ಮಂಗಳೂರಿನ ಸೆಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಬೊಂದೇಲ್ನ ವಿದ್ಯಾರ್ಥಿ ಶ್ರೇಯಸ್ ಕುಮಾರ್ ಕೆ ರಾಜ್ಯ ಮಟ್ಟದ ವಿಶೇಷ ಮಕ್ಕಳ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಶಾಲೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದ್ದಾನೆ. ಬೆಂಗಳೂರಿನ ರಾಮನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶ್ರೇಯಸ್ ಶಾಟ್ಪುಟ್ ಮತ್ತು ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ಭಾಗವಹಿಸಿ, ಶಾಟ್ಪುಟ್ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶ್ರೇಯಸ್ ಅವರು ಶ್ರೀ ಪ್ರವೀಣ್ ಕುಮಾರ್ ಹಾಗೂ ಶ್ರೀಮತಿ ಕವಿತಾ ಜೆಕೆ ಅವರ ಪುತ್ರ. […]
ಫೆಬ್ರವರಿ 13, 2026ರಂದು ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇವರ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಾಗಿ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಚಾರ್ಮಾಡಿ ಚೆಕ್ಪೋಸ್ಟ್ ಸಮೀಪ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು. ಈ ಸೇವೆಯ ಮೂಲಕ ದೂರದ ಪ್ರಯಾಣದಿಂದ ದಣಿದ ಯಾತ್ರಿಕರಿಗೆ ತಂಪು ಮತ್ತು ತಾಜಾತನ ದೊರಕಿದ್ದು, ಅವರ ಪವಿತ್ರ ಯಾತ್ರೆಗೆ ಆತ್ಮೀಯ ಸಹಕಾರ ನೀಡಲಾಯಿತು.
ಮಂಗಳೂರಿನ ನಗರದ ಮೋರ್ಗನ್ಸ್ ಗೇಟ್ ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯು ಒಂದು ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗೌರವಾನ್ವಿತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ನೀಡಲಾಗುತ್ತಿರುವ ಶಾಸ್ತ್ರೀಯ ಆಯುರ್ವೇದ ಚಿಕಿತ್ಸೆಗಳು ಮತ್ತು ಶಾಂತಿಯುತ, ಸಮಗ್ರ ಹಾಗೂ ಉನ್ನತಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಪ್ರಶಂಸಿಸಿದರು. 7 ವಿವಿಧ ದೇಶಗಳಿಂದ ಬಂದ 15 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಆಯುರ್ವೇದ ಕಲಿಕೆ ಮತ್ತು ತರಬೇತಿ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದ್ದು ಈ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣಾ ಸಮಾರಂಭ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು! […]
ಕೋಲಾರ : ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಕೃತಿಕ ಮತ್ತು ಪಲ್ಲವಿ ಅವರು ಮಳೆ ನೀರು ಕೊಯ್ಲು ಮಾದರಿಯ ಕಾರ್ಯವಿಧಾನವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ವಿಭಾಗ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಸೋಮವಾರ ಪುಣೆನಲ್ಲಿ ನಡೆಯಲಿರುವ ಜಿಜ್ಞಾಸ ವಿಜ್ಞಾನ ಮಾದರಿ ತಯಾರಿಕೆ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿನಿಯರು ತೆರಳಲಿದ್ದಾರೆ. ಶಿಕ್ಷಕಿ ರೇಷ್ಮಾ ಖಾನಂ ಅವರ ಮಾರ್ಗದರ್ಶನದಲ್ಲಿ […]
