ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ  ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಶಿನೆಡ್ ಫೆರ್ನಾಂಡಿಸ್ ಬರೆದ  ‘ ದಿ ಡಿಸೆಪ್ಶನ್’ ಎಂಬ ಕೃತಿಯ ಅನಾವರಣ ಸಮಾರಂಭ ಜೂನ್ 20 ರಂದು ಶಾಲಾ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲೆಯ ನಿಕಟಪೂರ್ವ ಪ್ರಾಂಶುಪಾಲರಾದ ರೆ.ಫಾ. ಮೆಲ್ವಿನ್ ಅನಿಲ್  ಲೋಬೊ ಪುಸ್ತಕ ಬಿಡುಗಡೆ ಮಾಡಿ ಶಿನೆಡ್ ಅವರ ವಿಶೇಷ ಸಾಹಿತ್ಯಿಕ ಸಾಧನೆಯನ್ನು ಕೊಂಡಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ರೋಹನ್ ಡಿ’ ಅಲ್ಮೇಡಾ ಎಸ್ ಜೆ ಯವರು ಶಿನೆಡ್ ಗೆ ಸಾಹಿತ್ಯದ […]

Read More

ಬಾರ್ಕೂರು; ಹೊಸಳ, ಬಾರ್ಕೂರು ಮೇರಿಕ್‌ನಾಲ್ ಹೈಯರ್ ಪ್ರೈಮರಿ ಶಾಲೆಯಲ್ಲಿ 20 ಜೂನ್ 2025 ರಂದು ಅಗಾಧ ಸಂತೋಷ ಮತ್ತು ಹೃತ್ಪೂರ್ವಕ ಕೃತಜ್ಞತೆಯೊಂದಿಗೆ, ಹೊಸಳ, ಬಾರ್ಕೂರಿನ ಮೇರಿಕ್‌ನಾಲ್ ಹೈಯರ್ ಪ್ರೈಮರಿ ಶಾಲೆಯು 2025–26 ಶೈಕ್ಷಣಿಕ ವರ್ಷದ ವಾರ್ಷಿಕ ಉಚಿತ ಸಮವಸ್ತ್ರ ಮತ್ತು ನೋಟ್‌ಬುಕ್ ವಿತರಣಾ ಸಮಾರಂಭ ನಡೆಯಿತು. ಈ ಹೃದಯಸ್ಪರ್ಶಿ ಉಪಕ್ರಮವನ್ನು ಮುಂಬೈನ ಸೇಂಟ್ ಪೀಟರ್ಸ್ ಅಸೋಸಿಯೇಷನ್ ​​(ಬಾರ್ಕೂರು) ಸಾಧ್ಯವಾಗಿಸಿತು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಪೋಷಿಸಲು ಮತ್ತು ಯುವ ಕಲಿಯುವವರನ್ನು ಸಬಲೀಕರಣಗೊಳಿಸಲು ಅವರ ನಿರಂತರ ಸಮರ್ಪಣೆಯನ್ನು ಬಹಳವಾಗಿ ಪ್ರಶಂಸಿಸಲಾಯಿತುಈ […]

Read More

ಕಟಪಾಡಿ : ಗ್ರಾಮ ಪಂಚಾಯಿತಿ ಮುಂದುಗಡೆ ಬಿಜೆಪಿ ಧರಣಿ ಇದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ನಾಟಕ ಪ್ರದರ್ಶಿಸುವ ಹೇಡಿತನದ ಪರಮಾವಧಿ. ನಮ್ಮ ಕರಾವಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಕರಾವಳಿಯಾದ್ಯಂತ ಗೆದ್ದು ಬಂದ ಶಾಸಕರು ವಿಧಾನಸೌಧದ ಅಧಿವೇಶನದಲ್ಲಿ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲೆಯ ಎಲ್ಲಾ ಶಾಸಕರು ಮಾಡಲಿ. ಶಾಸಕರು ಗೆದ್ದು ಬಂದ ಮೇಲೆ ಪಕ್ಷಕ್ಕೆ ಸೀಮಿತವಲ್ಲ. ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಪಕ್ಷಾತೀತವಾಗಿ ಎಲ್ಲಾ […]

Read More

ಉಡುಪಿ: ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಆಗಮಿಸಿರುವ ಅವರನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಭೇಟಿ ನೀಡಿ ಶುಭ ಕೋರಲಾಯಿತು.ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಪರವಾಗಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಶುಭಾಶಯ ಮತ್ತು ಆಶೀರ್ವಾದಗಳನ್ನು ಕೋರಿದ ನಿಯೋಗ ಧರ್ಮಪ್ರಾಂತ್ಯದ ವತಿಯಿಂದ ಸರ್ವ ರೀತಿಯ ಸಹಕಾರದ ಭರವಸೆಯನ್ನು ನೀಡಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರು ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ್ದು ಕ್ರೈಸ್ತ ಸಮುದಾಯದ ಸಂಸ್ಥೆಗಳ ಕುರಿತು ಮಾಹಿತಿ ಪಡೆದು […]

Read More

ಉಡುಪಿ: ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಭೇಟಿ ನೀಡಿ ಶುಭ ಕೋರಲಾಯಿತು.ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಪರವಾಗಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಶುಭಾಶಯ ಮತ್ತು ಆಶೀರ್ವಾದಗಳನ್ನು ಕೋರಿದ ನಿಯೋಗ ಧರ್ಮಪ್ರಾಂತ್ಯದ ವತಿಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಸಹಕಾರದ ಭರವಸೆಯನ್ನು ನೀಡಿದರು.ನಿಯೋಗದ ಭರವಸೆಗೆ ಸ್ಪಂದಿಸಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸಮುದಾಯಕ್ಕೆ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಎಲ್ಲಾ […]

