

ಕು೦ದಾಪುರ: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬರೊಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಗಾ೦ಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಕುಂದಾಪುರಕ್ಕೆ ದಿಗ್ಭ್ರಮೆ ಆವರಿಸಿದೆ.
ಪ್ರಕರಣದಲ್ಲಿ ಮೂಲ್ಕಿ ಪೊಲೀಸರಿ೦ದ ಬ೦ಧಿಸಲ್ಪಟ್ಟ ವಿದ್ಯಾರ್ಥಿನಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಎಂದು ತಿಳಿದು ಬಂದಿದೆ.
ಕುಂದಾಪುರದ ಪ್ರತಿಷ್ಠಿತ ಕಾಲೇಜಿನ ಅ೦ತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನ (21) ಎ೦ದು ಗುರುತಿಸಲಾಗಿದ್ದು, ಬಂಧಿತ ಆರೋಪಿಯಿ೦ದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 42 ಗ್ರಾಂ ಹೈಡೋವಿಡ್ ಗಾ೦ಜಾ, ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸುಹಾನಾ ಮೇ 12ರ ಮ೦ಗಳವಾರ ಮೂಲ್ಕಿ ರೈಲ್ವೇ ಸ್ನೇಷನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಳು. ಇದರಿ೦ದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಗಾ೦ಜಾ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ,ಆರೋಪಿ ಸುಹಾನಾ ಚೆನ್ನೈಯಿ೦ದ ಮಾದಕ ವಸ್ತು ತರಿಸಿಕೊ೦ಡು ಯುವ ಸಮುದಾಯವನ್ನು ಗುರಿಯಾಗಿಸಿಕೊ೦ಡು ಕರಾವಳಿ ಭಾಗದಲ್ಲಿ ಮಾರಾಟ ಮಾಡುವ ಮೂಲಕ ಹಣ ಸ೦ಪಾದನೆ ಮಾಡಲು ಮುಂದಾಗಿದ್ದಳು ಎ೦ಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆಯೂ ಈಕೆಯವಿರುದ್ಧ ಪೊಲೀಸ್ ಪ್ರಕ್ರರಣಗಳು ದಾಖಲಾಗಿದ್ದು ಬೆಳಕಿಗೆ ಬಂದಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಹಾಗೂ ಬೆ೦ಗಳೂರು ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಮಮ್ಸ್ ವಿಭಾಗದಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವುದನ್ನು ಪೊಲೀಸರು ಬಹಿರ೦ಗ ಪಡಿಸಿದ್ದಾರೆ.ಪ್ರಕರಣವನ್ನು ಗ೦ಭೀರವಾಗಿ ಪರಿಗಣಿಸಿದ ಪೊಲೀಸರು ಗಾ೦ಜಾದ ಜೊತೆಗೆ ಮಾದಕ ದಂಧೆಯಲ್ಲಿ ಆಕೆ ತೊಡಗಿಸಿಕೊ೦ಡಿರುವ, ಇದರ ಜಾಲದ ಬಗ್ಗೆಯೂ ತನಿಖೆ ನಡೆಯುತ್ತಿದೆ.

