

ಪಡುಕೋಣೆ ; ದಿನಾಂಕ 14.11.2025 ರಂದು ಪಡುಕೋಣೆ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡುಕೋಣೆಯಲ್ಲಿ ಮಕ್ಕಳ ದಿನಾಚರಣೆ ನಡೆಸಲಾಯಿತು. ಶಾಲೆಯ ಜಂಟಿ ಕಾರ್ಯದರ್ಶಿಯಾದ ವಂ। ಫಾ। ಫ್ರಾನ್ಸಿಸ್ ಕರ್ನೆಲಿಯೊರವರು,ಅಧ್ಯಕ್ಷರಾಗಿ,ಅಧ್ಯಕ್ಷರಾದ ವಂದನೀಯ ಫಾದರ್ ಕರ್ನೆಲಿಯೊರವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಉತ್ತಮ ಗುಣಗಳಾದ ಶಿಸ್ತು, ದಯೆ, ಪ್ರಾಮಾಣಿಕತೆ, ಹಿರಿಯರಿಗೆ ಗೌರವ, ಸತ್ಯವನ್ನೇ ನುಡಿಯುವುದು ಮತ್ತು ಜವಾಬ್ದಾರಿಯುತ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಶಾಲಾಮುಖಂಡ ಶಿಶಿರ ಮಾತನಾಡಿ ಈ ನಮ್ಮ ಶಾಲೆಯಲ್ಲಿ ಪಾಠಗಳ ಜೊತೆ ಉತ್ತಮ ಮೌಲ್ಯಗಳನ್ನು ಕಲಿತ್ತಿದ್ದೇನೆ. ನನ್ನ ಜೀವನದಲ್ಲಿ ಉತ್ತಮ ಸಮಾಜ ನಿರ್ಮಾಣದ ಕೆಲಸಗಳನ್ನು ಮಾಡುತ್ತಾ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿ ಕೀರ್ತಿ ತರುತ್ತೇನೆ ಎಂದು ಹೇಳಿದನು.
ಅತಿಥಿಗಳಾಗಿ ಆಗಮಿಸಿದ ನಿವ್ರತ್ತ ಶಿಕ್ಷಕಿ ಡೇರಿ ಸುವಾರಿಸ್ ರವರು ಮಕ್ಕಳಿಗೆ ಶುಭಾಶಯದ ಗೀತೆ ಹಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಪಾಯಸ್ ಮಕ್ಕಳಿಗೆ ಜೀವನದ ಉತ್ತಮ ಮೌಲ್ಯ ಗಳನ್ನು ತಿಳಿ ಹೇಳಿದರು ಸಾಂಸ್ಕೃತಿಕ ಮಂತ್ರಿ ನವ್ಯ 7ನೇತರಗತಿ, ಶ್ರೀಮತಿ ನಿರ್ಮಲಾ ಫೆರ್ನಾಂಡಿಸ್ ನೆಹರೂರವರ ಹುಟ್ಟಿದ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ತಿಳಿಸಿದರು. ಸಾಂಸ್ಕೃತಿಕ ಮಂತ್ರಿ ನವ್ಯ ಉಪಸ್ಥಿತರಿದ್ದರು.
ಮಕ್ಕಳೇ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಿಂದ ಸ್ವಾಗತನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟದಲ್ಲಿ ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿರವ ಎಲ್ಲಾ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡಲಾತಿತು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಮೈನಾ ಪೂಜಾರಿ, ಸ್ವಾಗತ ಸಮೀಕ್ಷಾ, ಮತ್ತು ಧನ್ಯವಾದವನ್ನು ಸಿಯಾ ಕ್ರಾಸ್ತಾ ಅರ್ಪಿಸಿದರು. ಫಲಾಹಾರ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.





























































