Read More

ಕುಂದಾಪುರ, ಜೂ.23; ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಶ್ರೀ ಸಾಮಾನ್ಯ ಆಯೋಗ ಹಾಗೂ ಕಥೋಲಿಕ್ ಸಭಾ ತಲ್ಲೂರು ಘಟಕ ಇದರ ಜಂಟಿ ಆಶ್ರಯದಲ್ಲಿ 22/06/2025 ರಂದು ಶ್ರೀ ಸಾಮಾನ್ಯರ ಮಹೋತ್ಸವನ್ನು ಆಚರಿಸಲಾಯಿತು. ಅಂದು ಶ್ರೀ ಸಾಮಾನ್ಯರಿಗಾಗಿ ದಿವ್ಯ ಬಲಿಪೂಜೆಯನ್ನು, ಮೂಲತಃ ದುಬೈಯಲ್ಲಿ ಧಾರ್ಮಿಕ ಸೇವೆಯನ್ನು ನೀಡುತ್ತಿರುವ ವಂದನೀಯ ಫಾ. ವಿಕ್ಟರ್ ಫೆರ್ನಾಂಡಿಸ್, ಪ್ರಧಾನ ಗುರುಗಳಾಗಿ ಆಗಮಿಸಿ ಬಲಿಪೂಜೆಯನ್ನು ನೆರವೇರಿಸಿ ಶ್ರೀ ಸಾಮಾನ್ಯರಿಗಾಗಿ ಪ್ರಾರ್ಥಿಸಿದರು.ಲಘು ಉಪಹಾರದ ನಂತರ ಚರ್ಚಿನ ಸಭಾಂಗಣದಲ್ಲಿ ಉದ್ಯಮಿಗಳಿಗೆ ಹಾಗೂ ಸ್ವಂತ ಉದ್ದಿಮೆ […]

Read More

ಕುಂದಾಪುರ: ಜೂನ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ, ಕುಂದಾಪುರದ ಪತಂಜಲಿ ಯೋಗಧಾಮ, ಮತ್ತು ಲಯನ್ಸ್ ಕ್ಲಬ್ ಕ್ರೌನ್ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಯುಥ್ ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ* ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಪತಂಜಲಿ ಆರೋಗ್ಯಧಾಮ, ಕಡ್ಗಿರಸ್ತೆ, ಕುಂದಾಪುರ ಇಲ್ಲಿನ ಯೋಗ ಪ್ರಕೃತಿ ಚಿಕಿತ್ಸಾ ತಜ್ಞರು ಡಾ.ಸಾತಪ್ಪ ಹೂವಿನಹಳ್ಳಿ ಮಾತನಾಡಿ, ಯೋಗವು ಇಂದಿನ […]

Read More

ಕುಂದಾಪುರ;”ಮನಸ್ಸನ್ನು ಪ್ರಶಾಂತವಾಗಿಡಲು  ಮತ್ತು ಮನಸ್ಸಿನ ಚಂಚಲತೆಯನ್ನು ದೂರ ಮಾಡಲು ಯೋಗ ಸಹಾಯಕ. ದೇಹದ ಪ್ರತಿ ಅಂಗಾಂಗವು ಸಧೃಢವಾಗಿ ಆರೋಗ್ಯಯುತವಾಗಿರಲು ಯೋಗವೊಂದೇ ಪರಿಹಾರ, ಆದ್ದರಿಂದ ಎಲ್ಲರೂ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ” ಎಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರದ ಆರ್.‌ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ‌‌ ಆಯೋಜಿಸಲಾದ ಮಾಹಿತಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೋಟೇಶ್ವರದ ಓಮ್‌ ಯೋಗ ವಿದ್ಯಾಮಂದಿರದ ಕೇಂದ್ರ ಸರಕಾರದ ಆಯುಷ್ ಘಟಕದ ತರಬೇತುದಾರರಾದ ಶ್ರೀಮತಿ‌ ಗೀತಾ ಎಸ್. ಇವರು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಆರೋಗ್ಯವಂತ ಭಾರತ ನಿರ್ಮಿಸಲು ಯೋಗ ದಿನಾಚರಣೆಯ ಆಶಯ ಮತ್ತು ಚಟುವಟಿಕೆಗಳು ಸ್ಪೂರ್ತಿದಾಯಕ ಎಂದು ತಿಳಿಸಿದರು.ಯೋಗ ದಿನಾಚರಣೆಯ ಅಂಗವಾಗಿ ವೀಡಿಯೋ ಪ್ರದರ್ಶಿಸಲಾಯಿತು. ಉತ್ತಮ ವೀಡಿಯೋ ತುಣುಕುಗಳನ್ನು ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯೋಗಪಟುಗಳಾದ ಸಂಜನಾ ಮತ್ತು ಅನಿರುದ್ಧ ಇವರು ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಸ್ವಾಗತಿಸಿದರು. ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಅಭಿಜಿತ್ ರವರು ಧನ್ಯವಾದ ಸಲ್ಲಿಸಿದರು. ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಕಾರ್ಯಕ್ರಮ ನಿರೂಪಿಸಿದರು. 

Read More

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 20 ಜೂನ್ 2025 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಉಪಸ್ಥಿತರಿದ್ದು ಯೋಗದಿಂದಾಗುವ ಉಪಯೋಗಗಳ ಬಗ್ಗೆ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆಂದು ತಿಳಿಸಿದರು. ಯೋಗದ ಪ್ರಾಮುಖ್ಯತೆ ಮತ್ತು ಯೋಗಾಸನ ಮಾಡಬೇಕಾದರೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುವುದರ […]

Read More