ಶ್ರೀನಿವಾಸಪುರ: ಭಾರತದ ಪ್ರಥಮ ಶಿಕ್ಷಣ ಸಚಿವ ಹಾಗೂ ಪ್ರಜ್ಞಾವಂತ ಚಿಂತಕರಾದ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರದಾದ್ಯಂತ ಆಚರಿಸಲ್ಪಡುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಶ್ರೀನಿವಾಸಪುರದಲ್ಲಿಯೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಆರಂಭದಲ್ಲಿ ಅಜಾದ್ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಶಿಕ್ಷಣ ತತ್ತ್ವಗಳನ್ನು ಸ್ಮರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದ ಪುಸ್ತಕಗಳು ಬೆಳಕಿನ ದೀಪಗಳಂತೆ […]
ಶ್ರೀನಿವಾಸಪುರ : ತಾಲೂಕಿನ ಮುತ್ತಕಪಲ್ಲಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಅಧ್ಯಕ್ಷರ ಚುನಾವಣೆ ಗುರುವಾರ ನಡೆದಿದ್ದು, ಅದರಲ್ಲಿ ಗ್ರಾಮ ಗ್ರಾಮಪಂಚಾಯಿತಿ ಕೃಷ್ಣಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ರಾಜೇಶ್ ಮಾಹಿತಿ ನೀಡಿದರು.ಗ್ರಾಮಪಂಚಾಯತಿಗೆ ಸಂಬಂದಿಸಿದಂತೆ 21 ಸದಸ್ಯರ ಪೈಕಿ 14 ಸದಸ್ಯರು ಹಾಜರಾಗಿ ಉಳಿದವರು ಗೈರುಹಾಜರಾಗಿದ್ದರು. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಶ್ವಿನಿ.ಡಿ ರವರು ರಾಜಿನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ರಾಜಗುಂಡ್ಲಹಳ್ಳಿ ಕೃಷ್ಣಮ್ಮ ರವರು ಅಧ್ಯಕ್ಷಗಾದೆಯು ತೆರೆವಗೊಂಡ ಸ್ಥಾನಕ್ಕೆ ಏಕನಾಮಪತ್ರ ಸಲ್ಲಿಸಿದ್ದು, ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಸಿ , […]
ಕೋಲಾರ: ಕೋಲಾರದಲ್ಲಿ ಶನಿವಾರ ವಾಸವಿ ದೇವಾಲಯಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ, ವಾಸವಿ ಗೀತೆ ರಚನೆಕಾರರಾದ ಮುಳಗಾಗಿಲಿನ ವಾಸವಿ ಸಹೋದರರನ್ನು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಸನ್ಮಾನಿಸಿದರು. ಗಮನ ಸೆಳೆದ ವಾಸವಿ ಗೀತೆ: ಗೀತೆ ರಚಿಸಿದ ವಾಸವಿ ಸಹೋದರರಿಗೆ ಸನ್ಮಾನ ಆರ್ಯವೈಶ್ಯ ಸಮುದಾಯ ಸಮಾಜದ ಎಲ್ಲ ರಂಗಗಳಲ್ಲೂ ಮುಂದೆ ಬರಬೇಕು. ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಹೇಳಿದರು. ಕೋಲಾರದ ವಾಸವಿ ದೇವಾಲಯಕ್ಕೆ […]
ಶ್ರೀನಿವಾಸಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಮಾರು ೫೦ ರಿಂದ ೬೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ. ಪಟ್ಟಣಾಭಿವೃದ್ಧಿಗಾಗಿ ಹೆಚ್ಚುವರಿಯಾಗಿ ೩೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ. ಪಟ್ಟಣದ ನಾಲ್ಕು ರಾಜಕಾಲುವೆಗಳ ದುರಸ್ಥಿಗೆ ಒಂದೂವರೆ ಕೋಟಿ ರೂ. ಮೀಸಲಿರಿಸಲಾಗಿದ್ದು, ಚರಂಡಿ ಶುದ್ಧೀಕರಣ ಮತ್ತು ದುರಸ್ಥಿಗೂ ಕ್ರಮ ಕೈಗೊಳ್ಳಲಾಗಿದೆ. ನನ್ನ […]
