HOLY ROSARY CHURCH, KUNDAPUR – 450 th JUBILEE SOUVENIR 2021

ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು: ಸಿ.ಎಂ.ಮುನಿಯಪ್ಪ

ಕೋಲಾರ,ಜು.3: ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು. ಪ್ರತಿ ತಾಲ್ಲೂಕಿನಲ್ಲಿ 100 ಯುವಕರು ಇದ್ದರೆ ಇಡೀ ಜಿಲ್ಲೆಯನ್ನು ನೈತಿಕ ಶಕ್ತಿಯಿಂದ ನಿಯಂತ್ರಿಸಬಹುದು. ದಲಿತರು, ಬಡವರು, ಶೋಷಿತರಿಗೆ ನ್ಯಾಯ ಕಲ್ಪಿಸಬಹುದು ಎಂದು ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪ ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ದಲಿತ ಚಳವಳಿ. ಹೋರಾಟಗಾರರಿಗೆ ನೈತಿಕ ಭಯ, ನೈತಿಕ ಎಚ್ಚರ ಇರಬೇಕು. ಆಗ ನಾವು ಭ್ರಷ್ಟರಾಗುವುದಿಲ್ಲ. ಅದೇ ದಿಕ್ಕಿನಲ್ಲಿ ನಾವು ಹೋರಾಟ ರೂಪಿಸಿದೆವು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗ್ರಾಮದಲ್ಲಿ ಹುಟ್ಟುತ್ತಲೇ ಮಗುವಿಗೆ ಜೀತದ ಪಟ್ಟ ಕಟ್ಟುವ ಪದ್ಧತಿ ಇದ್ದದ್ದು ಶೋಚನೀಯ. 150 ಮಂದಿ ಜೀತದಾಳರಾಗಿದ್ದರು. ಅಲ್ಲಿಂದ ದಲಿತ ಚಳವಳಿ ಹೋರಾಟ ಶುರುವಾಯಿತು ಎಂದರು.
ಚಳವಳಿಗೆ ಗೌರವ ಡಾಕ್ಟರೇಟ್ ಅರ್ಪಿಸುತ್ತೇನೆ. 1974ರಿಂದ ಧರ್ಮಯುತವಾಗಿ, ನ್ಯಾಯಯುತವಾಗಿ ನಡೆಯಲು ಕಾರಣರಾದ ನಾಯಕರಿಗೆ ಅರ್ಪಣೆ ಮಾಡುತ್ತೇನೆ. ನನಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. ನಾನು ದನ ಕಾಯುವ ವ್ಯಕ್ತಿಯ ಮಗ. ಕುಟುಂಬ ಜೀತದಾಳಾಗಿತ್ತು. ದಲಿತ ಚಳವಳಿ ನನಗೆ ನೈತಿಕ ಶಕ್ತಿ ತುಂಬಿತು. ದನ ಕಾಯುವ ಪುತ್ರ, ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಧೈರ್ಯ ತುಂಬಿದ್ದು ದಲಿತ ಚಳವಳಿ. ಇದು ನನ್ನೊಬ್ಬನ ಶ್ರಮ ಅಲ್ಲ. ಹಲವರ ಪರಿಶ್ರಮ ಇದೆ ಎಂದು ಹೇಳಿದರು.
ಈಗಿನ ಹೋರಾಟ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಹೋರಾಟಗಾರರಿಗೆ ಕಣ್ಣು, ಕಿವಿ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.
ಡಾಕ್ಟರೇಟ್ ಪದವಿ ಬಗ್ಗೆ ಮುಜುಗರ ನನಗೆ ಇದೆ. ಅದರ ಗೌರವ ಕಳೆದು ಹೋಗಿದೆ. ಯಾರು ಬೇಕಾದರೂ ಡಾಕ್ಟರೇಟ್ ಪದವಿ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಉತ್ತಮರಿಗೆ ಸಿಕ್ಕರೂ ಅದಕ್ಕೆ ಗೌರವ ಇಲ್ಲವಾಗಿದೆ ಎಂದು ತಿಳಿಸಿದರು.
ಲೋಕಸಭೆ ಸ್ಪರ್ಧೆ ವಿಚಾರವಾಗಿ ನಾನು ಹಿಂದೆ ಹೋಗಲ. ಆಸೆ ಇಲ್ಲ. ಅದಾಗಿಯೇ ಬಂದರೆ ನೋಡೋಣ. ಬಹಳಷ್ಟು ನಿರೀಕ್ಷೆಇಲ್ಲ. ಅದಕ್ಕೆ ಬೇಕಾಗುವ ಹಣವೂ ಇಲ್ಲ. ಒತ್ತಡದ ಗುಂಪಾಗಿ ನಡೆಸಿಕೊಂಡು ಹೋಗಲು ಇಷ್ಟ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಇಡೀ ಪತ್ರಕರ್ತರಿಗೆ ಸಂತೋಷದ ವಿಚಾರ. ಪತ್ರಕರ್ತರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ವಿರಳ ಎಂದರು.
ದಲಿತ ಚಳವಳಿಗೆ ಮೂಲ ಕಾರಣರಲ್ಲಿ ಮುನಿಯಪ್ಪ ಕೂಡ ಒಬ್ಬರು. 1994ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕೋಲಾರಕ್ಕೆ ಜನತಾ ದರ್ಶನಕ್ಕೆ ಬಾರದಂತೆ ತಡೆಯೊಡ್ಡುವುದಾಗಿ ಹೇಳಿದ್ದ ಪ್ರಕರಣ ಹಾಸ್ಟೆಲ್‍ನಲ್ಲಿ ಮಕ್ಕಳ ಸಂಖ್ಯೆ ಕಡಿತಗೊಳಿಸುವುದಾಗಿ ಹೇಳಿದ್ದ ಅಂದಿನ ಜಿ.ಪಂ ಸಿಇಒ ಬಿ.ಎಚ್.ಅನಿಲ್ ಕುಮಾರ್ ಅವರನ್ನು ಕಚೇರಿ ಒಳಗೆ ಹೋಗಲು ಬಿಡದ್ದು ಸೇರಿದಂತೆ ವಿವಿಧ ಹೋರಾಟ ಉಲ್ಲೇಖಿಸಿದರು. ನೇರ ಹೋರಾಟ ಅವರದ್ದು. ಸಂಚಿಕೆ ಎಂಬುದು ಹೋರಾಟಗಳ ಉಗಮ ಸ್ಥಳ ಎಂದು ನುಡಿದರು.
ನಚಿಕೇತ ನಿಲಯ ಟಿ.ಚನ್ನಯ್ಯ ಕನಸಿನ ಕೂಸು. ಅದನ್ನು ಸಂಪನ್ಮೂಲ ಕೇಂದ್ರವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮುನಿಯಪ್ಪ ಪ್ರಯತ್ನಿಸಬೇಕು. ರಾಜ್ಯಾಧಿಕಾರ ಸಿಗುವ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು, ಹಿಂದಿನ ಹೋರಾಟ ಪ್ರಭಾವಕಾರಿಯಾಗಿತ್ತು. ಹೋರಾಟ ನಡೆದರೆ ಅಧಿಕಾರಿಗಳು ಬೆದರುತ್ತಿದ್ದರು. ಅಂಥ ಹೋರಾಟ ನಡೆಸಿದವರು ಮುನಿಯಪ್ಪ. ಸರ್ವ ಜನಾಂಗದವರಿಗೆ ನಾಯಕತ್ವ ನೀಡಿದವರು. ಈಗ ಸ್ವಾರ್ಥಕ್ಕೆ, ವೈಯಕ್ತಿಕ ಲಾಭಕ್ಕೆ ಹೋರಾಟ ನಡೆಸಲಾಗುತ್ತದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ಚಳವಳಿಗಳ ತವರೂರು. ನಾಲ್ಕು ದಶಕಗಳ ಹೋರಾಟ. ಹೋರಾಟದ ಫಲವಾಗಿ ಅನೇಕ ಹಾಸ್ಟೆಲ್ ಆರಂಭವಾಯಿತು. ಶೋಷಿತರು, ಬಡವರಿಗೆ ಭೂಮಿ ಸಿಕ್ಕಿತು. ನಾಯಕತ್ವದ ಗುಣ ಕರಗತವಾಗಿದೆ ಎಂದು ತಿಳಿಸಿದರು.
ಹೊಸ ಪೀಳಿಗೆಯನ್ನು ಹೋರಾಟಕ್ಕೆ ತರಲು ಪ್ರಯತ್ನಿಸಿದರು. ಈಗಿನ ಕಾಲಘಟ್ಟದಲ್ಲಿ ಆಗಿನ ರೀತಿ ಹೋರಾಟ ನಡೆಸಿದ್ದರೆ ಬದುಕಿ ಉಳಿಯುತ್ತಿರಲಿಲ್ಲವೇನೋ? ಎಂದರು.
ರಾಜ್ಯಾಧಿಕಾರ ಪಡೆಯುವಲ್ಲಿ ಹೋರಾಟ ಯಶಸ್ವಿಯಾಗಿಲ್ಲ. ಆದರೆ, ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುನಿಯಪ್ಪ ಒಂದು ಶಕ್ತಿ ಎಂದು ನುಡಿದರು.
ಸಂಘದ ಖಜಾಂಚಿ ಸುರೇಶ್ ಕುಮಾರ್ ನಿರೂಪಿಸಿದರು. ಸದಸ್ಯ ಆಸೀಫ್ ಪಾಷ ಸ್ವಾಗತಿಸಿದರು. ಹಿರಿಯ ಪತ್ರಕರ್ತರಾದ ಕೋ.ನಾ.ಮಂಜುನಾಥ್, ಸಿ.ವಿ.ನಾಗರಾಜ್, ಬಿ.ಸುರೇಶ್ ಮಾತನಾಡಿದರು.
ಹಿರಿಯ ಪತ್ರಕರ್ತರಾದ ಅಬ್ಬಣಿ ಶಂಕರ್, ಓಂಕಾರಮೂರ್ತಿ, ಕೆ.ಬಿ.ಜಗದೀಶ್, ಸ್ಕಂದಕುಮಾರ್, ಎನ್.ಶಿವಕುಮಾರ್, ಮದನ್, ಮಾಮಿ ಪ್ರಕಾಶ್, ಸಿ.ವಿ.ನಾಗರಾಜ್, ಎನ್.ಸತೀಶ್, ಕಾರಂಗುಂಟೆ ನಾರಾಯಣಸ್ವಾಮಿ, ವಿಜಿಕುಮಾರ್, ಪ್ರಕಾಶ್, ವೆಂಕಟೇಶ್‍ಬಾಬಾ, ರಾಜೇಂದ್ರಸಿಂಹ, ಎಸ್.ರವಿಕುಮಾರ್, ಸಮೀರ್ ಅಹಮದ್, ಸೈಯದ ತಬ್ರೇಜ್, ಈಶ್ವರ್, ವೆಂಕಟೇಶ್, ಮಂಜುನಾಥ್, ಕಿರಣ್, ಅಮರ್, ಪುರುಷೋತ್ತಮ, ಸಿ.ಅಮರೇಶ,
ಗಂಗಾಧರ್, ಗೋಪಿ, ಪವನ್, ಕುಮಾರ್, ನಾಗೇಶ್ ಹಾಗೂ ಪತ್ರಕರ್ತರು ಇದ್ದರು.

