HOLY ROSARY CHURCH, KUNDAPUR – 450 th JUBILEE SOUVENIR 2021

ಮಹಾರಾಷ್ಟ್ರ: ಬುಲ್ಧಾನಾ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಭೀಕರ ಅಪಘಾತ 25 ಮಂದಿ ದಾರುಣ ಸಾವು

 

ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ ಹೈವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ.

ಅಪಘಾತಕ್ಕೀಡಾದ ಬಸ್ಸು ಯಾವತ್‌ಮಾಲ್‌ನಿಂದ ಪುಣೆಗ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್‌ನಿಂದ 25 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಸ್‌ನಲ್ಲಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು. 6-8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬುಲ್ಧಾನ ಪೊಲೀಸ್ ಉಪ ಎಸ್ಪಿ ಬಾಬುರಾವ್ ಮಹಾಮುನಿ ತಿಳಿಸಿದ್ದಾರೆ.

    ಘಟನೆಯಲ್ಲಿ ಬದುಕುಳಿದಿರುವ ಬಸ್‌ನ ಚಾಲಕನ ಪ್ರಕಾರ, ಬಸ್ಸಿನ ಟೈರ್ ಸ್ಫೋಟಗೊಂಡ ಕಾರಣದಿಂದಾಗಿ ಬಸ್ ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ತೀಳಿಯಲಾಗಿದೆ.

ಪ್ರಚೋದನಕಾರಿ ಭಾಷಣ ಹಿನ್ನೆಲೆ; ರಘು ಸಕಲೇಶಪುರ ಬಂಧನಕ್ಕೆ ಪೋಲಿಸರಿಂದ ವ್ಯಾಪಕ ಬಲೆ

ಸಕಲೇಶಪುರ: ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಪೋಲಿಸರು ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಸಕಲೇಶಪುರರವರ ಮನೆಗೆ ನುಗ್ಗಿ‌ ಪೋಲಿಸರು ರಘುರವರನ್ನು ಬಂಧಿಸಲು ಮುಂದಾಗಿದ್ದಾರೆ‌‌ ಆದರೆ ಸ್ಥಳದಿಂದ ರಘುರವರು ಪರಾರಿಯಾಗಿದ್ದು ಪೋಲಿಸರು ರಘು ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ. 

ಘಟನೆ ವಿವರ: ತಾಲೂಕಿನ ಕ್ಯಾಮನಹಳ್ಳಿ ಸೇರಿದಂತೆ ಸುತ್ತಮುತ್ತಲು ವ್ಯಾಪಕ ಗೋಹತ್ಯೆ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರೆಂಬ ಆರೋಪದ ಮೇಲೆ ರಘು ಸಕಲೇಶಪುರ ಸೇರಿದಂತೆ ಸಂಘಟನೆಯ ಕೆಲವು ಮುಖಂಡರನ್ನು ಪೋಲಿಸರು ಬಂಧಿಸಲು ಮುಂದಾಗಿದ್ದಾರೆ.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.

St Agnes College : Student Cabinet Inaugural 2023-24


Mangalore : The Apostolic Carmel Educational Society runs several educational institutions and St Agnes PU College is one among them. Historically, it is the first Catholic Women’s College established in South India and the second in the country. The college has students from all communities and denominations. The college is a pioneer in the education of young women and has been at the forefront of a cultural and social renaissance with regard to the rights and roles of women. This has its source and origin in the philosophy and teaching of its founder Mother Aloysia who started St Agnes College in 1920.
“The greatest leader is not necessarily the one who does the greatest things but gets the people to do the greatest things”.
The Student Cabinet of St Agnes PU College for the academic year 2023-24 was formally inaugurated in the college Auditorium on Friday, 30th June 2023 at 2.30 pm. The ceremony began with a prayer song followed by a welcome dance. Sr Dr Maria Roopa AC, Superior and Joint Secretary of St Agnes Institutions was the chief guest on the occasion. During her address, sister congratulated the newly elected members. She advised them to be responsible in their duties and strive to reach greater heights with their leadership and decision making skills, communication and team work.
The oath of the office for the Student Council, the class representatives and their assistants was administered by SrNorine D’Souza AC, the Principal of the college. This solemn ceremony was witnessed by the members of the PTA and the parents of the cabinet members. The Vice principal Sr JanetSequeira AC and all the staff members were also present for the occasion.
The newly elected cabinet members are
PrivalDSouza – Student President
KadeejaNoha – Student Vice President
IevaAysha – Science Secretary
SusanNeeliyara – Commerce secretary
HanaaMariyam – Arts secretary
Gowthami – Cultural Secretary
AnanyaAshokan – Sports Secretary
ZuhaMariyam – Student Editor
The programme was compered by SweetinaMariya.Sampoorna welcomed the gathering and Sharon Rego proposed the vote of thanks.

