ಆರೀಫ್‍ಬಾಷ , ಅಕ್ಮಲಖಾನ್, ಇಸಿಒ ಕೋದಂಡಪ್ಪ, ಶಿಕ್ಷಕರಾದ ರೀಯಾನಖಾನಂ, ನೂರುನ್ನಿಸಾ, ಅಸ್ಮಸುಲ್ತಾನ್, ಭಾರತಮ್ಮ, ಅಮ್ಮಜಾನ್ ಇತರರು ಇದ್ದರು.
ಪೋಟು 4 : ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಮಕ್ಕಳಿಗೆ ಬಿಇಒ ವಿ.ಉಮಾದೇವಿ ಉಚಿತ ಪಠ್ಯ ಪರಿಕರಗಳು ವಿತರಿಸಿದರು.

ಮೂಡ್ಲಕಟ್ಟೆ; ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ವಾರ್ಷಿಕೋತ್ಸವ

ಕುಂದಾಪುರ ಜು 4: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯುತ್ತಮವಾಗಿ ನೆರವೇರಿತು.

“ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು.

  ಅತಿಥಿಯವರಾಗಿ ಆಗಮಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿಯವರು “ಕಲಿಕೆ ಮುಗಿದ ಮೇಲೆ ನಾವು ಬೇರೆಯವರಿಗೆ ಆಯ್ಕೆಯಾಗಿ ಇರಬೇಕೆ ಹೊರತು, ಯಾವುದೇ ಆಯ್ಕೆ ಇಲ್ಲದೆ ನಿಮ್ಮ ಆಯ್ಕೆ ಎನ್ನುವ ರೀತಿ ಇರಬಾರದು. ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಇರುತ್ತಾರೆ ಹೊರತು ಗೆಳೆಯರು ಅಲ್ಲ. ನಿಮ್ಮ ಕಲಿಕೆಗೆ ಅಡಿಪಾಯವನ್ನು ಹಾಕಿ ಕೊಟ್ಟಂತಹ ಗುರುಗಳಿಗೆ ಗೌರವ ನೀಡಿ” ಎಂದು ತಿಳಿಸಿದರು.

 ಪ್ರಾಂಶುಪಾಲೆ ಡಾ| ಪ್ರತಿಭಾ ಎಂ ಪಟೇಲ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಹಾಗೂ ತಮ್ಮ ಮಾತುಗಳಲ್ಲಿ, “ಇಂದಿನ ವಾರ್ಷಿಕೋತ್ಸವವು ಮುಂದಿನ ಕಾರ್ಯಕ್ರಮಕ್ಕೆ ಮುನ್ನುಡಿಯಾಗಲಿ” ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ರಾಕೇಶ್ ಸೋನ್ಸ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು

 ಕಾರ್ಯಕ್ರಮದಲ್ಲಿ ಪ್ರೊ| ಪಾವನರವರು ಸ್ವಾಗತಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥರಾದ  ಪ್ರೊ| ಅಹಮದ್ ಖಲೀಲ್ ರವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರೊ| ಸುಮನ ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಪ್ರೊಫೆಸರ್ ಜಯಶೀಲ ಕುಮಾರ್ ರವರು ವಂದಿಸಿದರು. ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.

ರೋಟರಿ ಸಮುದಾಯ ದಳ ತಲ್ಲೂರು-ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಸಮುದಾಯ ದಳ ತಲ್ಲೂರು, ರೊ. ಕೆ. ಪಿ ಭಟ್ ದಂಪತಿಗಳು ಹಾಗೂ ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ರೋಟರಿ ಸಮುದಾಯ ದಳದ ಜಗದೀಶ್ ಆಚಾರ್ಯ, ಸದಾನಂದ ಆಚಾರ್ಯ, ರೊ. ಕೆ. ಪಿ. ಭಟ್, ರೊ. ಶೋಭಾ ಭಟ್, ರೊ. ಸತ್ಯನಾರಾಯಣ ಪುರಾಣಿಕ, ರೊ ಸಚಿನ್ ನಕ್ಕತ್ತಾಯ ಹಾಗೂ ಫಲಾನುಭವಿ ಶ್ರೀಮತಿ ರಕ್ಷಿತಾಳ ತಂದೆ ತಾಯಿ ಉಪಸ್ಥಿತರಿದ್ದರು.

