ಮಂಗಳೂರು ; ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ” ಕಲ್ಲಚ್ಚು ಪ್ರಕಾಶನದ” 16 ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಅಗಸ್ಟ್ 31 ಭಾನುವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಡಾ. ಎಸ್ ಎಮ್ ಶಿವಪ್ರಕಾಶ್, ಜಬೀವುಲ್ಲಾ […]
ಕುಂದಾಪುರ : ಶನಿವಾರ : 23.08.2025 : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 23.08.2025 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿತು. ವಿಜ್ಞಾನ ಕ್ಲಬ್ ಸಂಯೋಜಕರಾದ ಶಿಕ್ಷಕಿ ಉಜ್ವಲಾ ಮತ್ತು ಶಿಕ್ಷಕಿ ದಿವ್ಯಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿಸೋಜಾ ಅವರು ತಮ್ಮ ಭಾಷಣದಲ್ಲಿ, ಭಾರತೀಯ ವಿಜ್ಞಾನಿಗಳು, ವಿಶೇಷವಾಗಿ ಶ್ರೀ ವಿಕ್ರಮ್ ಸಾರಾಭಾಯ್ ಮತ್ತು ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕೊಡುಗೆಗಳನ್ನು ಸ್ಮರಿಸಿದರು, ಗುರುತಿಸಿದರು ಮತ್ತು ಗೌರವಿಸಿದರು ಮತ್ತು ವಿದ್ಯಾರ್ಥಿಗಳು ಉತ್ತಮ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು […]
ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಮಕ್ಕಳಿಗಾಗಿ 4ನೇ ವರ್ಷದ ಆನ್ಲೈನ್ ರಾಧಾ-ಕೃಷ್ಣ ಫೋಟೋ ಸ್ಪರ್ಧೆ ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ರಾಧಾ ಅಥವಾ ಕೃಷ್ಣರಂತೆ ಸಿಂಗರಿಸಿ ಫೋಟೋಗಳನ್ನು ಕಳುಹಿಸಲು ಆಹ್ವಾನಿಸಲಾಗಿದೆ. ಸ್ಪರ್ಧೆಯು: 0 ರಿಂದ 1 ವರ್ಷ, 1-3, ಮತ್ತು 3 ರಿಂದ 5 ವರ್ಷ ವಯೋಮನಾದ ಮಕ್ಕಳಿಗೆ ಮಾತ್ರವಾಗಿದ್ದು, ಪೋಷಕರು ತಮ್ಮ ಮಗುವಿನ ಕನಿಷ್ಠ ಎರಡು ಫೋಟೋಗಳನ್ನು, ವಯಸ್ಸಿನ ಪುರಾವೆ ಮತ್ತು ಸಂಪರ್ಕ ವಿವರಗಳೊಂದಿಗೆ, WhatsApp ಸಂಖ್ಯೆ 8748800666 / 7026637705 ಅಥವಾ mailto:vkdigitalmarketing123@gmail.com)ಗೆ […]
Moodlakatte – Dental Awareness Programme at Vidya Academy ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿಯಲ್ಲಿ, ಕೋಟೇಶ್ವರ ಶ್ರೀದೇವಿ ಡೆಂಟಲ್ ಕ್ಲಿನಿಕ್ನ ಡಾ. ಜಗದೀಶ್ ಹಾಗೂ ಅವರ ತಂಡವು ದಂತ ಆರೈಕೆ ಮತ್ತು ಹಲ್ಲುಗಳ ಸ್ವಚ್ಛತೆಯ ಕುರಿತ ವಿಶೇಷ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ , ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವ ವಿಧಾನ ಹಾಗೂ ದಂತ ಆರೋಗ್ಯದ ಮಹತ್ವವನ್ನು ದಂತಪಂಗ್ತಿಯ ವಿಶೇಷ ಆಕರ್ಷಕ ಮಾಡೆಲ್ ಗಳೊಂದಿಗೆ ಕೋಟೇಶ್ವರದ ಶ್ರೀದೇವಿ ದಂತ ಚಿಕಿತ್ಸಾಲಯದ ಡಾ. ಜಗದೀಶ್ ರವರು […]
ಮಂಗಳೂರು;‘ರಾಜ್ಯಭಾಷೆ ಯಾವುದೇ ಒಂದು ರಾಜ್ಯಕ್ಕೆ ಸೀಮೀತವಾದರೆ ಕೊಂಕಣಿಯ ವಿಶೇಷತೆ ಏನೆಂದರೆ ಅದು ಇಡೀ ಕೊಂಕಣ ಪ್ರದೇಶಕ್ಕೆ ಅನ್ವಯಿಸುವ ಭಾಷೆ. ಸಾವಿರಾರು ಭಾಷೆ, ಉಪಭಾಷೆಗಳಿರುವ ಭಾರತದಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನವಿದೆ. ಅದರಲ್ಲಿ ಕೊಂಕಣಿ ಒಂದು ಎಂಬ ಅಭಿಮಾನ ನಮ್ಮದು. ಹಲವಾರು ಕಠಿಣ ನಿಬಂಧನೆಗಳನ್ನು ದಾಟಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಇಂದು ಕರ್ನಾಟಕದಲ್ಲಿ ಕೊಂಕಣಿ ಕಲಿಕೆಗೆ, ಸ್ನಾತಕೋತ್ತರ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಅವಕಾಶವಿದೆ. ಅದನ್ನು ಬಳಸಬೇಕು. ಹಾಗೂ ಇದು […]