ಮಣಿಪುರ ಹಿಂಸಾಚಾರ: ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯದಿಂದ ಮನವಿ

ಉಡುಪಿ: ಈಶಾನ್ಯ ಭಾರತದ ಮಣೆಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ. ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯದ ಪರವಾಗಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ. ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರ ಮತ್ತು ಜೀವ ಹಾನಿ, ಆಸ್ತಿಪಾಸ್ತಿಗಳ ನಷ್ಟದಿಂದ ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಬಹುಸಂಖ್ಯಾತ ಮಣೆಪುರಿಗಳು (ಮೈಟೈಸ್) ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಜನರು (ಒಟ್ಟಾರೆಯಾಗಿ ಕುಕಿ/ಜೋಮಿ ಬುಡಕಟ್ಟುಗಳು ಎಂದು ಕರೆಯುತ್ತಾರೆ) ನಡುವಿನ ಅಂತರ-ಸಮುದಾಯ ಸಂಘರ್ಷದ ನೆಪದಲ್ಲಿ ವಿಸ್ತೃತ ಇಂಫಾಲ್ ಕಣಿವೆಯಲ್ಲಿ ಬಹುತೇಕ ಎಲ್ಲಾ ಚಚ್ರ್ಗಳನ್ನು ಸುಟ್ಟುಹಾಕಲಾಗಿದೆ, ಧ್ವಂಸ ಗೊಳಿಸಲಾಗಿದೆ ಅಥವಾ ಅಪವಿತ್ರ ಗೊಳಿಸಲಾಗಿದೆ. ಕನಿಷ್ಠ 317 ಚರ್ಚುಗಳು ಮತ್ತು 70 ಚರ್ಚ್ ಆಡಳಿತ/ಶಾಲಾ ಕಟ್ಟಡಗಳನ್ನು ಸುಟ್ಟು ಹಾಕಲಾಗಿದೆ. ಕನಿಷ್ಠ 75 ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಇದೊಂದು ಭಾರತ ಕಂಡ ಅತ್ಯಂತ ಕೆಟ್ಟ ಕೈಸ್ತ ವಿರೋಧಿ ಹಿಂಸಾಚಾರವಾಗಿದ್ದು ಸುಮಾರು 30000 ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ. ವಿವಿಧ ಗುಂಪುಗಳಿಂದ ಪ್ರಚೋದಿಸಲ್ಪಟ್ಟ ವಿದ್ವಂಸಕ ಕೃತ್ಯವನ್ನು ಕ್ರೈಸ್ತ ಸಮುದಾಯ ಬಲವಾಗಿ ಖಂಡಿಸುತ್ತಿದ್ದು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಎಲ್ಲಾ ಮನೆಗಳು, ಚರ್ಚಗಳು ಮತ್ತು ಹಾನಿಗೊಳಗಾದ ಆಸ್ತಿಗಳನ್ನು ಪುನರ್ನಿರ್ಮಿಸಬೇಕು ಮತ್ತು ಮನೆಗಳನ್ನು ಪುನರ್ನಿರ್ಮಿಸಲು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಸರ್ಕಾರವು ಈ ಪ್ರದೇಶದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ತ್ವರಿತವಾಗಿ ಮರುಸ್ಥಾಪಿಸಬೇಕು ಮತ್ತು ಸಂತ್ರಸ್ತ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅದರ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು. ಖಚಿತ ಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ಸಂಬಂಧಪಟ್ಟವರಿಗೆ. ಮನವಿಯನ್ನು ತಲುಪಿಸಲಾಗುವುದು ಎಂದರು.
ಮನವಿ ನೀಡಿದ ನೀಯೋಗದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ[ಡಾ|ರೋಶನ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಇದರ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ಭಾರತೀಯ ಶೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ನೂತನ ಮುಖ್ಯ ನ್ಯಾಯಧಿಪತಿಯಾಗಿ ವಂ|ಡಾ|ರೋಶನ್‌ ಡಿ’ಸೋಜಾ ಅಧಿಕಾರ ಸ್ವೀಕಾರ