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ನಡೆಸಿಕೊಟ್ಟರು. ಕುಂದಾಪುರ ರೋಟರಿ ದಕ್ಷಿಣ, ರೋಟರಿ ಜಿಲ್ಲಾ ನಿಧಿಯೊಂದಿಗೆ ಈ ಯೋಜನೆ ರೂಪಿಸಲು ಸಹಕರಿಸಿದುದಕ್ಕೆ ಅಭಿನಂದಿಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಮತ್ತು ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.

Tribute to Father Stan Swamy at Saint Joseph’s School – “He was a Prophet of Justice and Equality”/ಸೇಂಟ್‌ ಜೋಸೆಫ್‌ ಸ್ಕೂಲ್‌ ವಿಠಲ್‌ ಮಲ್ಯ ರಸ್ತೆ, ಬೆಂಗಳೂರು ಸ್ಟ್ಯಾನ್‌ ಸ್ವಾಮಿಯವರ ಪುಣ್ಯ ಸ್ಮರಣೆ

St. Joseph’s firmly believes in developing young people into men and women who selflessly serve others. A special assembly on the theme ‘Dream of A Caged Bird’ in honour of the late Fr. Stan Swamy SJ, was held on the 5th of July 2023, St Joseph’s at school,campus Bangalore, paid tribute to Fr Stan Swamy on his 2nd death anniversary in the school campus

Rev. Fr. Stan Swamy, a Jesuit priest, social activist, and human rights advocate, dedicated his life to fighting for the Rights of Tribals and Adivasis living in the remotest part of India.

The Chief Guest for the day was Mr. John Devaraj, a well-known sculptor, painter, architect, filmmaker, art director, singer, photographer, and noble human being, who had the privilege to work closely with Fr. Stan for the social cause and promote peace and equality. In his address, Mr. John Devaraj reminisced about the time spent with Fr. Stan to work for peace and reconciliation; he motivated the students to pick up pens rather than guns. He sang one of his original compositions ‘This little light of Stan’ as a tribute to Fr Stan. 

The Principal, Rev. Fr. Rohan D’Almedia encouraged the students to stand for justice and peace by imbibing the values of Honesty, courage, and sincerity, following the path laid by Fr. Stan.

The School Choir melodiously presented the song ‘This Little Guiding Light of Stan’. Several activities like essay writing, debate, role play, and extempore were conducted across the classes to ingrain the values followed by Fr Stan, an exemplary person to stand for the Adivasis.

“Our value system is important and we need to work as a community rather than as individuals in a capitalistic society” opined Rushil, a student of class 12 B

Nirvikar, a class 12 student,  was motivated by the life journey of Fr. Stan about the Adivasi culture of sharing the abundance of nature with nature.

“India’s culture is deeply rooted within the tribes of India as we can see in their interdependence and their connection to nature, which was one of the causes Fr. Stan stood with the Adivasis”, says Veeksha, a student of class 11B.

The assembly concluded with the students being educated to fight for their rights as well as for the ones who are underprivileged. As Fr Stan firmly believed that injustice anywhere is a threat to justice everywhere.