ಆರ್‌.ಎನ್.‌ಶೆಟ್ಟಿ : ಕುಮಾರಿ ಪೂರ್ವಿಕಾಳಿಂದ ಶಾಸ್ತ್ರೀಯ ನೃತ್ಯದಲ್ಲಿ ರಾಷ್ಟ್ರಮಟ್ಟದ ಸಾಧನೆ

ಕುಂದಾಪುರದ ಆರ್‌.ಎನ್.‌ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಕುಮಾರಿ ಪೂರ್ವಿಕಾ ಇವರು ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ.

ಕು.ಪೂರ್ವಿಕಾ ಇವರು ವಿದುಷಿ ಪ್ರವಿತ ಮತ್ತು ಅಶೋಕ್ ಕುಮಾರ್ ರವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಮೆಚ್ಚಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.‌ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.  

ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಪದವಿ ಕಾಲೇಜಿನ ಪ್ರಥಮ ಸೆಮಿಸ್ಟರ್‌ ಶ್ಲಾಘನೀಯ ಫಲಿತಾಂಶ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ ಬ್ಯಾಚುಲರ್‌ ಆಫ್‌ ಕಾಮರ್ಸ್‌ (ಬಿಕಾಂ) ಮತ್ತು ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ (ಬಿಸಿಎ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಐಎಂಜೆಐಎಸ್‌ ಸಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಯುವ ಮನಸ್ಸುಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಬಿಂಬಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಸಾಧನೆಗಳನ್ನು ಗುರುತಿಸಿ ಕೊಳ್ಳಲು ಅವಕಾಶವಾಗಿದೆ. ಶೈಕ್ಷಣಿಕ ಪ್ರಯಾಣದುದ್ದಕ್ಕೂ ವಿದ್ಯಾರ್ಥಿಗಳನ್ನು ಪೋಷಿಸುವ ಮತ್ತು ಬೆಂಬಲಿಸುವಲ್ಲಿ ಉಪನ್ಯಾಸಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಪ್ರಯತ್ನಕ್ಕೆ ಕನ್ನಡಿಯಾಗಿದೆ. ಅಂತಹ ಪ್ರತಿಭಾವಂತ ಮತ್ತು ದೃಢನಿಶ್ಚಯದ ವಿದ್ಯಾರ್ಥಿಗಳೊಂದಿಗೆ, ಉಜ್ವಲ ಭವಿಷ್ಯವನ್ನು ರೂಪಿಸುವ ಬಲವಾದ ಭರವಸೆಯನ್ನು ಐ ಎಂ ಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಸಂಸ್ಥೆ ಹೊಂದಿದೆ.

ಬಿಕಾಂ ಫಲಿತಾಂಶ: ಬಿಕಾಂ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ, ಶೇಕಡಾ 91% ವಿದ್ಯಾರ್ಥಿಗಳು ತೇರ್ಗಡೆ ಶ್ರೇಣಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳಲ್ಲಿನ ಸಮರ್ಪಣೆ ಮತ್ತು ಪರಿಶ್ರಮವನ್ನು ಕಾಣಬಹುದು. ಬಿಕಾಂ ಸ್ಟ್ರೀಮ್‌ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಸಭಾ 8.46 ರ ಅತ್ಯುತ್ತಮ 684 ಅನ್ನು ಗಳಿಸಿದ್ದು, ಇದಲ್ಲದೆ, ಬಿಕಾಂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಕಡಾ 20% ವಿದ್ಯಾರ್ಥಿಗಳು 8 ಕ್ಕಿಂತ ಹೆಚ್ಚಿನ 684 ಅನ್ನು ಸಾಧಿಸಿದ್ದಾರೆ. ಉಳಿದಂತೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಏಳಕ್ಕಿಂತ ಹೆಚ್ಚಿನ 688 ಗಳಿಸಿವಲ್ಲಿ ಯಶಸ್ವಿಯಾಗಿದ್ದಾರೆ… ಇದು. ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಶಿಕ್ಷಣ ಸಂಸ್ಥೆಯ ಸಮರ್ಪಣೆಯನ್ನು ಸೂಚಿಸುತ್ತದೆ ಹಾಗು ವಿದ್ಯಾರ್ಥಿಗಳ ಸತತವಾದ ಶ್ರೇಷ್ಠತೆಗಾಗಿ ಮಾಡಿದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ಬಿ.ಸಿ.ಎ. ಫಲಿತಾಂಶಗಳು: ಬಿ.ಸಿ.ಎ. ಫಲಿತಾಂಶಗಳು ಪರೀಕ್ಷೆಗಳಿಗೆ ಹಾಜರಾದ 80 ವಿದ್ಯಾರ್ಥಿಗಳ ಪ್ರಯತ್ನ ಮತ್ತು ಫಲಿತಾಂಶ ಉತ್ತಮವಾಗಿದ್ದು, ಅವರಲ್ಲಿ ಶೇಕಡಾ 77% ತೇರ್ಗಡೆ ಶ್ರೇಣಿಗಳನ್ನು ಪಡೆದುಕೊಂಡಿರುವುದರಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಅವರ ಅಧ್ಯಯನದ ಬದ್ಧತೆಯನ್ನು ನಾವು ಕಾಣಬಹುದು. ಬಿ.ಸಿ.ಎ. ಸ್ಟ್ರೀಮ್‌ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕವನ್ನು ಪಡೆದಿರುವ ವಿದ್ಯಾರ್ಥಿನಿ ನೇತ್ರಾವತಿ 9.44 ರಷ್ಟು 68% ಸಾಧಿಸಿದ್ದಾರೆ. ಈ ಅಸಾಧಾರಣ ಕಾರ್ಯಕ್ಷಮತೆಯು ವಿಷಯದಲ್ಲಿ ವಿದ್ಯಾರ್ಥಿನಿಯ ಪ್ರಾವೀಣ್ಯತೆಯನ್ನು ಮಾತ್ರವಲ್ಲದೆ ಕಂಪ್ಯೂಟರ್‌ ಅಪ್ಲಿಕೇಶನ್‌ಗಳ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಇದಲ್ಲದೆ, ಬಿ.ಸಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 26%, ವಿದ್ಯಾರ್ಥಿಗಳು 8 68 ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶವು ಶೈಕ್ಷಣಿಕ ಯಶಸ್ಸಿಗೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಹಾಗು ಅವರು ಕಂಪ್ಯೂಟರ್‌ ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾರೆ ಎಂದು ಸೂಚಿಸುತ್ತದೆ.

