

ಪಡುಕೋಣೆ ಸಂತ ಅಂತೋನಿ ಚರ್ಚಿನಲ್ಲಿ ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯದ”
ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯ” ಎಂಬ ಒಂದು ದಿನದ ತರಬೇತಿಯನ್ನು ದಿನಾಂಕ 6.7.2025 ರಂದು ಎಂಬ ಒಂದು ದಿನದ ತರಬೇತಿಯನ್ನು ಶಿಬಿರವನ್ನು ನಡೆಸಲಾಯಿತು ಸಂಪನ್ಮೂಲ ವ್ಯಕ್ತಿಯಾಗಿ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ। ಧರ್ಮಗುರು ಫಾದರ್ ಹೆರಾಲ್ಡ್ ಪಿರೇರಾ ಆಗಮಿಸಿದ ಅವರು ‘ಪ್ರಪಥಮವಾಗಿ ಪವಿತ್ರ ಬೈಬಲ್ ಮೇಲೆ ಪ್ರೀತಿ,ವಿಶ್ವಾಸ್,ಗೌರವ ಯಾವ ರೀತಿ ನೀಡಬೇಕು, ಪ್ರತಿಯೊಬ್ಬ ಮಕ್ಕಳಿಗೂ ಪವಿತ್ರ ಬೈಬಲ್ ಪುಸ್ತಕವನ್ನು ಎರಡು ಕೈಗಳಿಂದ ಮುಟ್ಟಿ ನಮಿಸಿ ಗೌರವಿಸುವ ರೀತಿಯನ್ನು ನಡೆಸಿಕೊಟ್ಟರು. “ಶುಭ ವಾರ್ತೆಯ” ಎಳು ಮಜಲುಗಳ ವಿಧಾನವನ್ನು ಮಕ್ಕಳ ಮನಸ್ಸಿಗೆ ಮನದಟ್ಟುವಂತೆ ಸಂಗೀತ,ನಟನೆಯ ಮೂಲಕ ತಿಳಿಸಿದರು. ಗುಂಪುಗಳನ್ನು ಮಾಡಿ ಮಕ್ಕಳಿಗೆ ಏಳು ಹಂತ ಗಳನ್ನು ಸಮುದಾಯದಲ್ಲಿ ಭಾಗವಹಿಸಿ ಕಾರ್ಯ ರೂಪಕ್ಕೆ ತರುವಂತೆ ಮಾಡಲು ಫೋತ್ಸಾಹಿಸಿದರು. 5ನೇತರಗತಿಯಿಂದ 10ನೇ ತರಗತಿಯವರೆಗಿನ 60 ಮಕ್ಕಳು ಮೂವರು ಕ್ರೈಸ್ತ ಶಿಕ್ಷಣದ ಶಿಕ್ಷಕರು ಹಾಜರಿದ್ದರು. ಚರ್ಚಿನ ಧರ್ಮಗುರು ವಂ। ಫ್ರಾನ್ಸಿಸ್ ಕರ್ನೆಲಿಯೋ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಿಶಿನರಿ ಮಕ್ಕಳ ಸಂಘದ ಶಿಕ್ಷಕಿ ಶೀಮತಿ ಡೇರಿ ಸುವಾರಿಸ್ ಧನ್ಯವಾದ ನೀಡಿದರು.























