

ಕುಂದಾಪುರ; ದಿನಾಂಕ 6/7/25 ರಂದು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಮಂಗಳೂರು ಹಾಗೂ ಸಂತ ಫ್ರಾನ್ಸಿಸ್ ಚರ್ಚಿನ ಸಹಯೋಗದಲ್ಲಿ ‘ಗುಮಟ್ ಗಿನ್ಯಾನ್ ‘ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಸಕ್ತರಿಗೆ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಮಂಗಳೂರಿನ ಪ್ರತಿಷ್ಠಿತ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್ ‘ ಇದರ ಪಿ ಆರ್ ಒ ಹಾಗೂ ಮ್ಯಾನೇಜರ್ ಆಗಿರುವ ವಿಕ್ಟರ್ ಮಥಾಯಸ್ ಹಾಗೂ ಅವರ ಸಂಗಡಿಗರಾದ ಡೆಲ್ಟನ್ ಲೋಬೊ, ಜೀವನ್ ಸಿದ್ದಿ, ಜೆನ್ವಿಟ ಲೋಬೊ ಹಾಗೂ ನಿಕೊಲಾ ಮೊರಾಸ್ ಹಾಜರಿದ್ದರು.
ತರಬೇತಿ ಕಾರ್ಯಾಗಾರಕ್ಕೆ ಹಾಜರಾದ ಹಿರಿಯರಲ್ಲಿ ಒಬ್ಬರಾದ ಸಿಪ್ರಿಯನ್ ಮೆಂಡೋನ್ಸರವರು, ಕೊಂಕಣಿ ಸಂಗೀತ ಸಂಪ್ರದಾಯದ ಗುಮ್ಟಾ ವಾದನವನ್ನು ಬಾರಿಸುವುದರ ಮೂಲಕ ಉದ್ಘಾಟಿಸಿದರು
ಚರ್ಚಿನ ಧರ್ಮ ಗುರುಗಳಾದ ವಂ। ಫಾ. ಎಡ್ವಿನ್ ಡಿಸೋಜಾರವರು, ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ತದನಂತರ, ‘ ಮಾಂಡ್ ಸೊಭಾಣ್’ ಇದರ ಪಿ ಅರ್ ಒ ವಿಕ್ಟರ್ ಮಥಾಯಸ್ ಗುಮಟ್ ವಾದನ ತಯಾರಿಸುವ ಬಗ್ಗೆ ಮತ್ತು ಗುಮಟ್ ಹಾಡುಗಳ ಬಗ್ಗೆ ತಿಳಿಸಿದರು.
ಜೀವನ್ ಸಿದ್ದಿ ಇವರು, ಸಿದ್ದಿ ಸಮುದಾಯದ ಬಗ್ಗೆ, ಅವರ ಸಂಪ್ರದಾಯದ ಬಗ್ಗೆ, ಅವರು ಹಾಡುವ ಗುಮಟ್ ಹಾಡುಗಳ ಬಗ್ಗೆ, ಹೇಗೆ ಅವರು ಮಾಂಡ್ ಸೊಬಾಣ್ ಸಂಸ್ಥೆಯ ಸದಸ್ಯರಾದ ಬಗ್ಗೆ ತಿಳಿಸಿದರು.
ವಿವಿಧ ಗುಮ್ಟಾ ಹಾಡುಗಳನ್ನು, ಗುಮ್ಟಾ ತಾಳದೊಂದಿಗೆ ಹಾಡಲು ತರಬೇತಿ ನೀಡಿದ ನಂತರ ಗುಂಪುಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ಪ್ರದರ್ಶನ ನೀಡಿದವರನ್ನು ಸನ್ಮಾನಿಸಿದರು. ಕೆಲವರು ತರಬೇತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು’ ಮಾಂಡ್ ಸೊಬಾಣ್’ ಇವರು ಸಂಪ್ರದಾಯಿಕ ಗುಮ್ಟಾ ಕಲೆಯ ಆಸಕ್ತಿಯನ್ನು ಕೊಂಕಣಿ ಜನರಲ್ಲಿ ಇನ್ನಷ್ಟು ಹೆಚ್ಚಿಸುವ ಸಲುವಾಗಿ ಉಚಿತವಾಗಿ ನೀಡಿದ್ದು, ಸಂಸ್ಥೆಯ ಮ್ಯಾನೇಜರ್ ವಿಕ್ಟರ್ ಮಥಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಕೆಲ್ವಿನ್ ಮೆಂಡೋನ್ಸಾ ಸ್ವಾಗತಿಸಿದರು. 20 ಆಯೋಗಗಳ ಸಂಚಾಲಕರು ಧನ್ಯವಾದ ಸಮರ್ಪಿಸಿದರು.
ಚರ್ಚಿನ ಧರ್ಮ ಗುರುಗಳು ವಂದನೀಯ ಫಾ. ಎಡ್ವಿನ್ ಡಿಸೋಜಾರವರು ತರಬೇತುದಾರರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸುಮಾರು 50 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿ ಪಡೆದು ಕೊಂಡರು.