ಅನ್ಯ ಚಟುವಟಿಕೆ ಹಾಗು ಕಲಿಕೆಯ ನಡುವೆ ಸಾಧನೆ ಕಾಲೇಜಿನ ವಿದ್ಯಾರ್ಥಿಗಳು ಪಠ್ಯೇತರವಾಗಿ ಸಾಂಸ್ಕೃತಿಕ ಹಾಗು. ಕ್ರೀಡಾ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಈ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಿದ್ಯಾಸಂಸ್ಥೆಯಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಸೈಬರ್‌ ಸೆಕ್ಯೂರಿಟಿ, 0೩, ಆ, ಅಕೌಂಟಿಂಗ್‌ ಮತ್ತು ಟಾಕ್ಸಾಷನ್‌ ಸೇರಿದಂತೆ ಅನೇಕ ಹೆಚ್ಚುವರಿ ವಿಷಯಗಳ ಅಧ್ಯಯನ ನಡೆಯುತ್ತಿದ್ದು, ಅವುಗಳನ್ನು ಕಲಿಯುತ್ತಾ ಪದವಿ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿರುವುದು ಸಂಸ್ಥೆಗೆ ಸಾರ್ಥಕತೆಯ ಭಾವ ತಂದಿದೆ ಎಂದು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಬಿಕಾಂ ಮತ್ತು ಬಿಸಿಎ ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಪ್ರದರ್ಶಿಸಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆಯಾ ವಿಷಯ ಕ್ಷೇತ್ರಗಳಲ್ಲಿನ ಬದ್ಧತೆ ಈ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗಿದೆ.

ಈ ಫಲಿತಾಂಶಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ, ಅಲ್ಲದೆ ಉತ್ಕೃಷ್ಟತೆಗಾಗಿ ಶ್ರಮಿಸಲು ಮತ್ತು ಅವರ ಶೈಕ್ಷಣಿಕ ಶ್ರೇಷ್ಟತೆಯನ್ನು ಗುರುತಿಸಲು ಸಹಾಯವಾಗುತ್ತದೆ. ಈ ಸಂಧರ್ಭದಲ್ಲಿ ಐಎಂಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳನ್ನು ಹಾರೈಸಿದೆ.

ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ:ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ ಸಂಕಷ್ಟ ಎದುರಾಗಿದ್ದು, ಇಂದಿನ ಪರಿಸ್ಥತಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಹೊದಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆರ್.ತಿಮ್ಮಸಂದ್ರ ಗ್ರಾಮದ ಸಮೀಪ ಡಾ|| ಬಿ.ಆರ್ ಅಂಬೇಡ್ಕರ್ ವಸತಿಶಾಲೆಯ ಆವರಣದಲ್ಲಿ ಶನಿವಾರ ವನಮಹೋತ್ಸವ ಹಾಗು ಕೋಟಿ ವೃಕ್ಷಾರೋಹಣ ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಬಾಲ್ಯದಿಂದಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವನ್ನು ಮೈಗೂಡಿಸಿ ಕೊಳ್ಳಬೇಕು ಹಾಗೆಯೇ ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು, ಪರಿಸರದ ಉಳಿವುಗಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರ ನಾಶವನ್ನು ತಡೆಯಬೇಕಾಗಿದೆ ಗಿಡಗಳನ್ನು ನೆಡುವುದು ಮುಖ್ಯವಲ್ಲಾ ಅದನ್ನು ಕಾಪಾಡಿಕೊಂಡಾಗ ಮಾತ್ರ ಪರಿಸರ ಉಳಿಯುತ್ತದ್ದೆ ಎಂದರು.
ಪರಿಸರವನ್ನು ಸಂರಕ್ಷಿಸದಿದ್ದರೆ ಮುಂದೆ ಕಠಿಣ ದಿನಗಳನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಗಿ-ಮರಗಳನ್ನು ಬೆಳುಸುವುದರಿಂದ ಶುದ್ದ ಗಾಳಿ ದೊರೆಯುವ ಜೊತೆಗೆ ಸಕಾಲದಲ್ಲಿ ಮಳೆಬೆಳೆಯಾಗುತ್ತದೆ. ಇದರಿಂದ ರೈತರು ಮತ್ತು ಜನಸಾಮಾನ್ಯರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ ವನಮಹೋತ್ಸವ ಕಾರ್ಯಕ್ರಮಗಳು ಆಚರಣೆಗೆ ಮಾತ್ರ ಸೀಮಿತವಾಗಬಾರದು ಪರಿಸರ ಕುರಿತು ಮುಂದಿನ ಯುವ ಪೀಳಿಗೆಗೆ ನಾವೆಲ್ಲರೂ ತಿಳಿಸಿಕೊಡಬೇಕು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಎನ್ ರವಿಕೀರ್ತಿ ಮಾತನಾಡಿ ಪ್ರಕೃತಿಯ ರಕ್ಷಣೆಗೆ ಮಾನವನಕೊಡುಗೆ ಅಗತ್ಯವಾಗಿದೆ ಅರಣ್ಯ ಇಲಾಖೆಯೊಂದಿಗೆ ಜನಸಾಮಾನ್ಯರಿಗೂ ಪ್ರಕೃತಿ ರಕ್ಷಣೆ ಮಾಡುವ ಜವಾಬ್ದಾರಿ ಇದೆ ಐಷಾರಾಮಿ ಜೀವನಕ್ಕೆ ಪ್ರಕೃತಿಯನ್ನು ಬಲಿಕೊಡದೇ ಅದರಿಂದ ಸಿಗುವ ಕೊಡುಗೆಗಳ ಕುರಿತು ಯೋಚಿಸಿ ಅದರ ರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಿಂದ ಕಲ್ಲೂರು ಸಮೀಪ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಹೇಶ್, ಪಿಡಿಓ ಕೆ.ಪಿ. ಶ್ರೀನಿವಾಸರೆಡ್ಡಿ, ಸಮಾಜಿಕ ವಲಯ ಅರಣ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಜಾವೀದ್, ನರಸಿಂಹ, ಇನ್ನಿತರರು ಉಪಸ್ಥಿತರಿದ್ದರು.