ಉಡುಪಿ, ಜೂ30: ಅತಿ ವಂದನೀಯ ಡಾ. ರೋಶನ್‌ ಡಿ’ಸೋಜಾರವರನ್ನು ಉಡುಪಿ ಧರ್ಮಪ್ರಾಂತ್ಯದ
ನ್ಯಾಯಾಲಯದ ಮುಖ್ಯ ನ್ಯಾಯಾಧಿಪತಿಯಾಗಿ ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೊರವರು.
ಸೇಮಕಗೊಳಿಸಿದ್ದಾರೆ.

ಇಂದು ಜೂ.30 ರಂದು ಉಡುಪಿ ಬಿಷಪ್‌ ಹೌಸ್‌ನಲ್ಲಿ ಜರಗಿದ ಸರಳ ಧಾರ್ಮಿಕ ಸಮಾರಂಭದಲ್ಲಿ ಬಿಷಪ್‌ ಜೆರಾಲ್ಡ್‌
ಲೋಬೊರವರ ಸಮ್ಮುಖದಲ್ಲಿ ವಂ. ಡಾ. ರೋಶನ್‌ ಡಿ’ಸೋಜಾರವರು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ನ್ಯಾಯಾಧಿಪತಿ ಅತಿ ವಂ. ವಾಲ್ಟರ್‌ ಡಿ’ಮೆಲ್ಲೊರವರು ವಂ.ಡಾ.ರೋಶನ್‌ ಡಿ’ಸೋಜಾರವರಿಗೆ.
ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಬಿಷಪ್‌ ಜೆರಾಲ್ಡ್‌ ಲೋಬೊರವರು, ಅತಿ ವಂ. ವಾಲ್ಟರ್‌
ಡಿಮೆಲ್ಗೊರವರು ಕಳೆದ 6 ವರ್ಷಗಳಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆ.
ಸಲ್ಲಿಸಿದರು ಹಾಗೂ ನೂತನ ಮುಖ್ಯ ನ್ಯಾಯಾಧಿಪತಿ ವಂ. ಡಾ. ರೋಶನ್‌ ಡಿ’ಸೋಜಾರವರಿಗೆ
ಅಭಿನಂದನೆಗಳನ್ನು ಸಲ್ಲಿಸಿದರು.

ಪಾಂಬೂರ್‌ ಚರ್ಚಿನ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್‌, ಉಡುಪಿ ಚರ್ಚಿನ ಧರ್ಮಗುರು ಅತಿ ವಂ. ಚಾರ್ಲ್ಸ್‌
ಮಿನೇಜಸ್‌, ಧರ್ಮಗುರು ವಂ. ಜೋಕಿಮ್‌ ಡಿ’ಸೋಜ, ಧರ್ಮಪ್ರಾಂತ್ಯದ ಖಜಾಂಚಿ ಮಾರ್ಸೆಲ್‌ ಡಿ’ಸೋಜ ಉಪಸ್ಥಿತರಿದ್ದರು.

