

ಬೈಂದೂರು; ವಾರ್ಷಿಕ ಮಹಾ ಹಬ್ಬದ ಸಂಜೆ ಬೈಂದೂರಿನ ಸಾಂಸ್ಕ್ರತಿಕ ತಂಡದಿಂದ ಮನೋರಂಜನ ಕಾರ್ಯಕ್ರಮವಾಗಿ ಖ್ಯಾತ ನಾಟಕಗಾರರಾದ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ ಇವರು ರಚಿಸಿದ ಸಾಮಾಜಿಕ, ಹಾಸ್ಯಭರಿತ, ನಿತಿದಾಯಕ “ಸ್ವಾರ್ಥಾಚಿ ದಾವ್ಲಿ” ಕೊಂಕಣಿ ನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಪ್ರಧಾನ ಧರ್ಮಗುರು ವಂ। | ವಿನ್ಸೆಂಟ್ ಕುವೆಲ್ಲೊ, ಮಾತನಾಡಿ ಬೈಂದೂರು ಚರ್ಚಿನಲ್ಲಿ ಉತ್ತಮ ಕಲಾವಿದರಿದ್ದಾರೆ, ಬೇರೆ ಕಡೆ ತಾವೇ ನಟಿಸಿ ನಾಟಕ ಮಾಡುವರು ಕಡಿಮೆಯಾಗಿದ್ದಾರೆ, ಆದರೆ ನಮ್ಮ ಇಗರ್ಜಿಯ ತರುಣರು, ದೊಡ್ಡವರು ವರ್ಷಪ್ರತಿ ನಾಟಕದಲ್ಲಿ ಅಭಿನಯಿಸಿ ಕಲೆಯನ್ನು ಮುಂದುವರೆಸುತ್ತಾ ಇದ್ದಾರೆ. ಇದು ಅಭಿಮಾನದ ಸಂಗತಿ. ಈ ವರ್ಷ ಉತ್ತಮ ಕತೆಯುಳ್ಳ ನಾಟಕ “ಸ್ವಾರ್ಥಾಚಿ ದಾವ್ಲಿ” ಆಡಿ ತೋರಿಸಲಿದ್ದಾರೆ, ಎಲ್ಲಡೆ ಸ್ವಾರ್ಥ ತುಂಬಿರುವ ಈ ಕಾಲದಲ್ಲಿ ಇಂದು ಸೂಕ್ತವಾದ ನಾಟಕ ಇದಾಗಿದೆ ಎಂದು ಹರಸಿದರು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮಗುರು ವಂ। ವಿನ್ಸೆಂಟ್ ಕುವೆಲ್ಲೊ, ಸಹಾಯಕ ಧರ್ಮಗುರು ವಂ। ಪೃಥ್ವಿ ರೊಡ್ರಿಗಸ್ ಮತ್ತು “ಸ್ವಾರ್ಥಾಚಿ ದಾವ್ಲಿ” ನಾಟಕ ರಚಿಸಿದ ಖ್ಯಾತ ನಾಟಕಕಾರ ಬರ್ನಾರ್ಡ್ ಜೆ. ಕೋಸ್ತಾ, ಕುಂದಾಪುರ. ಇವರನ್ನು ಕ್ರಿಸ್ತೀ ಕಲಾಂಗಣ್ ಸಂಘಟನೆಯ ಪರವಾಗಿ ಗೌರವದಿಂದ ಸನ್ಮಾನಿಸಲಾಯಿತು.
“ಕ್ರಿಸ್ತೀ ಕಲಾಂಗಣ್” ತಂಡದ ಅಧ್ಯಕ್ಷೆ ಫ್ಲಾವಿಯಾ ರೆಬೆಲ್ಲೊ ಚರ್ಚಿನ ಸ್ಟೀಪನ್ ಡಯಾಸ್, “ಕ್ರಿಸ್ತೀ ಕಲಾಂಗಣ್” ಇದರ ಕಲಾವಿದರು, ಸದಸ್ಯರು ಉಪಸ್ಥಿತರಿದ್ದರು. ಇದೇ ನಾಟಕ 25 ವರ್ಷಗಳ ಹಿಂದೆ, ಇದೇ ರಂಗಮಂಟಪದಲ್ಲಿಐ.ಸಿ.ವೈ.ಎಮ್ ಸಂಘಟನೆಯವರು ಭರ್ಜರಿಯಾಗಿ ಪ್ರದರ್ಶಿಸಿ ಯಶಸ್ವಿಯಾಗಿದ್ದರು, ಇಂದು ಕೂಡ ದೊಡ್ಡವರು ಅಭುತಪೂರ್ವವಾಗಿ ನಟಿಸಿ, ಉತ್ತಮ ಸಂಗೀತ, ಹಾಡಿನೊಂದಿಗೆ ಭರ್ಜರಿ ಪ್ರದರ್ಶನ ಕಂಡಿತು. ಅಂದು ನಟಿಸಿದ ಕೆಲವು ಕಲಾವಿದರು ಇಂದು ಕೂಡ ಅಭಿನಯಿಸಿ ಅಂದಿನ ನೆನಪನ್ನು ಮೆಲುಕು ಹಾಕಿದರು. ನಾಟಕ ಅಭುತಪೂರ್ವಕವಾಗಿ ಹೊರ ಹೊಮ್ಮಿದ್ದರಿಂದ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


















