“ರಕ್ತದಾನ ಜೀವದಾನಕ್ಕೆ ಸಮಾನ”ಅತಿ ವಂ.ಸ್ಟ್ಯಾನಿ ತಾವ್ರೊ

ಕುಂದಾಪುರ, ಜು.1: ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಇವರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ,ಆರೋಗ್ಯ ಆಯೋಗ, ಫಾಲ್ಕನ್ ಕ್ಲಬ್ ತೆಕ್ಕಟ್ಟೆ, ಬ್ಲಡ್ ಡೋನರ್ಸ್ ಕುಂದಾಪುರ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಜುಲಾಯ್ 1 ರಂದು
ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೋಲಿ ರೋಸರಿ ಚರ್ಚಿನ ಧರ್ಮ ಗುರುಗಳಾದ ಅತಿ ವಂದನೀಯ ಸ್ಟ್ಯಾನಿ ತಾವ್ರೊ ” ರಕ್ತದಾನ ಕೇವಲ ರಕ್ತವನ್ನು ದಾನವಾಗಿ ಕೊಡುವುದು ಮಾತ್ರವಲ್ಲ ಜೀವದಾನಕ್ಕೆ ಸಮಾನ ” ಎಂದು ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮೆನ್ ಶ್ರೀ ಜಯಕರ್ ಶೆಟ್ಟಿ ಮಾತನಾಡಿ ’ರಕ್ತದ ಅಗತ್ಯತೆ ಹೆಚ್ಚಾಗಿ ಇರುವ ಕುಂದಾಪುರ ಪರಿಸರದಲ್ಲಿ ಇಂತಹ ಅನೇಕ ಶಿಬಿರಗಳ ಆಯೋಜನೆ ಅಗತ್ಯ ಮತ್ತು ಸಮಾಜಕ್ಕೆ ಸ್ಪೂರ್ತಿದಾಯಕ’ ಎಂದರು.

ವೇದಿಕೆಯಲ್ಲಿ ಸಹಾಯಕ ಧರ್ಮ ಗುರುಗಳು ಅಶ್ವಿನ್ ಅರಾನ್ಹಾ, ಅಬ್ದುಲ್ ಮೋಸಿನ್ ಉಪಾಧ್ಯಕ್ಷರು ಪಾಲ್ಕನ್ ಕ್ಲಬ್ ,ಆದಿಲ್ ಗಫೂರ್ ಅಧ್ಯಕ್ಷರು ಸ್ಪೋರ್ಟ್ಸ್ ಕಮಿಟಿ ,ವಸಿಂ ಭಾಷಾ ಅಧ್ಯಕ್ಷರು ಜಾಮಿಯಾ ಮಸೀದಿ ,ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಮ್ಯಾನೇಜರ್ ಆದ ರಾಯಲ್ ಲುವಿಸ್ ,ವಿಲ್ಸನ್ ಅಲ್ಮೇಡಾ ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷರು, ಉಪಸ್ಥಿತರಿದ್ದರು .
ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕರಾದ ಪ್ರೇಮ ಡಿಕುನ್ಹಾ ಪ್ರತಿನಿಧಿಸಿದರು. ಕಥೋಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷೆ ಶೈಲಾ ಅಲ್ಮೇಡ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕರಾದ ಡಾ. ಸೋನಿ ಡಿಕೋಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ಸಹಕಾರ್ಯದರ್ಶಿ ಸಂಗೀತ ಸರ್ವರನ್ನು ವಂದಿಸಿದರು.

ಸಿರಿವಂತಾಚ್ಯಾ ಸಾಹಿತ್ಯಾಚೆರ್ ಅಧ್ಯಯನಾಚೆಂ ಕಥಾಪಾಠ್ ಶಿಂಕಳಿಚೆಂ ಉಗ್ತಾವಣ್

1 ಜುಲಾಯ್ 2023: ಆಶಾವಾದಿ ಪ್ರಕಾಸನ್ ಆನಿ ಧೆಂಪೆ ಕೊಲೆಜ್ ಗೊಂಯ್ ಹಾಂಚ್ಯಾ ಜೋಡ್ ಪಾಲಂವಾಖಾಲ್, ನಾಮ್ನೆಚೊ ಕೊಂಕಣಿ ಕಥಾಕಾರ್, ವಾವ್ರಾಡಿ ಸಿರಿವಂತ್ (ಜೆರೊಮ್ ಸಿರಿಲ್ ವೇಗಸ್) ಹಾಚ್ಯಾ ಸಾಹಿತ್ಯಾಚೆರ್ ಅಧ್ಯಯನ್ ಚಲಂವ್ಚ್ಯಾ ಇರಾದ್ಯಾನ್ ಚಲುಂಕ್ ಆಸ್ಚ್ಯಾ ರಾಶ್ಟ್ರೀಯ್ ಮಟ್ಟಾಚ್ಯಾ ವೆಬಿನಾರಾಂಚೆಂ ’ಕಥಾಪಾಠ್ ಚೊವ್ತಿ ಶಿಂಕಳೆಚೆಂ’ ಉಗ್ತಾವಣ್ ಸನ್ವಾರಾ (1 ಜುಲಾಯ್ 2023) ಸಾಂಜೆರ್ 4:30 ವೊರಾರ್ ಜಾಲೆಂ. ಧೆಂಪೆ ಕೊಲೆಜಿಂತ್ ’ಭಾರತೀಯ್ ಭಾಸಾಂಚಿ ಮುಖೇಸ್ತ್’ ಜಾವ್ನಾಸ್ಚಾ ಪ್ರೊಫೆಸರ್ ಅಂಜು ಸಾಖರ್‌ದಾಂಡೆನ್ ಒಳೊಕ್ ಕರುನ್ ಯೆವ್ಕಾರಾಚೆಂ ಉಲವ್ಪ್ ಕರ್ತಚ್ ಧೆಂಪೆ ಕೊಲೆಜಿಚಿ ಪ್ರಿನ್ಸಿಪಾಲ್, ಪ್ರೊಫೆಸರ್ ದೊ|ವೃಂದಾ ಪಿ. ಬೋರ್ಕರಾನ್ ಅಪ್ಲ್ಯಾ ಉಗ್ತಾವಣ್ ಉಲಪ್ವಾಂತ್ ’ಕೊಂಕಣಿ ಭಾಸ್, ಕೊಂಕಣಿ ಸಾಹಿತ್ಯ್ ಜೆಂ ಹೆರ್ ಲಿಪಿ-ಬೊಲಿಂನಿ ಆಸಾ, ತಾಚೊ ಅಭ್ಯಾಸ್ ಕರ್ಚಿ ಗರ್ಜ್ ಆಸಾ ಆನಿ ಶೈಕ್ಷಣಿಕ್ ರಿತಿಚ್ಯಾ ಹ್ಯಾ ಕಾಮಾಸಾಳಾಂನಿ ಭಾಗ್ ಘೆವ್ನ್ ಫಾಯ್ದೊ ಜೊಡ್ಚ್ಯಾ ವಿಧ್ಯಾರ್ಥಿಂಚಿ ತಶೆಂಚ್ ಅಸಲಿಂ ಉಪಕ್ರಮಾಂ ಮಾಂಡುನ್ ಹಾಡುಂಕ್ ಸಹಭಾಗಿತ್ವ್ ಘೆತ್ಲೆಲ್ಯಾ ಸಮೇಸ್ತಾಂಚಿ ಥೊಕ್ಣಾಯ್ ಕೆಲಿ.

ಕಥಾಪಾಠಾಚ್ಯಾ ತೀನ್ ಶಿಂಕಳೆಂಚೊ ತಶೆಂಚ್ ಕಥಾಪಾಠ್ ಅಧ್ಯಯನ್ ವೆಬಿನಾರಾಂತ್ಲ್ಯಾ ಪ್ರಬಂಧಾಂಚ್ಯಾ ಪುಸ್ತಕಾಂಚೊ ಮೊಟ್ವೊ ವಿವರ್ ದಿವುನ್ ವಲ್ಲಿ ಕ್ವಾಡ್ರಸಾನ್ ಸಿರಿವಂತಾಚಿ ಸವಿಸ್ತಾರ್ ಒಳೊಕ್ ತಶೆಂಚ್ ’ಮಮಶಕ್ತಿ ಕಮಲನಾಥ’ (ದೇವ್‌ಚ್ ಮ್ಹಜಿ ಸಕತ್) ಧ್ಯೇಯಾಖಾಲ್ 1966 ಇಸ್ವೆಂತ್ ಸಿರಿವಂತಾನ್ ಸುರು ಕೆಲ್ಲ್ಯಾ ಸಾಳಕ್ ಪ್ರಕಾಶನಾಚ್ಯಾ 88 ಪುಸ್ತಕಾಂಚಿ ಒಳೊಕ್ ಕರುನ್ ಹೆಚ್ ಮಯ್ನ್ಯಾಂತ್ ಚಲುಂಕ್ ಆಸ್ಚ್ಯಾ ವೆಬಿನಾರಾಂಚೊ ವಿವರ್ ದಿಲೊ.