ವಂ. ಡಾ. ರೋಶನ್‌ ಡಿ’ಸೋಜರವರು ಪ್ರಸ್ತುತ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾಗಿಯೂ ಸೇವೆ.
ಸಲ್ಲಿಸುತ್ತಿದ್ದಾರೆ. ಅವರು ಮಂಗಳೂರಿನ ರೊಜಾರಿಯೋ ಕಾಥೆದ್ರಲ್‌, ಕುಲಶೇಕರ ಮತ್ತು ಮೂಡುಬೆಳ್ಳೆ ಚರ್ಚಿನಲ್ಲಿ
ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸೈಂಟ್‌ ಪೀಟರ್ ಇನ್‌ಸ್ಟಿಟ್ಯುಟ್‌ನಿಂದ ‘ಕ್ಯಾನನ್‌
ಲಾ’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ರೋಮನ್‌ ಉರ್ಬಾನಿಯಾನ ವಿಶ್ವವಿದ್ಯಾಲಯದಿಂದ
ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದಾರೆ.

118 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟನೆಗೊಂಡ 40 ದಿವಸಗಳಲ್ಲೆ ಬಿರುಕು !

ಸೂರತ್‌: ಮೇ 17 ರಂದು ಉದ್ಘಾಟನೆಗೊಂಡ ಸೇತುವೆಯನ್ನು 118 ಕೋಟಿ ರೂ. ವೆಚ್ಚದಿಂದ ಪುನರ್ ನಿರ್ಮಾಣ ಗೊಂಡಿದ್ದು, ಇದು ಸೂರತ್‌ನ ವರಿಯಾವ್ ಮತ್ತು ವೇದ್ ಗ್ರಾಮಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಪ್ರದೇಶದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಜನ ಸಂಪರ್ಕವನ್ನು ಪಡೆಯುವ ಸೇತುವೆಯಾಗಿದ್ದು, ಸೇತುವೆಯು ವ್ಯಾಪ್ತಿ1.5 ಕಿಮೀ ಯಾಗಿದ್ದು, ಇದು ನಾಲ್ಕು ಪಥಗಳನ್ನು ಹೊಂದಿದೆ.

ಜುಲೈ 01ರಂದು ಬೆಳ್ಮಣ್ಣು ಜೇಸಿಐ ನೇತೃತ್ವದಲ್ಲಿ ಪೂರ್ವಾಧ್ಯಕ್ಷರ ಸಮ್ಮಿಲನ ಮತ್ತು ಜೇಸಿ ಕುಟುಂಬೋತ್ಸವ

43 ವರ್ಷಗಳ ಸುದೀರ್ಘ ಇತಿಹಾಸವಿರುವ ಬೆಳ್ಮಣ್ಣು ಜೇಸಿಐ ಘಟಕದ ನೇತೃತ್ವದಲ್ಲಿ 43ನೇ ವರ್ಷಾಚರಣೆ ಅಂಗವಾಗಿ ಇಂದಾರು ಸತ್ಯನಾರಾಯಣ ಭಟ್ ಅವರ ಮನೆಯಲ್ಲಿ ಜುಲೈ 01ರಂದು ಶನಿವಾರ ಸಂಜೆ 06-30ರಿಂದ ಪೂರ್ವಾಧ್ಯಕ್ಷರ ಸಮ್ಮಿಲನ ಮತ್ತು ಜೇಸಿ ಕುಟುಂಬೋತ್ಸವ ಕಾರ್ಯಕ್ರಮ ಜರಗಲಿದೆ.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಜೇಸಿಐ ಘಟಕದ ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
      ಕಾರ್ಯಕ್ರಮದ ವಿಶೇಷತೆಗಳು: ಪೂರ್ವಾಧ್ಯಕ್ಷರ ಸಮ್ಮಿಲನ,ಜೇಸಿ ಕುಟುಂಬೋತ್ಸವ, ಹಿರಿಯ ಕಿರಿಯ ಜೇಸಿಗಳ ಸಮಾಗಮ, ವಿವಿಧ ನೃತ್ಯ, ಸಂಗೀತ ಕಾರ್ಯಕ್ರಮ, ಮನೋರಂಜನಾ ಸ್ಪರ್ಧೆಗಳು, ಶುಚಿ ರುಚಿಯಾದ ಭೋಜನದ ವ್ಯವಸ್ಥೆಯಿದೆ ಎಂದು ಬೆಳ್ಮಣ್ಣ ಜೇಸಿಐ ಘಟಕಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Rachana, Catholic Chamber of Commerce and Industry held a member meeting