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಶಕ್ತಿನಗರದ ಕಲಾಂಗಣದಲ್ಲಿ 20.08.25 ರಂದು 34 ನೇ ಕೊಂಕಣಿ ಮಾನ್ಯತಾ ದಿನಾಚರಣೆಯ ಉದ್ಘಾಟನೆ ನೆರವೇರಿತು. ಕೊಂಕಣಿ ಬಾವುಟದೊಂದಿಗೆ ಮೆರವಣಿಗೆ ನಡೆಯಿತು. ನಂತರ ಕೊಂಕಣಿ ಧ್ವಜರೋಹಣ ಮಾಡಿ ಮಾತನಾಡಿದ ಮುಖ್ಯ ಅತಿಥಿ ಮಾಜಿ ಮನಪಾ ಸದಸ್ಯ ರಂಗನಾಥ ಸಿ. ಕಿಣಿ ಇವರು “ಮಕ್ಕಳು ಯುವಕರು ಬಹು ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದೀರಿ. ವಿವಿಧ ಪ್ರತಿಭೆಗಳ ಪ್ರದರ್ಶನ ನಡೆಯಲಿದೆ. ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ತಮ್ಮಿಂದ ಮುನ್ನಡೆಯಲಿ ಎಂದು ಶುಭ ಹಾರೈಸಿದರು. […]
ಶ್ರೀನಿವಾಸಪುರ : ಶಾಲಾ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಿಳಿಸಿರುವಂತೆ, 1 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ (1-5ನೇ ತರಗತಿ ಪ್ರತಿ ಮಕ್ಕಳಿಗೆ ರೂ.265, 6-8ನೇ ತರಗತಿಗೆ ರೂ.295 ಹಾಗೂ 9-10ನೇ ತರಗತಿಗೆ ರೂ.325) ಶೂ ಮತ್ತು ಸಾಕ್ಸ್ ವಿತರಣೆಗಾಗಿ ಅನುದಾನವನ್ನು ಸ್ಯಾಟ್ಸ್ ತಂತ್ರಾಂಶದ ಅಂಕಿ-ಅಂಶ ಆಧಾರವಾಗಿ ನೇರವಾಗಿ ಎಸ್ಡಿಎಂಸಿ ಖಾತೆಗಳಿಗೆ ಜಮಾ ಮಾಡಲಾಗಿದೆ. ಶಾಲಾ ಮುಖ್ಯಶಿಕ್ಷಕರು ರಾಷ್ಟ್ರ […]
ಕೋಲಾರ, ಆಗಸ್ಟ್ 18 ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದವಾಗಿ ಆಚರಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಅರ್ಥಪೂರ್ಣ ಆಚರಣೆಗೆ ಪ್ರತಿಯೊಬ್ಬರೂ ನೆರವಾಗಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹೇಳಿದರು. ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಪರಿಸರ ಸ್ನೇಹಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಬೇಕು. ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳ […]
ತಲ್ಲೂರು ; 2025ರ ಆಗಸ್ಟ್ 15 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ದೇವಾಲಯದಲ್ಲಿ “ಗಾಯನ್ ಸೊಭಾನ್” ಎಂಬ ಗಾಯನ ಸ್ಪರ್ಧೆಯನ್ನು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ವಯೋಮಾನದವರಿಗಾಗಿ ಆಯೋಜಿಸಲಾಯಿತು. ಚರ್ಚಿನ ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ದೇಶಾಭಿಮಾನವನ್ನು ವ್ಯಕ್ತಪಡಿಸುವ ದೇಶಭಕ್ತಿ ಗೀತೆ ಹಾಡಲಾಯಿತು.ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾ ಅವರು ಸ್ವಾಗತಿಸಿ ತೀರ್ಪುಗಾರರಾದ ಶ್ರೀ ಡಾಲ್ಫಿ ಮಾಸ್ಕರೇನಾಸ್ – ಕೊಂಕಣಿ ಭಾಷೆಯ ಪ್ರಸಿದ್ಧ ಸಂಗೀತಗಾರ ಮತ್ತು ಶ್ರೀ ಅಶ್ವಿನ್ ಡಿ’ಕೋಸ್ಟಾ – […]