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಾರು, ಕ್ಯಾಂಟರ್ (ಟ್ಯಾಂಕರ್) ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಹೊಸಕೋಟೆ ತಾಲೂಕಿನ ಎಂ.ಸತ್ಯಾವರ ಬಳಿ ಈ ದುರಂತ ನಡೆದಿದ್ದು, ರಸ್ತೆಯಲ್ಲೇ ರಕ್ತದ ಮಡುವೇ ಹರಿದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊದಲು ವೇಗವಾಗಿ ಬಂದ ಕ್ಯಾಂಟರ್, ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ […]
Inauguration and Blessing of the Renovated St Anne Chapel, Thottam ಮಲ್ಪೆ: ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳವಾಗಿದ್ದು ಇದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಬುಧವಾರ ತೊಟ್ಟಂ ಸಂತ ಅನ್ನಮ್ಮನವರ ಚಾಪೆಲ್ ಉದ್ಘಾಟಿಸಿ ಆಶೀರ್ವಚನ ನೆರವೇರಿಸಿ ಪವಿತ್ರ ಬಲಿಪೂಜೆ ಅರ್ಪಿಸಿ ಸಂದೇಶ ನೀಡಿದರು.ದೇವಾಲಯಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ವಿಶೇಷವಾದ ಮಹತ್ವವಿದ್ದು ದೇವರಿಗೆ ಸ್ತುತಿ ಮತ್ತು ಆರಾಧನೆ ಸಲ್ಲಿಸಲು ದೇವಾಲಯ […]
ಶಂಕರನಾರಾಯಣದ ಮದರ್ ತೆರೇಸಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆಯಲ್ಲಿ ನಡೆದ 2025–26ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಹೈಸ್ಕೂಲ್ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಮದರ್ ತೆರೇಸಾ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ತೊಂಬಟ್ಟು-ಮಚ್ಚೆಟ್ಟು ಗ್ರಾಮದ ನಿವಾಸಿಗಳಾದ ಗಣಪತಿ ಪೂಜಾರಿ ಹಾಗೂ ನಾಗರತ್ನ ದಂಪತಿಯ ಪುತ್ರ ಪ್ರೀತಮ್ ಜಿ. ಪೂಜಾರಿ ಮತ್ತು ಉಳ್ಳೂರು-74 ಗ್ರಾಮದ ನಿವಾಸಿಗಳಾದ ಸುಭಾಷ್ ಚಂದ್ರ ಶೆಟ್ಟಿ ಹಾಗೂ ಶ್ರೀಲತಾ ಎಸ್. ಶೆಟ್ಟಿ ದಂಪತಿಯ ಪುತ್ರ ರಿಷಿ ಶೆಟ್ಟಿ […]
ಬೈಂದೂರು; ಫೆಬ್ರವರಿ 12 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಬೈಂದೂರು ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಬೃಹತ್ ಮೆರವಣಿಗೆಯಲ್ಲಿ ಘೋಷಣೆಯೊಂದಿಗೆ ಸಾಗಿ ರಸ್ತೆತಡೆ ಮಾಡಿ, ಆಡಳಿತ ಸೌಧ ಎದುರು ಪ್ರತಿಭಟಿಸಿದರು.ಕೇಂದ್ರ ಸರ್ಕಾರವು 2019-20 ರಲ್ಲಿ ಕಾರ್ಮಿಕ ಕಾನೂನುಗಳನ್ನು ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಹಾಗೂ ವೃತ್ತಿ ಸುರಕ್ಷತಾ ಮತ್ತು ಕೆಲಸದ ಪರಿಸ್ಥಿತಿ ಹೆಸರಿನಲ್ಲಿ ನಾಲ್ಕು ಸಂಹಿತೆಗಳನ್ನಾಗಿ ರೂಪಿಸಿ ಸಂಸತ್ತಿನಲ್ಲಿ […]
Entrepreneurship Development Programme (EDP) ಮಂಗಳೂರು, ಫೆಬ್ರವರಿ 10: ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026 ಅನ್ನು ಫೆಬ್ರವರಿ 10 ರಂದು ಕೊಟೇಕಾರಿನ ಎಐಎಂಐಟಿ (AIMIT) ಕ್ಯಾಂಪಸ್ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಬೆಳಿಗ್ಗೆ 9:00 ರಿಂದ ಸಂಜೆ 4:15 ರವರೆಗೆ ನಡೆದ ಈ ದಿನಪೂರ್ತಿ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮ ಮುಖಂಡರು, ಅಧ್ಯಾಪಕರು ಹಾಗೂ ಉದ್ಯಮಿಯಾಗಬಯಸುವ […]

