
ಶ್ರೀನಿವಾಸಪುರ – 1 ಸಂವಿಧಾನದ ಆಶಯ ಅನುಸರಿಸಬೇಕು: ಡಾ. ಚಂದ್ರಕಳಾಶ್ರೀನಿವಾಸನ್

ಶ್ರೀನಿವಾಸಪುರ: ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳ ನಾಂದಿ. ಎಲ್ಲರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಡಾ. ಚಂದ್ರಕಳಾಶ್ರೀನಿವಾಸನ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆಗೆ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಸಮರ್ಪಿಸಿ ಚಾಲನೆ ನೀಡಿ ಮಾತನಾಡಿದರು.
ವೈವಿಧ್ಯತೆಯ ನಡುವೆಯೂ ದೇಶವನ್ನು ಏಕತೆಯ ನಡಿಗೆಯಲ್ಲಿ ಮುನ್ನಡೆಸುತ್ತಿರುವ ಸಂವಿಧಾನ, ಜನರ ಬದುಕಿಗೆ ಮಾರ್ಗದರ್ಶಕ. ಸಂವಿಧಾನದ ತತ್ವಗಳನ್ನು ಪಾಲಿಸುವ ಬಗ್ಗೆ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು.
ದಲಿತ ಮುಖಂಡ ಗಾಂಡ್ಲಹಳ್ಳಿ ಚಲಪತಿ ಮಾತನಾಡಿ ಸಂವಿಧಾನ ನಮ್ಮ ದೇಶದ ಅಮೂಲ್ಯ ಆಸ್ತಿ. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನಗಳ ಶ್ರಮದಿಂದ ಹೇಡಿಮೆಯಿಲ್ಲದ, ಸಮಾನ ಹಕ್ಕುಗಳನ್ನು ಒದಗಿಸುವಂತಹ ಮಹತ್ವದ ಸಂವಿಧಾನ ರಚಿಸಿ ದೇಶಕ್ಕೆ ಕೊಟ್ಟ ದಿನ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಒ ಬಿ.ಸಿ. ಮುನಿಲಕ್ಷ್ಮಯ್ಯ, ಶಿರಸ್ತೆದಾರ್ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ರಾಜೇಶ್, ಸುರೇಶ್, ತಾ.ಪಂ ಸಹಾಯಕ ನಿರ್ದೇಶಕ ರಾಮಪ್ಪ, ಟಿಪಿಒ ವೆಂಕಟಸ್ವಾಮಿ, ಪಿಡಬ್ಲ್ಯುಡಿ ಎಇಇ ಮಂಜುನಾಥ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಸುಬಾನ್, ಖಜಾನೆ ಅಧಿಕಾರಿ ದೇವರಾಜ್, ಆರ್ಐ ಗುರುರಾಜರಾವ್ , ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ಭಾಸ್ಕರ್, ನಾಮಿನಿ ಮಾಜಿ ಸದಸ್ಯ ನರಸಿಂಹ, ಇಸಿಒ ಆರ್. ಸುಬ್ರಮಣ್, ದಲಿತ ಮುಖಂಡರಾದ ರಾಮಾಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ತಾ.ಪಂ ಮಾಜಿ ಸದಸ್ಯ ಆರ್.ಜಿ. ನರಸಿಂಹಯ್ಯ, ಬದ್ರಿನರಸಿಂಹ, ಕೂಸ್ಸಂದ್ರ ರೆಡ್ಡಪ್ಪ, ಎಸ್ಸಿ–ಎಸ್ಟಿ ನೌಕರರ ಸಂಘದ ಅಧ್ಯಕ್ಷ ಮುನಿವೆಂಕಟಪ್ಪ, ಹೆಬ್ಬಟ್ಟ ಆನಂದ್ಕುಮಾರ್, ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಅಧ್ಯಕ್ಷ ಕೆ.ಎಲ್. ಕಾರ್ತಿಕ್ , ತಹಶೀಲ್ದಾರ್ ಕಚೇರಿ ಸಿಬ್ಬಂದಿ ಎಚ್.ಎಸ್. ಅಭಿಷೇಕ್ ಉಪಸ್ಥಿತರಿದ್ದರು.
ಶ್ರೀನಿವಾಸಪುರ – 2 ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

ಶ್ರೀನಿವಾಸಪುರ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಸಂವಿಧಾನ ಸಮರ್ಪಣಾ ದಿನವನ್ನು ಸಾರ್ಥಕವಾಗಿ ಆಚರಿಸಲಾಯಿತು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಮೂಹವಾಗಿ ಸಂವಿಧಾನ ಪೀಠಿಕೆಯನ್ನು ವಾಚಿಸಿ ರಾಷ್ಟ್ರದ ಮೌಲ್ಯಗಳಿಗೆ ನಿಷ್ಠೆಯನ್ನು ವ್ಯಕ್ತಪಡಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ. ಜಿ.ಎಸ್. ಶ್ರೀನಿವಾಸ್, ಪಿಜಿಷಿಯನ್ ಡಾ. ಉಮಾಶಂಕರ್, ಮೂಳೆ ತಜ್ಞರು ಡಾ. ಸುರೇಶ್ ಎಂ, ಚರ್ಮ ತಜ್ಞ ಡಾ. ಮಂಜುನಾಥ್, ಸ್ತ್ರೀರೋಗ ತಜ್ಞ ಡಾ. ವೀಣಾ, ಮಕ್ಕಳ ತಜ್ಞರು ಡಾ. ಡಿ.ಎಂ. ದಿವಾಕರ್ ಪ್ರಸಾದ್, ಡಾ. ನಿರಂಜನ್, ಕಣ್ಣಿನ ತಜ್ಞೆ ಡಾ. ಸುಶ್ಮಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾಗೂ ಶುಶ್ರೂಷಾಧಿಕಾರಿ ಪ್ರಮೀಳಾ, ನರ್ಸಿಂಗ್ ಅಧಿಕಾರಿ ಕವಿತಾ ಉಮಾಮಹೇಶ್ವರಿ, ಫಾರ್ಮಸಿ ಸಿಬ್ಬಂದಿ ಕಲ್ಲೇಶ್, ಮೊಹಮ್ಮದ್ ಅಲಿ, ಪ್ರಯೋಗಶಾಲಾ ತಂತ್ರಜ್ಞ ವಿ. ಶಿವಕುಮಾರ್ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.
ಸಂವಿಧಾನ ಪೀಠಿಕೆ ವಾಚನದ ಮೂಲಕ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ಮೌಲ್ಯಗಳ ಪಾಲನೆ, ಕರ್ತವ್ಯ ನಿರ್ವಹಣೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಬದ್ಧರಾಗಿರುವುದಾಗಿ ನುಡಿದರು.

