St Aloysius Gonzaga School Holds Annual General Body Meeting of the Parent-Teacher Association


ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಸಂಸ್ಥೆಯ ಮುಖ್ಯಾಧಿಕಾರಿಯಾದ ರೆ.ಫಾ ಮೆಲ್ವಿನ್ ಪಿಂಟೊ ಎಸ್. ಜೆ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಬೆಳವಣಿಗೆಯು ದೈಹಿಕ, ಸಾಮಾಜಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪ್ರತಿಯೊಂದು ಅಂಶಗಳು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದ ಯಶಸ್ಸಿಗೆ ಮುಖ್ಯವಾಗಿವೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ರೆ.ಫಾ ರೋಹನ್ ಡಿ ಅಲ್ಮೇಡಾ ಎಸ್ .ಜೆ ಮಾತನಾಡಿ, ”ವಿದ್ಯಾರ್ಥಿಗಳ ಜೀವನದಲ್ಲಿ ಕೌಶಲ್ಯಗಳು ಕೇವಲ ಶೈಕ್ಷಣಿಕ ಯಶಸ್ಸಿಗೆ ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಅಗತ್ಯವಾದ ಅಂಶವಾಗಿದೆ” ಎಂದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಹಾಗೂ ಉಪ ಪ್ರಾಂಶುಪಾಲೆ ಶ್ರೀಮತಿ ಅಪರ್ಣ ಸುರೇಶ್ ಮತ್ತು ಕ್ವೀನಿ ಫೆರ್ನಾಂಡಿಸ್ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಶಿಲ್ಪ ಬಲ್ಲಾಳ್ ಲೆಕ್ಕಪತ್ರವನ್ನು ಮಂಡಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರೀನಾ ನೊರೋನ್ಹಾ ಸಂಘದ ಉಪಾಧ್ಯಕ್ಷರಾಗಿ ಅವರ ಅನುಭವಗಳನ್ನು ಹಂಚಿಕೊಂಡರು. ಶ್ರೀಮತಿ ದೀಪ್ತಿ ಸಹನ ಕರ್ಕಡ ಸಂಘದ ಹೊಸ ಸದಸ್ಯರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ನಿರ್ಗಮಿತ ರಕ್ಷಕ-ಶಿಕ್ಷಕ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಶ್ರೀಮತಿ ಕ್ಯಾರೆಲ್ ರೋಡ್ರಿಗಸ್ ಶಿಕ್ಷಕರನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲೆ ಶ್ರೀಮತಿ ಲಾರೆಲ್ ಡಿಸೋಜ ಸ್ವಾಗತಿಸಿದರೆ, ದಿವ್ಯ ಧನ್ಯವಾದವಿತ್ತರು. ಶ್ರೀ ಧೀರಜ್ ಲೋಬೋ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗೋ ಗ್ರೀನ್ ಪ್ರಯುಕ್ತ ಪೋಷಕರಿಗೆ ಸಸಿಗಳನ್ನು ವಿತರಿಸಲಾಯಿತು.
St Aloysius Gonzaga School Holds Annual General Body Meeting of the Parent-Teacher Association

Mangluru : The Annual General Body Meeting of the Parent-Teacher Association of St Aloysius Gonzaga School was held on 26 July 2025 at Loyola Hall. Fr Melwin Joseph Pinto SJ, Rector of St Aloysius Institutions and Chairperson of the PTA, graced the occasion and shared a message on the importance of holistic education and role of parents in the well-being of their children. Fr Rohan D Almeida SJ, Principal, in his presidential address, emphasized the Jesuit vision of educating the whole person and promoting life skills essential for success beyond academics. Outgoing PTA Vice President Ms Reena Noronha urged parents to place their trust in the Jesuit legacy and the teachers who play a vital role in shaping young minds.
Ms Aparna Suresh presented a review of the previous year’s activities, followed by the Annual Report by Ms Quinni Fernandes and the Financial Statement by Treasurer Ms Shilpa Ballal. Ms Acquina Rebello expressed gratitude to the outgoing PTEC members, while Ms Deepthi Karkada introduced the newly elected PTEC for 2025–26. Ms Carol Rodrigues introduced the teachers to the gathering. Ms Laurel D Souza, Vice-principal welcomed the gathering and Ms Divya K proposed the vote of thanks. The event was compered by Mr Dheeraj, and sapling distribution was held as part of the Go Green Project “Prakruthi-Care for our Common Home.”