Rachana, Catholic Chamber of Commerce and Industry held a member meeting today at the Chefs Restaurant at Nanthur.
Prof. C. A. Lionel Aranha, a renowned CA n investors expert spoke on the topic ” Analysing Financial Statements, Unlocking the Secrets of Financial Data.”
Mr. Aranha simplified the topic in a common man’s language to ensure all those present understood the importance of the day’s topic.
He insisted that you understand the financial situation and the know-how of any investment that you wish to do.
Also that you do not get carried away by YouTube expertise or any other advisors.
You study the market well, keep a close watch on the market n take a decision.
Other than Rachana Members, there were MBA students from various colleges in the city.
In the absence of Rachana President Mr. Vincent Cutinha, the Vice President of Rachana CA Rudolph Rodrigues welcomed the gathering with a brief note on the program. Also, he mentioned that Rachana is heading to 25th year. Rudolph mentioned about various programs including the Udyog Sathi program taken by Rachana in collaboration with St. Joseph’s Engineering College in M’lore.
Mrs. Eulalia Dsouza, treasurer did the invocation. Secretary Lavina Monteiro proposed a Vote of thanks.
Joint Secretary Philip Pereira compared the program.
Including the members and invitees, there were almost 60 people present for this program.

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು. ಪಟ್ಟಣದ ಹೊರವಲಯದಲ್ಲಿನ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ನಾಗರಿಕರು ಪರಸ್ಪರ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲವು ಮುಸ್ಲಿಂ ಸಮುದಾಯದವರು ತಂಪು ಪಾನೀಯ ವಿತರಿಸಿದರು.
ಹಬ್ಬದ ಪ್ರಯುಕ್ತ ಬಡವರಿಗೆ ಮಾಂಸ ದಾನ ಮಾಡಲಾಯಿತು. ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿತ್ತು. ಮಧ್ಯಾಹ್ನದ ಹೊತ್ತಿಗೆ ಮಾಂಸದ ಅಂಗಡಿಗಳಲ್ಲಿ ಮಾಂಸ ಮುಗಿದುಹೋಗಿತ್ತು. ಮುಸ್ಲಿಂ ಸಮುದಾಯದಿಂದ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮವಾಗಿ ಬೇರೆಯವರಿಗೆ ಕುರಿ ಮಾಂಸ ಸಿಗುವುದು ಕಷ್ಟವಾಗಿತ್ತು. ಕುರಿ ತಲೆ ಮತ್ತು ಕಾಲಿನ ವ್ಯಾಪಾರ ಜೋರಾಗಿ ನಡೆಯಿತು. ಕುರಿ ಮಾಂಸ ಕೆಜಿಯೊಂದಕ್ಕೆ ರೂ.700 ರಂತೆ ಮಾರಾಟ ಮಾಡಲಾಯಿತು.
ಬಕ್ರೀದ್ ಪ್ರಯುಕ್ತ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕಿನ ಗೌನಿಪಲ್ಲಿ, ಅಡ್ಡಗಲ್, ಮುದಿಮಡಗು, ಯಚ್ಚನಹಳ್ಳಿ ಸೇರಿದಂತೆ ಮುಸ್ಲಿಮರು ವಾಸಿಸುವ ಗ್ರಾಮಗಳಲ್ಲಿ ಬಕ್ರೀದ್ ಆಚರಣೆ ಮಾಡಲಾಯಿತು. ಈದ್ಗಾ ಮೈದಾನಕ್ಕೆ ಒಟ್ಟಾಗಿ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.