

ಶ್ರೀನಿವಾಸಪುರ ಮೇ 13: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಕಾಮಗಾರಿಯ ಬಗ್ಗೆ ಯಾರೂ ನನಗೆ ಮಾಹಿತಿ ನೀಡಿರಲಿಲ್ಲ. ದೇವರ ಪ್ರೇರಣೆಯಿಂದ ನನ್ನಿಂದ ಈ ಕಾರ್ಯ ನಡೆಯುತ್ತಿದ್ದು, ಈ ಅವಕಾಶ ನೀಡಿದ ದೇವರಿಗೆ ನಾನು ಧನ್ಯನಾಗಿದ್ದೇನೆ ಎಂದು ಹೇಳಿದರು.
ರಾಜಗೋಪುರ ನಿರ್ಮಾಣಕ್ಕಾಗಿ ಶಾಸಕ ನಿಧಿಯಿಂದ ₹1 ಕೋಟಿ ಹಾಗೂ ಮುಜರಾಯಿ ಇಲಾಖೆಯಿಂದ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಒಟ್ಟು ₹1.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ನಾನು ಸದಾ ಸಹಕಾರ ನೀಡಲು ಸಿದ್ಧನಿದ್ದೇನೆ. ಪಟ್ಟಣದಲ್ಲಿ ಇನ್ನೂ ಕೆಲವು ಕಾಮಗಾರಿಗಳ ಅಗತ್ಯವಿರುವುದು ನನ್ನ ಗಮನಕ್ಕೆ ಬಂದಿದ್ದು, ಅವುಗಳಿಗೂ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈ ವೈಶ್ಯ ಕ್ಷೇಮಾಭಿವೃದ್ಧಿ ಸಂಘದ ವೈ.ಆರ್. ಪ್ರಕಾಶ್ ಮಾತನಾಡಿ, ಗುತ್ತಿಗೆದಾರರು, ಇಂಜಿನಿಯರ್ಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗುಣಮಟ್ಟದ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯಂ ಹಾಗೂ ತಂಡ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇಒ ಕೆ. ಸರ್ವೇಶ್, ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ, ಇಂದಿರಾ ಭವನದ ಜಿ. ರಾಜಣ್ಣ, ಗಣೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್, ಬಿಜೆಪಿ ಮಂಡಲ ಅಧ್ಯಕ್ಷ ರೋಣೂರು ಆರ್.ಎನ್. ಚಂದ್ರಶೇಖರ್, ತಾ.ಪಂ ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್ರೆಡ್ಡಿ, ಬಿ.ಎಲ್. ರಾಮಣ್ಣ, ಕಲ್ಲೂರು ಶಂಕರ್ರೆಡ್ಡಿ, ಶೇಷಾಪುರ ಗೋಪಾಲ್, ಲಕ್ಷ್ಮಣರೆಡ್ಡಿ, ಅಂಬೇಡ್ಕರ್ ಪಾಳ್ಯದ ಸಿ. ರವಿ, ಪೋಲ್ ಶಿವಾರೆಡ್ಡಿ, ಶ್ರೀನಾಥ್ ಬಾಬು, ಎಸ್.ಬಿ.ಆರ್. ಅಮರನಾಥ್, ಸುಜಯ್, ಬದ್ರಿ, ಇಂಜಿನಿಯರ್ ಶ್ರೀನಿವಾಸ್, ಕೋಡಿಪಲ್ಲಿ ಶ್ರೀನಿವಾಸರೆಡ್ಡಿ, ಬಿಂದು ಶ್ರೀನಿವಾಸರೆಡ್ಡಿ, ಯಲ್ದೂರು ಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