ಶ್ರೀನಿವಾಸಪುರ : ಪದೇ ಪದೇ ಅರಣ್ಯ ಇಲಾಖೆ ರೈತರ ಭೂಮಿಯನ್ನು ಕಿತ್ತುಕೊಳ್ಳುವದರ ಮೂಲಕ ಹಿಂಸೆ ಮಾಡುತ್ತಿದ್ದು ಇದನ್ನ ಪ್ರಾಂತ ರೈತ ಸಂಘ ಖಂಡಿಸುತ್ತಿದೆ ಎಂದು ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಹೇಳಿದರು.ಪಟ್ಟಣದ ಶಂಕರಮಠದ ರಸ್ತೆಯಲ್ಲಿನ ಕೆಪಿಆರ್ಎಸ್ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಅರಣ್ಯ ಇಲಾಖೆವತಿಯಿಂದ ರೈತರನ್ನ ಒಕ್ಕಲೆಬ್ಬಿಸುತ್ತಿರುವುದನ್ನ ವಿರೋಧಿಸಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.ಈ ಹಿಂದೆ 2021 ಇಸ್ವಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸರ್ಕಾರದೊಂದಿಗೆ ಸಮಾಲೋಚಿಸದೆ ತಮ್ಮದೇ ಆದ ಕಾನೂನು ಬಾಹಿರ ರೀತಿಯಲ್ಲಿ ನಡೆದುಕೊಂಡಿರುವುದು […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಮುಂಭಾಗದ ವಾಣಿಜ್ಯ ಮಳಿಗೆಗೆ ಮುಂದೆ ಮಂಗಳವಾರ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದವತಿಯಿಂದ 4 ನೇ ವರ್ಷದ ಪುಣ್ಯ ಸ್ಮರಣೆ ಆಚರಿಸಲಾಯತು. ಪೂಜಾ ಕಾರ್ಯಕ್ರಮವನ್ನ ಅರುಣ್ಕುಮಾರ್ಶರ್ಮ ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕುಂದಾಪುರ; ಮೂಡಲಕಟ್ಟೆ ಎಂ ಐ ಟಿ ಕೆ ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗ, ವಿದ್ಯಾರ್ಥಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಕಂಪನಿಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಮಾಡಿತು . ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಕಾಕುಂಜೆ ಸಾಫ್ಟವೇರ್ ಸಿಇಒ ಡಾ. ಜಿ ಕೆ ಭಟ್, ಐ ಎಂ ಜೆ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕ ಡಾ. ಎಸ್.ಎನ್. ಭಟ್, ಪ್ರಿನ್ಸಿಪಲ್ ಡಾ. ರಾಮಕೃಷ್ಣ ಹೆಗ್ಗಡೆ, […]
ಶ್ರೀನಿವಾಸಪುರ : ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಕೆಲವರು ಪವಿತ್ರ ನದಿ ತೀರಗಳಲ್ಲಿ ಜಲ ಸ್ನಾನ ಮಾಡುತ್ತಾರೆ. ವಿಶೇಷವಾಗಿ ಕಾರ್ತಿಕಮಾಸದಲ್ಲಿ ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಲಕ್ಷ ದೀಪೋತ್ಸವ ಸಮಿತಿ ಹಾಗು ಭಕ್ತಮಂಡಲಿವತಿಯಿಂದ ಹಮ್ಮಿಕೊಳ್ಳಲಾದ ಪಕ್ಷಾತೀತವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಇಂದು ದೇವಸ್ಥಾನಗಳು ನೆಮ್ಮದಿ […]
ಶ್ರೀನಿವಾಸಪುರ : ಕನ್ನಡ ನಾಡಿನ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಯಲ್ದೂರು ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಕೆ ಪ್ರಕಾಶಯ್ಯ ತಿಳಿಸಿದರು. ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ರಂಗಮಂದಿರದಲ್ಲಿ ಕರವೇ ಹೋಬಳಿ ಘಟಕ ಖಾಸಪ ಹೋಬಳಿ ಘಟಕ ಹಾಗೂ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಕನ್ನಡ ನಾಡಿನ ಪರಂಪರೆ […]

