

ಕುಂದಾಪುರ: ಜುಲಾಯ್ 26 ರಂದು ಬಿರುಗಾಳಿ ಸಮೇತ ರೌದ್ರವತಾರದಂತ ಮಳೆಯಿಂದ ಕುಂದಾಪುರ ನಗರದ ಚಿಕ್ಕನ್ ಸಾಲ್ ರಸ್ತೆಯ ಮೋಗವೀರ ಭವನದ ಸಮೀಪದ ಎದುರು ದಿಕ್ಕಿನಲ್ಲಿರುವ ದಿನೇಶ್ ನೆರಂಬಳ್ಳಿ ಮತ್ತು ದಿವಗಂತ ರಮೇಶ್ ಅವರ ಪತ್ನಿ ಸುಮತಿಯವರು ವಾಸಿಸುವ ಮನೆಗಳು ಸಂಪೂರ್ಣವಾಗಿ ಧರಶಾಯಿ ಆಗಿವೆ. ಇದರಿಂದಾಗಿ ಅವರಿಗೆ ವಾಸಿಸಲು ಮನೆ ಇಲ್ಲದಂತಾಗಿ. ಅವರು ತಾತ್ಕಾಲಿಕವಾಗಿ ಮೈಲಾರೇಶ್ವರ ಅಂಗನವಾಡಿಯಲ್ಲಿ ಆಸರೆ ಪಡೆದು ಕೊಂಡಿದ್ದಾರೆ.
ಉದ್ದಕ್ಕೆ ಇರುವ ಕಟ್ಟಡದಲ್ಲಿ ಎರಡು ಮನೆಗಳನ್ನು ಭಾಗವನ್ನಾಗಿ ವಾಸಿಸುವ ಅಣ್ಣ ತಂಮದ್ದಿರ ಕುಟುಂಬದ ಒಂದು ಮನೆ ಜುಲಾಯ್ 27 ರ ಮುಂಜಾವು ಸುಮಾರು 12.20 ಕ್ಕೆ ಕುಸಿಯಲು ಆರಂಭಿಸಿತು, ನಂತರ ಇನ್ನೊಂದು ಮನೆ ಕುಸಿದು ಇಡೀ ಕಟ್ಟಡ ಕುಸಿಯಿತು, ಅದೇ ಕಟ್ಟಡದಲ್ಲಿ ರಸ್ತೆ ಬದಿಯಲ್ಲಿ ಜನ್ನ ಎಂಬವರು ಸಣ್ಣ ಅಂಗಡಿ ನೆಡೆಸುತಿದ್ದರು, ಅದು ಭಾಗಶ ಕುಸಿದಿದೆ, ಅಂಗಡಿ ಉಪಯೋಗಿಸಲು ಸಾಧ್ಯವಿಲ್ಲದೆ ಅಪಾಯದ ಸ್ಥಿತಿಯಲ್ಲಿದೆ.
ಕಟ್ಟಡ ಕುಸಿಯುವಾಗ ದಿನೇಶ್ ನೆರಂಬಳ್ಳಿ, ಅವರ ಪತ್ನಿ ಸೀತಾ ಮಗಳು ಧನ್ಯ, ಇವರು ದೈವಾಷಾತ್ ಎಚ್ಚರದಿಂದ ಇದ್ದುದರಿಂದ ಅವರು ಬದುಕುಳಿದಿದ್ದಾರೆ. ದಿ.ರಮೇಶ್ ಅವರ ಪತ್ನಿ ಸುಮತಿ ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಕಟ್ಟಡ ಕುಸಿಯುವಾಗ ಅವರು ಆಸ್ಪತ್ರೆಯಲ್ಲಿದ್ದರು.
ಕುಂದಾಪುರ ಮೀನು ಪೇಟೆಯ ಸಮೀಪ ಸಂತೆ ಮಾರ್ಕೆಟಿಗೆ ಹೋಗುವ ರಸ್ತೆ ಸಮೀಪ ಭಾರಿ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ ಆಗಿದೆ. ಭಂಡಾರ್ಕಾಸ್ ಕಾಜೇಜು ಹಿಂದೆ ಭಾರೀ ಮರ ಉರುಳಿದೆ. ಅಲ್ಲಲ್ಲಿ ತೆಂಗಿನ ಮರಗಳು, ಬಾಳೆಮರಗಳು ಉರುಳಿ ಬಹಳ ಜನರಿಗೆ ತೊಂದರೆ ಹಾಗೂ ಬಹಳ ಮಟ್ಟದಲ್ಲಿ ಹಾನಿಯಾಗಿದೆ.
ಕುಂದಾಪುರ, ಗಂಗೊಳ್ಳಿ, ಹೆಮ್ಮಾಡಿ ಮತ್ತು ಆಸುಪಾಸಿನ ಊರುಗಳವರು ನಿನ್ನೆಯ ರೌದ್ರವತಾರ ಮಳೆ ಕಂಡು ದಂಗಾಗಿದ್ದಾರೆ. ರೌದ್ರವತಾರ ಇಂತಹ ಮಳೆ ಕಂಡಿರಲಿಲ್ಲ ಎಂದು ಜನ ಮಾತಾನಾಡಿಕೊಳ್ಳುತ್ತಾರೆ.











