ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅರಿವನ್ನು ಪಡೆದುಕೊಂಡರು .ಹಳ್ನಾಡಿನ ಸಮೀಪದ ,ಮೊಗವೀರ ಸಂಘಟನೆಯ ಅಧ್ಯಕ್ಷರು, ಕೃಷಿಕರಾದ ಶ್ರೀ ನಾಗೇಶ್ ಮೊಗವೀರ ಇವರ ಗದ್ದೆಯಲ್ಲಿ ಶನಿವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ 6, 7 ಮತ್ತು 8ನೇ ತರಗತಿ ಮಕ್ಕಳು ಭಾಗವಹಿಸಿ ಕೃಷಿ ಜ್ಞಾನ, ಪ್ರಸ್ತುತ ಕೃಷಿ ಭೂಮಿಯಲ್ಲಿ ರೈತರ ಸಮಸ್ಯೆ , ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಮುಂತಾದ ಮಾಹಿತಿಗಳನ್ನು ತಿಳಿದುಕೊಂಡರು.ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಮುಂಚೂಣಿಯಲ್ಲಿ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಒಂದು ತಿಂಗಳ ಕಾಲ ನಡೆದ ಗೋ ಗ್ರೀನ್ -ಪ್ರಕೃತಿ ಅಭಿಯಾನದ ಸಮಾರೋಪ ಸಮಾರಂಭ ಜುಲೈ 16 ರಂದು ನಡೆಯಿತು. ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾದ ‘ಗೋ ಗ್ರೀನ್ ‘ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು6ರಿಂದ 12 ನೇ ತರಗತಿಯ ಮಕ್ಕಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಪರಿಸರ ತಜ್ಞ, ಹಲವು ಪ್ರಶಸ್ತಿಗಳಿಗೆ ಭಾಜನರಾದ, ಮಂಗಳೂರು ಆರ್ಥಿಕ ವಲಯದ (ಗ್ರೀನ್ ಬೆಲ್ಟ್) […]
ಕುಂದಾಪುರ, ಜು.16: ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಪ್ರಾರ್ಥನ ಮಂದಿರದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ಕಟ್ಕರೆ ಬಾಲ ಯೇಸುವಿನ ಆಶ್ರಮದ ವಂ| ಫಾ| ಜೋಸೆಫ್ ಸಿರಿಲ್ ಡಿಸೋಜಾ ಇವರ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಅವರು “ಕಶ್ಟದ ವೇಳೆಯಲ್ಲಿ ನಮಗೆ ಯೇಸು ಸ್ವಾಮಿ ಮೇರಿಮಾತೆಯನ್ನು ನಮಗೆ ತಾಯಾಗಿ ಕರುಣಿಸಿದ್ದಾರೆ. ಮೇರಿ ಮಾತೆ ಪಾಪರಹಿತಳು, ಅವಳು ದೇವರ ಕ್ರಪಾ ಭರಿತಳು, ಸ್ವರ್ಗದಲ್ಲಿರುವ ತಾಯಿ, ಅವಳು ನಮ್ಮ ಬೇಡಿಕೆಯನ್ನು […]
ಕುಂದಾಪುರ, ಜು.16; ನಮ್ಮ ಸಂಸ್ಥೆಯಾದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಇಲ್ಲಿ ಸರಿ ಸುಮಾರು 13 ವರ್ಷಗಳ ಕಾಲ (2000 ರಿಂದ 2013ರವರೆಗೆ) ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀಮತಿ ಕೊನಿ ರೆಬೆಲ್ಲೋ ಅವರು ದಿನಾಂಕ 16.07.2025ರಂದು ನಿಧನ (74 ವರ್ಷ) ಹೊಂದಿದ್ದು, ಅವರ ನಿಧನದ ಸುದ್ದಿ ನಮ್ಮೆಲ್ಲರಿಗೂ ತುಂಬಾ ದುಃಖ ತಂದಿದೆ. ಅವರು ಅಪಾರ ಬದ್ಧತೆ ಮತ್ತು ಶ್ರದ್ಧೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿಷ್ಠಾವಂತ ಶಿಕ್ಷಕಿ ಹಾಗೂ ಕರುಣಾಮಯಿ […]
ಗಂಗೊಳ್ಳಿ, ಜು.15; ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯಲ್ಲಿ ನಾಲ್ಕು ಜನರು ಮೀನುಗಾರರು ಹೊರಟಿದ್ದು, ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ಬೇರೆ ದೋಣಿ ತಲುಪಿದ್ದು ಇನ್ನೂ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತ ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.ಸಿಪಾಯಿ ಸುರೇಶ […]