ಸೇಂಟ್‌ ಜೋಸೆಫ್‌ ಸ್ಕೂಲ್‌ ವಿಠಲ್‌ ಮಲ್ಯ ರಸ್ತೆ, ಬೆಂಗಳೂರು ಸ್ಟ್ಯಾನ್‌ ಸ್ವಾಮಿಯವರ ಪುಣ್ಯ ಸ್ಮರಣೆ

ಬೆಂಗಳೂರು: ಜು.5 “ಪಂಜರದ ಹಕ್ಕಿಯ ಕನಸು ” ಎಂಬ ಘೋಷ ವಾಕ್ಯದಡಿಯಲ್ಲಿ ಜುಲೈ 5, 2023 ರಂದು ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಸ್ಟ್ಯಾನ್‌ ಸ್ವಾಮಿಯವರ ಪುಣ್ಯಸ್ಮರಣೆಯನ್ನು ಸಕಲ ಗೌರವದಿಂದ ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ, ದಲಿತರ ಬಂಧುವಾಗಿ, ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರಾಗಿ, ಹಾಗೂ ವಿಶ್ವದ ಶಾಂತಿ ಸಂಗ್ರಹಾಲಯದ ಸ್ಥಾಪಕರಾಗಿ ನಿರಂತರ ನಿರ್ಗತಿಕರಿಗಾಗಿ ಜೀವನ ನಡೆಸಿದ ದಿವಂಗತ ಫಾದರ್‌ ಸ್ಟ್ಯಾನ್‌ ಸ್ವಾಮಿ ಎಸ್‌ ಜೆ ಅವರ ಬದುಕಿನ ಹಾದಿ ಇಂದಿನ ಯುವಪೀಳಿಗೆಗೆ ಆದರ್ಶವಾದದ್ದು. ಸಮಾಜದಲ್ಲಿ ಹಿಂದುಳಿದ ಜನಾಂಗದ ಶೋಷಣೆ, ಕೋಮುವಾದ, ವಾಕ್‌ ಸ್ವಾತಂತ್ರ್ಯದ ಕಗ್ಗೊಲೆ ಇಂತಹವುಗಳ ಪರವಾಗಿ ಹೋರಾಟ ನಡೆಸುವಂತ ಧೈರ್ಯ ಹಾಗೂ ಭಾರತದ ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯುವಂತಹ ಮನಸ್ಥಿತಿಯನ್ನು ಇಂದು ಭಾರತದ ೬೫ ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಯು ನಡೆಸಿದ ಕಾರ್ಯಕ್ರಮ ಪ್ರಶಂಸಿಸುವಂತಹುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವರ್ಲ್ಡ್‌ ಪೀಸ್‌ ಮ್ಯೂಸಿಯಂ ಸಂಸ್ಥಾಪಕರು. ಹಾಗೂ ನಿರ್ದೇಶಕರು ಆಗಿರುವ ಶ್ರೀಯುತ ಜಾನ್‌ ದೇವರಾಜ್‌ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ಬಂದೂಕು ಶಬ್ದದ ಬದಲಾಗಿ ಪೆನ್ನುಗಳು ಆಯುಧಗಳಾಗಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ತಮ್ಮ ಜೀವನದ ಬಹುಪಾಲು ಭಾರತದ ಬುಡಕಟ್ಟು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಸ್ಟ್ಯಾನ್‌ ಸ್ವಾಮಿಯವರನ್ನು ಸ್ಮರಿಸಿ ದರು. ನಂತರ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಘಾದರ್‌ ರೋಹನ್‌ ಡಿ ಅಲ್ಮೇಡಾ ಎಸ್‌ ಜೆ ಅವರು ಮಾತನಾಡಿ ಫಾದರ್‌ ಸ್ಟ್ಯಾನ್‌ ಸ್ವಾಮಿಯವರ ಹೋರಾಟ ಅತ್ಯಮೂಲ್ಯವಾದದ್ದು ನಾವು ಬದುಕಿನಲ್ಲಿ ಧೈರ್ಯ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನ್ಯಾಯ ಮತ್ತು ಶಾಂತಿಗಾಗಿ ನಿಲ್ಲಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಸಿಸ್ಟರ್‌ ಶೀನಾ ಜೋಸೆಫ್‌, ಶಾಲೆಯ ಸಂಯೋಜಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.