8 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚಿ ಸಾಹಿತ್ಯಿಕ್ ಒಳೊಕ್ ಆನಿ ಸಾಳಕ್ ಪ್ರಕಾಶನ್ (ಚಲಯ್ತಾ: ವಲ್ಲಿ ಕ್ವಾಡ್ರಸ್)
15 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚ್ಯಾ ಕಥೆಂನಿ ಅಸ್ತುರಿಚೊ ಪಾತ್ರ್ (ಚಲಯ್ತಾ: ಫೆಲ್ಸಿ ಲೋಬೊ ದೆರೆಬೈಲ್)
22 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚಿಂ (ಜೆರಿ ಲುವಿಸ್) ಹಾಸ್ಯ್ ಬರ್ಪಾಂ (ಚಲಯ್ತಾ: ಫ್ಲಾವಿಯಾ ಆಲ್ಭುಕರ್ಕ್)
29 ಜುಲಾಯ್ (ಸಾಂಜೆರ್ 4:30 ವೊರಾಂಕ್): ಕಥಾಪಾಠ್ ಚೊವ್ತ್ಯಾ ಶಿಂಕಳೆಚೆಂ ಸಂಪ್ಣೆಚೆಂ ವೆಬಿನಾರ್

ಪ್ರಮುಖ್ ಉಲವ್ಪಿ ಮಾನೆಸ್ತ್ ಸ್ಟೀಫನ್ ಹೆರಾಲ್ಡ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅಪ್ಲ್ಯಾ ಉಲವ್ಪಾಂತ್  ಸಿರಿವಂತಾ ಚಿ, ತಾಚ್ಯಾ ವೆಕ್ತಿತ್ವಾಚಿ ಖೊಲಾಯೆನ್ ಒಳೊಕ್ ಕರುನ್ ದಿವುನ್ “ಸಿರಿವಂತ್ ಏಕ್ ವೆಕ್ತಿ ನ್ಹಯ್, ಬಗಾರ್ ಏಕ್ ಸಂಸ್ಥೊ ಜಾವ್ನಾಸ್ಲೊ ಆನಿ ಕೊಂಕಣಿ ವಾವ್ರ್ ಕರ್ತೆಲ್ಯಾಂಕ್ ಏಕ್ ದೇಕ್ ಜಾವ್ನ್ ಅಪ್ಲೆಂ ಜಿವಿತ್‌ಚ್ ಕೊಂಕಣಿಕ್ ಸಮರ್ಪಿತ್ ಕೆಲ್ಲೊ ಮಹಾನ್ ಸಾಹಿತಿ/ವಾವ್ರಾಡಿ” ಮ್ಹಣಾಲೊ. ಅನ್ಯೇಕ್ ಉಲವ್ಪಿ ಮಾ|ಪ್ರತಾಪ್ ನಾಯ್ಕಾನ್ ಸಿರಿವಂತಾಸವೆಂ ಅಪ್ಣಾಕ್ ಆಸ್‌ಲ್ಲ್ಯಾ ಖಾಸ್ ಇಸ್ಟಾಗತೆವಿಶಿಂ ಉಲವ್ನ್, “ಸಿರಿವಂತ್ ತಸಲೊ ವಾವ್ರಾಡಿ ಕೊಂಕಣಿಂತ್ ಉದೆವ್ನ್ ಆಯಿಲ್ಲೆವರ್ವಿಂ ಕೊಂಕಣಿ ಭಾಸೆಚ್ಯಾ ಸಮಗ್ರ್ ಗಿರೇಸ್ತ್‌ಕಾಯ್ ಜೊಡುಂಕ್ ಸಕ್ಲ್ಯಾಂವ್” ಮ್ಹಣಾಲೊ. ಸಯ್ರಿಂ ಜಾವ್ನ್ ಹಾಜರ್ ಆಸ್ಲೆಲ್ಯಾ ದೊ|ಆಸ್ಟಿನ್ ಪ್ರಭು, ಕಾಣಿಕ್ ಪತ್ರಾಚೊ ಸಂಪಾದಕ್ ಮಾನೆಸ್ತ್ ಅವಿಲ್ ರಾಸ್ಕಿನ್ಹಾ ಆನಿ ಮಾನೆಸ್ತ್ ಜೆರಾಲ್ಡ್ ವಿ. ಕಾರ್ಲೊ ಹಾಣಿಂ ಸಿರಿವಂತಾವಿಶಿಂ ಅಪ್ಲಿಂ ಭಗ್ಣಾಂ ಆನಿ ವಿಚಾರ್ ಉಚಾರ್ಲೆ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಠಯ್ಲೆ.

“ಜ್ಞಾನದ ಕಡಲಿನ ಶ್ರೇಷ್ಠ ಮುತ್ತು ಡಿವಿಜಿ ರವರ ಮಂಕುತಿಮ್ಮನ ಕಗ್ಗ” – ಬಿ.ಆರ್. ರವೀಂದ್ರ

ರಚನೆ:- ಬಿ.ಆರ್. ರವೀಂದ್ರ,  ವಕೀಲರು ಮತ್ತು ಸಾಹಿತಿಗಳು ಕೋಲಾರ.

ಡಿವಿಜಿ ಎಂಬ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅವರ “ಮಂಕುತಿಮ್ಮನ ಕಗ್ಗ” ಆ ಗ್ರಂಥಕ್ಕೆ ಈ ಹೆಸರು ಇಡುವಲ್ಲಿ ಅವರ ಜಾಣ್ಮೆಯನ್ನು ನಾವು ಕಾಣಬಹುದು. ಡಿವಿಜಿ ರವರು ಅದ್ಭುತ ವಿಚಾರವಂತರು, ಜ್ಞಾನಿಗಳು, ಅವರು ಸಾಹಿತ್ಯದಲ್ಲಿ ಕೈಯಾಡಿಸದೆ ಬಿಟ್ಟ ಪ್ರಕಾರವಿಲ್ಲ. ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸಹ ಕನ್ನಡ ಭಾಷೆಯ ಜೊತೆಗೆ ಅವರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅದ್ಭುತ ಪಾಂಡಿತ್ಯವನ್ನು ಪಡೆದಿದ್ದವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಈ ಕಾರಣದಿಂದಲೇ ಶಿವರಾಮ ಕಾರಂತರನ್ನು ಕನ್ನಡದ ಅತ್ಯುತ್ತಮ ಕವಿ ಯಾರು ಎಂದು ಕೇಳಿದಾಗ ಅವರು “ಡಿವಿಜಿ” ಎಂದು ತಟ್ಟನೆ ಹೇಳಿದ್ದಾರೆ. 

ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂಬ ಗೌರವಕ್ಕೆ ಪಾತ್ರರಾದವರು ಡಿವಿಜಿ ರವರು. ಅವರು ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರದ ಭಾರತವನ್ನು ಕಂಡವರು, ಅವರ ಜೀವಿತ ಕಾಲದಲ್ಲಿ ರಾಜಪ್ರಭುತ್ವವನ್ನು ಹಾಗೂ ಪ್ರಜಾಪ್ರಭುತ್ವವನ್ನು ಅಂದರೆ ಎರಡೂ ಸನ್ನಿವೇಶಗಳಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ಕಂಡವರು. ಹಾಗೆಯೇ ಜನರ ಕಷ್ಟ ನಷ್ಟವನ್ನು ಬಿಂಬಿಸುವ, ಸಮಾಜವನ್ನು ಬಹಳ ಹತ್ತಿರದಿಂದ ಕಾಣುವ ಪತ್ರಿಕೋದ್ಯಮದಲ್ಲಿ ದುಡಿದು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು‌. ಅವರು ಕನ್ನಡ ಭಾಷೆಯ ಪತ್ರಿಕೆಗಳನ್ನಷ್ಟೇ ಅಲ್ಲದೆ “ಹಿಂದೂ” ಮತ್ತು”ಇಂಡಿಯನ್ ಪೇಟ್ರಿಯಟ್” ಮುಂತಾದ ಹಲವು ಇಂಗ್ಲಿಷ್ ಭಾಷೆಯ ಪ್ರಸಿದ್ಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವುದಲ್ಲದೆ ಹಲವು ಪತ್ರಿಕೆಗಳನ್ನು ಮುನ್ನಡೆಸಿದ ಕೀರ್ತಿ ಸಹ ಡಿವಿಜಿ ರವರಿಗೆ ಸಲ್ಲುತ್ತದೆ. ಇಂತಹ ಅದ್ಭುತವಾದ ಜೀವನಾನುಭವ ಪಡೆದ ಡಿವಿಜಿಯವರು ತಮ್ಮ ಜೀವನಾನುಭವವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ “ಜೀವನ ಧರ್ಮ ಯೋಗ” ಎಂಬ ಕೃತಿಯಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಲ್ಲದೆ, ನಾಟಕಗಳನ್ನು ಬರೆದಿದ್ದಾರೆ, ಇಂಗ್ಲೀಷ್ ನ ಶೇಕ್ಸ್ ಪಿಯರ್ ನಾಟಕಗಳನ್ನು ಅನುವಾದ ಮಾಡುವುದರ ಜೊತೆಗೆ ಅನುವಾದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ಶಿಶು ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ರಾಜ್ಯಶಾಸ್ತ್ರದ ಬಗ್ಗೆ ಬರೆದಿದ್ದಾರೆ, ಹಲವಾರು ವಿಷಯಗಳ ಕುರಿತಾಗಿ ಪ್ರೌಢ ಲೇಖನಗಳನ್ನು ಬರೆದಿದ್ದಾರೆ, ಕಾವ್ಯದಲ್ಲಿ ಕೈಯಾಡಿಸಿದ್ದಾರೆ, ತಾತ್ವಿಕ ಚಿಂತನೆಯ ತತ್ವಶಾಸ್ತ್ರದಿಂದ ಹಿಡಿದು ಜೀವನ ಧರ್ಮಯೋಗದ ಬಗ್ಗೆ ವಿಚಾರ ಧಾರೆಯನ್ನು ಹರಿಸಿದ್ದಾರೆ, ಹಲವಾರು ವ್ಯಕ್ತಿಗಳ ಕುರಿತು ಬೆಳಕು ಚೆಲ್ಲುವ ನೆನಪಿನ ಚಿತ್ರಗಳ ಬಗ್ಗೆ ಬರೆದಿದ್ದಾರೆ, ಅವರ ಸಾಹಿತ್ಯದಲ್ಲಿ ಮುಖುಟಪ್ರಾಯವಾಗಿ ನಿಲ್ಲುವ, ಎಲ್ಲರ ಮನೆ ಮಾತಾಗಿರುವ “ಮಂಕುತಿಮ್ಮನ ಕಗ್ಗ” ಎಂಬ ಛಂದೋಬದ್ಧ ಶ್ರೇಷ್ಠ ಕೃತಿಯನ್ನು ಸಹ ರಚನೆ ಮಾಡಿದ್ದು ಆ ಕೃತಿಗೆ ಹೆಸರು ಸೂಚಿಸುವಾಗ ತಾವು ಎಷ್ಟೇ ಜ್ಞಾನಿಗಳಾಗಿದ್ದರೂ ಸಹ ತಮ್ಮನ್ನು ತಾವು ಮಂಕುತಿಮ್ಮ ಎಂದು ಸಂಬೋಧಿಸುತ್ತಾ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ವೈಚಾರಿಕ ವಿಚಾರಗಳ ಅದ್ಭುತ ಜೀವನ ಸಂದೇಶ ಸಾರುವ ಸಾಹಿತ್ಯವನ್ನು ಡಿವಿಜಿ ರವರು ರಚನೆ ಮಾಡಿದ್ದಾರೆ. 

ಮಂಕುತಿಮ್ಮನ ಕಗ್ಗ ಒಂದೇ ವಿಚಾರದ ಬಗ್ಗೆ ಬರೆದ ಪದ್ಯಗಳಲ್ಲ, ಒಂದೇ ವಿಷಯವನ್ನು ಹೊಂದಿದ ರಚನೆಯಲ್ಲ, ಬದಲಾಗಿ ಜೀವನದ ವಿವಿಧ ಸ್ತರಗಳಲ್ಲಿ ನಾವು ಎದುರಿಸುವ ಹಲವಾರು ಸಮಸ್ಯೆಗಳಿಗೆ ಹಣತೆಯೋಪಾದಿಯಲ್ಲಿ ಬೆಳಕು ಚೆಲ್ಲುವ ಒಂದೊಂದು ಪದ್ಯ ಒಂದೊಂದು ಅಣಿಮುತ್ತು. ಈ ಅಣಿಮುತ್ತುಗಳ ಬಗ್ಗೆ ಹಲವಾರು ಉಪನ್ಯಾಸಗಳು, ವ್ಯಾಖ್ಯಾನಗಳು, ಕಂಠಪಾಠಗಳು ನಡೆದಿರುವುದಲ್ಲದೆ ಗಮಕ ಹಾಗೂ ಸುಗಮ ಸಂಗೀತದ ಹಾಡುಗಾರಿಕೆಗಳ ಮೂಲಕ ಮತ್ತಷ್ಟು ಜನಪ್ರಿಯತೆ ಕಂಡಿವೆ. ಪ್ರತಿದಿನ ಓದುವ ಸುಭಾಷಿತಗಳಾಗಿ ಇಂದಿನ ಸಾಮಾಜಿಕ ಮಾಧ್ಯಮದಲ್ಲಿ ಡಿವಿಜಿ ರವರ ಮಂಕುತಿಮ್ಮನ ಕಗ್ಗದ ಪದ್ಯಗಳು ಹರಿದಾಡುವುದನ್ನು ನಾವು ಕಾಣಬಹುದು. ಈ ಕೃತಿ, ಹಿಂದಿ, ಇಂಗ್ಲಿಷ್, ಪ್ರೆಂಚ್ ಭಾಷೆಗಳಿಗಲ್ಲದೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವುದು ಈ ಕೃತಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.  

ಡಿವಿಜಿಯವರ ಮಂಕುತಿಮ್ಮನ ಕಗ್ಗ ಮಾತ್ರಾಗಣ ಆಧಾರದ ಮೇಲೆ ರಚನೆಯಾಗಿರುವ ದ್ವಿತೀಯಾಕ್ಷರ

ಪ್ರಾಸವನ್ನು ಹೊಂದಿರುವ ನಾಲ್ಕು ಸಾಲಿನ ಕಾವ್ಯನಾಮ ಹೊಂದಿರುವ ಅದ್ಭುತ ಕಾವ್ಯಾಲಂಕಾರವನ್ನು ಹೊಂದಿರುವ ಕೃತಿ. ಹೀಗಾಗಿಯೇ ಕುವೆಂಪುರವರು ಮಂಕುತಿಮ್ಮನ ಕಗ್ಗದ ಬಗ್ಗೆ ಈ ಕೆಳಕಂಡಂತೆ ನಾಲ್ಕು ಸಾಲಿನ ಕವನದ ಮೂಲಕ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.  

ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ

ಮಸ್ತಕಕ್ಕಿಟ್ಟು ಗಂಭೀರನಾದೆ ।

ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ 

ಪುಸ್ತಕಕ್ಕೆ ಕೈಮುಗಿದೆ ಮಂಕುತಿಮ್ಮ ।।

ಪ್ರತಿ ದಿನ ಬಾಯಿಯಿಂದ ಬಾಯಿಗೆ ಹರಿದಾಡುವ ಕೆಲವೇ ಕೆಲವು ಜನಪ್ರಿಯ ಮುಕ್ತಕಗಳು ಅಥವಾ ಪದ್ಯಗಳನ್ನು ಹೊರತುಪಡಿಸಿ ಜೀವನ ಎಂದರೆ ಹೇಗಿರಬೇಕು, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಹ ಹೇಗೆ ನಾವು ಆತ್ಮವಿಶ್ವಾಸದಿಂದ ಜೀವನ ಮಾಡಬೇಕು ಎಂಬ ಬಗ್ಗೆ ಡಿವಿಜಿ ರವರು ಗಾಢವಾದ ಜೀವನಾನುಭವ ಹೊಂದಿರುವ ಹಲವಾರು ಪದ್ಯಗಳನ್ನು ಬರೆದಿದ್ದು ಆ ಪದ್ಯಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕೆಲವೊಂದು ಪದ್ಯ ಮತ್ತು ಅವುಗಳ ಅರ್ಥ ಹೀಗಿದೆ.

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು

ಸಂದಿಹುದು ಚಿರನವತೆಯಶ್ವತ್ಥಮರಕೆ||

ಎಂದೆಂದುಮಂತಿರುವುದೀ ವಿಶ್ವವೃಕ್ಷವದು

ರೊಂದು ರೆಂಬೆಯೊ ನೀನು- ಮಂಕುತಿಮ್ಮ||  

ಜೀವನವನ್ನು ಜೀವನದ ಪಾತ್ರಗಳನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುವ ಡಿವಿಜಿ ರವರು. ಇಲ್ಲಿ ಯಾರೂ ಯಾರಿಗೂ ಶಾಶ್ವತವಲ್ಲ, ನಮ್ಮ ಜೀವನದಲ್ಲಿ ಕೆಲವು ಪಾತ್ರಗಳು ಬರುತ್ತವೆ, ಕೆಲವು ಪಾತ್ರಗಳು ಹೊರಡುತ್ತವೆ, ಹೇಗೆ ಅಶ್ವತ್ಥ ವೃಕ್ಷದ ಒಂದು ಕೊಂಬೆ ಬಾಡಿದರೆ ಮತ್ತೊಂದು ರೆಂಬೆ ಚಿಗುರಿ ನಳನಳಿಸುವುದೋ ಹಾಗೆಯೇ ಯಾವುದೇ ಮೋಹಕ್ಕೆ ಒಳಗಾಗದೆ ನಿರ್ಲಿಪ್ತ ಭಾವದಿಂದ ಬರುವ ಒಂದೊಂದು ಪಾತ್ರಗಳನ್ನು ಸ್ವೀಕರಿಸುತ್ತಾ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಹೇಳಿದ್ದಾರೆ.  

ಪುರುಷಯೋಚನೆಯೆಲ್ಲ ಮುರಿದು ಮಣ್ಣಹದೆಂದು

ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು||

ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? 

ಪರವೆಯೇನಿಲ್ಲವೆಲೋ – ಮಂಕುತಿಮ್ಮ|| 

ಬಹಳಷ್ಟು ಕನಸುಗಳನ್ನು ಕಾಣುತ್ತೇವೆ, ಬಹಳಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ನಮ್ಮ ಯೋಚನೆ, ಆಲೋಚನೆ, ಕನಸುಗಳು ಫಲಿಸದೆ ಹೋಗಬಹುದು, ಹಾಗೆಂದು ಧೃತಿಗೆಡುವ ಅಗತ್ಯವಿಲ್ಲ ಮರಳಿ ಯತ್ನವ ಮಾಡಬೇಕು ಹೊಸ ಕನಸು ಕಾಣಬೇಕು, ಯಾವ ರೀತಿಯಲ್ಲಿ ಕಡಲಿನಲ್ಲಿ ಒಂದು ಮೀನು ಹುಟ್ಟಿದರೂ, ಒಂದು ಮೀನು ಸತ್ತರೂ, ಕಡಲಿನಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲವೋ ಹಾಗೆ ನಮ್ಮ ಗುರಿ, ಕನಸು ನನಸಾಗದಿದ್ದಾಗ ಹತಾಶರಾಗದೆ ಮರಳಿ ಯತ್ನವ ಮಾಡಬೇಕು ಎಂದು ಹಿತಬೋಧನೆ ಮಾಡಿದ್ದಾರೆ. 

ಮಹಾಭಾರತದಲ್ಲಿ ಒಂದು ಉಲ್ಲೇಖವಿದೆ

ಅತಿಕ್ರಾನ್ತಂ ಹಿ ಯತ್ಕಾರ್ಯಂ ಪಶ್ಚಾಚ್ಚಿನ್ತತೇ ನರ: |

ತಚ್ಚಾಸ್ಯ ನ ಭವೇತ್ಕಾರ್ಯಂ ಚಿನ್ತಯಾ ಚ ವಿನಶ್ಯತಿ|| 

ಅಂದರೆ ಮನುಷ್ಯ ಕಳೆದುಹೋದ ಘಟನೆಯ ಬಗ್ಗೆ ಬಹಳ ಚಿಂತಿಸುತ್ತಾನೆ, ಹೀಗೆ ಕಳೆದುಹೋದ ವಿಷಯಗಳ ಕುರಿತು ಚಿಂತಿಸಿ ಚಿಂತಿಸಿ ತನ್ನ ಸುಂದರವಾದ ಭವಿಷ್ಯವನ್ನು ಮರೆತು ವಿನಾಶವನ್ನು ಹೊಂದುತ್ತಾನೆ ಎಂದು ಅದರ ಅರ್ಥ. ಹೀಗೆಯೇ ಡಿವಿಜಿಯವರು ಸಹ ಮನುಷ್ಯ ಹತಾಶರಾಗದೆ ಧೈರ್ಯದಿಂದ ಹೋರಾಡಲು ಹೇಳುತ್ತಾರೆ. 

ಹೋರಾಡು ಬೀಳ್ವನ್ನವೊಬ್ಬಂಟಿಯಾದೊಡಂ

ಧೀರಪಥವನೆ ಬೆದಕು ಸಕಲಸಮಯದೊಳಂ||

ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ?

ಹೋರಿ ಸತ್ವವ ಮೆರೆಸು – ಮಂಕುತಿಮ್ಮ||   

ಕೆಲವೊಮ್ಮೆ ನಾವು ಒಂಟಿ, ಏಕಾಂಗಿ ನಮ್ಮಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ನಿರುತ್ಸಾಹ ಮೂಡುತ್ತದೆ, ಆದರೆ ಯಾವತ್ತೂ ನಾವು ಏಕಾಂಗಿ ಎಂಬ ಭಾವನೆ ತೊರೆದು ಧೈರ್ಯದಿಂದ ಇರುವಷ್ಟು ದಿನ ಹೋರಾಡಬೇಕು, ಸೆಣಸುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳದೆ ಎಲ್ಲಾ ಸಮಯದಲ್ಲೂ ಧೀರನಾಗಿ ಹೋರಾಡಬೇಕು. ತಾನು ಏಕಾಂಗಿ, ತಾನು ಅಬಲ ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಗೊಣಗುತ್ತಾ ಕುಳಿತರೆ ಅಂತಹ ಬದುಕಿಗೆ ಅರ್ಥವೇನು ಎಂದು ಡಿವಿಜಿಯವರು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬಿದ್ದಾರೆ.

ಕುವೆಂಪು ರವರು ತಮ್ಮ ಪಾಂಚಜನ್ಯದಲ್ಲಿ 

ನಡೆ ಮುಂದೆ, ನಡೆ ಮುಂದೆ,

ನುಗ್ಗಿ ನಡೆ ಮುಂದೆ!

ಜಗ್ಗದೆಯೆ, ಕುಗ್ಗದೆಯೆ,

ಹಿಗ್ಗಿ ನಡೆ ಮುಂದೆ!