CA ಗಿರೀಶ್ ಪೈ(T. ವಿಟ್ಟಲ್‍ದಾಸ್ ಪೈ ಮತ್ತು ಶ್ರೀಮತಿ ವಿನಯ ವಿಟ್ಟಲ್‍ದಾಸ್ ಪೈ ದಂಪತಿಗಳ ಪುತ್ರ, ತೆಕ್ಕಟ್ಟೆ) CA ಕೌಶಿಕ್ ಅಡಿಗ(ದಿ| ಪರಮೇಶ್ವರ ಅಡಿಗ ಮತ್ತು ಶ್ರೀಮತಿ ಸುಲೋಚನ ಅಡಿಗ ದಂಪತಿಗಳ ಪುತ್ರ, ಕೋಟೇಶ್ವರ) CA ಸಹನಾ ಮೇಸ್ತಾ(ಶ್ರೀ ಜಗದೀಶ ಮೇಸ್ತಾ ಮತ್ತು ಶ್ರೀಮತಿ ಸವಿತಾ ದಂಪತಿಗಳ ಪುತ್ರಿ, ಕುಂದಾಪುರ) CA ನಾಗೇಂದ್ರ ಕಾಮತ್(ಶ್ರೀ ಅಶೋಕ್ ಕಾಮತ್ ಮತ್ತು ಶ್ರೀಮತಿ ಅಶ್ವಿನಿ ಕಾಮತ್ ದಂಪತಿಗಳ ಪುತ್ರ, ಶಿರೂರು) CA ಪ್ರಸಾದ್. ಪಿ. ಶಾನಭೋಗ್(ಶ್ರೀ ಪುರಂದರ್ ಶಾನಭೋಗ್ ಮತ್ತು […]
ಮಂಗಳೂರು; ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (FMCI) ಅಂಗವಾದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು (FMHMC) ತನ್ನ ರೂಬಿ ಜುಬಿಲಿ ಮಹೋತ್ಸವವನ್ನು ಆಚರಿಸಿತು – ಸಮಾಜಕ್ಕೆ ತನ್ನ 40 ವರ್ಷಗಳ ಸೇವೆಯನ್ನು ಸಂಭ್ರಮದಿಂದ, ಜುಲೈ 14, 2025 ರಂದು ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ(FMCI)ಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲ್ಯೂಕಾಸ್ ಲೋಬೊ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು(FMHMC) ಆಡಳಿತಾಧಿಕಾರಿ ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ […]
ಮೂಡ್ಲಕಟ್ಟೆ ಐಎಂಜೆ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಬರುವ ವಿದ್ಯಾ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪೋಷಕರಿಗೆ ಮಕ್ಕಳ ಬೆಳೆವಣಿಗೆ, ಭಾವನಾತ್ಮಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಸ್ಪಷ್ಟ ಅರಿವನ್ನು ನೀಡುವ ಗುರಿಯನ್ನು ಹೊಂದಿತ್ತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಸೇವೆ ನೀಡುತ್ತಿರುವ ಶ್ರೀ ಗಿರೀಶ್ ಎಂ ಎನ್ ಅವರು ಭಾಗವಹಿಸಿದ್ದರು. ಅವರು ಮಕ್ಕಳಲ್ಲಿ ಕಂಡುಬರುವ ಆತ್ಮವಿಶ್ವಾಸದ ಕೊರತೆ, ಒತ್ತಡ, ತಂತ್ರಜ್ಞಾನದ ಇತಿಮಿತಿಯ ಬಳಕೆ ಮುಂತಾದ ಸಮಸ್ಯೆಗಳ […]
ಕುಂದಾಪುರ; “ಜೀವನದ ಆಧಾರಸ್ತಂಭ ಕಟ್ಟಲು ಮುಖ್ಯವಾಗುವ ಪಿ.ಯು.ಸಿ ಹಂತ ವಿದ್ಯಾರ್ಥಿಗಳೆದರು ಹಲವು ಕ್ಷೇತ್ರಗಳನ್ನು ತೆರೆದಿಡುತ್ತದೆ. ಸಾಂಸ್ಕ್ರತಿಕ ಮತ್ತು ಆಟೋಟಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರೂ, ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕೆ ಹೋದ ಮೇಲೆ ಶಿಕ್ಷಣದ ಹಿನ್ನೆಲೆ ಇದ್ದರೆ ಮಾತ್ರ ಯಶ: ಪಡೆಯಬಹುದು ” ಎಂದು ಕಿರುತೆರೆ ನಟಿ, ರಿಯಾಲಿಟಿ ಶೋ ಮಜಾಭಾರತ, ರಾಜಾ ರಾಣಿ ಖ್ಯಾತಿಯ ಪ್ರಿಯಾಂಕಾ ಕಾಮತ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನವಸಂಕೇತ್- ಫ್ರೆಷರ್ಸ್ ಫಿಯೆಸ್ಟಾ ವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ […]

