

ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಗುಲ್ಬರ್ಗಾ ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ 200 ಪ್ರಾಧ್ಯಾಪಕರಿಗೆ ಇತ್ತೀಚೆಗೆ ಫಲಿತಾಂಶ ಆಧಾರಿತ ಶಿಕ್ಷಣ (OBE)” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಡಾ. ಎಸ್. ಎನ್. ಭಟ್ ಅವರು ಓ ಬಿ ಇ ತತ್ವಗಳು, ಫಲಿತಾಂಶಗಳ ವ್ಯಾಖ್ಯಾನ, ಮ್ಯಾಪಿಂಗ್, ಮೌಲ್ಯಮಾಪನ ವಿಧಾನ ಮತ್ತು ಫಲಿತಾಂಶಗಳ ಸಾಧನೆಯ ವ್ಯವಸ್ಥಿತ ಲೆಕ್ಕಾಚಾರದ ಕುರಿತು ತಮ್ಮ ದಶಕಗಳ ಅನುಭವದಿಂದ ಮೌಲ್ಯಯುತ ಕಾರ್ಯಗಾರ ನಡೆಸಿಕೊಟ್ಟರು.