ಎಂದು ಹೇಳಿದಂತೆ ಡಿವಿಜಿ ರವರು ಸಹ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಈ ಹೋರಾಟದ ಬದುಕಿನಲ್ಲಿ ಒಂದೊಂದು ಹೆಜ್ಜೆಯನ್ನು ಧೈರ್ಯದಿಂದ ಇಡಬೇಕೆಂದು ಹೇಳುತ್ತಾರೆ. 

ಸತ್ತನೆಂದನಬೇಡ: ಸೋತೆನೆಂದೆನಬೇಡ

ಬತ್ತಿತೆನ್ನೊಳು ಸತ್ತವದೂಟೆಯೆನಬೇಡ||

ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು

ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ||

ಜೀವನದಲ್ಲಿ ಸಂಪೂರ್ಣವಾಗಿ ಹತಾಶೆ ಹೊಂದಿ ತಾನು ಸೋತೆ, ತಾನು ಸತ್ತೆ ಎಂಬ ಋಣಾತ್ಮಕ ಭಾವನೆಯನ್ನು ಎಂದೂ ಹೊಂದಬೇಡ, ಸೋಲುಗೆಲುವುಗಳು ಸಾಗರದ ಅಲೆಗಳಂತೆ ಒಮ್ಮೆ ಮೇಲೆ ಎದ್ದರೆ ಮತ್ತೆ ಕೆಳಗೆ ಬೀಳುತ್ತವೆ ಹಾಗೆ ಜೀವನದಲ್ಲಿ ಸಹ ಸುಖ ಮತ್ತು ದುಃಖಗಳು ಸಾಗರದ ಅಲೆಗಳಿದ್ದಂತೆ, ಆ ಮೃತ್ಯುವಿನ ಅಲೆಗಳಿಗೆ ಎದೆಯೊಡ್ಡಿ ನಾಳೆಯ ಬಗ್ಗೆ ನಾವು ದೃಢ ಸಂಕಲ್ಪ ಹೊಂದಬೇಕು ಎಂದು ಡಿವಿಜಿಯವರು ಹೇಳಿದ್ದಾರೆ. ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಮಂಕುತಿಮ್ಮನ ಕಗ್ಗ ಅವರ ಜೀವಿತ ಕಾಲದಲ್ಲಿ ಹೆಚ್ಚು ಪ್ರಚಾರ, ಪ್ರಶಸ್ತಿಗಳನ್ನು ಗಳಿಸದಿದ್ದರೂ ಸಹ ಕನ್ನಡಿಗರ ಪಾಲಿಗೆ “ಕನ್ನಡದ ಭಗವದ್ಗೀತೆ” ಎಂಬ ಜನಪ್ರಿಯತೆಯನ್ನು ತಂದುಕೊಟ್ಟಿದೆ.

ರಚನೆ:- ಬಿ.ಆರ್. ರವೀಂದ್ರ,  ವಕೀಲರು ಮತ್ತು ಸಾಹಿತಿಗಳು ಕೋಲಾರ.

ಜೆ.ಸಿ.ಐ ಕುಂದಾಪುರ ವತಿಯಿಂದ ಶಿವಪುರ ಕ್ಲಿನಿಕಿನ ಡಾ.ಎಸ್.ಪಿ.ಆಚಾರ್ಯ ಇವರಿಗೆ ಸನ್ಮಾನ

ಜೆ ಸಿ ಐ ಕುಂದಾಪುರದ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಜೆಸಿ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಧಾಕರ್ ಕಾಂಚನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೆಸಿಐ ಪೂರ್ವ ವಲಯ ಅಧಿಕಾರಿ ಜೆಸಿ ರತ್ನಾಕರ್ ಕುಂದಾಪುರ ಅತಿಥಿಯಾಗಿ ಮಾತನಾಡಿ ಕೋಟೇಶ್ವರದ ಹೆಸರಾಂತ ವೈದ್ಯರಾಗಿರುವ ಆರು ದಶಕಗಳಿಂದ ವೈದ್ಯ ಸೇವೆಯೊಂದಿಗೆ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡುತ್ತಿರುವ ಡಾ.ಎಸ್.ಪಿ. ಆಚಾರ್ಯ ವೈದ್ಯರು ತಮ್ಮ ಪತ್ನಿ ಯೊಂದಿಗೆ ಅವಿರತವಾಗಿ ಯಾವುದೇ ದೊಡ್ಡ ಪ್ರತಿಫಲ ಅಪೇಕ್ಷೆ ಇಲ್ಲದೆ ಗ್ರಾಮೀಣ ಭಾಗವಾಗಿರುವ ಕೋಟೇಶ್ವರ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಮನೆ ಮಾತಾಗಿರುವ ಅವರ ಸೇವೆ ಇಂದಿನ ಯುವ ಜನಾಂಗಕ್ಕೆ ಮಾದರಿ,ವೈದ್ಯರ ದಿನಾಚರಣೆ ಅರ್ಥಪೂರ್ಣ ವಾಗಿ ಮೂಡಿ ಬಂದಿದೆ ಎಂದರು . ನಂತರ ವೈದ್ಯ ದಂಪತಿಗಳನ್ನ ಗೌರವಿಸಲಾಯಿತು ಈ ಸಂದರ್ಭದಲ್ಲಿ ಜೆಸಿ ಪುಷ್ಪಲತಾ ರತ್ನಾಕರ್ ಜೆಸಿ ಉದಯಕುಮಾರ್ ಕೆ ವಿ, ಜೆ ಸಿ ರವಿಚಂದ್ರ ಹಾಗೂ ಜೂನಿಯರ್ ಜೆಸಿ ರತ್ವಿಕ್ ಆರ್ ಕುಂದಾಪುರ ಜೇಸಿ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಜೆಸಿ ರಾಕೇಶ್ ಶೆಟ್ಟಿ ವಂದಿಸಿದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ರಕ್ಷಕ- ಶಿಕ್ಷಕ ಸಭೆ


ಕುಂದಾಪುರ :ಜು.1: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಶಾಲಾ ಗುಣಮಟ್ಟದ ಬಗ್ಗೆ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿ ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ ಆಗುತ್ತಾರೆ. ಮಕ್ಕಳು ಹಣವಂತರಾಗುವುದಕ್ಕಿಂತ ಗುಣವಂತರಾಗಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಬಿಷಪ್ ಹೌಸಿನ ಕುಟುಂಬ ಆಯೋಗದ ನಿರ್ದೇಶಕರು ಆಗಿರುವ ಲೆಸ್ಲಿ ಆರೋಜಾ ’ಸಾಧನೆಯಲ್ಲಿ ಮಕ್ಕಳು, ಶಿಕ್ಷಕರು, ಪೋಷಕರ ಪಾತ್ರ ಬಹುಮುಖ್ಯ ಆಗಿರುತ್ತೆ. ಮಕ್ಕಳನ್ನು ಯಾರೊಂದಿಗೂ ಹೋಲಿಸದೆ ಅವರನ್ನು ಪ್ರೋತ್ಸಾಹಿಸಿ ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು, ಅವರಿಗೆ ಮೌಲ್ಯಯುತ ವಿಚಾರಗಳು ಮನೆಯಲ್ಲಿಯೆ ಸಿಗಬೇಕು, ಮಕ್ಕಳಿಗೆ ಪೋಷಕರು ತಮ್ಮ ಸಮಯವನ್ನು ನೀಡಬೇಕು” ಎಂದು ಹೇಳಿ ಹೆಣ್ಣು ಮಕ್ಕಳ ಸಮಸ್ಯೆಯ ಸಮಯದಲ್ಲಿ ಮಕ್ಕಳೊಂದಿಗೆ ತಾಯಂದಿರು ಹೇಗೆ ಇರಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ಹಿಂದಿನ ವರ್ಷದ ಸಭೆಯ ವರದಿಯನ್ನು ಶಿಕ್ಷಕಿ ಅಂಕಿತಾ, ಹಿಂದಿನ ವರ್ಷದ ಶೈಕ್ಷಣಿಕ ವರದಿಯನ್ನು ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ವಾಚಿಸಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು. ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ಸ್ವಾಗತಿಸಿದರು. ಶಿಕ್ಷಕಿ ಮಮತಾ ವಂದಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.