

ಕೆನರಾ ಬ್ಯಾಂಕ್ 06.02.2026 ರಂದು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇ-ಹುಂಡಿಯನ್ನು (E Hundi) ಅಳವಡಿಸಿದೆ. ಮಂಗಳೂರು ವಲಯ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಬಿ. ಸಿಂಗೈ ಅವರ ಸಮ್ಮುಖದಲ್ಲಿ, ದೇವಳದ ಆನುವಂಶಿಕ ಮೊಕ್ತೇಸರರಾದ ಶ್ರೀ ಸನತ್ ಕುಮಾರ್ ಶೆಟ್ಟಿ ಮತ್ತು ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರು ಇದನ್ನು ಉದ್ಘಾಟಿಸಿದರು.
ಈ ಇ-ಹುಂಡಿ ಸೌಲಭ್ಯವು ಭಕ್ತರಿಗೆ ಡಿಜಿಟಲ್ ರೂಪದಲ್ಲಿ ಕಾಣಿಕೆ ಸಲ್ಲಿಸಲು ಸಹಾಯ ಮಾಡುತ್ತದೆ. ಈ ಭಾಗದ ದೇವಾಲಯ/ಸಂಸ್ಥೆಗಳಲ್ಲಿ ಕೆನರಾ ಬ್ಯಾಂಕ್ ಅಳವಡಿಸಿರುವ ಆರನೇ ಇ-ಹುಂಡಿ ಇದಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪ ಮಹಾಪ್ರಬಂಧಕರುಗಳಾದ ಶ್ರೀಮತಿ ಲತಾ ಕುರುಪ್ ಮತ್ತು ಶ್ರೀಮತಿ ಎಲ್. ಆರ್. ವಿಜಯಶ್ರೀ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
E Hundi Installation at Sri Durgaparameshwari Temple, Kateel
Canara Bank has installed E Hundi at Sri Durgaparameshwari Temple, Kateel on 06.02.2026. It is inaugurated by Sri Sanath Kumar Shetty and Sri Harinaranadasa Asranna, Temple Administrators in the presence of Sri Manjunath B Singai, Circle Head, Mangalore. E Hundi helps the devotees to pay offerings through digital mode. It is the sixth E Hundi installed by Canara Bank in temples/organisations in the area. On the occasion Deputy General Managers Smt Latha Kurup and Smt L R Vijayashree along with other senior officials were also present.

